
ಸಂಭಾಜಿನಗರ, ಮಹಾರಾಷ್ಟ್ರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀ ಮಧುಭಾಯ್ ಕುಲಕರ್ಣಿ ಇಂದು ಮಹಾರಾಷ್ಟ್ರ ದ ಸಂಬಾಜೀನಗರದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅನೇಕ ವರ್ಷಗಳ ಕಾಲ ಮಹಾರಾಷ್ಟ್ರ ಗುಜರಾತನಲ್ಲಿ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದ ಮಧುಭಾಯ್ ಅವರು ಸಂಘದ ಅಖಿಲ ಭಾರತೀಯ ಬೌದ್ಧಿಕ ಪ್ರಮುಖರಾಗಿಯೂ ಕಾರ್ಯನಿರ್ವಹಿಸಿದ್ದರು..
ಸಂಘ ಕಾರ್ಯದ ಕುರಿತಾಗಿ ಚಲಿಸುವ ಎನ್ಸೈಕ್ಲೋಪೀಡಿಯಾದಂತಿದ್ದ ಮಧುಭಾಯ್ ಕುಲಕರ್ಣಿಯವರು ಸಂಘದ ಶತಾಬ್ದಿ ನಿಮಿತ್ತವಾಗಿ ಸಂಘದ ಇತಿಹಾಸದ ಕುರಿತಾಗಿ ಅನೇಕ ಪ್ರೇರಕ ಲೇಖನಗಳನ್ನು ಇತ್ತೀಚಿಗೆ ಬರೆದಿದ್ದರು..
ಅವರ ಅಪೇಕ್ಷೆಯಂತೆ ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು.