ಬೆಂಗಳೂರು ಫೆಬ್ರವರಿ 08, 2015: ಹಿಂದೂಧರ್ಮಕ್ಕೆ, ಹಿಂದೂ ರಾಷ್ಟ್ರಕ್ಕೆ ಹಾಗೂ ಹಿಂದೂ ಸಮಾಜಕ್ಕೆ ಜಯವಾಗಲಿ. ವೇದಿಕೆಯ ಮೇಲೆ ಉಪಸ್ಥಿತರಿರುವ ಪರಮಪೂಜ್ಯ ಪೇಜಾವರಶ್ರೀಗಳಾದ ವಿಶ್ವೇಶತೀರ್ಥರಿಗೆ, ಶ್ರೀವೀರೇಂದ್ರ ಹೆಗ್ಗಡೆಯವರಿಗೆ, ಶ್ರೀಶ್ರೀ ರವಿಶಂಕರರಿಗೆ, ಆದಿಚುಂಚನಗಿರಿಯ ನಿರ್ಮಲಾನಂದನಾಥರಿಗೆ, ಪೂಜ್ಯ ಶಿವರುದ್ರಸ್ವಾಮಿಗಳಿಗೆ, ಮಾದಾರ ಚೆನ್ನಯ್ಯಸ್ವಾಮಿಗಳಿಗೆ ಹಾಗೂ ಇಲ್ಲಿ ನೆರೆದಿರುವ ಸಮಸ್ತ ಜನಸ್ತೋಮಕ್ಕೆ ನನ್ನ ನಮನಗಳು.
ಸಹೋದರ-ಸಹೋದರಿಯರೇ, ಇಂದು ನಾವಿಲ್ಲಿ ಸೇರಿರುವುದು ವಿಶ್ವ ಹಿಂದೂ ಪರಿಷತ್ತಿಗೆ 50ವರ್ಷಗಳು ತುಂಬಿರುವುದನ್ನುಸ್ಮರಿಸಿಕೊಳ್ಳಲು. ಆದರೆ ಬರೀ ಆ ಸಂಭ್ರಮಾಚರಣೆಗೆ ನಮ್ಮನ್ನು ಮೀಸಲುಗೊಳಿಸಲು ನಾವಿಲ್ಲಿ ಸೇರಿಲ್ಲ. ಜೊತೆಗೆ ಮೂರು ಮುಖ್ಯಸಂಕಲ್ಪಗಳನ್ನು ಮಾಡಲು, ಅವುಗಳನ್ನುಅರ್ಥಮಾಡಿಕೊಂಡು ಅಳವಡಿಸಿಕೊಳ್ಳಲು ಸೇರಿದ್ದೇವೆ.
ಅದಕ್ಕೆ ಮೊದಲು ನಿಮ್ಮನ್ನು ಇತಿಹಾಸದ ಗತವೈಭವಕ್ಕೆ ಒಯ್ಯಬೇಕೆಂದಿದ್ದೇನೆ.
ಒಂದೂವರೆ-ಎರಡು ಸಾವಿರ ವರ್ಷಗಳ ಹಿಂದೆಪರಿಸ್ಥಿತಿ ಹೇಗಿತ್ತು ಗೊತ್ತೇ? ಅಭಿವೃದ್ಧಿ, ಸಂಪತ್ತು, ಪ್ರಗತಿ, ಜ್ಞಾನ, ವೈಭವ, ಶಕ್ತಿಗಳೆಲ್ಲ ಮೇಳೈಸಿದ್ದಿದ್ದೇ ನಮ್ಮ ಹಿಂದೂರಾಷ್ಟ್ರದಲ್ಲಿ. ಆದರೆ ಇಂದುಯಾರನ್ನೇ ಕೇಳಿ ನೋಡಿ, ಯಾವ ರಾಷ್ಟ್ರ ಮುಂಚೂಣಿಯಲ್ಲಿದೆಎಂದು -ಎಲ್ಲರ ಉತ್ತರವೂ ಒಂದೇ. ಅಮೆರಿಕಾ! ಹೌದು. ಹಿಂದೂ ನಿಧಾನವಾಗಿ ಕರಗಿ ಕೇವಲ ಒಂದು ‘ಬಿಂದು’ ವಿನಷ್ಟಾಗಿದ್ದಾನೆ. ಸ್ವಾತಂತ್ರ್ಯಾನಂತರವಂತೂ ಹಿಂದೂಗಳ ಶೇಕಡ ಪ್ರಮಾಣ ಕಡಿಮೆಯಾಗುತ್ತಲೇ ಬಂದು ಈಗ 80ಕ್ಕೆ ನಿಂತಿದೆ.
ಇದು ಇನ್ನೆಲ್ಲಿ 40ರ ಹೊಸ್ತಿಲಿಗೆ ಬಂದುಬಿಡುವುದೋ ಎಂಬ ಆತಂಕವಾಗುತ್ತಿದೆ ನನಗೆ. ಒಂದು ಕಾಲದಲ್ಲಿ ಆಗರ್ಭ ಶ್ರೀಮಂತವಾಗಿದ್ದ ದೇಶದಲ್ಲಿ ಇಂದು ಹಸಿವಿನಿಂದ ಬಳಲುತ್ತಿರುವವರಿಗೆ ಲೆಕ್ಕವೇಇಲ್ಲ. 40ಕೋಟಿ ಹಿಂದೂಗಳು ತಿಂಗಳಿಗೆ ಸಂಪಾದಿಸುತ್ತಿರುವುದು ಒಂದೇ ಒಂದು ಸಾವಿರರೂಪಾಯಿ! ಐದು ಕೋಟಿ ಹಿಂದೂಗಳು ನಿರುದ್ಯೋಗಿಗಳು! ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೊಂದು ಸಮೃದ್ಧವಾಗಿದ್ದ ದೇಶ ಈ ಸ್ಥಿತಿಗೇಕೆಬಂತು?
