ಭಾರತದ ಪರಮ ವೈಭವವೇ ಗುರಿ; ಸಂಘಟನೆ, ಸೇವೆ ಅದರ ದಾರಿಗಳು.
ಬೆಂಗಳೂರು, ಮೇ 9, 2017: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಂಘ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭವು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರ ಶಾಲಾ ಆವರಣದಲ್ಲಿ ಮಂಗಳವಾರ ಮೇ9, 2017ರಂದು ನಡೆಯಿತು. ಏಪ್ರಿಲ್ 19ರಂದು ಪ್ರಾರಂಭಗೊಂಡಿದ್ದ 20 ದಿನಗಳಈ ಪ್ರಶಿಕ್ಷಣವರ್ಗಗಳಲ್ಲಿ ರಾಜ್ಯದ ಒಟ್ಟು 450 ಕಾರ್ಯಕರ್ತರುಭಾಗವಹಿಸಿದ್ದರು. ಡಾ|| ದೇವಿಪ್ರಸಾದ್ಶೆಟ್ಟಿ, ನಾರಾಯಣ ವೈದ್ಯಕೀಯ ಸಂಸ್ಥೆಗಳ ಸಮೂಹದ ಅಧ್ಯಕ್ಷರು ಹಾಗೂ ಖ್ಯಾತ ಹೃದ್ರೋಗ ತಜ್ಞರು ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಗೋಪಾಲ್ಜೀ ಅವರಬೌದ್ಧಿಕ್ವರ್ಗಆಯೋಜಿಸಲಾಗಿತ್ತು. ವೇದಿಕೆಯಲ್ಲಿ ದಕ್ಷಿಣ ಮಧ್ಯಕ್ಷೇತ್ರದ ಸಂಘಚಾಲಕರಾದ ಶ್ರೀ ವಿ. ನಾಗರಾಜ, ಕರ್ನಾಟಕ ದಕ್ಷಿಣ ಪ್ರಾಂತ್ರದ ಸಂಘಚಾಲಕರಾದ ಶ್ರೀ ಮಾ. ವೆಂಕಟರಾಮ್, ಹೆಬ್ಬಾಳ ಭಾಗದ ಸಂಘಚಾಲಕರಾದ ಶ್ರೀಪಾದರಾವ್, ಉಪಸ್ಥಿತರಿದ್ದರು.
ವಿಶೇಷ ಪ್ರಯತ್ನವಾಗಿ ೧೮,೦೦೦ಕ್ಕೂಹೆಚ್ಚು ಸೀಡ್ಬಾಲ್ಗಳನ್ನು ಶಿಕ್ಷಾರ್ಥಿಗಳು ಶಿಬಿರದಲ್ಲಿ ತಯಾರಿಸಿದ್ದರು. ಆಸಕ್ತರು ಅದನ್ನು ಪಡೆದು ತಮ್ಮ ಮನೆಯ ಸುತ್ತಲಿನ ಆವರಣಗಳಲ್ಲಿ ಗಿಡಬೆಳೆಸಲು ವಿತರಿಸುವ ವ್ಯವಸ್ಥೆಅಲ್ಲಿ ಮಾಡಲಾಗಿತ್ತು. ಅದೇದಿನ ವರ್ಗದ ಶಿಕ್ಷಾರ್ಥಿಗಳಿಂದ ರೋಚಕ ಶಾರೀರಿಕ ಪ್ರದರ್ಶನ, ಯೋಗವ್ಯಾಯಾಮ, ದಂಡಅಭ್ಯಾಸ, ನಿಯುದ್ಧ, ಏರ್ಪಾಡಾಗಿತ್ತು. ಸಂಘದ ಹಿರಿಯಪದಾಧಿಕಾರಿಗಳಾದ ಶ್ರೀಮುಕುಂದ, ಶ್ರೀಶ್ಯಾಮ್ಜೀ, ಶ್ರೀ ಕೃ. ನರಹರಿ ಉಪಸ್ಥಿತರಿದ್ದರು.
