Summary: Seva Bharati trust of Thirthahalli Taluk in Karnataka distributed school-kit worth 7 lakhs to 3500 rural students of 115 Government Kannada Medium Schools in Thirthahalli, Koppa and Sringeri Taluk. Noted NGO Youth For Seva co-sponsored this initiative.

ಸೇವಾಭಾರತಿ ಟ್ರಸ್ಟ್ ವತಿಯಿಂದ ತಾಲೂಕಿನ ಶಾಲಾ ಮಕ್ಕಳಿಗೆ 7 ಲಕ್ಷ ರೂ ಮೌಲ್ಯದ ಶಾಲಾ ವಸ್ತುಗಳ ವಿತರಣೆ
ತೀರ್ಥಹಳ್ಳಿ ಜೂನ್ 27: ತೀರ್ಥಹಳ್ಳಿ ತಾಲೂಕಿನ ಜನಪರ ಕಾಳಜಿಯ ಸೇವಾಭಾರತಿ ಟ್ರಸ್ಟ್ ಕಳೆದ 25 ವರುಷಗಳಿಂದ ಸಮಾಜೋಪಯೋಗಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಟ್ರಸ್ಟ್‌ನ ಸಹಕಾರದೊಂದಿಗೆ ಸೇವಾಭಾರತಿ ವಿದ್ಯಾ ಕೇಂದ್ರವು ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದ್ದು ತಾಲೂಕಿನ ಅಗ್ರಗಣ್ಯ ಶಾಲೆಯಾಗಿ ಹೆಸರು ಪಡೆದಿದೆ. ಸೇವಾಭಾರತಿ ಟ್ರಸ್ಟ್ ಶೃಂಗೇರಿಯ ಶ್ರೀಶ್ರೀ ಜಗದ್ಗುರು ಶಂಕರಾಚಾರ್ಯ ಶಾರದಾ ಪೀಠಂನ ಆಶೀರ್ವಾದ ಹಾಗೂ ಆರ್ಥಿಕ ಸಹಕಾರದೊಂದಿಗೆ ತೀರ್ಥಹಳ್ಳಿ, ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಮಾರ್ಗದರ್ಶನದಲ್ಲಿ ಗ್ರಾಮ ವಿಕಾಸದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

Distribution at HPS Alageri
ಕಳೆದ ಏಳು ವರುಷಗಳಿಂದ ಸೇವಾಭಾರತಿ ಟ್ರಸ್ಟ್ ಬೆಂಗಳೂರಿನ ಯೂತ್ ಫಾರ್ ಸೇವಾದ ಕಾರ್ಯಕರ್ತರ ಸಹಕಾರದೊಂದಿಗೆ ತಾಲೂಕಿನ ಮೂಲೆ ಮೂಲೆಗಳಲ್ಲಿರುವ ವಿವಿಧ ಗ್ರಾಮಗಳ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು, ಮಳೆ ಅಂಗಿ(ರೈನ್ ಕೋಟ್) ಇತ್ಯಾದಿಗಳನ್ನು ನೀಡುತ್ತಾ ಬಂದಿದೆ.

ಈ ವರುಷ ಸೇವಾ ಭಾರತಿ ಟ್ರಸ್ಟ್ ತೀರ್ಥಹಳ್ಳಿ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ 115 ಸರಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿನ ಸುಮಾರು 3500ವಿದ್ಯಾರ್ಥಿಗಳಿಗೆ ಏಳು ಲಕ್ಷ ರೂಪಾಯಿ ಮೌಲ್ಯದ ಮಳೆ ಅಂಗಿ, ಬ್ಯಾಗ್, ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಿದೆ.