ಏಕೆ ಉಳಿಯಲಿಲ್ಲ ಆ ವೈಭವ? ಏಕೆಂದರೆ ನಾವು ಉಳಿಸಿಕೊಳ್ಳಲಿಲ್ಲ! ನಮಗೆ ರಕ್ಷಣೆಯೇ ಇರಲಿಲ್ಲ. ಅದಿಲ್ಲದೆ ಹೇಗೆ ಉಳಿಯಬೇಕು ಹಿಂದೂಗಳ ಸಮೃದ್ಧಿ? ಕಾಶ್ಮೀರದ ಹಿಂದೂಗಳದ್ದೂ ಅದೇ ಹಣೆಬರಹವೇ ಅಲ್ಲವೇ? ಯುಗಯುಗಗಳಿಂದ ನಮಗೆ ರಕ್ಷಣೆಯಿತ್ತು. ನಮ್ಮಮನೆ-ಮಠ, ಸಂಪತ್ತು, ಧರ್ಮ ಹಾಗೂ ನಮ್ಮ ಹೆಣ್ಣುಮಕ್ಕಳು ಮೊದಲೆಲ್ಲ ಸುರಕ್ಷಿತವಾಗೇ ಇದ್ದರು. ಆದರೆ ಎರಡು ಸಾವಿರ ವರ್ಷಗಳಿಂದೀಚೆಗೆ ಎಲ್ಲಿದೆ ನಮಗೆ, ನಮ್ಮ ಧರ್ಮಕ್ಕೆ ರಕ್ಷಣೆ?ಇಂದು ವಿಶ್ವದಲ್ಲಿ ಹಿಂದೂ ಎಲ್ಲಿ ಸುರಕ್ಷಿತನಾಗಿದ್ದಾನೆ? ಎಲ್ಲೂ ಇಲ್ಲ. ಕಡೇ ಪಕ್ಷ ನಮ್ಮ ದೇಶದಲ್ಲಿ? ಉಹೂಂ. ಇಲ್ಲೂ ಸುರಕ್ಷಿತನಲ್ಲ. ಕಾಶ್ಮೀರದಿಂದ ಬಂಗಾಳದವರೆಗೂ ಎಲ್ಲೆಲ್ಲೂ ಹಿಂದೂ ಅತಂತ್ರನೇ. ಆದ್ದರಿಂದಲೇ ಈ ಮೂರು ಸಂಕಲ್ಪಗಳು.
ಹಿಂದೂವಿನರಕ್ಷಣೆ :100 ಕೋಟಿ ಹಿಂದೂಗಳ ಸಂಪತ್ತು, ಹೊಲ, ಮನೆ-ಮಠ, ಧರ್ಮ ಹಾಗೂ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳಬೇಕಿದೆ. ಸಮೃದ್ಧಿ ರಕ್ಷಣೆಯಿದ್ದರೆ ಸಮೃದ್ಧಿತಾನೇತಾನಾಗಿ ಆಗುತ್ತದೆ. ಆತ್ಮಸಮ್ಮಾನ: ಸಮೃದ್ಧಿಯಿದ್ದರೆ ನಮ್ಮಆತ್ಮ ಸಮ್ಮಾನವೂ ಉಳಿಯುತ್ತದೆ.
ಹಾಗಾದರೆ, ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
1. ನಮ್ಮ ಸಂಖ್ಯೆ ಕಡಿಮೆಯಾಗಕೂಡದು, ಬದಲಿಗೆ ವೃದ್ಧಿಯಾಗಬೇಕು.
2. ಅಗತ್ಯವಿರುವ ಸಾಂವಿಧಾನಿಕ ತಿದ್ದುಪಡಿಗಳು ಅನುಷ್ಠಾನಗೊಳ್ಳಬೇಕು.
3. ಎಲ್ಲ ಹಿಂದೂಗಳೂ ಹೆಸರಿಗೆ ಮಾತ್ರವಲ್ಲ, ಆಚರಣೆಯಿಂದಲೂ ಹಿಂದೂಗಳಾಗಬೇಕು!
4. ಪ್ರತಿ ಹಿಂದೂವೂ ಜಾಗೃತನಾಗಬೇಕು. ತನ್ನ ಧರ್ಮದ ಹಾಗೂ ತನ್ನ ಏಳ್ಗೆಗಾಗಿ ಕಟಿಬದ್ಧನಾಗಬೇಕು.
5. ಹಿಂದೂಗಳೆಲ್ಲ ಸಕ್ರಿಯರಾಗಬೇಕು.
6. ಬಹಳ ಮುಖ್ಯವಾಗಿ ನಮ್ಮಲ್ಲಿರುವ ಜಾತಿಭೇದ ತೊಲಗಬೇಕು. ಅಸ್ಪೃಶ್ಯತೆಯನ್ನು ಬದಿಗೊತ್ತಿ, ಯಾವ ಜಾತಿಗೆ ಸೇರಿದ್ದರೂ ಸರಿ, ಮೊದಲು ನಾವೆಲ್ಲ ಹಿಂದೂಗಳು ಎಂಬುದನ್ನು ಮನಗಂಡು ಒಗ್ಗಟ್ಟಾಗಿರಬೇಕು.
• ನಮಗೆಮತಾಂತರಬೇಡ, ನಮ್ಮಧರ್ಮಕ್ಕೆ ಮರಳುವುದುಬೇಕು.
• ಲವ್ ಜಿಹಾದ್ ಬೇಡ, ಸಮಾನ ನಾಗರಿಕೆ ಸಂಹಿತೆಬೇಕು,
• ಬಾಂಗ್ಲಾದೇಶದಿಂದ ವಲಸೆ ಬರುತ್ತಿರುವ ಮುಸಲ್ಮಾನರು ಬೇಡ, ಹಿಂದೂ ಮನೆಗಳಲ್ಲಿ ಹೆಚ್ಚುಹೆಚ್ಚು ಮಕ್ಕಳಾಗುವುದು ಬೇಕು.
