ಇಂದು ಪುಣ್ಯಸ್ಮರಣೆ
ಸುರೇಂದ್ರನಾಥ್ ಬ್ಯಾನರ್ಜಿ ಅವರು ಆಧುನಿಕ ಭಾರತದ ಪ್ರವರ್ತಕರಾಗಿದ್ದರು. ಇವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಫು ಮೂಡಿಸಿದವರು. ಎಲ್ಲ ಜನಾಂಗದವರನ್ನು ಒಗ್ಗೂಡಿಸುವ ಸಲುವಾಗಿ ಅವರು ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್ ಎಂಬ ರಾಷ್ಟ್ರೀಯತಾವಾದಿ ಸಂಘಟನೆಯನ್ನು ಸ್ಥಾಪಿಸಿದರು. ಅವರು ದೇಶದ ಸ್ವಾತಂತ್ರ್ಯದಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸಿದರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಸುರೇಂದ್ರನಾಥ್ ಬ್ಯಾನರ್ಜಿ ಅವರು ನವೆಂಬರ್ 10, 1848 ರಂದು ಕೊಲ್ಕತ್ತಾ ಲೋನೆಸಿಂಗ್ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ದುರ್ಗಾ ಚರಣ್ ಬ್ಯಾನರ್ಜಿ ವೈದ್ಯರಾಗಿದ್ದರು. ಬ್ಯಾನರ್ಜಿ ಅವರು ಆರಂಭಿಕ ಶಿಕ್ಷಣವನ್ನು ಕೊಲ್ಕತ್ತಾದಲ್ಲಿ ಮುಗಿಸಿದರು. ನಂತರ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಅವರು 1868 ರಲ್ಲಿ ರೋಮೇಶ್ ಚಂದರ್ ದತ್ ಮತ್ತು ಬಿಹಾರಿ ಲಾಲ್ ಗುಪ್ತಾ ಅವರೊಂದಿಗೆ ಭಾರತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯಲು ಇಂಗ್ಲೆಂಡ್‌ಗೆ ತೆರಳಿದ್ದರು. ಆದರೆ ಅವರಿಗೆ ವಯಸ್ಸಿನ ಆರೋಪದಡಿ ಪರೀಕ್ಷೆಗೆ ತಡೆಯಲಾಗಿತ್ತು. ನ್ಯಾಯಾಲಯದಲ್ಲಿ ಕೆಲ ವಾದ-ವಿವಾದಗಳ ನಂತರ ಬ್ಯಾನರ್ಜಿ ಅವರು ಪರೀಕ್ಷೆ ಬರೆದು ಉತ್ತೀರ್ಣರಾದರು.
ಸುರೇಂದ್ರನಾಥ್ ಅವರು ಸಿಲ್ಹೆಟ್‌ನಲ್ಲಿ ಸಹಾಯಕ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡರು. ನಂತರ ಅವರು ಇಂಗ್ಲೆಂಡ್‌ಗೆ ತೆರಳಿ ಎಡ್ಮಂಡ್ ಬರ್ಕ್ ಮತ್ತು ಇತರ ಉದಾರವಾದಿ ತತ್ವಜ್ಞಾನಿಗಳ ಕೃತಿಗಳನ್ನು ಅಧ್ಯಯನ ಮಾಡಿದರು. 1875ರಲ್ಲಿ ಅವರು ಭಾರತಕ್ಕೆ ಹಿಂದಿರುಗಿದ ನಂತರ ಬ್ಯಾನರ್ಜಿ ಅವರು ಮೆಟ್ರೋಪಾಲಿಟನ್ ಇನ್ಸ್ಟಿಟ್ಯೂಷನ್ನಲ್ಲಿ ಸೇವೆ ಸಲ್ಲಿಸಿದರು. 1882ರಲ್ಲಿ ಸುರೇಂದ್ರನಾಥ್ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅವರು ರಾಷ್ಟ್ರೀಯತಾವಾದಿ ಮತ್ತು ಉದಾರವಾದಿ ರಾಜಕೀಯ ವಿಷಯಗಳು ಮತ್ತು ಭಾರತೀಯ ಇತಿಹಾಸದ ಕುರಿತು ಸಾರ್ವಜನಿಕ ಭಾಷಣಗಳನ್ನು ನೀಡಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಸುರೇಂದ್ರನಾಥ್ ಬ್ಯಾನರ್ಜಿ ಅವರು ರಾಜಕೀಯಕ್ಕೆ ಪ್ರವೇಶಿಸಿದರು.
