ರಾಷ್ಟೀಯ ನೇತ್ರದಾನ ಪಾಕ್ಷಿಕ ಪ್ರಯುಕ್ತ ಬ್ರಹತ್ ನೇತ್ರದಾನ ಜಾಗೃತಿ ಶಿಬಿರ ಹಾಗೂ ಸಾಧಕ ದಿವ್ಯಾಂಗ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ
ಸಕ್ಷಮ ಬೆಂಗಳೂರು ಘಟಕವು ಆರ್. ಏನ್ . ಎಸ್ ಪ್ರಥಮ ದರ್ಜೆ ಕಾಲೇಜಿನ ಏನ್. ಎಸ್ . ಎಸ್ ಘಟಕದ ಸಹಯೋಗದೊಂದಿಗೆ ಇಂದು ಬೆಂಗಳೂರಿನ ಚನ್ನಸಂದ್ರದ ಆರ್ .ಏನ್ . ಎಸ್ ಸಭಾಂಗಣದಲ್ಲಿ ರಾಷ್ಟೀಯ ನೇತ್ರದಾನ ಪಾಕ್ಷಿಕ ಪ್ರಯುಕ್ತ ಬ್ರಹತ್ ನೇತ್ರದಾನ ಜಾಗೃತಿ ಶಿಬಿರ ಹಾಗೂ ಸಾಧಕ ದಿವ್ಯಾಂಗ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ನೇತ್ರಧಾಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೇತ್ರತಜ್ಞೆಯಾದ ಡಾ. ಸಂಹಿತ ಹೆಚ್. ಆರ್ ರವರು ನೇತ್ರದಾನದ ಮಹತ್ವ, ನೇತ್ರದಾನದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳು ಹಾಗೂ ನೇತ್ರದಾನ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿ ಒಬ್ಬ ವ್ಯಕ್ತಿ ನೇತ್ರದಾನ ಮಾಡುವುದರಿಂದ 4 ಜನರಿಗೆ ದೃಷ್ಟಿ ಸಿಗುವ ಆಧುನಿಕ ತಂತ್ರಜ್ಞಾನಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಇಬ್ಬರು ಸಾಧಕ ದಿವ್ಯಾಂಗ ಶಿಕ್ಷಕ ಶಿಕ್ಷಕಿಯರನ್ನು ಗುರುತಿಸಿ ಗೌರವಿಸಲಾಯಿತು. ಮೈಸೂರಿನ ಖ್ಯಾತ ದೃಷ್ಟಿಬಾಧಿತ ಗಾಯಕಿ ಹಾಗೂ ಸಂಗೀತ ಗುರುಗಳಾದ ವಿದೂಷಿ ಮಾಲಿನಿಯವರನ್ನು ಸಂಗೀತ ಕ್ಷೇತ್ರದ ಅದ್ವೀತೀಯ ಸಾಧನೆಗಳಿಗಾಗಿ ಹಾಗೂ ಬೆಂಗಳೂರಿನ ವಿಜಯನಗರದ ಶ್ರೀ ಲಕ್ಷೀಪತಯ್ಯನವರನ್ನು ಪೋಲಿಯೋ ಬಾಧಿತರಾಗಿಯೂ ತಮ್ಮ ಚಲನವಲನ ಸಮಸ್ಯೆಗಳೊಂದಿಗೆ ಏನ್. ಟಿ .ಟಿ. ಎಫ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಅಲ್ಲಿನ ದಿವ್ಯಾಂಗ ಮಕ್ಕಳಿಗೆ ಉಚಿತ ಊಟ ವಸತಿನೀಡಿ ಕಲಿಸುತ್ತ ಹಾಸ್ಟೆಲ್ ನಡೆಸುವ ಸೇವಾಕಾರ್ಯಗಳಿಗಾಗಿ ಅವರಿಬ್ಬರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಡಾ. ಕಿರಣ್ ಎಸ್ . ಮೂರ್ತಿ, ಸಕ್ಷಮ ಬೆಂಗಳೂರು ಘಟಕದ ಅಧ್ಯಕ್ಷರು ಪ್ರಾಸ್ತಾವಿಕ ನುಡಿಗಳ ಮೂಲಕ ಸಕ್ಷಮದ ಸೇವಾಕಾರ್ಯಗಳ ಕಿರುಪರಿಚಯ ನೀಡಿದರು. ಡಾ. ಸುಧೀರ್ ಪೈ ಕೆ. ಎಲ್ ಸಕ್ಷಮದ ಪ್ರಾಂತ ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಮಕ್ಕಳಿಗೆ ನೇತ್ರದಾನ ಜಾಗೃತಿಯ ಮೂಲಕ ಕಾಲೇಜುಗಳಲ್ಲಿ ಸೇವಾ ಮನೋಭಾವದ ಸಂಸ್ಕಾರ ನೀಡುವುದರ ಮೂಲಕ ದೇಶದ ದೃಷ್ಟಿ ಬಾಧಿತರ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಹರಿಕೃಷ್ಣ ರೈಯವರು ಸೇರಿದ್ದ ಸಭಿಕರಿಗೆ ನೇತ್ರದಾನದ ಹಾಗೂ ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನದ ಪ್ರತಿಜ್ಞೆಯನ್ನು ಬೋಧಿಸಿದರು.
ಸಭಾಕಾರ್ಯಕ್ರಮದ ನಂತರ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಟಾಥಾನ್ – ಕಣ್ಣು ಕಟ್ಟಿ ನಡಿಗೆ ಮೂಲಕ ರಸ್ತೆಗಳಲ್ಲಿ ನೇತ್ರದಾನ ಜಾಗೃತಿಯ ಘೋಷಣೆ ಕೂಗುತ್ತ ನೇತ್ರದಾನದ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸುವಲ್ಲಿ ಯಶಸ್ವಿಯಾದರು.