ಬೆಂಗಳೂರು, 23 ಮಾರ್ಚ್ 2025: 1923ರ ಈ ದಿನ ಹುತಾತ್ಮರಾದ ಸ್ವಾತಂತ್ರ್ಯ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ಗೌರವ ಸಲ್ಲಿಸುವ ಮೂಲಕ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಪತ್ರಿಕಾಗೋಷ್ಠಿಯಲ್ಲಿ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ತಮ್ಮ ಮಾತನ್ನು ಆರಂಭಿಸಿದರು. ಈ ಮೂವರು ಯುವಕರು ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು ಮತ್ತು ಸಮಾಜವು ಅವರ ತ್ಯಾಗದಿಂದ ಸ್ಫೂರ್ತಿ ಪಡೆಯಬೇಕೆಂದು ಕರೆ ನೀಡಿದರು

ನಂತರ, ಮಹಾರಾಣಿ ಅಬ್ಬಕ್ಕ ಅವರ 500ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಘದ‌ ಹೇಳಿಕೆಯ ಕುರಿತು ಮಾತನಾಡಿದರು. “ಮಹಾರಾಣಿ ಅಬ್ಬಕ್ಕ ಅವರು ಭಾರತದ ಮಹಾನ್ ಮಹಿಳಾ ಸ್ವಾತಂತ್ರ್ಯ ಸೇನಾನಿ, ಕುಶಲ ಆಡಳಿತಗಾರ್ತಿ ಮತ್ತು ನಿರ್ಭೀತ ಯೋಧೆ” ಎಂದು ದತ್ತಾತ್ರೇಯ ಹೊಸಬಾಳೆ‌ ಅವರು ಬಣ್ಣಿಸಿದರು. ಅಬ್ಬಕ್ಕ ಅವರು ಉಳ್ಳಾಲದ ಪುಟ್ಟ ರಾಜ್ಯವನ್ನು (ದಕ್ಷಿಣ ಕನ್ನಡದಲ್ಲಿ) ಪೋರ್ಚುಗೀಸರ ವಿರುದ್ಧ ಧೀರೋದ್ದಾತ್ತ ಹೋರಾಟದ ಮೂಲಕ ರಕ್ಷಿಸಿದರು ಎಂದು ಅವರು ಹೇಳಿದರು.

ಅಬ್ಬಕ್ಕ ಅವರ ಕೊಡುಗೆಯನ್ನು ಗೌರವಿಸಿ ಭಾರತ ಸರ್ಕಾರವು 2003ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು ಮತ್ತು 2009ರಲ್ಲಿ ಒಂದು ಗಸ್ತು ತಿರುಗುವ ಹಡಗಿಗೆ ಅವರ ಹೆಸರನ್ನು ಇಟ್ಟಿತ್ತು. ಅವರ ಧೈರ್ಯ ಮತ್ತು ನಾಯಕತ್ವ ಗುಣದಿಂದ ರಾಷ್ಟ್ರ ನಿರ್ಮಾಣಕ್ಕೆ ಸಮಾಜವು ಅವರಿಂದ ಸ್ಫೂರ್ತಿ ಪಡೆಯಬೇಕೆಂದು ದತ್ತಾತ್ರೇಯ ಹೊಸಬಾಳೆ‌ ಅವರು ಆಶಿಸಿದರು.

ಮಾರ್ಚ್ 21ರಿಂದ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, ಸಂಘವು ದೇಶದ ಪ್ರತಿಯೊಂದು ಸ್ಥಳಕ್ಕೂ ತಲುಪುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರವನ್ನು ಒಗ್ಗೂಡಿಸುವ ಕೆಲಸ ಮಾತ್ರವಲ್ಲದೆ, ಪ್ರಕೃತಿ ವಿಕೋಪಗಳ ಸಮಯದಲ್ಲಿ ಮತ್ತು ನಂತರ ಪರಿಹಾರ ಕಾರ್ಯಾಚರಣೆ ಮತ್ತು ಪುನರ್ವಸತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ ಎಂದರು.