ನೆನಪಿಡಿ, ನಮಗೆ ಯಾರೂ ಸಹನೆಯನ್ನು ಹೊಸದಾಗಿ ಕಲಿಸುವ ಅಗತ್ಯವಿಲ್ಲ. ನಮ್ಮಲ್ಲಿ ಅದಿಲ್ಲದಿದ್ದರೆ ಇಂದು ಈ ದೇಶದಲ್ಲಿ ಪರಕೀಯರು ಬಂದು ವಾಸಿಸಲು ಆಗುತ್ತಲೇ ಇರಲಿಲ್ಲ. ಪ್ರಪಂಚದಲ್ಲೆಲ್ಲಾದರೂ ನಾವು ಮತಾಂತರ ಮಾಡಿದ ಉದಾಹರಣೆಗಳಿದ್ದರೆ ತೋರಿಸಿ ನೋಡೋಣ! ಹಾಗಿದ್ದ ಮೇಲೆ ನಾವೇಕೆ ಮತಾಂತರವಾಗಬೇಕು? ದೇಶದೊಳಗೆ ಬಂದು ಸೇರಿಕೊಂಡಿರುವ 3ಕೋಟಿ ಬಾಂಗ್ಲಾದೇಶಿಗರನ್ನು ವಾಪಸ್ಕಳಿಸಬಾರದೇಕೆ?
ಸಹೋದರರೇ, ಪಕ್ಕದ ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿಯಾಗುವವನು ಬರೀ ತನ್ನ ದೇಶದ ಮುಸ್ಲಿಮರಿಗೋಸ್ಕರ ಆಡಳಿತ ನಡೆಸುತ್ತಾನೆ. ಆದರೆ ನಮ್ಮ ದೇಶದಲ್ಲಿ ಪ್ರಧಾನಿಯಾಗುವವರು ಹಿಂದೂಗಳನ್ನು ಮರೆಯುತ್ತಾರೇಕೆ? ಎಲ್ಲಸೌಲಭ್ಯ, ಭಾಗ್ಯಗಳೂ ಮುಸ್ಲಿಮರಪಾಲಾಗುವುದೇಕೆ? ಏನುಮಾಡಿದ್ದಾರೆನಮ್ಮಹಿಂದುಗಳು? ಹೀಗೇ ಮುಂದುವರೆದರೆ ನಾವು ಪೂರ್ಣ ನಿರ್ನಾಮವಾಗಿ ಬಿಡುತ್ತೇವೆ. ಹಾಗಾಗಲು ಬಿಡಕೂಡದು. ನಮ್ಮ ಆಚರಣೆಯಿಂದ ನಾವು ಹಿಂದೂಗಳಾಗಿ ಉಳಿದು ನಮ್ಮ ಧರ್ಮವನ್ನೂ ಉಳಿಸಿಕೊಳ್ಳಬೇಕು. ನಮ್ಮ ಧರ್ಮವನ್ನುಆಚರಿಸುವುದುಹೇಗೆ? ವಿಧಾನಗಳಿವೆಇಲ್ಲಿವೆ.
• ಬೆಳಿಗ್ಗೆ ಎದ್ದು ಭೂತಾಯಿಗೆ ನಮಿಸಬೇಕು, ಕುಲದೇವತೆಗೆ ನಮಿಸಬೇಕು, ತಂದೆ-ತಾಯಿಯರಿಗೆ ನಮಿಸಬೇಕು
• ತುಳಸಿ ಗಿಡಕ್ಕೆ ನೀರುಣಿಸಬೇಕು
• ಪಕ್ಷಿಗಳಿಗೆ ಕಾಳು-ನೀರುಗಳನ್ನು ಹಾಕಬೇಕು
• ದಿನವೂ ಭಗವಂತನಿಗೆ ಪೂಜೆ, ದಿನವೂದೇವರ ಮುಂದೆಒಂದರಿಂದ ಹತ್ತುರೂಪಾಯಿಗಳನ್ನಿಡುವುದು, ಬಳಿಕ ಅದನ್ನು ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕು.
• ಊಟಕ್ಕೆ ಕೂರುವ ಮುಂಚೆ ಹಸಿದಿರುವ ಹಿಂದೂಗಳಿಗೋಸ್ಕರ ಒಂದು ಹಿಡಿ ಧಾನ್ಯವನ್ನು ತೆಗೆದಿಡುವುದು.
• ಊಟ ಮಾಡುವಾಗ ಮೊದಲತುತ್ತುಹಸುವಿಗೆ ಹಾಕುವುದು
• ದಿನವೂ ದೇಗುಲಕ್ಕೆ ಭೇಟಿ ಹಾಗೂ ಸೂರ್ಯಾಸ್ತವಾಗುವಾಗ ಮನೆಯಲ್ಲಿ ದೀಪಹಚ್ಚುವುದು.
• ಇಷ್ಟೆಲ್ಲದರ ಜೊತೆ ಅಸ್ಪೃಶ್ಯತೆಯಂಥ ಪೀಡೆಯನ್ನುಪಕ್ಕಕ್ಕಿಟ್ಟು ಎಲ್ಲಜಾತಿಯವರನ್ನೂ ಒಂದೇ ಎಂದು ಕಾಣುವುದು.