 Distribution at HPS Halli Bidaragodu - Dinesh Bharathipura, Sevabharathi Managing Trustee

Distribution at HPS Halli Bidaragodu – Dinesh Bharathipura, Sevabharathi Managing Trustee

ವಿವಿಧ ಸರಕಾರೀ ಶಾಲೆಗಳಲ್ಲಿ ಶಾಲಾ ವಸ್ತುಗಳ ವಿತರಣಾ ಕಾರ್ಯಕ್ರಮಗಳು ನಡೆದಿದ್ದು ಈ ಕಾರ್ಯಕ್ರಮಗಳಲ್ಲಿ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ತರಾದ ಶ್ರೀ ದಿನೇಶ್ ಭಾರತೀಪುರ, ಕಾರ್ಯದರ್ಶಿ ಶ್ರೀ ಮಂಜುನಾಥ ಶೆಟ್ಟಿ, ಸಂಸ್ಥಾಪಕ ನಿರ್ವಾಹಕ ವಿಶ್ವಸ್ತರಾದ ಶ್ರೀ ಚಕ್ಕೋಡಬೈಲು ಬೆನಕ ಭಟ್, ವಿಶ್ವಸ್ತರಾದ ಶ್ರೀ ಕೆ. ಎಂ. ಜಯಶೀಲ, ಶ್ರೀ ಬೆಜ್ಜವಳ್ಳಿ ಅಶೋಕಮೂರ್ತಿ, ಸಂಯೋಜಕರಾದ ಕ್ಯಾದಿಗೆರೆ ಸೀತಾರಾಮ್, ಶ್ರೀ ಗಿರೀಶ ಚಕ್ಕೋಡಬೈಲು ಭಾಗವಹಿಸಿದ್ದರು. ಬೆಂಗಳೂರಿನಿಂದ ಯೂತ್ ಫಾರ್ ಸೇವಾದ ಕಾರ್ಯಕರ್ತರಾದ ಶ್ರೀಮತಿ ವೈಜಯಂತಿ, ಶ್ರೀಮತಿ ಪರಂಜ್ಯೋತಿ, ಶ್ರೀ ಸಾತ್ವಿಕ್ ಹಾಗೂ ಶ್ರೀಲಂಕಾದ ಕುಮಾರಿ ವರುಣಿಕಾ ಭಾಗವಹಿಸಿದ್ದರು. ಅಲ್ಲದೇ ವಿವಿಧ ಗ್ರಾಮಗಳಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಸಾಲೆಕೊಪ್ಪ ರಾಮಚಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಂಜುನಾಥ ಶೆಟ್ಟಿ, ಶ್ರೀ ಜಯಶೀಲ ಮಳಲೆಕೊಪ್ಪ, ಸ್ಥಳೀಯ ಕಾರ್ಯಕರ್ತರಾದ ಶ್ರೀ ಪ್ರಮೋದ ಭಾರತೀಪುರ, ಶ್ರೀ ಶ್ರೀವತ್ಸ ಚಕ್ಕೋಡಬೈಲು, ಶ್ರೀ ನಿತ್ಯಾನಂದ ಕೆಂದಾಳಬೈಲು, ಶ್ರೀ ಕೃಷ್ಣಮೂರ್ತಿ ಕಾಸರವಳ್ಳಿ, ಮತ್ತಿತರು ಭಾಗವಹಿಸಿದ್ದರು. ಜೊತೆಗೆ ಆಯಾ ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರುಗಳು, ಪೋಷಕರು ಮತ್ತು ಶಿಕ್ಷಕ ವೃಂದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೇವಾಭಾರತಿ ಟ್ರಸ್ಟ್ ಹಾಗೂ ಯೂತ್ ಫಾರ್ ಸೇವಾದ ಈ ಚಟುವಟಿಕಗಳನ್ನು ಅಭಿನಂದಿಸಿದರು.

Distribution at HPS Kendalbyl
Distribution at HPS Kendalbyl
Distribution at HPS Nalur
Distribution at HPS Nalur
Distribution function - Sri Chakkodbyl Benak Bhat and others
Distribution function – Sri Chakkodbyl Benak Bhat and others
Sevabharathi Secretary Manjunath Shetty at Distribution function
Sevabharathi Secretary Manjunath Shetty at Distribution function

Leave a Reply

Your email address will not be published.

This site uses Akismet to reduce spam. Learn how your comment data is processed.