I am deeply anguished by the passing away of Jagadguru Paramapujya Dr Shivakumara Swamy of Sri Siddaganga Mutt, who was considered as verily the God walking on earth. Our Nation in general and Hindu Society in particular has lost a great spiritual leader and social reformer par excellence.Our second Sarasanghchalak parama pujya Guruji was very close to the swamiji and shared many spiritual and social concerns of our nation and society. The RSS remembers with deep reverence the long association it had with Swamiji and the blessings and support he bestowed on all our activities. I also, with all humility and reverence remember the close association he bestowed upon me. On behalf of RSS and myself I offer my revered homage to the departed great soul.
ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಪೂಜನೀಯ ಮೋಹನ್ ಭಾಗವತ್ ಅವರ ಶ್ರದ್ಧಾಂಜಲಿ ನುಡಿ.
ಶ್ರೀ ಸಿದ್ದಗಂಗಾ ಮಠದ ಜಗದ್ಗುರು ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರು ಇಂದು ನಮ್ಮನ್ನೆಲ್ಲಾ ಅಗಲಿರುವುದು ನನ್ನ ಪಾಲಿಗೆ ಅತ್ಯಂತ ದುಃಖಕರ ಸಂಗತಿಯಾಗಿದೆ. ಸ್ವಾಮೀಜಿಯವರನ್ನು ’ನಡೆದಾಡುವ ದೇವರು’ ಎಂದೇ ಸಂಬೋಧಿಸುತ್ತಿದ್ದರು ಹಾಗೂ ಆ ಮಾತಿಗೆ ಅನ್ವಯವಾಗುವಂತೆ ಸ್ವಾಮೀಜಿಯವರು ಬದುಕಿದ್ದರು. ನಮ್ಮ ದೇಶ ಹಾಗೂ ವಿಶೇಷವಾಗಿ ಹಿಂದೂ ಸಮಾಜವು ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಗುರುಗಳನ್ನು, ಸಾಮಾಜಿಕ ಸುಧಾರಕರೊಬ್ಬರನ್ನು ಕಳೆದುಕೊಂಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೆಯ ಸರಸಂಘಚಾಲಕರಾದ ಪರಮಪೂಜನೀಯ ಗುರೂಜಿಯವರು ಸಿದ್ದಗಂಗಾ ಶ್ರೀ ಗಳೊಡನೆ ದೇಶದ ಸಾಮಾಜಿಕ ಸಮಸ್ಯೆಗಳನ್ನು ಆಧ್ಯಾತ್ಮಿಕ ವಿಷಯಗಳನ್ನು ಬಹುಕಾಲ ಚರ್ಚಿಸಿದವರಾಗಿದ್ದರು ಹಾಗೂ ಒಡನಾಡಿದವರಾಗಿದ್ದರು. ಆರೆಸ್ಸೆಸ್, ಸ್ವಾಮೀಜಿಯವರೊಂದಿಗಿನ ನಿಕಟ ಸಂಬಂಧ ಹಾಗೂ ಸಂಘ ಕಾರ್ಯಕ್ಕೆ ಅವರು ಸರ್ವದಾ ನೀಡುತ್ತಿದ್ದ ಆಶೀರ್ವಾದವನ್ನು ಧನ್ಯತೆಯಿಂದ ಸ್ಮರಿಸುತ್ತದೆ. ವೈಯಕ್ತಿಕವಾಗಿ ನಾನು ಅವರೊಂದಿಗೆ ಒಡನಾಡಿದ ಕ್ಷಣಗಳನ್ನೂ ಸ್ಮರಿಸುತ್ತೇನೆ. ಲಿಂಗೈಕ್ಯವಾದ ಹಿರಿಯ ಚೇತನಕ್ಕೆ ನಮಸ್ಕರಿಸುತ್ತಾ, ನನ್ನ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.
File photos of Sri Mohan Bhagwat with Pujya Swamiji.