ಓರ್ವಜಾಗೃತ ಹಿಂದೂವಾಗಿ ಈ ಎಲ್ಲ ಆಚರಣೆಗಳನ್ನು ಮಾಡಿದ್ದೇ ಆದರೆ ನಮ್ಮ ರಕ್ಷಣೆ ಹಾಗೂ ಸಮೃದ್ಧಿ ಖಚಿತವಲ್ಲವೇ? ಜಾಗೃತನಾಗಿರಬೇಕೆಂದರೆ, ಸಕ್ರಿಯನಾಗಿರಬೇಕೆಂದರೆ ನಾನು-ನನ್ನಸಂಸಾರಎಂದುಸುಮ್ಮನಿದ್ದುಬಿಡುವುದಲ್ಲ. ಬಡ, ದೀನ, ರೋಗಪೀಡಿತಅಥವಾನಿರುದ್ಯೋಗಿಯಾದಎಲ್ಲಹಿಂದೂಗಳಬಗ್ಗೆಯೂಕಾಳಜಿ,ಪ್ರೀತಿಹೊಂದಿರುವುದು. ಅವರಿಗೆ ಕೈಲಾದ ಸಹಾಯ ಮಾಡುವುದು. ಹಿಂದೂವಿಗೆಎಲ್ಲಿಯಾದರೂ ಅಪಮಾನವಾಗುತ್ತಿದೆಯೆಂದರೆ, ಜಟಾಯುವಿನಂತೆ ಒಬ್ಬನೇ ಹೋರಾಡಬೇಕಾಗಿ ಬಂದರೂ ಸೈ, ಅವನ ನೆರವಿಗೆನಿಲ್ಲುವುದು. ಒಬ್ಬನ ಅಪಮಾನಕ್ಕೆ ಯಾವಾಗ ನೂರು ಕೋಟಿ ಹಿಂದೂಗಳು ಸ್ಪಂದಿಸುತ್ತಾರೋ ಆಗಲೇ ಹಿಂದೂಧರ್ಮ ಸುರಕ್ಷಿತವಾಗಿರುವುದು ಅಲ್ಲವೇ?
ಸಮೃದ್ಧಿ ಪಡೆಯಲೂ ಹಲವು ದಾರಿಗಳಿವೆ. ಮೊದಲನೆಯದು ಯಾವ ಹಿಂದೂ ವೂಹಸಿದುಕೊಂಡಿರಬಾರದು. ಯಾವ ಹಿಂದೂವೂ ಅನಕ್ಷರಸ್ಥನಾಗಿರಬಾರದು. ಯಾವಮನೆಯಲ್ಲೂವೈದ್ಯರಿಲ್ಲದೆಇರಬಾರದು. ಯಾರೂ ನಿರುದ್ಯೋಗಿಯಾಗಿರಬಾರದು. ಜಗತ್ತಿನ ವ್ಯಾಪಾರ ವಹಿವಾಟಿನಲ್ಲಿ ತಮ್ಮದಾಗಿದ್ದ ಶೇಕಡ 35ನ್ನು ಮತ್ತೆ ಗಳಿಸಿಕೊಳ್ಳಬೇಕೆಂದರೆ ನಾವು ವ್ಯಾಪಾರಕ್ಕೆ ಹೆಚ್ಚುಒತ್ತುನೀಡಬೇಕು. ನಮ್ಮಧರ್ಮದ ಶ್ರೇಷ್ಠತೆಯನ್ನುಎತ್ತಿಹಿಡಿಯಬೇಕು.
ಹಿಂದೂ ಪರಿವಾರ, ವ್ಯಾಪಾರ, ಆರೋಗ್ಯ, ವಿದ್ಯೆ, ಹೀಗೆಎಲ್ಲದರಲ್ಲೂ ಮುಂಚೂಣಿಯಲ್ಲಿರಬೇಕು. ವಿಶ್ವ ಹಿಂದೂ ಪರಿಷತ್ತಿನ ಈ ಸ್ವರ್ಣಜಯಂತಿಯ ಸಂದರ್ಭದಲ್ಲಿ ನಾವೆಲ್ಲ ಕಳೆದುಹೋಗಿರುವ ಹಿಂದೂಗಳ ಗೌರವ, ಸುರಕ್ಷೆ, ಸಮೃದ್ಧಿಗಳನ್ನುಮತ್ತೆ ಗಳಿಸೋಣ.
ಒಬ್ಬ ಹಿಂದೂ ಇದನ್ನು ಅರ್ಥಮಾಡಿಕೊಂಡು ನೂರು ಜನರಿಗೆ ಅರ್ಥಮಾಡಿಸಿದರೆ ಸಾಕು, ನೂರು ಕೋಟಿ ಹಿಂದೂಗಳು ಅರ್ಥಮಾಡಿಕೊಂಡು ಆಚರಣೆಗಿಳಿದರೆ ಯಾವುದು ಅಸಾಧ್ಯ? ನನ್ನ ಸಹೋದರ-ಸಹೋದರಿಯರೇ, ನನಗೆನಿಮ್ಮಲ್ಲಿ ಅಚಲ ನಂಬಿಕೆಯಿದೆ. ನಾವೆಲ್ಲರೂ ಒಗ್ಗಟ್ಟಾಗಿರುತ್ತೇವೆ, ಜಾಗೃತರಾಗಿರುತ್ತೇವೆ ಹಾಗೂ ಸಕ್ರಿಯರಾಗಿರುತ್ತೇವೆ. ನಮ್ಮನ್ನು ಯಾರಾದರೂ ಹಿಮ್ಮೆಟ್ಟಿಸಲು, ತುಳಿಯಲು ಬಂದರೆ ಅವರನ್ನೇ ಹಿಮ್ಮೆಟ್ಟಿಸುತ್ತೇವೆ. ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ದಿನಗಳನ್ನುಮರಳಿಪಡೆಯುತ್ತೇವೆ.
ಜೈ ಶ್ರೀರಾಮ್.
ಹರಹರ ಮಹಾದೇವ್.
– ಡಾ ಪ್ರವೀಣ್ ತೊಗಾಡಿಯಾ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು
ಫೆಬ್ರವರಿ 08, 2015, ಬೆಂಗಳೂರು
ವಿಶ್ವ ಹಿಂದು ಪರಿಷದ್, ಸ್ವರ್ಣಜಯಂತಿ ವಿರಾಟ್ ಹಿಂದುಸಮಾಜೋತ್ಸವ
ನಾವು ಹಿಂದುಗಳು – ನಮ್ಮ ಸಂಕಲ್ಪ
- ಮನೆಯಲ್ಲಿ ದೇವರಪಟಕ್ಕೆ ನಮಸ್ಕರಿಸಿ ಕೆಲವು ನಿಮಿಷ ದೇವರ ಧ್ಯಾನ ಮಾಡುತ್ತೇವೆ. ರಾತ್ರಿ ದೇವರ ಮುಂದೆ ದೀಪ ಹಚ್ಚಿರುತ್ತೇವೆ.
