ಕು. ಸೌಮ್ಯಳಿಗೆ ನ್ಯಾಶನಲ್ ಬೆಸ್ಟ್ ಎನ್.ಸಿ.ಸಿ ಕೆಡೆಟ್ ಪ್ರಶಸ್ತಿ
ನವದೆಹಲಿ ಜನವರಿ 28, 2014: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ, ಕು.ಸೌಮ್ಯ ಹೆಗಡೆ ಇವರು ಈ ಸಾಲಿನ ಅತ್ಯುತ್ತಮ ಎನ್.ಸಿ.ಸಿ ಕೆಡೆಟ್ ಪ್ರಶಸ್ತಿಯನ್ನು ದಿನಾಂಕ 28.01.2014ರಂದು ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮಾನ್ಯ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ರವರಿಂದ ಪಡೆದಿರುತ್ತಾರೆ.
ಕು.ಸೌಮ್ಯ ಹೆಗಡೆಯವರು, ಹೆಗ್ಗರಣೆಯ ಶ್ರೀ ರಾಮಚಂದ್ರ ಹೆಗಡೆ ಮತ್ತು ಶ್ರೀಮತಿ ಶಾರದ ಹೆಗಡೆಯವರ ಮೊಮ್ಮಗಳಾಗಿದ್ದು, ಶ್ರೀ ಗಣಪತಿ ಹೆಗಡೆ ಮತ್ತು ಶ್ರೀಮತಿ ಭಾಗೀರಥಿ ಹೆಗಡೆಯವರ ಮಗಳಾಗಿರುತ್ತಳೆ. ಕು.ಸೌಮ್ಯ ಹೆಗಡೆಯು ಬೆಂಗಳೂರಿನ ವಿಜಯ ಕಾಲೆಜಿನಲ್ಲಿ ಪ್ರಥಮ ಪಿ.ಯು.ಸಿ ವ್ಯಾಸಂಗವನ್ನು ಮಾಡುತ್ತಿದ್ದಾಳೆ.
ಸೌಮ್ಯಾ ಹೆಗಡೆಯವರು ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ವ್ಯವಸ್ಥಾ ಪ್ರಮುಖ್ ಗಣಪತಿ ಹೆಗಡೆ ಇವರ ಸುಪುತ್ರಿ. ಈಕೆಯ ಸಾಧನೆಗೆ ಆರೆಸ್ಸೆಸ್ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖ್ ಭಾಗಯ್ಯ, ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ್ ಸಂಚಾಲಿಕ ವಂದನೀಯ ಶಾಂತ ಕುಮಾರಿ, ಕರ್ನಾಟಕ ಪ್ರಾಂತ ಕಾರ್ಯವಾಹ ನಾ ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.