ಅಗಲಿದ ಇಬ್ಬರು ಹಿರಿಯರಾದ ಆರ್ ಎಸ್ ಎಸ್ ಹಿರಿಯ ಕಾರ್ಯಕರ್ತ ಶ್ರೀ ಗೋಪಾಲ ವ್ಯಾಸ್ ಹಾಗೂ ಶಿಕ್ಷಣತಜ್ಞ ಶ್ರೀ ದೀನಾನಾಥ ಬಾತ್ರಾ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಇಂದು ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಆರ್ ಎಸ್ ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಸಂತಾಪವನ್ನು ಸೂಚಿಸಿದ್ದಾರೆ.
ಶ್ರದ್ಧಾಂಜಲಿ ಸಂದೇಶ
ಭಾವಪೂರ್ಣ ಶ್ರದ್ಧಾಂಜಲಿ
ಶ್ರೀ ಗೋಪಾಲ ವ್ಯಾಸ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರೂ, ಕ್ಷೇತ್ರೀಯ ಪ್ರಚಾರಕರೂ, ಕ್ಷೇತ್ರೀಯ ಕಾರ್ಯವಾಹರಾಗಿದ್ದ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಶ್ರೀ ಗೋಪಾಲ ವ್ಯಾಸ್ ಅವರು ನವಂಬರ್ 7, 2024 ಗುರುವಾರ ವಿಧಿವಶರಾಗಿದ್ದಾರೆ. ಸರಳ ಜೀವನ, ಕಾರ್ಯತತ್ಪರರೂ, ಸ್ನೇಹಶೀಲರು, ಸಂಘ ಶರಣರು ಹಾಗೂ ಸಮರ್ಪಿತ ವ್ಯಕ್ತಿತ್ವದ ಅವರ ಜೀವನವು ಸದಾ ಸ್ಮರಣೀಯ.
ಈ ದು:ಖದ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಶ್ರೀ ಗೋಪಾಲ್ ಅವರ ಕುಟುಂಬದ ಸದಸ್ಯರಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಶ್ರೀ ಗೋಪಾಲ್ ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಓಂ ಶಾಂತಿ, ಶಾಂತಿ, ಶಾಂತಿಃ
ಡಾ. ಮೋಹನ್ ಭಾಗವತ್
ಸರಸಂಘಚಾಲಕ
ಶ್ರೀ ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹ
08-10-2024
ಭಾವಪೂರ್ಣ ಶ್ರದ್ಧಾಂಜಲಿ
ಶ್ರೀ ದೀನಾನಾಥ ಬಾತ್ರಾ
ತಮ್ಮ ಸರ್ವಸ್ವವನ್ನೂ ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಿಸಿದ್ದ, ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಇದರ ಸಂಸ್ಥಾಪಕ ಅಧ್ಯಕ್ಷರು ಮತ್ತು ಶಿಕ್ಷಾ ಬಚಾವೋ ಆಂದೋಲನದ ರಾಷ್ಟ್ರೀಯ ಸಂಯೋಜಕರಾದ ಶ್ರೀ ದೀನಾನಾಥ್ ಬಾತ್ರಾ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಶ್ರೀಯುತರು ಒಬ್ಬ ಆದರ್ಶ ಶಿಕ್ಷಕರು ಮತ್ತು ಉತ್ತಮ ಶಿಕ್ಷಣತಜ್ಞರಾಗಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅತ್ಯಮೂಲ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಪಠ್ಯಕ್ರಮಗಳಲ್ಲಿ ಇತಿಹಾಸದ ವಿಕೃತಿಗಳನ್ನು ದೂರಗೊಳಿಸುವ ಕಾರ್ಯದಲ್ಲಿ ಅವರು ಸದಾ ಪ್ರಯತ್ನಶೀಲರಾಗಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರಿಗೆ ವಿನಮ್ರ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತೇವೆ.
ಓಂ ಶಾಂತಿ, ಶಾಂತಿ, ಶಾಂತಿ:
ಡಾ. ಮೋಹನ್ ಭಾಗವತ್
ಸರಸಂಘಚಾಲಕ
ಶ್ರೀ ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹ
08-10-2024