2025ರ ವರ್ಷದ ವಿಜಯದಶಮಿ ದಿನದಂದು ಸಂಘವು 100 ವರ್ಷಗಳನ್ನು ಪೂರೈಸುತ್ತದೆ. ಈಗಾಗಲೇ ತಿಳಿಸಿದಂತೆ, ಮುಂದಿನ ವರ್ಷವು ತನ್ನ ಕೆಲಸದ ವಿಸ್ತರಣೆ ಮತ್ತು ಬಲಗೊಳಿಸುವಿಕೆಯತ್ತ ದೃಷ್ಟಿಯನ್ನು ಕೇಂದ್ರೀಕರಿಸುತ್ತದೆ. ಸಂಘವು ಈ ಹಿಂದೆಯೂ ಯಾವುದೇ ವರ್ಷವನ್ನು (25 ವರ್ಷ, 50 ವರ್ಷ, 75 ವರ್ಷ ಇತ್ಯಾದಿ…) ಸಂಭ್ರಮದ ರೀತಿಯಲ್ಲಿ ಆಚರಿಸಿಲ್ಲ. ಹಾಗಾಗಿ ನೂರನೇ ವರ್ಷ ಎನ್ನುವುದು ನಮಗೆ 1) ಆತ್ಮಾವಲೋಕನ ಮಾಡಿಕೊಳ್ಳುವ, 2) ಸಂಘದ ಕೆಲಸಕ್ಕೆ ಸಮಾಜದ ಬೆಂಬಲವನ್ನು ಹೆಚ್ಚಿಸಿಕೊಳ್ಳುವ ಮತ್ತು 3) ಸಮಾಜವನ್ನು ಸಂಘಟಿಸಲು ನಮ್ಮನ್ನು ಪುನರ್‌ಸಮರ್ಪಿಸಿಕೊಳ್ಳುವ ಸಮಯ ಎಂದರು. ಶತಮಾನದ ವರ್ಷದಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದ, ಗುಣಾತ್ಮಕವಾಗಿ ಮತ್ತು ಸಮಗ್ರವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದರು.

ಎಬಿಪಿಎಸ್‌ನಲ್ಲಿ ಬಾಂಗ್ಲಾದೇಶದ ಬಗ್ಗೆ ಕೈಗೊಂಡ ನಿರ್ಣಯದ ಹೊರತಾಗಿ, ಆರ್‌ಎಸ್‌ಎಸ್‌ನ 100 ವರ್ಷಗಳ ಬಗ್ಗೆ ‘ಸಂಕಲ್ಪ’ (Resolve) ಕೈಗೊಂಡಿದೆ. ಡಾಕ್ಟರ್ ಜೀ ಅವರು ಸಂಘದ ಸ್ಥಾಪನೆಯ ಸಮಯದಲ್ಲಿ ಹೇಳಿದಂತೆ, “ಸಂಘವು ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಲಿಲ್ಲ. ಹಲವು ಶತಮಾನಗಳಿಂದ ನಡೆಯುತ್ತಿರುವ ಕಾರ್ಯವನ್ನು ಮುಂದುವರೆಸುತ್ತಿದೆಯಷ್ಟೆ” ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.

2025ರ ವಿಜಯದಶಮಿ ದಿನದಿಂದ ಆರಂಭವಾಗುವ ಸಂಘ ಶತಾಬ್ದಿ (ಶತಮಾನ) ಸಮಯದಲ್ಲಿ ನಿರ್ದಿಷ್ಟ ಚಟುವಟಿಕೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಅವು ಈ ಕೆಳಗಿನಂತಿವೆ:

1. ಶತಾಬ್ದಿ ವರ್ಷವು 2025ರ ವಿಜಯದಶಮಿಯ ದಿನದಿಂದ ಪ್ರಾರಂಭವಾಗುತ್ತದೆ. ಸರಸಂಘಚಾಲಕರು ಪ್ರತಿ ವರ್ಷದಂತೆ ಈ ಸಂದರ್ಭದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಬರುವ ವರ್ಷದಲ್ಲಿ ದೇಶಾದ್ಯಂತ ಮಂಡಲ ಹಾಗೂ ನಗರ ಮಟ್ಟದಲ್ಲಿ ಗಣವೇಷಧಾರಿ ಸ್ವಯಂಸೇವಕರ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

2. ‘ಪ್ರತಿ ಗ್ರಾಮ- ಪ್ರತಿ ವಸತಿ- ಪ್ರತಿ ಮನೆ’ ಎಂಬ ಎಂಬ ಘೋಷಣೆಯೊಂದಿಗೆ ಮೂರು ವಾರಗಳ ಕಾಲ ಬೃಹತ್ ಪ್ರಮಾಣದ ಮನೆ-ಮನೆ ಸಂಪರ್ಕ ಅಭಿಯಾನವನ್ನು ಅಂದಾಜು 2025ರ ನವೆಂಬರ್‌ನಿಂದ 2026ರ ಜನವರಿವರೆಗೆ ಯೋಜಿಸಲಾಗಿದೆ. ಸಂಘದ ಕುರಿತು ಮುದ್ರಿತ ಸಾಹಿತ್ಯವನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು. ಈ ಕಾರ್ಯಕ್ರಮವನ್ನು ಸ್ಥಳೀಯ ಘಟಕಗಳು ಮುನ್ನಡೆಸುತ್ತವೆ.

