Sangh Shiksha Varg-2011 concludes in Karnataka.
ಆರೆಸ್ಸೆಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ
Bangalore: Sangh Shiksha Varg, the annual summer training camp for select RSS Swayamsevaks was successfully held in Karnataka from mid April to first week of May, 2011.
In Sothern Karnataka this 20day Camp was held from April 15 to May 6th at Janaseva Vidyakendra, 20km away from Bangalore, while the Camp in North Karnataka was held from April 18 to May 9th, at Rashtrotthana Vidyakendra at Hagaribommanahalli.
It was an inspiring evening at Channenahalli on Thursday May 6. It was the Valedictory ceremony of Sangh Shiksha Varg – 2011, organised by Rashtriya Swayamsevak Sangh Karnataka South, held at the premises of Janaseva Vidya Kendra Channenahalli.
Presiding over the event, Sri Paras Jain, Managing Director of Adishwar Marketing Limited opinioned that “RSS is capable of transforming a common person to a complete man, with creative skills and can make him a responsible, potential individual who will be ready to accept all challenges for the society. If such individuals work in all walks of social life, then we can get rid of all social evils and we will able to face the challenges of the nation”.
Adressing the gathering Sri Pattabhiram, RSS Pranth Sahasampark Pramukh highlighted the need of Sangh training in the 20 day long residential training camp, for the swayamsevaks which they joined for. “RSS involved in man-making mission, succeeded in its 8 decades of long effort, still continuing to work for the society through the dedicated and committed, selfless swayamsevaks. By uniting Hindu society in each aspect RSS wishes to build a strong and prosperous India free from all social ailments like untouchability, poverty etc.”
In Valedictory of Sangh Shiksha Varg at Hagaribommanahalli of North Karnatak Industrialist Sri Vivek Pawar presided over. Sri Ravindra, Pranth Sahaboudhik pramukh gave valedictory speech.
An attractive demonstration of physical exercises including Niyuddha, a form of weaponless fight resembling Karate, Yogasana, domestic games were performed by the swayamsevaks who participated in the 20-day long Sangh Shikhsa Varg camp.
the number of swayamsevaks participated are as follows:
First year Sangh Shikhsha Varg South Karnataka- 645
North Karnataka- 353
Second year Sangh Shikhsha Varg (combined)- 186
Pranth Prathamaika Shiksha Varg- South Karnataka-180
North Karnataka-129
Pruodha Sangh Shikhsha Varg aged beyond 45 (combined)-33
A total of 1526 swayamsevaks from Karnataka took training in these residential camps, in which individuals from all walks of life, farmers, teachers, students, software professionals, businessmen and other self employed were participated. Resource persons including Pejawar seer Sri Vishweshwar Swamiji, noted thinker-writer Shatavadhani Dr R Ganesh and several others visited the camp and encouraged the swayamsevaks.
RSS Sarasanghachalak Mohanji Bhagwat visited the Sangh Shiksha Varg at Hagaribommanahalli on April 26th, he stayed in the camp for 5days and guided the swayamsevaks who are undertaking training.
Sangh Shiksha Varg, also formerly known to be Officers Training Camp (OTC), is a residential camp for 20 days. Sangh Shiksha Varg provides a higher exposure for all swayamsevaks to understand the organisational works and makes an individual to work for a social cause. Through physical exercises, debates, lectures, discussions and multiple learning sessions, Sangh Shiksha Varg proves one of best residential camp by a Social Organisation.
ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸ ಸಂಘ ಮಾಡುತ್ತಿದೆ– ಉದ್ಯಮಿ ಪಾರಸ್ ಜೈನ್.
