ಮಂಗಳೂರು: ಹಿರಿಯ ಪತ್ರಕರ್ತ ಶ್ರೀ ಗುರುವಪ್ಪ ಟಿ.ಎನ್. ಬಾಳೇಪುಣಿ (62) ಇಂದು ಭಾನುವಾರ ಜನವರಿ 26, 2025 ಮಧ್ಯಾಹ್ನ ವಿಧಿವಶರಾಗಿದ್ದಾರೆ. ಹೊಸದಿಗಂತ ಪತ್ರಿಕೆಯಲ್ಲಿ ದೀರ್ಘಕಾಲ ಪತ್ರಕರ್ತರಾಗಿದ್ದ ಬಾಳೇಪುಣಿಯವರು ಹರೇಕಳ ಹಾಜಬ್ಬರ ಕುರಿತು ವರದಿ ಮಾಡಿ ಅವರ ಸಾಧನೆಯನ್ನು ರಾಜ್ಯದ ಮುನ್ನೆಲೆಗೆ ತಂದವರು. ವಿಶ್ವ ಸಂವಾದ ಕೇಂದ್ರದ 2022ನೇ ಸಾಲಿನ ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೇಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ, ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.
ಗಣ್ಯರಿಂದ ಸಂತಾಪ: ಗುರುವಪ್ಪ ಬಾಳೇಪುಣಿ ಅವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಸಂಘಚಾಲಕ ಡಾ.ಪಿ. ವಾಮನ್ ಶೆಣೈ, ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ.ನಾಗರಾಜ ಸಂತಾಪ ಸೂಚಿಸಿದ್ದಾರೆ.