
ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸುಭಾಶ್ ಮನೋಹರ್ ಸರವಟೆ ಅವರು ಇಂದು ಬೆಳಗ್ಗೆ 9:00 ಗಂಟೆಗೆ ಅಲ್ಪಕಾಲದ ಅನಾರೋಗ್ಯದ ಕಾರಣ ಸಂಘದ ಕಾರ್ಯಾಲಯ ಮಹಲ್ ನಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷವಾಗಿತ್ತು. ಅವರ ಇಚ್ಛೆಯ ಅನುಸಾರ ಅವರ ದೇಹದಾನ ಮಾಡಲಾಗಿದೆ.
ನಾಗಪುರದಲ್ಲಿ ಆಗಸ್ಟ್ 20, 1944 ರಂದು ಜನಿಸಿದ ಸುಭಾಶ್ ಮನೋಹರ್ ಅವರು ತಮ್ಮ ಬಿ.ಎ. ಎಲ್ ಎಲ್ ಬಿ ಪದವಿಯ ನಂತರ ನಾಗಪುರದಲ್ಲಿನ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ವೃತ್ತಿಯಿಂದ ಕೆಲವು ವರ್ಷಗಳ ನಂತರ ನಿವೃತ್ತಿಯನ್ನು ಪಡೆದು ಸಂಘದ ಪ್ರಚಾರಕರಾದರು. ಅಸ್ಸಾಂ, ಬಂಗಾಲ, ಝಾರ್ಖಂಡ್ ನಲ್ಲಿ ಪ್ರಚಾರಕರಾಗಿದ್ದರು.