ಇಂದು ನಮ್ಮ ದೇಶದ ಮೇಲೆ ಹಲವು ಸವಾಲುಗಳು ಎರಗುತ್ತಿವೆ. ಹಲವಾರು ವಿದೇಶೀ ಕಂಪನಿಗಳು ಇಲ್ಲಿ ಬೀಡು ಬಿಡುತ್ತಿವೆ. ಅದರಿಂದ ಹಲವು ಬದಲಾವಣೆಗಳು ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಿ ಸಂಭವಿಸುತ್ತವೆ. ಅವುಗಳಿಂದ ದೇಶವನ್ನು ರಕ್ಷಿಸಲು ಶಕ್ತಿ ಬೇಕಾಗಿದೆ. ಆದರೆ ಇಂದಿನ ಯುವ ಜನತೆ ಗುರಿ ಇಲ್ಲದವರಾಗಿದ್ದಾರೆ. ಅವರಿಗೆ ಬೇಕಾದ ಗುರಿ, ಅದನ್ನು ಮುಟ್ಟಲು ಬೇಕಾದ ಶಿಕ್ಷಣ ಕ್ತಿ ಇಂದು ಬೇಕಾಗಿದೆ. ಅದನ್ನು ಆರೆಸ್ಸಸ್ ಮಾಡುತ್ತಿದೆ. ಹೀಗೆ ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸ ಸಂಘ ಮಾಡುತ್ತಿದೆ. ಸಂಘದ ಈ ಕೆಲಸ ಹೊರಗಿನವರಿಗೆ ಸರಿಯಾಗಿ ತಿಳಿಯುತ್ತಿಲ್ಲ. ವ್ಯಕ್ತಿ ನಿರ್ಮಾಣದ ಕೆಲಸ ಈ ದೇಶದಲ್ಲಿ ಮಾತ್ರ ಈ ಪ್ರಮಾಣದಲ್ಲಿ ನಡೆಯುತ್ತಿದೆ. ಕುಟುಂಬ, ಸಮಾಜ, ದೇಶ ಪ್ರೇಮದ ಶಿಕ್ಷಣ ಪಡೆದ ಸ್ವಯಂಸೇವಕರು ಎಲ್ಲೆಡೆ ಸ್ಥಾನ ಪಡೆದರೆ ಎಲ್ಲ ಭೇದ ಭಾವಗಳು, ಅಪಾಯಗಳು ದೂರಾಗುವುದು ಖಂಡಿತಎಂದು ಬೆಂಗಳೂರಿನ ಯುವ ಉದ್ಯಮಿ ಪಾರಸ್ ಜೈನ್ ಭರವಸೆಯಿಂದ ನುಡಿದರು. ಅವರು ಬೆಂಗಳೂರು ಸಮೀಪದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ನಡೆದ ಆರೆಸ್ಸೆಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.
ಕರ್ನಾಟಕ ದಕ್ಷಿಣದ 378 ಸ್ಥಾನದಿಂದ 645ಯುವಕರು, ಸಮಗ್ರ ಕರ್ನಾಟಕದ ಆಯ್ದ 32 ಸ್ಥಾನಗಳಿಂದ ಬಂದ 33ಗಣ್ಯರು 20 ದಿನಗಳಪ್ರಥಮ ವರ್ಷದ ಶಿಕ್ಷಣ ಪಡೆದರು. ಇದೇ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣದ 142ಸ್ಥಾನಗಳಿಂದ ಬಂದ 180 ಕಾಲೇಜು ವಿದ್ಯಾರ್ಥಿಗಳು, ಅದರಲ್ಲಿ 33ಅಧ್ಯಾಪಕರು ಇಲ್ಲಿ ಒಂದು ವಾರದ ಶಿಕ್ಷಣ ಪಡೆದಿದ್ದಾರೆ.
ಈ ತರಬೇತಿ ಶಿಬಿರಕ್ಕೆ ಶತಾವಧಾನಿ ಡಾ. ರಾ.ಗಣೇಶ್, ಸಮಾಜ ಮುಖಿಚಿಂತನೆಯ ಸಂತ ಪೇಜಾವರ ಶ್ರೀಗಳು ಮುಂತಾದ ಗಣ್ಯರು ಭೇಟಿ ನೀಡಿದ್ದಾರೆ. ಮೇ ೧ರ ಭಾನುವಾರ ಬೆಂಗಳುರಿನ ೧೭೫ ಕುಟುಂಬಗಳ ತಾಯಂದಿರು ತಾವೇ ಅಡುಗೆ ಮಾಡಿ ತಂದು ತಾಯ್ತನದ ಪ್ರೀತಿಯನ್ನು ಶಿಬಿರಾರ್ಥಿಗಳಿಗೆ ಉಣಬಡಿಸಿದ್ದಾರೆ.