- ಎಲ್ಲಾ ಹಿಂದುಗಳಿಗೆ ನಮ್ಮ ಮನೆಯಲ್ಲಿ ಪ್ರವೇಶವಿದೆ.
- ಮನೆಯ ಸುತ್ತಲಿನಲ್ಲಿ ತುಳಸಿ ಗಿಡವನ್ನು ಬೆಳೆಸುತ್ತೇವೆ
- ಮನೆಯವರೆಲ್ಲರೂ ಕುಂಕುಮ, ಗಂಧ, ವಿಭೂತಿಗಳಲ್ಲಿ ಯಾವುದಾದರೂ ತಿಲಕವನ್ನು ಇಟ್ಟುಕೊಳ್ಳುತ್ತೇವೆ.
- ಮನೆಯ ಒಳಗೆ ನಮ್ಮ ಮಾತುಕತೆಗಳು ನಮ್ಮ ಭಾಷೆಯಲ್ಲಿದೆ.
- ಪ್ರತಿದಿನವೂ ಒಂದು ಮುಷ್ಟಿ ಅಕ್ಕಿ ಮತ್ತು ಕನಿಷ್ಠ ಒಂದು ರೂಪಾಯಿಯನ್ನು ಯಾವುದಾದರೂ ಸಮಾಜ ಸೇವೆಗಾಗಿ ತೆಗೆದಿಡುತ್ತೇವೆ.
- ಮನೆಯವರೆಲ್ಲರೂ ಜೊತೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತೇವೆ.
- ದೇವಸ್ಥಾನಕ್ಕೆ ಹಾಗೂ ಸ್ವಾಮಿಗಳ ಭೇಟಿಗೆ ಹೋಗುವಾಗ ಭಾರತೀಯ ಉಡುಪಿನಲ್ಲಿ ಹೋಗುತ್ತೇವೆ.
- ನಮ್ಮ ಮನೆಯಲ್ಲಿ ಓಂಕಾರದ ಚಿತ್ರ ಅಥವಾ ಭಾರತಮಾತೆಯ ಚಿತ್ರವು ಪ್ರವೇಶವಾಗುತ್ತಲೇ ಕಾಣುತ್ತದೆ
ಹಿಂದು ಧರ್ಮದ ವಿವಿಧ ಸಮುದಾಯಗಳ ರಾಜಾಧ್ಯಕ್ಷರು
ಕ್ರ. ಸಂ. | ಸಂಸ್ಥೆಯ ಹೆಸರು | ಅಧ್ಯಕ್ಷರ ಹೆಸರು | |
೧ | ಅಖಿಲ ಕರ್ನಾಟಕ ತಿಗಳರ ಸಮಾಜ | xಶ್ರೀ ಸಿದ್ದಗಂಗಯ್ಯ | |
೨ | ಅಖಿಲ ಕರ್ನಾಟಕ ಒಕ್ಕಲಿಗರ ಸಮಾಜ | ಡಾ|| ಅಪ್ಪಾಜಿಗೌಡರು | |
೩ | ಅಖಿಲ ಕರ್ನಾಟಕ ಯಾದವ ಸಮಾಜ | ಶ್ರೀ ಬಿ.ಎಸ್. ಲಕ್ಷ್ಮೀಪತಿ | |
೪ | ಅಖಿಲ ಕರ್ನಾಟಕ ಹಿಂದು ಸಾಧರ ಸಮಾಜ | ಶ್ರೀ ರಾಮಮೂರ್ತಿ | |
೫ | ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ |
|
|
೬ | ಅಖಿಲ ಕರ್ನಾಟಕ ಆರ್ಯ ಈಡೀಗರ ಸಮಾಜ | ಶ್ರೀ ಕಾಳೇಗೌಡ | |
೭ | ಆನೇಕಲ್ತಿಮ್ಮಯ್ಯ ಟ್ರಸ್ಟ್ | ಶ್ರೀ ಲಕ್ಷ್ಮಯ್ಯ | |
೮ | ಅಖಿಲ ಕರ್ನಾಟಕ ಬಿಲ್ಲವ ಸಮಾಜ | ಶ್ರೀ ಎಂ. ವೇದಕುಮಾರ್ | |
೯ | ಅಖಿಲ ಕರ್ನಾಟಕ ಕುರುಹಿನ ಶೆಟ್ಟಿ ಸಮಾಜ | ಶ್ರೀಬಸವರಾಜ್ನಲ್ಲಪವಾಡ್ | |
೧೦ | ಅಖಿಲ ಕರ್ನಾಟಕ ತೊಗಟವೀರರ ಸಮಾಜ | ಶ್ರೀ ಎಸ್. ಸೋಮಶೇಖರ್ | |
೧೧ | ಅಖಿಲ ಕರ್ನಾಟಕ ಕುರುಬರ ಸಮಾಜ | ಶ್ರೀ ಕೆ.ಎಂ. ರಾಮಚಂದ್ರಪ್ಪ | |
೨೧ | ಅಖಿಲ ಕರ್ನಾಟಕ ಭಾವಸಾರ ಕ್ಷತ್ರಿಯ ಸಮಾಜ | ²æà ಸುಧೀರನವಲೆ | |
೧೩ | ಅಖಿಲ ಕರ್ನಾಟಕ ಶಂಭುಕುಲ ಕ್ಷತ್ರಿಯ ಸಮಾಜ | ಶ್ರೀ ಆರ್. ಯು. ನಂದಗೋಪಾಲ್ | |
೧೪ | ಅಖಿಲ ಕರ್ನಾಟಕ ಕುಂಬಾರರ ಸಮಾಜ | ಶ್ರೀ ಮುನಿಸ್ವಾಮಿ | |
೧೫ | ಅಖಿಲ ಕರ್ನಾಟಕ ಮಡಿವಾಳ ಸಮಾಜ | ಶ್ರೀ ನಂಜಪ್ಪ | |
