
ಫೆಬ್ರವರಿ 24, 2024: ಸಂಸ್ಕಾರ ಭಾರತೀ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ಬೆಂಗಳೂರಿನ ಬಸವನಗುಡಿಯ ಅಮೃತ ಶಿಶು ನಿವಾಸ ಸಭಾಂಗಣದಲ್ಲಿ ಭರತಮುನಿ ಸ್ಮೃತಿ ದಿವಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾನುಮತಿ ನೃತ್ಯ ಕಲಾ ಮಂದಿರಂ ನಿರ್ದೇಶಕರಾದ, ಗುರು ಶೀಲಾ ಚಂದ್ರಶೇಖರ್, ಸಂಸ್ಕಾರ ಭಾರತೀ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಬಾಬು ಹಿರಣ್ಣಯ್ಯ, ಕಾರ್ಯಾಧ್ಯಕ್ಷರಾದ ವೇದಾ ಭಟ್ ಉಪಸ್ಥಿತರಿದ್ದರು.

ಭರತಮುನಿ ಸ್ಮೃತಿ ದಿವಸ, ನಾಟ್ಯ ಶಾಸ್ತ್ರದ ಮಹತ್ವ ಹಾಗೂ ಭರತನಾಟ್ಯದ ಹಲವಾರು ವೈಶಿಷ್ಟ್ಯಗಳ ಬಗ್ಗೆ ಗುರು ಶೀಲಾ ಚಂದ್ರಶೇಖರ್ ಅವರು ಉಪನ್ಯಾಸ ನೀಡಿದರು. ದೀಪ್ತಿ ರಾಧಾಕೃಷ್ಣ ಅವರ “ಮಹಿಜಾ ಮನಸ್ವಿನಿ” ಭರತನಾಟ್ಯ ಪ್ರಸ್ತುತಿ ಸಭಿಕರನ್ನು ತಲ್ಲೀನರಾಗುವಂತೆ ಮಾಡಿತು. ಪ್ರಾಂತ ನೃತ್ಯ ವಿಧಾ ಸಂಯೋಜಿಕಿ ಜಯಶ್ರೀ ರವಿ ಅವರು ಕಲಾವಿದೆಗೆ ಗೌರವಸಮರ್ಪಣೆ ನೆರವೇರಿಸಿದರು.