ಸಹಜೀವನ ಸಾಮರಸ್ಯ ಮುಂತಾದ ಸದ್ಗುಣಗಳ ಶಿಕ್ಷಣವನ್ನು ನೀಡುವ ಈ ಶಿಬಿರ ಚೇತೋಹಾರಿಯಾಗಿತ್ತು. ರೈತರು, ಕಾರ್ಮಿಕರು, ವಿದ್ಯಾರ್ಥಿUಳು, ವಕೀಲರು, ವೈದ್ಯರು ಮುಂತಾದ ಸಮಾಜದ ಎಲ್ಲ ಕ್ಷೇತ್ರಗಳ ಶಿಬಿರಾರ್ಥಿಗಳು ಇಲ್ಲಿದ್ದುದು ವಿಶೇಷ.
ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಸಂಪರ್ಕ ಪ್ರಮುಖರಾದ ಶ್ರೀಪಟ್ಟಾಭಿರಾಮ್,ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಸಂಘ ಕೈಗೆತ್ತಿಕೊಂಡಿದೆ. ಇಲ್ಲಿ ವ್ಯಕ್ತಿ ಸುಖದ ಕಲ್ಪನೆಯಿಲ್ಲ. ಬದಲಾಗಿ ರಾಷ್ಟ್ರ ಸುಖ – ವೈಭವದಸಾಧನೆಯೇ ಗುರಿ. ಅದಕ್ಕಾಗಿ ವ್ಯಕ್ತಿ ವ್ಯಕ್ತಿಗಳನ್ನು ಜೋಡಿಸಿ, ಸಂಸ್ಕಾರ ನೀಡಿ ಅವರ ಮೂಲಕ ಗುರಿಸಾಧನೆಯ ಕನಸನ್ನು ಸಂಘ ಕಂಡಿದೆ. ಅದಕ್ಕಾಗಿ ಶಿಕ್ಷಣ, ಸಂಸ್ಕಾರ, ತರಬೇತಿ ನೀಡುತ್ತಿದೆ ಎಂದರು.
ಸಂಘ ಕಾರ್ಯದ ಆಧಾರವೇ ಧರ್ಮ. ಧರ್ಮ ಇದ್ದಲ್ಲಿ ವ್ಯವಸ್ಥೆ ಚೆನ್ನಾಗಿರುತ್ತದೆ. ಆ ರೀತಿಯ ವ್ಯವಸ್ಥೆ ರೂಪಿಸುವುದೇ ನಮ್ಮ ಸಮಾಜ ಕಂಡುಕೊಂಡ ದಾರಿ. ವಸುಧೈವ ಕುಟುಂಬಕಮ್ ಎಂಬುದು ನಮ್ಮ ವಿಚಾರ. ಕೃಣ್ವಂತೊ ವಿಶ್ವಮಾರ್ಯಮ್ ಎನ್ನುವುದು ನಮ್ಮ ಕೆಲಸ, ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ ಎಂಬುದು ಅದರ ಆಧಾರ. ಅದನ್ನು ಮಾಡಲೆಂದೇ ವ್ಯಕ್ತಿತ್ವ ನಿರ್ಮಾಣ ಕಾರ್ಯವನ್ನು ಸಂಘ ಕೈಗೊಂಡಿದೆ. ಜಗತ್ತಿನಲ್ಲೇ ಹಿರಿದಾದ ವಿಚಾರಗಳು, ಅದರ ಅನುಷ್ಠಾನದ ಸಂಪತ್ತಿನ ಮೂಲಕ ಭಾರತ ಜಗತ್ತಿನ ತಾಯಿ ಎನಿಸಿತ್ತು. ಕಾಲದ ಹೊಡೆತದಿಂದ ಇದರ ಮರೆವು ಉಂಟಾಗಿ ದಾಸ್ಯದ ಸಂಕೋಲೆಗೆ ದೇಶ ಸಿಲುಕಿತು. ಇಲ್ಲಿನ ಸ್ವತ್ವ ನಾಶವಾಯಿತು ಎಂದು ದೇಶದ ಉನ್ನತಿ ಮತ್ತು ಅವನತಿಯ ಕಾರಣವನ್ನು ತಿಳಿಸಿದ ಅವರು, ಜನ್ಮಜಾತ ದೇಶಭಕ್ತ ಡಾ.