೧೬ | ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ | ಶ್ರೀ ಬಿ. ಉಮೇಶ್ | |
೧೭ | ಅಖಿಲ ಕರ್ನಾಟಕ ಕ್ಷತ್ರಿಯ ಮರಾಠ ಸಮಾಜ | ಶ್ರೀ ರಾಣೋಜಿರಾವ್ ಸಾಠೆ | |
೧೮ | ಅಖಿಲ ಕರ್ನಾಟಕ ದೇವಾಂಗ ಸಮಾಜ | ಶ್ರೀ ಸೂರ್ಯನಾರಾಯಣ್ | |
೧೯ | ಅಖಿಲ ಕರ್ನಾಟಕ ಸವಿತಾ ಸಮಾಜ | ಶ್ರೀ ಎನ್. ಸಂಪತ್‌ಕುಮಾರ | |
೨೦ | ಅಖಿಲ ಕರ್ನಾಟಕ ಜ್ಯೋತಿಪಣಗಾಣಿಗರ ಸಮಾಜ | ಶ್ರೀ ಅನಂತ | |
೨೧ | ಅಖಿಲ ಕರ್ನಾಟಕ ಗಂಗಾಮತಸ್ಥರ ಸಮಾಜ | ಶ್ರೀಮೋಹನ್ಕುಮಾರ್ | |
೨೨ | ಅಖಿಲ ಕರ್ನಾಟಕ ಸ್ವಕುಳಸಾಳಿ ಸಮಾಜ | ಶ್ರೀ ಎನ್. ಚಂದ್ರಕಾಂತ ಭಂಡಾರಿ | |
೨೩ | ಅಖಿಲ ಕರ್ನಾಟಕ ಸೋಮವಂಶ ಕ್ಷತ್ರಿಯ ಸಮಾಜ | ಶ್ರೀವಿ. ಅನಂತರಾಜ್ | |
೨೪ | ಅಖಿಲ ಕರ್ನಾಟಕ ದೇವಾಡಿಗ ಸುಧಾರಕ ಸಮಾಜ | ಶ್ರೀ ಚಂದ್ರಶೇಖರ್ | |
೨೫ | ಅಖಿಲ ಕರ್ನಾಟಕ ಕಾಡುಗೊಲ್ಲ ರಕ್ಷಣಾ ಸಮಿತಿ | ಶ್ರೀ ಚಿಕ್ಕಪ್ಪಯ್ಯ | |
೨೬ | ಅಖಿಲ ಕರ್ನಾಟಕ ಆರ್ಯವೈಶ್ಯ ಮಹಾಸಭಾ | ಶ್ರೀ ರವಿಶಂಕರ್ | |
೨೭ | ಅಖಿಲ ಕರ್ನಾಟಕ ಭಾರತೀಯ ಸಾಮಾಜಿಕ ಪರಿವರ್ತನಾ ಚಳುವಳಿ ಪ್ರಚಾರ ಸಮಿತಿ | ಶ್ರೀ ಲೋಕೇಶ್ | |
೨೮ | ಅಖಿಲ ಕರ್ನಾಟಕ ಭಂಟ್ಸ್ ಸಮಾಜ | ಡಾ|| ನರೇಶ್ ಶೆಟ್ಟಿ | |
೨೯ | ಅಖಿಲ ಕರ್ನಾಟಕ ವಾಲ್ಮೀಕಿ ಸಮಾಜ | ಶ್ರೀ ವಿ. ನಾಗರಾಜ ನಾಯಕ | |
೩೦ | ಅಖಿಲ ಕರ್ನಾಟಕ ಕಮ್ಮಾವಾರಿ ಸಮಾಜ | ಶ್ರೀ ಸುಬ್ರಹ್ಮಣ್ಯ ನಾಯ್ಡು | |
೩೧ | ತೆಲುಗು ವಿಜ್ಞಾನ ಸಮಿತಿ | ರಾಧಾಕೃಷ್ಣ ರಾಜು | |
೩೨ | ತಮಿಳು ಸಂಘ | ಶ್ರೀ ದಾಮೋದರನ್ | |
೩೩ | ಮಹಾರಾಷ್ಟ್ರ ಮಂಡಲಿ | ಶ್ರೀ ಅನಿಲ್ಭೋಕಲ್ | |
೩೪ | ಬೆಂಗಾಲಿ ಅಸೋಸಿಯೇಷನ್ | ಶ್ರೀ ರಾಯ್ | |
೩೫ | ಶ್ರೀ ಜೈನ್ ಶ್ವೆತಾಂಬರ್ ತೇರಾಪಂಥ್ ಸಭಾ | ಶ್ರೀ ಪ್ರೇಮ್ ಕುಮಾರ್ ಪರಕ್ | |
೩೬ | ಶ್ರೀ ಹೆಬ್ಬಾರ್ ವೈಷ್ಣವ ಸಭಾ | ಶ್ರೀ ಎಂ. ಎನ್. ಕೃಷ್ಣಮೂರ್ತಿ | |
೩೭ | ಕೊಡವ ಸಮಾಜ | ಶ್ರೀ ಎಂ. ಕೆ. ಮೇದಪ್ಪ | |
೩೮ | ಬಂಜಾರ ಸೇವಾ ಸಂಘ | ಶ್ರೀ ರಾಮದಾಸ ನಾಯಕ್ | |
೩೯ | ಕರ್ನಾಟಕ ಪಂಜಾಬಿ ಅಸೋಸಿಯೇಷನ್ | ಶ್ರೀ ಗುರುಶರನ್ ಸಿಂಗ್ | |
೪೦ | ಮೊದಲಿಯಾರ್ ಸಂಘ | ಡಾ|| ಎ.ಎಮ್. ಆರ‍್ಮುಗಂ | |
೪೧ | ಭೋವಿ ಕ್ಷೇಮಾಭಿವೃದ್ದಿ ಸಂಘ | ಶ್ರೀ ರಘು | |
೪೨ | ಕಾಶ್ಮೀರಿ ಅಸೋಸಿಯೇಷನ್ | ಶ್ರೀ ಎಸ್. ಕೆ. ಟಿಕ್ಕು | |
೪೩ | ಹೊಯ್ಸಳ ಕರ್ನಾಟಕ ಸಂಘ | ಶ್ರೀ ಎಂ. ಆರ್. ಅನಂತಸ್ವಾಮಿ | |
೪೪ | ಉಲಚಕಮ್ಮಿ ಬ್ರಾಹ್ಮಣ ಮಹಾಸಭಾ | ಶ್ರೀ ವಿ. ಮಂಜುನಾಥ | |
೪೫ | ಬಡಗನಾಡು ಸಂಘ | ಶ್ರೀ ಬಿ.ಎಸ್. ರವಿಶಂಕರ್ | |
೪೬ | ಚಿತ್ತಾಪುರ ಮಠ | ಶ್ರೀರಾಜಗೋಪಾಲ್ | |
೪೭ | ಯಾದವಜನಸಂಘ | ಶ್ರೀರಮೇಶ್ಯಾದವ್ | |
೪೮ | ಶ್ರೀಶುಕ್ಲಯಜುರ್ವೆದಮಹಾಸಭಾ | ಶ್ರೀಕೆ.ಎನ್. ಚಂದ್ರಶೇಖರ್ | |
೪೯ | ಬಿಹಾರಿಅಸೋಸಿಯೇಷನ್ | ಶ್ರೀರಾಮ್ಕಮಲ್ಸಿಂಗ್ | |
೫೦ | ಸಮತಾ ಸೈನಿಕ ಧಳ | ಶ್ರೀಎಂ. ವೆಂಕಟಸ್ವಾಮಿ | |
೫೧ | ದೈವಜ್ಞ ಬ್ರಾಹ್ಮಣರ ಸಂಘ | ಶ್ರೀರಾಮರಾವ್ರಾಯ್ಕರ್ | |
೫೨ | ಆಖಿಲ ಭಾರತ ವೀರಶೈವ ಸಮಾಜ | ಡಾ|| ಶ್ಯಾಮನೂರುಶಿವಶಂಕರಪ್ಪ | |
೫೩ | ಮೇದರಸಮಾಜ | ಶ್ರೋಸಿದ್ದರಾಜು | |
೫೪ | ಅ.ಭಾ.ಅಂಬೇಡ್ಕರ್ಪ್ರಚಾರಸಮಿತಿ | ಡಾ|| ಚಿ.ನಾ. ರಾಮು | |
೫೫ | ಕೇರಳಸಮಾಜಂ | ಶ್ರೀಸುಧಾಕರನ್ | |
೫೬ | ಅಗರವಾಲ್ ಅಸೋಸಿಯೇಷನ್ | ಶ್ರೀಜಯಪ್ರಕಾಶ್ಗುಪ್ತ | |
೫೭ | ಹಿಂದುಳಿ ದವರ್ಗಗಳ ಒಕ್ಕೂಟ | ಶ್ರೀಮುನಿಬಸವಾಚಾರ್ | |
೫೮ | ಗೌಡ ಸಾರಸ್ವತ ಸಮಾಜ | ಶ್ರೀಕೆ. ಉಪೇಂದ್ರನಾಯಕ್ | |
೫೯ | ವೈಶ್ಯವಾಣಿಸಮಾಜ | ಶ್ರೀಗೋಪಾಲಕೃಷ್ಣಶೇಟ್ | |
೬೦ | ಬಲಿಜಸಂಘ | ಶ್ರೀವೇಣುಗೋಪಾಲ್ | |
೬೧ | ಶ್ರೀಮಾಹೇಶ್ವರಿಸೇವಾಸಮಿತಿ | ಶ್ರೀಕಿಷನ್ಜೀರಾಠಿ | |
೬೨ | ಶ್ರೀಸದ್ಗುರುಕಬೀರ್ಆಶ್ರಮ | ಶ್ರೀರಂಗಸ್ವಾಮಿ | |
೬೩ | ಶ್ರೀನಗರ್ತರಸಮಾಜ | ಶ್ರೀಹೆಚ್.ಎಸ್. ಬಸವರಾಜ್ |
ವೇದಿಕೆ ಮೇಲೆ ಉಪಸ್ಥಿತರಿರುವ ಪದಾಧಿಕಾರಿಗಳು
ಕ್ರಮ ಸಂಖ್ಯೆ | ಹೆಸರು |
೧ | ಮಾನ್ಯಶ್ರೀ ಭಯ್ಯಾಜಿ ಜೋಷಿ |
೨ | ಶ್ರೀ ದಿನೇಶ್ ಚಂದ್ರಜೀ |
೩ | ಶ್ರೀ ರಾಘವ ರೆಡ್ಡಿ |
೪ | ಶ್ರೀ ಸ್ವಾಮಿ ವಿಜ್ಞಾನಾನಂದಜೀ |
೫ | ಶ್ರೀ ವೈ ರಾಘವಲು |
೬ | ಶ್ರೀ ಸುಧಾಂಶು ಪಟ್ನಾಯಕ್ |
೭ | ಶ್ರೀ ಬಿ.ಎನ್. ಮೂರ್ತಿ |
೮ | ಶ್ರೀ ಗೋಪಾಲ್‌ಜೀ |
೯ | ಶ್ರೀ ವೈ.ಕೆ. ರಾಘವೇಂದ್ರ ರಾವ್ |
೧೦ | ಶ್ರೀ ಬಾಬುರಾವ್ ದೇಸಾಯಿ |
೧೧ | ಶ್ರೀ ಕೇಶವ ಹೆಗ್ಗಡೆ |
೧೨ | ಡಾ|| ಶಿವಕುಮಾರಸ್ವಾಮಿ |
೧೩ | ಪ್ರೊ. ಎಮ್. ಬಿ. ಪುರಾಣಿಕ್ |
೧೪ | ಶ್ರೀ ಹಾ. ರಾಮಪ್ಪ |
೧೫ | ಶ್ರೀ ಶಂಕರಪ್ಪ |
೧೬ | ಶ್ರೀಮತಿ ವಾಸಂತಿ ಯಜ್ಞನಾರಾಯಣ |
೧೭ | ಶ್ರೀಮತಿ ರಮಾರತ್ನ |
