
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಜನಪದ ಕಲಾವಿದೆ, ಸಾಮಾಜಿಕ ಕಳಕಳಿಯ ವಿವಿಧ ಕಾರ್ಯಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಲ್ಪಟ್ಟ ಶ್ರೀಮತಿ ಸುಕ್ರಿ ಬೊಮ್ಮು ಗೌಡ ವಿಧಿವಶರಾಗಿದ್ದಾರೆ. ವನವಾಸಿ ಕಲ್ಯಾಣ ಆಶ್ರಮದೊಂದಿಗೆ ನಿಕಟ ಬಾಂಧವ್ಯ ಹಾಗೂ ಅದರ ಚಟುವಟಿಕೆಗಳಿಗೆ ಸದಾ ಪ್ರೇರಕರು.
ಅವರಿಗೆ ವನವಾಸಿ ಕಲ್ಯಾಣ ಆಶ್ರಮದ ವತಿಯಿಂದ “ವನಸುಮ” ಪ್ರಶಸ್ತಿಯನ್ನು ಜುಲೈ 7, 2017 ರಂದು ಬೆಂಗಳೂರಿನಲ್ ಆರ್.ವಿ. ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗಿತ್ತು.
ಗಣ್ಯರಿಂದ ಸಂತಾಪ: ಸುಕ್ರಿ ಬೊಮ್ಮು ಗೌಡ ಅವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಸಂಘಚಾಲಕ ಡಾ.ಪಿ. ವಾಮನ್ ಶೆಣೈ, ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ.ನಾಗರಾಜ ಸಂತಾಪ ಸೂಚಿಸಿದ್ದಾರೆ.