3. ಎಲ್ಲಾ ಮಂಡಲ ಅಥವಾ ವಸತಿಗಳಲ್ಲಿ ಹಿಂದೂ ಸಮ್ಮೇಳನಗಳನ್ನು ಆಯೋಜಿಸಲಾಗುವುದು. ದಿನನಿತ್ಯದ  ಜೀವನದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ, ರಾಷ್ಟ್ರದ ಕಾರಣಕ್ಕಾಗಿ ಎಲ್ಲರ ಕೊಡುಗೆ ಮತ್ತು ಪಂಚ ಪರಿವರ್ತನ ಕಾರ್ಯದಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆಯ ಸಂದೇಶವನ್ನು ನೀಡಲಾಗುವುದು.

4. ಮಂಡಲ/ನಗರ ಮಟ್ಟದಲ್ಲಿ ಸಾಮಾಜಿಕ ಸದ್ಭಾವ (ಸಾಮಾಜಿಕ ಸಾಮರಸ್ಯ) ಸಭೆಗಳನ್ನು ಆಯೋಜಿಸುವ ಮೂಲಕ ಸಾಮರಸ್ಯದಿಂದ ಬದುಕುವುದರ ಕುರಿತು ಜನಜಾಗೃತಿ ಮೂಡಿಸಲಾಗುವುದು. ಸಂಸ್ಕೃತಿಯ‌ ಬೇರುಗಳನ್ನು ಮತ್ತು ಹಿಂದೂ ಗುಣವನ್ನು ಕಳೆದುಕೊಳ್ಳದೆ ಆಧುನಿಕ ಜೀವನವನ್ನು ನಡೆಸುವುದರ ಕುರಿತು ಈ ಸಭೆಗಳು ಬೆಳಕು ಚೆಲ್ಲುತ್ತವೆ. ಆಧುನಿಕ‌ ಜೀವನ ನಡೆಸುತ್ತಿರುವವರಲ್ಲೂ ಸಂಸ್ಕೃತಿಯ ಬೇರುಗಳು ಇರಲು ಸಾಧ್ಯ ಎನ್ನುವುದನ್ನು ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕಾಗಿ ಬಂದ ಕೋಟ್ಯಂತರ ಜನರೇ ಸಾಕ್ಷಿ.

5. ದೇಶದ ಎಲ್ಲ ಜಿಲ್ಲಾ ಮಟ್ಟದಲ್ಲಿ ಪ್ರಮುಖ ನಾಗರಿಕರ ಸಂವಾದಗೋಷ್ಠಿಗಳನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮಗಳು ರಾಷ್ಟ್ರೀಯ ವಿಷಯಗಳ ಮೇಲೆ ಸರಿಯಾದ ದೃಷ್ಟಿಕೋನವನ್ನು ಮೂಡಿಸುವುದು ಮತ್ತು ಸಮಾಜದಲ್ಲಿ ಇರುವ ತಪ್ಪು ಕಥನಗಳನ್ನು (Narrative) ಸರಿಪಡಿಸುವುದರ ಮೇಲೆ ಕೇಂದ್ರೀಕೃತವಾಗಿರುತ್ತವೆ.

6. ಯುವಕರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು. 15 ರಿಂದ 30 ವರ್ಷದೊಳಗಿನ ಯುವಕರಿಗಾಗಿ ರಾಷ್ಟ್ರ ನಿರ್ಮಾಣ ಚಟುವಟಿಕೆಗಳು, ಸೇವಾ ಚಟುವಟಿಕೆಗಳು ಮತ್ತು ಪಂಚ ಪರಿವರ್ತನದ ಮೇಲೆ ಕೇಂದ್ರೀಕರಿಸುವ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಕಾರ್ಯಕ್ರಮ ಯಾವ ರೀತಿ ಇರಬೇಕು ಎನ್ನುವುದನ್ನು ಪ್ರಾಂತದ ಘಟಕಗಳೇ ತಮ್ಮ ಅಗತ್ಯಕ್ಕೆ ತಕ್ಕಂತೆ ಯೋಜಿಸುತ್ತವೆ ಎಂದರು.

