ಉತ್ಥಾನ ಮಾಸಪತ್ರಿಕೆಯಿಂದ ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯದ ಕುರಿತು ಸಕಾರಾತ್ಮಕ, ಆದರ್ಶ ಚಿಂತನೆಯನ್ನು ಪ್ರಚೋದಿಸಲು ಕಾಲೇಜು ವಿದ್ಯಾರ್ಥಿಗಳಿಗಾಗಿ  ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

essay competition

ವಿಷಯ:   “ಡಾII ಕಲಾಂ ಚಿಂತನೆಯ ಬೆಳಕಿನಲ್ಲಿ ನನ್ನ ಭವಿಷ್ಯದ ದಾರಿ”

ಮೊದಲ ಬಹುಮಾನ: ರೂ. ೮,೦೦೦

ದ್ವಿತೀಯ ಬಹುಮಾನ: ರೂ. ೫,೦೦೦

ತೃತೀಯ ಬಹುಮಾನ: ರೂ. ೩,೦೦೦

ಎರಡು ಮೆಚ್ಚುಗೆ ಬಹುಮಾನಗಳು: ತಲಾ ರೂ. ೧,೦೦೦

ಸ್ಪರ್ಧೆಯ ನಿಯಮಗಳು:

ಪದವಿ ಮತ್ತು ಪದವಿಗೆ ಮೇಲ್ಪಟ್ಟ ವಿದ್ಯಾರ್ಥಿಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಸ್ಪರ್ಧೆಗೆ ಕಳುಹಿಸುವ ಪ್ರಬಂಧ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಎಲ್ಲಿಯೂ ಯಾವುದೇ ರೂಪದಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಪ್ರಬಂಧ ೧೫೦೦ ಪದಗಳನ್ನು ಮೀರಬಾರದು.

ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು ಕಾಲೇಜು-ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.

ಸ್ಪರ್ಧಿಗಳು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಪ್ರಬಂಧದ ಜೊತೆಯಲ್ಲಿ ಬರೆಯದೆ ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜೊತೆಗೆ ಸ್ಪರ್ಧಿಯ ಭಾವಚಿತ್ರವೂ ಇರಲಿ.

ನುಡಿ, ಬರಹ ಅಥವಾ ಯುನಿಕೋಡ್ ತಂತ್ರಾಂಶದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: utthana1965@gmail.com

ಬಹುಮಾನಿತ ಪ್ರಬಂಧವನ್ನು ಯಾವುದೇ ಸ್ವರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ’ಉತ್ಥಾನ’ ಕಾಯ್ದಿರಿಸಿಕೊಂಡಿದೆ.

ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.

ಪ್ರಬಂಧಗಳು ತಲಪಲು ಕೊನೆಯ ದಿನಾಂಕ: ಸೆಪ್ಟೆಂಬರ್ ೧೫, ೨೦೧೫

ವಿಳಾಸ:  ಸಂಪಾದಕರು, ಉತ್ಥಾನ’ ಪ್ರಬಂಧ ಸ್ಪರ್ಧೆ  ೨೦೧೫

ಕೇಶವ ಶಿಲ್ಪ’, ಕೆಂಪೇಗೌಡನಗರ, ಬೆಂಗಳೂರು – ೫೬೦ ೦೧೯

ದೂರವಾಣಿ: ೦೮೦ ೨೬೬೧೨೭೩೦/೩೧/೩೨

Leave a Reply

Your email address will not be published.

This site uses Akismet to reduce spam. Learn how your comment data is processed.