ಪುತ್ತೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿ ವಿಧಿ ವಿಭಾಗದ ಆಶಯದಂತೆ ಪುತ್ತೂರು ನಗರ ಪ್ರದೇಶದ ಆರು ಸೇವಾ ಬಸ್ತಿ ಕಾಲೋನಿಗಳಿಗೆ ದೀಪಾವಳಿ ಹಬ್ಬದ ಬೆಳಕು ನೀಡುವ ಕಾರ್ಯಕ್ರಮಕ್ಕೆ ಅ.24ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಗರ್ಭಗುಡಿಯ ದೀಪದ ಬೆಳಕನ್ನು ಊರಿನ ಎಲ್ಲಾ ವರ್ಗದ ಜನರ ಸಮ್ಮುಖದಲ್ಲಿ ಸೇವಾ ಬಸ್ತಿಯ ಪ್ರಮುಖರಿಗೆ ಹಸ್ತಾಂತರಿಸಿ, ಮೆರವಣಿಗೆಯ ಮೂಲಕ ದೀಪವನ್ನು ಅವರ ಮನೆಗಳಿಗೆ, ವಠಾರಕ್ಕೆ ಕೊಂಡೊಯ್ದು ಮನೆಯಲ್ಲಿ ದೀಪ ಬೆಳಗಿಸಲಾಯಿತು. ಈ ಸಂದರ್ಭದಲ್ಲಿ ಸಾಮೂಹಿಕ ಭಜನೆ,ಗೋಪೂಜೆ, ಸಾಮರಸ್ಯದ ಸಂದೇಶ ಕುರಿತು ಉಪನ್ಯಾಸ ಮತ್ತು ಸಾಮೂಹಿಕ ಸಹಭೋಜನ ಏರ್ಪಡಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ ತಿಪ್ಪೇಸ್ವಾಮಿ ಮಾತನಾಡಿದರು.
ದೇವಳದ ನಂದಾ ದೀಪದಿಂದ ಬೆಳಗಿಸಲ್ಪಟ್ಟ ದೀಪಗಳನ್ನು ಸೇವಾಬಸ್ತಿಯ ಪ್ರಮುಖರಿಗೆ ದೇವಳದ ಪ್ರಧಾನ
ಅರ್ಚಕರು, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೇ.ಮೂ.ಎ.ಎಸ್. ಭಟ್ ಅವರು ಪ್ರದಾನ ಮಾಡಿದರು.
ಡಾ ಎಂ.ಕೆ.ಪ್ರಸಾದ್, ಡಾ.ದಯಾಕರ್ ಸುಳ್ಯ, ಡಾ.ಕೃಷ್ಣಪ್ರಸನ್ನ, ಪ್ರವೀಣ್ ಸರಳಾಯ, ಬಂಗಾರಡ್ಕ ವಿಶ್ವೇಶ್ವರ ಭಟ್, ಸುಬ್ರಾಯ ಪುಣಚ,ಮೂಲಚಂದ್ರ,ತಿರುಮಲೇಶ್ವರ ಭಟ್, ಶ್ರೀ ಮಹಾಲಿಂಗೇಶ್ವರ , ರವೀಂದ್ರ ಪಿ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಲ್ಲೇಗ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು,ಚಂದ್ರಶೇಖರ್ ರಾವ್ ಬಪ್ಪಳಿಗೆ, ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಜಿಲ್ಲಾ ಸಂತೋಷ್ ಬೋನಂತಾಯ,ಆರ್.ಸಿ.ನಾರಾಯಣ, ಸತೀಶ್ ರಾವ್, ರಾಮದಾಸ್ ಹಾರಾಡಿ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.