ಪ್ರಶ್ನೋತ್ತರ: ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಆರಂಭಿಕ ಮಾಹಿತಿ ನೀಡಿದ‌ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಯಿತು.

1. ವಕ್ಫ್ ಕಾಯ್ದೆ ರದ್ದತಿಯ ಕುರಿತು ಹಿಂದೂ ಸಂಘಟನೆಗಳ ಬೇಡಿಕೆಯ ಪ್ರಶ್ನೆಗೆ ಉತ್ತರಿಸುತ್ತಾ, ವಕ್ಫ್‌ನಿಂದ ರೈತರ ಭೂಮಿಯನ್ನು ಒತ್ತುವರಿ ಮಾಡಿರುವುದರಿಂದ ಅನೇಕ ರೈತರು ಸಂತ್ರಸ್ತರಾಗಿದ್ದಾರೆ. ಸರ್ಕಾರವು (ಕೇಂದ್ರ) ಈ ಸಮಸ್ಯೆಯ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದೆ ಮತ್ತು ತಪ್ಪುಗಳನ್ನು ಸರಿಪಡಿಸಬೇಕು ಎಂದರು.

2. ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂಬ ಪ್ರಶ್ನೆಯ ಕುರಿತಾಗಿ ಮಾತನಾಡುತ್ತ, ಸಮಾಜ ಮತ್ತು ರಾಷ್ಟ್ರದ ಒಳಿತಿಗಾಗಿ ಆದರ್ಶವಾಗಿರುವವರು ನಮ್ಮ ಆದರ್ಶಗಳಾಗಿರಬೇಕು. ಅಸಹಿಷ್ಣುತೆಗೆ ಹೆಸರಾಗಿರುವ ಮತ್ತು ಈ ರಾಷ್ಟ್ರದ ನೀತಿಗಳನ್ನು ಧಿಕ್ಕರಿಸಿದವರು ಆಗಿರಬಾರದು. ಮತೀಯ ದೃಷ್ಟಿಕೋನದಿಂದ ಅಲ್ಲ, ಔರಂಗಜೇಬನು ಈ ರಾಷ್ಟ್ರದ ಕುರಿತು ನಡೆದುಕೊಂಡ ರೀತಿಗಾಗಿ ವಿರೋಧ ವ್ಯಕ್ತವಾಗುತ್ತಿದೆ. 1947ರಲ್ಲಿ ನಾವು ರಾಜಕೀಯ ಸ್ವಾತಂತ್ರ್ಯ ಪಡೆದರೂ, ಮಾನಸಿಕ ಗುಲಾಮಗಿರಿಯು ಇಂದಿಗೂ ವಾಸ್ತವವಾಗಿದೆ ಮತ್ತು ಗುಲಾಮಗಿರಿ ಮಾನಸಿಕತೆಯಿಂದ ಮುಕ್ತ (Decolonisation) ಬಹಳ ಅಗತ್ಯವಾಗಿದೆ ಎಂದರು.

3. ಮತದ ಆಧಾರದ ಮೇಲೆ ಕರ್ನಾಟಕದಲ್ಲಿ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಬಗ್ಗೆ ಪ್ರಶ್ನೆಗೆ, ನ್ಯಾಯಾಲಯಗಳು ಹಲವು ಬಾರಿ ಸರ್ಕಾರದ ಇಂತಹ ಕ್ರಮಗಳನ್ನು ಅಸಂವಿಧಾನಿಕ ಎಂದು ತಿರಸ್ಕರಿಸಿವೆ. ಇಂತಹ ರಾಜಕೀಯ ನಡೆಗಳೊಂದಿಗೆ ಹೋಗುವ ಯಾರೇ ಆಗಲಿ, ಅವರು ಸಂವಿಧಾನ ರಚನೆಕಾರರ ಉದ್ದೇಶಕ್ಕೆ ವಿರುದ್ಧವಾಗಿ ಹೋಗುತ್ತಿದ್ದಾರೆ ಎಂದೇ ಅರ್ಥ ಎಂದರು.

