ಬೆಂಗಳೂರು: ಪ್ರಸ್ತುತ ಬರಹಗಾರರಿಗೆ ಅನೇಕ ಅವಕಾಶಗಳಿವೆ. ಪತ್ರಿಕೆ, ಟಿವಿ ಮತ್ತು ಸಾಮಾಜಿಕ ಜಾಲತಾಣಗಳೂ ಮಹತ್ವದ ಮಾಧ್ಯಮಗಳಾಗಿ ರೂಪುಗೊಂಡಿವೆ. ಯುವಕರು ಈ ಅವಕಾಶಗಳ ಸದ್ಬಳಕೆ ಮಾಡಿಕೊಂಡು ವೃತ್ತಿಯಾಗಿರಲಿ, ಪ್ರವೃತ್ತಿಯಿಂದಾಗಲಿ ಅಧ್ಯಯನಶೀಲ ಬರಹಗಳನ್ನು ನಿರಂತರವಾಗಿ ಬರೆಯಬೇಕು ