 
                ಉಪ್ಪಳ July 10: ಸೇವಭಾರತಿ ಮಂಜೇಶ್ವರ ಹಾಗೂ ಜಮುನಾ ಜನ ಸೇವಾ ಸಮಿತಿ (ರಿ) ಇದರ ಶ್ರೀ ನಿಧಿ ಪುರುಷರ ಸ್ವಸಹಾಯ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ಸಹಯೋಗದೊಂದಿಗೆ 07-07-2013 ರಂದು ಜೋಡುಕಲ್ಲು ತಪೋವನದಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಶ್ರೀರಾಮ ಮೂಡಿತ್ತಾಯ ಪಾಂಡ್ಯಡ್ಕ , ಕಯ್ಯಾರು ಇವರು ನೆರವೇರಿಸಿದರು. ಅಧ್ಯಕ್ಷ ಸ್ಥಾನವನ್ನು ಶ್ರೀ ಕೃಷ್ಣಪ್ಪ ಪೂಜಾರಿ ದೇರಂಬಳ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಜನಾರ್ದನ ಪ್ರತಾಪ್ ನಗರ ಉಪಸ್ಥಿತರಿದ್ದರು. ಕೆ ಎಂ ಸಿ ಆಸ್ಪತ್ರೆಯಾ ಡಾ॥ ರಾಹುಲ್ ಮೆನನ್ ರವರು ರಕ್ತದಾನ ಕುರಿತು ಮಾಹಿತಿ ನೀಡಿದರು. ಶ್ರೀ ನಿಧಿ ಸ್ವಸಹಾಯ ಸಂಘದ ಕಾರ್ಯದರ್ಶಿಯಾದ ಶ್ರೀ ಯತೀಶ್ ನಿರೂಪಿಸಿದರು. ಶೃ ದೀಪಕ್ ಸ್ವಾಗತಿಸಿ , ಶ್ರೀ ಶಶಾಂಕ್ ಧನ್ಯವಾದ ಸಮರ್ಪಿಸಿದರು. ಶಿಬಿರದಲ್ಲಿ ಒಟ್ಟು 60 ಮಂದಿ ರಕ್ತದಾನವನ್ನು ಮಾಡಿದರು.



 
                                                         
                                                         
                                                         
                                                         
                                                        