ಹೆಡಗೇವಾರ್, ಈ ದೇಶಕ್ಕೆ ತಗುಲಿದ್ದ ರೋಗದ ಮೂಲ ಹುಡುಕಿದರು. ಹಿಂದುತ್ವದ ಮರೆವು, ಅದರ ಪರಿಣಾಮವಾಗಿ ಹುಟ್ಟಿದ ಒಡಕು, ಇದರಿಂದ ದೇಶಕ್ಕೆ ದಾಸ್ಯ ಮತ್ತು ಸ್ವತ್ವದ ನಾಶಎಂಬ ರೋಗವನ್ನು ಗುರುತಿಸಿದ ಅವರು ಅದಕ್ಕೆ ಔಷಧಿಯಾಗಿ ಸಂಘವನ್ನು ಆರಂಭಿಸಿದರು. ವ್ಯಕ್ತಿ ನಿರ್ಮಿತಿಯ ಮೂಲಕ ರಾಷ್ಟ್ರ ನಿರ್ಮಿತಿ, ಇದು ಸ್ಥಾಯಿ ಕಾರ್ಯ. ಇದರೊಡನೆ ಬರುವ ಸವಾಲುಗಳನ್ನು ಸಾಧನಗಳಾಗಿ ಮಾರ್ಪಡಿಸಿಕೊಂಡು ಎಲ್ಲರ ಸಹಕಾರದಿಂದ ರಾಷ್ಟ್ರನಿರ್ಮಿಸುವ ಕೆಲಸಕ್ಕೆ ಸಂಘ ಆದ್ಯತೆ ನೀಡಿದೆ. ಇದಕ್ಕೆ ಬೇಕಾದ ಶಿಕ್ಷಣ, ಸಂಸ್ಕಾರ, ಸ್ವತಃ ಮೇಲ್ಪಂಕ್ತಿ ನೀಡುವುದು ಸಂಘದ ವಿಶೇಷ. ಮತಾಂತರ, ಭಯೋತ್ಪಾದನೆ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳು ಎದುರಾಗಿವೆ. ಸಾಮಾನ್ಯವ್ಯಕ್ತಿಯೂ ಸಹ ಚಾರಿತ್ರ್ಯವಂತನಾದರೆನಂಬಿಕೆಗೆ ತಕ್ಕಂತೆ ಬದುಕಿದರೆ, ಯಾವ ಸಮಸ್ಯೆಗಳೂ ಉಳಿಯವು. ನಮ್ಮ ರಾಷ್ಟ್ರ ಮತ್ತೆಜಗತ್ತಿನ ಗುರುವಾದೀತು. ಅದಕ್ಕಾಗಿ ಸಂಘ ಕಾರ್ಯ ಇನ್ನಷ್ಟು ಬೆಳೆಯಬೇಕಿದೆ, ಅದಕ್ಕೆ ಎಲ್ಲರೂ ಬೆಂಬಲಿಸಿ ಎಂದು ಅವರು ಕರೆ ನೀಡಿದರು.
ಶಿಬಿರಾರ್ಥಿಗಳಿಂದ ಆಕರ್ಷಕ ಶಾರೀರಿಕ ಪ್ರದರ್ಶನ, ಭೋಗ ಮಟ್ಟಿ ತ್ಯಾಗ ಮೆರೆದ ಜನ್ಮ ಭೂಮಿ ಭಾರತ ಈ ಗೀತೆ ನೆರೆದವರ ಮನ ಸೂರೆಗೊಂಡಿತು.
K