ಸಮಾಲ್ಖಾ, ಹರಿಯಾಣ ಮಾರ್ಚ್ 14, 2026: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಸಮಾಲ್ಖಾದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆ – 2026ರಲ್ಲಿ ಸಂತ ಶಿರೋಮಣಿ ಸದ್ಗುರು ಶ್ರೀ ರವಿದಾಸ್ ಅವರ 650ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಸರಕಾರ್ಯವಾಹರ ಹೇಳಿಕೆ:

ಸಂತ ಶಿರೋಮಣಿ ಸದ್ಗುರು ರವಿದಾಸ್ ಅವರ 650ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರಿಗೆ ಶ್ರದ್ಧೆಯ ಸುಮನಗಳನ್ನು ಅರ್ಪಿಸುತ್ತದೆ. ನಮ್ಮ ಶ್ರೇಷ್ಠ ಸಂತ ಪರಂಪರೆಯು ಭಾರತಕ್ಕೆ ದೇವರು ನೀಡಿದ ವಿಶೇಷ ಕೊಡುಗೆಯಾಗಿದೆ. ನಮ್ಮ ಸುದೀರ್ಘ ಇತಿಹಾಸದ ಪ್ರವಾಹದಲ್ಲಿ ಈ ಮಹಾನ್ ಸಂತ ಪರಂಪರೆಯು ಯಾವ ಸಮಾಜದಲ್ಲಿ ದೇವರ ಉಪಾಸನೆ ಮತ್ತು ಭಕ್ತಿಭಾವದ ಜಾಗರಣವನ್ನು ಮಾಡಿತೋ, ಅಲ್ಲಿಯೇ ಸಾಮಾಜಿಕ ಕುರೀತಿಗಳು ಮತ್ತು ಬೇಧಭಾವವನ್ನು ನಿರ್ಮೂಲನೆ ಮಾಡುವ ಮೂಲಕ ಸಾಮರಸ್ಯದ ಸಮಾಜವನ್ನು ಬಲಪಡಿಸುವ ಪ್ರಯತ್ನಗಳನ್ನು ಮಾಡಿತು. ಇದರ ಜೊತೆಗೆ ವಿದೇಶಿ ಆಡಳಿತಗಾರರ ದೌರ್ಜನ್ಯಗಳ ವಿರುದ್ಧ ಸಂಘರ್ಷಕ್ಕಾಗಿ ಸಮಾಜವನ್ನು ಜಾಗೃತಗೊಳಿಸಿತು ಮತ್ತು ಸಿದ್ಧಪಡಿಸಿತು.

ಈ ಮಹಾನ್ ಸಂತ ಪರಂಪರೆಯಲ್ಲಿ ಸಂತ ಶ್ರೀ ರವಿದಾಸ ಅವರಿಗೆ ವಿಶಿಷ್ಟ ಸ್ಥಾನವಿದೆ. ಅವರ ಕ್ರಿಯಾಶೀಲ ಜೀವನ ಮತ್ತು ಕಾರ್ಯ ನಮಗೆಲ್ಲರಿಗೂ ಪ್ರೇರಣೆಯ ಸ್ರೋತವಾಗಿದೆ. ಗೃಹಸ್ಥರಾಗಿದ್ದರೂ, ಸಾಂಸಾರಿಕ ವಿಷಯಗಳಲ್ಲಿ ಅಲಿಪ್ತರಾಗಿದ್ದು ಸಾಧು-ಸಂತರ ಮೇಲಿನ ಶ್ರದ್ಧೆ ಮತ್ತು ದೀನ-ಹೀನರ ಸೇವೆ ಅವರ ಸಹಜ ಸ್ವಭಾವವಾಗಿತ್ತು, ಆಧ್ಯಾತ್ಮಿಕ ದೃಷ್ಟಿಯಿಂದ ಪರಿಪೂರ್ಣವಾಗಿತ್ತು. ತಮ್ಮ ಜೀವನದ ಮೂಲಕ ಅವರು ಶ್ರಮದ ಘನತೆ ಮತ್ತು ಸಮಾಜದಲ್ಲಿ ಶುದ್ಧ, ಸಾತ್ವಿಕ ಮತ್ತು ಪಾರದರ್ಶಕ ಆಚರಣೆಯ ಮಹತ್ವವನ್ನು ಪುನಃಸ್ಥಾಪಿಸಿದರು.

ಸಂತ ಶ್ರೀ ರವಿದಾಸ್ ಅವರು ಸಮಾಜದಲ್ಲಿ ಒಂದು ಹೊಸ ಚೇತನವನ್ನು ಪ್ರವಹಿಸಿದ ಭಕ್ತಿಪ್ರಜ್ಞೆಯ ಮಹಾನ್ ಸಂತರಾಗಿದ್ದರು. ಅವರು ಜನ್ಮದ ಆಧಾರದ ಮೇಲೆ ರಚಿತಗೊಂಡ ವ್ಯತ್ಯಾಸವನ್ನು ತಿರಸ್ಕರಿಸಿದರು ಮತ್ತು ನಡವಳಿಕೆಯನ್ನು ಶ್ರೇಷ್ಠತೆಯ ಮಾನದಂಡವೆಂದು ಪರಿಗಣಿಸಿದರು. ರೂಢಿಗಳಿಂದ ಮತ್ತು ಕುರೀತಿಗಳಿಂದ ಸಮಾಜವನ್ನು ಮುಕ್ತಗೊಳಿಸುವುದು, ಕಾಲಬಾಹ್ಯ ಪರಂಪರೆಯ ತ್ಯಾಗ ಹಾಗೂ ಕಾಲ ಸುಸಂಗತ ಸಾಮಾಜಿಕ ಪರಿವರ್ತನೆಯ ಅಂಗೀಕಾರ ಮಾಡುವಲ್ಲಿ ಸಮಾಜದ ಮನಸನ್ನು ರೂಪಿಸುವಲ್ಲಿ ಅವರು ಐತಿಹಾಸಿಕ ಪಾತ್ರವನ್ನು ವಹಿಸಿದ್ದಾರೆ. ಅವರ ಚಿಂತನೆಗಳ ಮಹತ್ವವನ್ನು ಅರ್ಥೈಸಿಗೊಂಡು ಅವರ 41 ವಾಣಿಗಳನ್ನು ಶ್ರೀ ಗುರು ಗ್ರಂಥ ಸಾಹಿಬ್‌ನಲ್ಲಿ ‘ಶಾಬಾದ್’ ರೂಪದಲ್ಲಿ ಸೇರಿಸಲಾಗಿದೆ.

ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಸಂತ ಶ್ರೀ ರವಿದಾಸರು, ಅವರ ಶಿವಭಕ್ತಿ, ಸೇವಾ ಮನೋಭಾವ ಹಾಗೂ ಸಮಾಜದ ಮೇಲಿನ ನಿಶ್ಚಲಪ್ರೇಮದ ಕಾರಣ ಕಾಶಿಯ ವಿದ್ವತ್ ಜನರ ಸಹಿತ ಸಮಾಜದ ಎಲ್ಲಾ ವರ್ಗಗಳ ಜನರು ಅವರ ಮಹಾನತೆಯನ್ನು ಸ್ವೀಕರಿಸಿದರು. ಕಾಶಿ ನರೇಶ, ಝಾಲಿ ರಾಣಿ ಹಾಗೂ ಮೀರಾಬಾಯಿಯಂತಹ ರಾಜಮನೆತನದ ಸದಸ್ಯರು ಕೂಡ ಅವರನ್ನು ತಮ್ಮ ಗುರು ಎಂದು ಪರಿಗಣಿಸಿದರು. ಗುರು ಮತ್ತು ಶಿಷ್ಯರ ರೂಪದಲ್ಲಿ ಸಂತ ಶ್ರೀ ರವಿದಾಸರು ಮತ್ತು ಮೀರಾಬಾಯಿಯವರ ಬಾಂಧವ್ಯವು ನಿರ್ಗುಣ ಮತ್ತು ಸಗುಣ ಭಕ್ತಿ ಧಾರೆಗಳ ಮಿಲನವಾಗಿದೆ, ಮತ್ತು ಜಾತಿಭೇದವನ್ನು ನಂಬುವವರಿಗೆ ಇದು ಅನುಕರಣೀಯ ಕಲಿಕೆಯೂ ಆಗಿದೆ.

ಮುಸ್ಲಿಂ ಆಕ್ರಮಣಕಾರರ ಭಯೋತ್ಪಾದನೆಯ ಆ ಕಠಿಣ ಸಮಯದಲ್ಲಿ, ಭಕ್ತಿಯ ನಿರ್ಮಲ ಧಾರೆಯ ಪ್ರವಹಿಸಿಸುತ್ತಾ ಸಂತ ಶ್ರೀ ರವಿದಾಸ ಅವರು ಧರ್ಮದ ಶ್ರೇಷ್ಠತೆಯನ್ನು ಉದ್ಘೋಷಿಸಿದರು ಮತ್ತು ಜನರಿಂದ ಧರ್ಮಪಾಲನೆ ಮಾಡುವುದಕ್ಕೆ ಆಗ್ರಹಿಸಿದರು. ಸದ್ಗುರು ಸಂತ ಶ್ರೀ ರವಿದಾಸ ಅವರನ್ನು ಇಸ್ಲಾಂಗೆ ಮತಾಂತರಿಸಿ ಮುಸ್ಲಿಮರಾಗಿಸುವುದಕ್ಕೆ ಹಲವಾರು ಪ್ರಯತ್ನಗಳು ನಡೆದವು. ಆದರೆ ಅವರ ಭಕ್ತಿ ಮತ್ತು ಆಧ್ಯಾತ್ಮಿಕ ಸಾಧನೆಯಿಂದ ಪ್ರಭಾವಿತರಾಗಿ ಅವರನ್ನು ಮತಾಂತರಗೊಳಿಸಬೇಕಾದವರು ಅವರ ಅನುಯಾಯಿಗಳಾದರು.

ವರ್ತಮಾನದ ಸಮಯದಲ್ಲಿ ವಿವಿಧ ವಿಭಜನಕಾರಿ ಶಕ್ತಿಗಳು ಜನಮಾನಸವನ್ನು ವರ್ಗ ಮತ್ತು ಜಾತಿಯ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವಾಗ, ಪೂಜ್ಯ ಸಂತ ಶ್ರೀ ರವಿದಾಸ್ ಅವರ ಜೀವನ ಸಂದೇಶದ ಸಾರವನ್ನು ಅರ್ಥಮಾಡಿಕೊಳ್ಳುವ ಮೂಲಕ, ನಾವೆಲ್ಲರೂ ದೇಶ ಮತ್ತು ಸಮಾಜದ ಏಕತೆಗಾಗಿ ಕಾರ್ಯಮಾಡುವ ಸಂಕಲ್ಪವನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.