ಸುರೇಂದ್ರನಾಥ ಬ್ಯಾನರ್ಜಿ ಅವರು ಅವರು 26 ಜುಲೈ 1876 ರಂದು ಆನಂದ ಮೋಹನ್ ಬೋಸ್ ಅವರೊಂದಿಗೆ ಭಾರತೀಯ ರಾಷ್ಟ್ರೀಯ ಸಂಘವನ್ನು ಸ್ಥಾಪಿಸಿದರು. 1879ರಲ್ಲಿ ಬೆಂಗಾಲಿ ಪತ್ರಿಕೆಯನ್ನು ಸಂಪಾದಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯು ಭಾರತದಾದ್ಯಂತ ವಿಸ್ತರಿಸಿತು. 1885ರಲ್ಲಿ ಬಾಂಬೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ನಂತರ ಬ್ಯಾನರ್ಜಿ ಅವರು 1886ರಲ್ಲಿ ತಮ್ಮ ಸಂಸ್ಥೆಯನ್ನು ಅದರೊಂದಿಗೆ ವಿಲೀನಗೊಳಿಸಿದರು. ನಂತರ ಅವರು 1895ರಲ್ಲಿ ಪೂನಾದಲ್ಲಿ ಮತ್ತು 1902 ರಲ್ಲಿ ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.
1905 ರಲ್ಲಿ ಬಂಗಾಳ ಪ್ರಾಂತ್ಯ ವಿಭಜನೆ ವಿರುದ್ಧ ಸುರೇಂದ್ರನಾಥ್ ಅವರು ಪ್ರತಿಭಟಿಸಿದರು. 1906 ರಲ್ಲಿ ಬಾಲಗಂಗಾಧರ ತಿಲಕ್ ನೇತೃತ್ವದ ಕ್ರಾಂತಿ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿದ್ದರು. ಅವರು ಕಾಂಗ್ರೆಸ್ ತೊರೆದು ಇಂಡಿಯನ್ ಲಿಬರೇಶನ್ ಫೆಡರೇಶನ್ ಸ್ಥಾಪಿಸಿದರು.
ಗೌರವ
ಬ್ಯಾರಕ್‌ಪೋರ್ ರಾಷ್ಟ್ರಗುರು ಸುರೇಂದ್ರನಾಥ ಕಾಲೇಜು, ರಾಯಗಂಜ್ ಸುರೇಂದ್ರನಾಥ ಮಹಾವಿದ್ಯಾಲಯ, ಸುರೇಂದ್ರನಾಥ್ ಕಾಲೇಜು, ಸುರೇಂದ್ರನಾಥ್ ಮಹಿಳಾ ಕಾಲೇಜು, ಸುರೇಂದ್ರನಾಥ್ ಸಂಜೆ ಕಾಲೇಜು, ಸುರೇಂದ್ರನಾಥ್ ಕಾನೂನು ಕಾಲೇಜು ಮತ್ತು ರಾಂಚಿಯ ಸುರೇಂದ್ರನಾಥ ಶತಮಾನೋತ್ಸವ ಶಾಲೆ ಮತ್ತು ಸುರೇಂದ್ರನಾಥ್ ಬ್ಯಾನರ್ಜಿ ರಸ್ತೆಗೆ ಇವರ ಹೆಸರು ಇಡುವ ಮೂಲಕ ಅವರಿಗೆ ಗೌರವ ಸೂಚಿಸಲಾಗಿದೆ.
ಸುರೇಂದ್ರನಾಥ್ ಅವರು 6 ಆಗಸ್ಟ್ 1925ರಂದು ತಮ್ಮ 76ನೇ ವಯಸ್ಸಿನಲ್ಲಿ ಬ್ಯಾರಕ್‌ಪೋರ್‌ನಲ್ಲಿ ನಿಧನರಾದರು.