
ಸುಭಿಕ್ಷಾ ಸಾವಯವ ಕೃಷಿಕರ ಸಹಕಾರಿ ಸೊಸೈಟಿ ಹಾಗೂ ಸಿನರ್ಜಿ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್ ಜಂಟಿಯಾಗಿ “ಸಂಹಿತಾ” ಎಂಬ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.

ಸಾವಯವ ಕೃಷಿ ಮಿಷನ್ ನ ಆ. ಶ್ರೀ. ಆನಂದ್ ಉಪಸ್ಥಿತರಿದ್ದರು.
ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವರಾದ ಡಾ. ಅಶ್ವತ್ಥನಾರಾಯಣ, ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹರಾದ ನಾ ತಿಪ್ಪೇಸ್ವಾಮಿಯವರು ‘ಸಂಹಿತಾ’ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು. ಕೃಷಿಕರು ತಮ್ಮ ಉತ್ಪನ್ನಗಳನ್ನು ಕರ್ನಾಟಕ, ಕೇರಳ ರಾಜ್ಯಗಳ ಗ್ರಾಹಕರಿಗೆ ಕೃಷಿಗೆ, ಬೆಳೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ಸಲುವಾಗಿ ಸಂಹಿತಾ ಮೊಬೈಲ್ ಆ್ಯಪ್ ರಚಿಸಲಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಸಾವಯವ ಕೃಷಿಕರು ಈ ಆ್ಯಪ್ ಬಳಸಿಕೊಂಡು ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಆ್ಯಪ್ ಬಗ್ಗೆ ಮಾಹಿತಿ ನೀಡಲಾಗಿದೆ.