ಶ್ರೀ ಗೋಪಾಲ್ ಅವರ ಬೌದ್ಧಿಕ್:
ಪರಮವೈಭವದ ಕಾಮನೆಗಳನ್ನು ಇಟ್ಟುಕೊಂಡು ಸ್ಥಾಪನೆಯಾದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಈ ವಿಶೇಷ ಸಂಘಟನೆ. ಹಿಂದೂಸಮಾಜವನ್ನುಸಂಘಟಿಸುವ, ವಿಶ್ವಕಲ್ಯಾಣಕ್ಕಾಗೆ ವಿಶಿಷ್ಠಕಾರ್ಯ ಪದ್ಧತಿಯಾದ ಸಂಘದ ಶಾಖೆಯನ್ನು ಆರಂಭಿಸಿದರು ಸಂಘದ ಸಂಸ್ಥಾಪಕರಾದ ಡಾಕ್ಟರ್‌ಜೀ. ಬೇಧಗಳಿಲ್ಲದೇ ಎಲ್ಲರ ಜೊತೆ ಒಗ್ಗೂಡಿ, ಶಾರೀರಿಕ, ಬೌದ್ಧಿಕ ಶಿಕ್ಷಣವನ್ನುಪಡೆಯುವ ನಿಟ್ಟಿನಲ್ಲಿ ಆರಂಭವಾಯ್ತು. ಎಲ್ಲರನ್ನೂ ಒಗ್ಗೂಡಿಸುವುದು ನಮ್ಮ ಕಾರ್ಯವಾಗಬೇಕು ಹಾಗೂ ಸಂಘಟಿಸುವಿಕೆ ನಮ್ಮ ಕರ್ತವ್ಯ ಎಂಬ ಮನೋಭಾವನೆಯಿಂದ ದುಡಿಯಬೇಕೆಂದು ಹೇಳಿಕೊಟ್ಟವರೇ ಡಾಕ್ಟರ್‌ಜೀ. ಸಮಾಜಕ್ಕೆಸಮಯಕೊಟ್ಟು,ರಾಷ್ಟ್ರ ಕಾರ್ಯಮಾಡುವ ಮನೋಭಾವನೆಯಿಂದಲೇ ಇಂದು ಸಂಘಟನೆಈ ಗಾತ್ರದಲ್ಲಿ ಬೆಳೆದು ನಿಂತಿದೆ. ಪ್ರತಿಯೊಬ್ಬ ಸ್ವಯಂಸೇವಕನೂ ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಹೆಚ್ಚುಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾನೆ. ವಿಶ್ವಹಿಂದೂ ಪರಿಷತ್ತು, ಬಿಎಂಎಸ್, ಸಂಸ್ಕೃತಭಾರತಿ, ಕುಟುಂಬಪ್ರಬೋಧನ, ಆರೋಗ್ಯ ಭಾರತಿ ಮುಂತಾದ ಕ್ಷೇತ್ರಗಳ ಉದಯವಾದದ್ದು ಸಂಘಟನೆಯ ಉದ್ದೇಶದಿಂದಲೇ. ಇವೆಲ್ಲಕ್ಕೂಪ್ರೇರಣೆಸೇವೆ, ರಾಷ್ಟ್ರ್ರೀಯಚಿಂತನೆ. ಹಿಂದೂಗಳ ಮೇಲೆ ಸಾಕಷ್ಟುಹಲ್ಲೆಗಳಾಗಿವೆ. ಅದನ್ನು ಮೆಟ್ಟಿನಿಲ್ಲುವ, ಗಟ್ಟಿಯಾಗಿ ಉತ್ತರಿಸ ಬಲ್ಲ ಸನ್ನದ್ಧತೆ ನಮ್ಮಲ್ಲಿ ಇಂದುಮೂಡಿದೆ. ಇನ್ನಷ್ಟು ಎದುರಿಸು ವಶಕ್ತಿಯನ್ನುನಾವು ಬೆಳೆಸಿಕೊಳ್ಳಬೇಕಿದೆ.
ದೇಶದ ಎಲ್ಲಾ ಸಮಸ್ಯೆಗಳಿಗೂ ಉತ್ತರ ನೀಡಬೇಕಿರುವ ಕೆಲಸ ಸಮಾಜದ್ದೇ. ಕೇವಲ ಸ್ವಯಂಸೇವಕರದ್ದಲ್ಲ. ಹಿಂದುತ್ವ, ರಾಷ್ಟ್ರೀಯತೆ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಬೇಕು. ಸಮಾಜವನ್ನುಒಗ್ಗೂಡಿಸಬೇಕು. ಸಂಘದ ಮೇಲೆ ದಾಳಿ ನಡೆಯುತ್ತಿದೆ, ಸಮಾಜದಲ್ಲಿ ಮತಾಂತರವೆಂಬ ಪಿಡುಗನ್ನು ಹೊಡೆದೊಡಿಸುವ ಕೆಲಸದಲ್ಲಿನಾವುತೊಡಗಿದ್ದೇವೆ. ಹಿಂದೂಸಮಾಜದಲ್ಲಿ ಕ್ಷಾತ್ರತೇಜವನ್ನು ತುಂಬುವ ಕೆಲಸ ನಡೆದಿದೆ.ಈ ನಿಟ್ಟಿನಲ್ಲಿ ಇನ್ನಷ್ಟುಜಾಗರಣೆ ಮೂಡಿಸಬೇಕಿದೆ. ಜನರ ಪಾಲ್ಗೊಳ್ಳುವಿಕೆಯೂ ಹೆಚ್ಚಬೇಕಿದೆ. ಸಾಮಾನ್ಯವಾಗಿ ಹೀಗೆ ನಡೆಯುವ ಸಮಾಜಮುಖಿ ಕಾರ್ಯಗಳಿಗೆ ನಮ್ಮಹೆಸರು, ಸಂಘಟನೆಯ ಹೆಸರು ಬೆಳಕಿಗೆ ಬರಬೇಕು ಎಂಬುದು ಹಲವರ ಹಂಬಲ. ಆದರೆ ಸಂಘವೊಂದೇ ತಾನು ಪ್ರಖ್ಯಾತಿಗೊಳ್ಳಬೇಕೆಂದು ಎಂದೂ ಯೋಚಿಸದೇ ಸೇವಾದಿಶೆಯಲ್ಲಿ ತನ್ನ ಕಾರ್ಯ ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದೆ. ಹಾಗೆ ಹೇಳಬೇಕೆಂದರೆ ಸಮಾಜಮುಖಿ ಕಾರ್ಯಕ್ಕೆ ಯಾವ ಸಂಘಟನೆಯಾದರೇನಂತೆ?
