
ಶಿವಮೊಗ್ಗ: ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಉಪಾಧ್ಯಕ್ಷರಾಗಿದ್ದ ಜ್ಯೇಷ್ಠ ಕಾರ್ಯಕರ್ತ ಶ್ರೀ ಡಿ. ಕೆ. ಸದಾಶಿವ್ (82) ವಿಧಿವಶರಾಗಿದ್ದಾರೆ.
ಗಣ್ಯರಿಂದ ಶ್ರದ್ಧಾಂಜಲಿ ಸಮರ್ಪಣೆ:
ಅಗಲಿದ ಹಿರಿಯರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಸಂತಾಪ ಸೂಚಿಸಿದ್ದಾರೆ.
ಶ್ರೀ ಸದಾಶಿವರ ನಿಧನ ದುಃಖದಾಯಿ. ಒಬ್ಬ ನಿಷ್ಠಾವಂತ ಕಾರ್ಯಕರ್ತರ ಜೀವನಯಾತ್ರೆಯ ಅಂತ್ಯವಾಯಿತು. ಓದು, ವಿಚಾರ ವಿಮರ್ಶೆ, ಹಾಸ್ಯ, ನಗೆ, ಪರಿಶ್ರಮ, ಹಿರಿಯರಲ್ಲಿ ಶ್ರದ್ಧೆ ಅವರ ವ್ಯಕ್ತಿತ್ವದ ಕುರುಹುಗಳು. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ.
ॐ ಶಾಂತಿಃ॥-ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ಆರೆಸ್ಸೆಸ್