ಎಸ್.ಪಿ ಬಾಲಸುಬ್ರಹ್ಮಣ್ಯಂ ಅಂದರೆ ಸಾಕು ಎಲ್ಲರಿಗೂ ಎದೆ ತುಂಬಿ ಹಾಡುವೆನು ನೆನಪಿಗೆ ಬರುತ್ತದೆ. ಅವರು ಹಾಡಿದ ಹಾಡುಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಎಸ್‌ ಪಿಬಿ ಅವರು ಕನ್ನಡ, ತಮಿಳು , ತೆಲುಗು ಭಾರತ ಚಿತ್ರರಂಗದಲ್ಲಿ ಅದ್ವೀತಿಯ ಸಾಧನೆ ಮಾಡಿದ್ದಾರೆ. ಇವರು ಹಾಡುವುದು ಮಾತ್ರವಲ್ಲದೆ ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ ಮಾಡಿದರು. ಇಂದು ಅವರ ಜಯಂತಿ.


ಪರಿಚಯ
ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಅವರು ಜೂನ್‌ 4, 1946ರಂದು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಜನಿಸಿದರು. ಇವರ ತಂದೆ ಎಸ್‌.ಪಿ ಸಾಂಬರಮಮೂರ್ತಿ ಹಾಗೂ ತಾಯಿ ಶಕುಂತಲಮ್ಮ. ಬಾಲಸುಬ್ರಹ್ಮಣ್ಯಂ ಅವರು ಪ್ರಾಥಮಿಕ ಶಿಕ್ಷಣ ಚಿತ್ತೂರಿನಲ್ಲಿ ಮುಗಿಸಿದರು. ನಂತರ ಅನಂತರಪುರದ ಜೆಎನ್‌ ಟಿಯು ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ನಲ್ಲಿ ಅಧ್ಯಯನ ನಡೆಸಿದರು. ಇವರ ತಂದೆ ಎಸ್‌.ಪಿ ಸಾಂಬರಮಮೂರ್ತಿ ಅವರು ಹರಿಕಥೆ ಹೇಳುತ್ತಿದ್ದರು. ಬಾಲಸುಬ್ರಹ್ಮಣ್ಯಂ ಅವರು ಬಾಲ್ಯದಿಂದಲೂ ಸಂಗೀತದ ಕಡೆ ಹೆಚ್ಚು ಆಸಕ್ತಿ ಹೊಂದಿದ್ದರು.


1966ರಲ್ಲಿ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರು ಮರ್ಯಾದಾ ರಾಮಣ್ಣ ಅವರೊಂದಿಗೆ ಹಿನ್ನೆಲೆ ಗಾಯನ ಮೂಲಕ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಎಸ್ ಪಿಬಿ ತಮ್ಮ ಮಾಂತ್ರಿಕ ಹಾಡುಗಳ ಮೂಲಕ ಅಭಿಮಾನಿಗಳ ಗಮನ ಸೆಳೆದರು. ಅವರು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಸೇರಿದಂತೆ 5 ಕ್ಕೂ ಹೆಚ್ಚು ವಿವಿಧ ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಟಿ ಆರ್‌ ನರಸಿಂಹರಾಜು ನಟಿಸಿದ ‘ನಕ್ಕರೆ ಅದೇ ಸ್ವರ್ಗ’ ಚಿತ್ರಕ್ಕೆ ಮೊದಲ ಬಾರಿಗೆ ಸಂಗೀತ ನೀಡಿದ್ದರು. 1968ರಲ್ಲಿ ಕೊಂಡಂಡಪಾಣಿ ರಚಿಸಿದ ‘ಸುಖ ದು:ಖಲು’ ಚಿತ್ರದ ‘ಮೇದಂತೇ ಮೇದ ಕಾಡು’ ಹಾಡು ಅವರಿಗೆ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಮನ್ನಣೆ ದೊರಕಿತು. ಇವರು ತಮಿಳು ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಗೀತೆಗಳ ಧ್ವನಿಮುದ್ರಿಸಿದ್ದರು. ಕನ್ನಡದಲ್ಲಿ ಒಂದೇ ದಿನ 17 ಗೀತೆಗಳ ಧ್ವನಿಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಮಲ್ ಹಾಸನ್ ಅವರು ನಟನಾಗುವಂತೆ ಒತ್ತಾಯ ಮಾಡಿ ಅವರನ್ನು ತೆರೆ ಮೇಲೆ ಮಿಂಚುವಂತೆ ಮಾಡಿದ್ದರು. ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಇತ್ಯಾದಿ ಸಿನಿಮಾಗಳಿಗೆ ಹಾಡಿ ಸಿನಿಪ್ರಿಯರಿಂದ ಸೈ ಎನಿಸಿಕೊಂಡಿದ್ದಾರೆ. ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರು ಒಟ್ಟು 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡಿದ್ದಾರೆ.


ಪ್ರಶಸ್ತಿ
ಎಸ್‌ ಪಿಬಿ ಅವರಿಗೆ ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು ಬಂದಿವೆ.ಭಾರತ ಸರ್ಕಾರ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಎಸ್‌ ಪಿ ಬಿ ಅವರಿಗೆ 25 ಬಾರಿ ಆಂಧ್ರಪ್ರದೇಶ ಸರ್ಕಾರ ‘ನಂದಿ ಪ್ರಶಸ್ತಿ’ ನೀಡಿದೆ. 4 ಭಾಷೆಗಳಲ್ಲಿ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿಶ್ವವಿದ್ಯಾಲಯದಿಂದ ಅವರಿಗೆ ಹಲವು ಬಾರಿ ಡಾಕ್ಟರೇಟ್‌ ಸಹ ನೀಡಿ ಗೌರವಿಸಲಾಗಿದೆ. .

ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರು ಕೋವಿಡ್‌ ನಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 25, 2020 ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.