ಕೇವಲ ಶಾಖೆಗೆ ಹೋಗುವುದರಿಂದ ದೇಶಭಕ್ತಿ ಹುಟ್ಟುವುದಿಲ್ಲ. ಅಲ್ಲಿನಸಂಸ್ಕಾರ, ಶಿಸ್ತನ್ನು ನಾವು ರೂಢಿಸಿ ಕೊಳ್ಳಬೇಕಿದೆ. ನಮ್ಮ ಎಲ್ಲಾ ಕೆಲಸದಲ್ಲಿಯೂ ಪರಾಕ್ರಮ ಮನೋಭಾವ, ಪ್ರಾಮಾಣಿಕತೆ, ನಿತ್ಯಜೀವನದಲ್ಲಿ ಸದ್ಗುಣಗಳ ಅನುಷ್ಠಾನಗಳಲ್ಲಿ ನಾವು ನಿರಂತರ ತೊಡಗಬೇಕಾಗಿದೆ. ಮಾವಿನಹಣ್ಣಿನ ಸುತ್ತಲಿನ ಬೇವಿನ ಮರಗಳಿಂದ ಮಾವಿನಹಣ್ಣು ಕಹಿಯಾಗುವುದಿಲ್ಲ. ಅಂತೆಯೇ ಸಂಘವೂ ಮಾವಿನಮರದಂತೆ. ನಮ್ಮ ಸುತ್ತಲಿನ ಕೆಡಕುಗಳಿದ್ದರೆ ನಾವು ನಮ್ಮ ಉತ್ತಮಗುಣಗಳನ್ನು ಕಳೆದುಕೊಳ್ಳುವಂತಿಲ್ಲ. ನಾವುಸಮಾಜಕ್ಕೆ ಸಿಹಿಯನ್ನು ಉಣಬಡಿಸಬೇಕು. ಸಂಘಕ್ಕೆ೧೦೦ವರ್ಷ ಇನ್ನೇನು ತುಂಬಲಿದೆ. ಡಾಕ್ಟರ್ಜೀ ನೂರು ವರ್ಷದ ಸಂಭ್ರಮಾಚರಣೆಯಲ್ಲಿ ನಂಬಿರಲಿಲ್ಲ, ನಮ್ಮ ನೂರುವರ್ಷದ ಸಂಭ್ರಮಾಚರಣೆ ಸಮಾಜ ಸರಿದಾರಿಯಲ್ಲಿ ನಡೆಯುವಂತಾದರೆ ಅದರಿಂದ ಮತ್ತೊಂದುಸಾಧನೆ ಇರಲಾರದು.
ಮತಾಂತರ ಪಿಡುಗು ನಿರ್ಮೂಲನೆ, ಅಸ್ಪೃಷ್ಯತೆ, ಭೇಧಭಾವವಿಲ್ಲದ ಬದುಕು ಹೀಗೆ ನಮ್ಮ ಗುರಿಗಳು ಸಾವಿರಾರು ಇವೆ. ಅಲ್ಲದೇ ಭಾರತವೇ ಮುನ್ನುಗ್ಗಿ ಅತ್ಯುತ್ತಮ ದೇಶ ಎಂಬುದನ್ನುನಿರೂಪಿಸಬೇಕಿದೆ. ಈ ವಿಷಯವಾಗಿಯೂ ಸ್ವಯಂಸೇವಕರ ಪಾತ್ರ ಬಹಳ ಮುಖ್ಯ. ವೈಶ್ವಿಕವಾಗಿ ಎಲ್ಲಾ ದೇಶಗಳೂ ನಮ್ಮಿಂದಸಾಕಷ್ಟುಅಪೇಕ್ಷೆಪಡುತ್ತಿವೆ. ಆದ ಕಾರಣವೇ ನಾವು ನಮ್ಮ ಚಿಕ್ಕ ಬೇಧಗಳನ್ನುಮರೆತು ರಾಷ್ಟ್ರಹಿತಕ್ಕಾಗಿ ದುಡಿಯೋಣ” ಎಂಬ ಕರೆ ನೀಡಿದರು.