೧೮ | ಶ್ರೀ ಸತ್ಯಶಂಕರ್ |
೧೯ | ಶ್ರೀ ಟಿ.ಎ.ಪಿ. ಶೆಣೈ |
೨೦ | ಶ್ರೀ ಕೃಷ್ಣಮೂರ್ತಿ |
೨೧ | ಶ್ರೀ ಸುನೀಲ್ ದುಗಡ್ |
೨೨ | ಶ್ರೀ ಬಿ.ಇ. ಸುರೇಶ್ |
೨೩ | ಶ್ರೀ ಸೂರ್ಯನಾರಾಯಣ |
೨೪ | ಶ್ರೀ ಶರಣ, ಮಂಗಳೂರು |
೨೫ | ಶ್ರೀ ವಿಜಯಕುಮಾರ್ ರೆಡ್ಡಿ |
೨೬ | ಶ್ರೀ ನಾರಾಯಣ ರೆಡ್ಡಿ |
೨೭ | ಶ್ರೀ ಮಂಜುನಾಥಸ್ವಾಮಿ |
೨೮ | ಶ್ರೀ ರಮೇಶ ಪರಾಂಡೆ |
೨೯ | ಶ್ರೀ ವಾಸುದೇವರಾಜು |
೩೦ | ಶ್ರೀಮತಿ ಕುಸುಮ ನಾರಾಯಣಚಾರ್ |
೩೧ | ಶ್ರೀ ಕಟೀಲು ದಿನೇಶ್ ಪೈ |
೩೨ | ಶ್ರೀ ರಂಗಹನುಮಯ್ಯ |
ವೇದಿಕೆ ಮೇಲೆ ಉಪಸ್ಥಿತರಿರುವ ಸ್ವಾಮೀಜಿಗಳು
ಕ್ರಮ ಸಂಖ್ಯೆ | ಹೆಸರು |
೧ | ಪೂಜ್ಯಶ್ರೀ ಡಾ|| ವಿರೇಂದ್ರ ಹೆಗ್ಗಡೆಯವರು |
೨ | ಪೂಜ್ಯಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು |
೩ | ಪೂಜ್ಯಶ್ರೀ ರವಿಶಂಕರ್ ಗುರೂಜಿ |
೪ | ಪೂಜ್ಯಶ್ರೀ ಮಧುಪಂಡಿತ್‌ದಾಸ |
೫ | ಪೂಜ್ಯಶ್ರೀ ಸೌಮ್ಯನಾಥ ಸ್ವಾಮೀಜಿ |
೬ | ಪೂಜ್ಯಶ್ರೀ ಮಾದಾರ ಚನ್ನಯ್ಯ ಮಹಾಸ್ವಾಮಿಗಳು |
೭ | ಪೂಜ್ಯಶ್ರೀ ಶಿವರುದ್ರ ಮಹಾಸ್ವಾಮಿಗಳು |
೮ | ಪೂಜ್ಯಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು |
೯ | ಪೂಜ್ಯಶ್ರೀ ಗಣೇಶಸ್ವರೂಪಾನಂದ ಸ್ವಾಮಿಗಳು |
ಅಖಿಲ ಭಾರತೀಯ ಸ್ವಾಗತ ಸಮಿತಿ ಸದಸ್ಯರು
ಕ್ರಮ ಸಂಖ್ಯೆ | ಹೆಸರು |
೧ | ಶ್ರೀ ವಿಜಯ ಸಂಕೇಶ್ವರ್ |
೨ | ಶ್ರೀ ವಿಶ್ವೇಶ್ವರ ಭಟ್ |
೩ | ಶ್ರೀ ವಿನಯ್ ಹೆಗ್ಗಡೆ |
೪ | ಶ್ರೀ ಗೌರಿಶಂಕರ್ |
ಪ್ರಾಂತೀಯ ಸ್ವಾಗತ ಸಮಿತಿ ಸದಸ್ಯರು
ಕ್ರಮ ಸಂಖ್ಯೆ | ಹೆಸರು |
೧ | ಡಾ|| ಮೋಹನ್ ಆಳ್ವಾ |
೨ | ಶ್ರೀಮತಿ ಎಸ್. ಜಿ. ಸುಶೀಲಮ್ಮ |
೩ | ಡಾ|| ಮಲ್ಲೇಪುರಂ ಜಿ. ವೆಂಕಟೇಶ್ |
೪ | ಶ್ರೀ ಎಸ್. ಬಿ. ಮುದ್ದಪ್ಪ |
೫ | ಲೇ. ಜ. ಪಿ.ಜಿ. ಕಾಮತ್ |
೬ | ಶ್ರೀ ಎಮ್. ಆರ್. ಪಟ್ಟಾಭಿರಾಮನ್ |
೭ | ಶ್ರೀ ಜಿ. ದಾಮೋದರನ್ |
೮ | ಶ್ರೀ ಕೆ. ಎಸ್. ಅಖಿಲೇಶ್ ಬಾಬು |
ಬೆಂಗಳೂರು ಮಹಾನಗರ ಸ್ವಾಗತ ಸಮಿತಿ
ಕ್ರಮ ಸಂಖ್ಯೆ‘ | ಹೆಸರು |
೧ | ಶ್ರೀ ಸಿ. ಸೋಮಶೇಖರ |
೨ | ಶ್ರೀ ಅವಿನಾಶ್ |
೩ | ಶ್ರೀ ಷಡಕ್ಷರಿ |
೪ | ಶ್ರೀಮತಿ ಪ್ರಮೀಳಾ ನೇಸರ್ಗಿ |
೫ | ಶ್ರೀ ಹರೀಶ್ |
೬ | ಶ್ರೀ ಶ್ರೀಶ್‌ಕುಮಾರ್ |
೭ | ಶ್ರೀ ನೀಲಕಂಠ |