4. ಪ್ರಸ್ತುತ ರಾಷ್ಟ್ರೀಯ ಪರಿಸ್ಥಿತಿಯ ಕುರಿತ ಹೇಳಿಕೆಯಲ್ಲಿ ಮಣಿಪುರದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಮಣಿಪುರದ ಸಮಸ್ಯೆಯನ್ನು ಪರಿಹರಿಸಲು ಮತ್ತು ಅಲ್ಲಿನ ಜನಜೀವನವು ಸಹಜವಾಗಿ ಮತ್ತು ಸಾಮರಸ್ಯದಿಂದ ಕೂಡಿರುವಂತೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಾತ್ರ ಸಂಘವು ಸರ್ಕಾರಕ್ಕೆ ಹೇಳಿದೆ. ಸರ್ಕಾರವು ತನ್ನದೇ ಮೌಲ್ಯಾಂಕನದ ಆಧಾರದ ಮೇಲೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

5. ಕಳೆದ 100 ವರ್ಷಗಳ ಹಾಗೂ ಮುಂದಿನ ಕಾರ್ಯದ ಮೌಲ್ಯಮಾಪನಕ್ಕೆ ಮಾನದಂಡಗಳ ಬಗ್ಗೆ ಪ್ರಶ್ನೆಗೆ ಉತ್ತರಿಸುತ್ತಾ, ಹಿಂದೂ ಸಮಾಜದ ಪುನರ್‌ಜಾಗೃತಿ,‌ ಸಂಘಟನೆಯೇ ಸಂಘದ ಕಾರ್ಯಸೂಚಿಯಾಗಿದೆ. ಅಸ್ಪೃಶ್ಯತೆಯಂತಹ ಹಲವು ಆಂತರಿಕ ದೋಷಗಳಿಂದಾಗಿ ಈ‌ ನೂರು ವರ್ಷಗಳಲ್ಲಿ ಸಂಘದ ಕಾರ್ಯವು ಕಠಿಣವಾಯಿತು. ಶಾಖೆಗಳು ಮತ್ತು ರಾಷ್ಟ್ರವ್ಯಾಪಿ ಚಟುವಟಿಕೆಗಳ ಮೂಲಕ ಸಂಘವು ಎಲ್ಲರನ್ನೂ ಒಗ್ಗೂಡಿಸಿ ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಸಂಘವು ಕೆಲಸ ಮಾಡುತ್ತಿದೆ ಎಂದರು.

ಆರ್‌ಎಸ್‌ಎಸ್ ಶತಾಬ್ದಿ ವರ್ಷದಲ್ಲಿ ಸಂಘಕಾರ್ಯದ ವಿಸ್ತರಣೆ ಮತ್ತು ದೃಢೀಕರಣ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಪುನರ್‌ಜಾಗೃತಿಯ ಗುರಿ: ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಸುದ್ದಿಗೋಷ್ಠಿ

———

ಪ್ರಶ್ನೋತ್ತರ:

ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಆರಂಭಿಕ ಮಾಹಿತಿ ನೀಡಿದ‌ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಯಿತು.

1. ವಕ್ಫ್ ಕಾಯ್ದೆ ರದ್ದತಿಯ ಕುರಿತು ಹಿಂದೂ ಸಂಘಟನೆಗಳ ಬೇಡಿಕೆಯ ಪ್ರಶ್ನೆಗೆ ಉತ್ತರಿಸುತ್ತಾ, ವಕ್ಫ್‌ನಿಂದ ರೈತರ ಭೂಮಿಯನ್ನು ಒತ್ತುವರಿ ಮಾಡಿರುವುದರಿಂದ ಅನೇಕ ರೈತರು ಸಂತ್ರಸ್ತರಾಗಿದ್ದಾರೆ. ಸರ್ಕಾರವು (ಕೇಂದ್ರ) ಈ ಸಮಸ್ಯೆಯ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದೆ ಮತ್ತು ತಪ್ಪುಗಳನ್ನು ಸರಿಪಡಿಸಬೇಕು ಎಂದರು.

2. ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸಬೇಕು ಎಂಬ ಪ್ರಶ್ನೆಯ ಕುರಿತಾಗಿ ಮಾತನಾಡುತ್ತ, ಸಮಾಜ ಮತ್ತು ರಾಷ್ಟ್ರದ ಒಳಿತಿಗಾಗಿ ಆದರ್ಶವಾಗಿರುವವರು ನಮ್ಮ ಆದರ್ಶಗಳಾಗಿರಬೇಕು. ಅಸಹಿಷ್ಣುತೆಗೆ ಹೆಸರಾಗಿರುವ ಮತ್ತು ಈ ರಾಷ್ಟ್ರದ ನೀತಿಗಳನ್ನು ಧಿಕ್ಕರಿಸಿದವರು ಆಗಿರಬಾರದು. ಮತೀಯ ದೃಷ್ಟಿಕೋನದಿಂದ ಅಲ್ಲ, ಔರಂಗಜೇಬನು ಈ ರಾಷ್ಟ್ರದ ಕುರಿತು ನಡೆದುಕೊಂಡ ರೀತಿಗಾಗಿ ವಿರೋಧ ವ್ಯಕ್ತವಾಗುತ್ತಿದೆ. 1947ರಲ್ಲಿ ನಾವು ರಾಜಕೀಯ ಸ್ವಾತಂತ್ರ್ಯ ಪಡೆದರೂ, ಮಾನಸಿಕ ಗುಲಾಮಗಿರಿಯು ಇಂದಿಗೂ ವಾಸ್ತವವಾಗಿದೆ ಮತ್ತು ಗುಲಾಮಗಿರಿ ಮಾನಸಿಕತೆಯಿಂದ ಮುಕ್ತ (Decolonisation) ಬಹಳ ಅಗತ್ಯವಾಗಿದೆ ಎಂದರು.

3. ಮತದ ಆಧಾರದ ಮೇಲೆ ಕರ್ನಾಟಕದಲ್ಲಿ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಬಗ್ಗೆ ಪ್ರಶ್ನೆಗೆ, ನ್ಯಾಯಾಲಯಗಳು ಹಲವು ಬಾರಿ ಸರ್ಕಾರದ ಇಂತಹ ಕ್ರಮಗಳನ್ನು ಅಸಂವಿಧಾನಿಕ ಎಂದು ತಿರಸ್ಕರಿಸಿವೆ. ಇಂತಹ ರಾಜಕೀಯ ನಡೆಗಳೊಂದಿಗೆ ಹೋಗುವ ಯಾರೇ ಆಗಲಿ, ಅವರು ಸಂವಿಧಾನ ರಚನೆಕಾರರ ಉದ್ದೇಶಕ್ಕೆ ವಿರುದ್ಧವಾಗಿ ಹೋಗುತ್ತಿದ್ದಾರೆ ಎಂದೇ ಅರ್ಥ ಎಂದರು.

4. ಪ್ರಸ್ತುತ ರಾಷ್ಟ್ರೀಯ ಪರಿಸ್ಥಿತಿಯ ಕುರಿತ ಹೇಳಿಕೆಯಲ್ಲಿ ಮಣಿಪುರದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸುತ್ತ, ಮಣಿಪುರದ ಸಮಸ್ಯೆಯನ್ನು ಪರಿಹರಿಸಲು ಮತ್ತು ಅಲ್ಲಿನ ಜನಜೀವನವು ಸಹಜವಾಗಿ ಮತ್ತು ಸಾಮರಸ್ಯದಿಂದ ಕೂಡಿರುವಂತೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಾತ್ರ ಸಂಘವು ಸರ್ಕಾರಕ್ಕೆ ಹೇಳಿದೆ. ಸರ್ಕಾರವು ತನ್ನದೇ ಮೌಲ್ಯಾಂಕನದ ಆಧಾರದ ಮೇಲೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

5. ಕಳೆದ 100 ವರ್ಷಗಳ ಹಾಗೂ ಮುಂದಿನ ಕಾರ್ಯದ ಮೌಲ್ಯಮಾಪನಕ್ಕೆ ಮಾನದಂಡಗಳ ಬಗ್ಗೆ ಪ್ರಶ್ನೆಗೆ ಉತ್ತರಿಸುತ್ತಾ, ಹಿಂದೂ ಸಮಾಜದ ಪುನರ್‌ಜಾಗೃತಿ,‌ ಸಂಘಟನೆಯೇ ಸಂಘದ ಕಾರ್ಯಸೂಚಿಯಾಗಿದೆ. ಅಸ್ಪೃಶ್ಯತೆಯಂತಹ ಹಲವು ಆಂತರಿಕ ದೋಷಗಳಿಂದಾಗಿ ಈ‌ ನೂರು ವರ್ಷಗಳಲ್ಲಿ ಸಂಘದ ಕಾರ್ಯವು ಕಠಿಣವಾಯಿತು. ಶಾಖೆಗಳು ಮತ್ತು ರಾಷ್ಟ್ರವ್ಯಾಪಿ ಚಟುವಟಿಕೆಗಳ ಮೂಲಕ ಸಂಘವು ಎಲ್ಲರನ್ನೂ ಒಗ್ಗೂಡಿಸಿ ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಸಂಘವು ಕೆಲಸ ಮಾಡುತ್ತಿದೆ ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.