ಡಾ. ದೇವಿಪ್ರಸಾದ್ ಶೆಟ್ಟಿ ಅವರ ಭಾಷಣ:
ವಿದ್ಯಾರ್ಥಿಗಳು ಯಶಸ್ಸು ಕಾಣಬೇಕುಎಂಬ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ನನ್ನನ್ನುಆಹ್ವಾನಿಸುತ್ತಾರೆ. ಜೀವನದಲ್ಲಿಗುರಿ, ಶಿಸ್ತುಬಹಳಮುಖ್ಯ. ಸಂಘದ ಶಿಬಿರದಲ್ಲಿ ನಿಮಗೆ ಅದನ್ನು ಹೇಳಿ ಕೊಡಲಾಗಿದೆ. ಅದು ನಿಮಗೆ ಯಶಸ್ವಿ ಯಾಗಾಲು ಸಹಾಯಕಾರಿ. ವ್ಯಾಯಾಮ ನಮ್ಮ ಜೀವನದಲ್ಲಿ ಬಹಳಮುಖ್ಯ. ಶಾರೀರಿಕವಾಗಿ ನೀವು ಸಬಲರಲ್ಲದಿದ್ದರೆ ನೀವು ಏನನ್ನೂಸಾಧಿಸಲಾರಿರಿ. ಅದನ್ನೂಶಿಬಿರದಲ್ಲಿನಿಮಗೆಹೇಳಿಕೊಡಲಾಗಿದೆ. ನಾನು ನನ್ನ ಚಿಕ್ಕ ಪ್ರಾಯದ ವೈದ್ಯರ ಜೊತೆ ನಿಂತು ಶಸ್ತ್ರಚಿಕಿತ್ಸೆ ಮಾಡಬಲ್ಲೆ. ಎಷ್ಟೋ ಯುವ ವೈದ್ಯರು ಹೆಚ್ಚು ಕಾಲ ನಿಂತು ಶಸ್ತ್ರ ಚಿಕಿತ್ಸೆಮಾಡಲಾರರು. ಅದಕ್ಕೆ ಕಾರಣ ನಾನು ಮೈಗೂಡಿಸಿಕೊಂಡವ್ಯಾಯಾಮ. ನಿಮಗೆ ಇಲ್ಲಿ ಯೋಗವನ್ನೂ ಹೇಳಿಕೊಡಲಾಗುತ್ತದೆ. ನನ್ನದೇ ಉದಾಹರಣೆ ಹೇಳಬೇಕಾದರೆ ನಾನು ನನ್ನಕಾಲು, ಬೆನ್ನು ನೋವಿ ನಶಮನಕ್ಕಾಗಿ ಯೋಗ ದಮೊರೆಹೋಗಿದ್ದೇನೆ. ಒಂದು ಕಾಲದಲ್ಲಿ ಉದಾಸೀನಮಾಡಿದ್ದ ಯೋಗವೇ ನನ್ನ ಕಾಯಿಲೆಯನ್ನು ದೂರಮಾಡಿತು.
ಶಾರೀರಿಕವಾಗಿಯೋಗ, ವ್ಯಾಯಾಮಗಳು ನಿಮ್ಮನ್ನು ಯಶಸ್ಸಿನ ದಾರಿಮುಟ್ಟಿಸುತ್ತವೆಯಾದರೆ, ಇವೆಲ್ಲಕ್ಕೂ ಮಿಗಿಲಾಗಿ ನಮ್ರತೆ ಅನ್ನುವುದು ಬಹಳಮುಖ್ಯ. ನೀವು ಎಷ್ಟೇ ಯಶಸ್ವಿಯಾದರೂ ವಿನಮ್ರವಾಗಿರದಿದ್ದರೆ ನೀವು ಸಾಧಿಸಿರುವುದು ಕಡಿಮೆ. ನಿಮಗಿಂತಲೂ ದುರ್ಬಲರೂ ಇದ್ದರೆ ಅವರ ಸೇವೆಗಾಗಿ ಸದಾ ಸಿದ್ಧರಿದ್ದರೆ ಇಡೀದೇಶ, ವಿಶ್ವವೇ ಜೀವಿಸಲು ಒಂದುಸುಂದರತಾಣ. “ ಎಂಬ ಮಾತುಗಳನ್ನು ಆಡಿದರು.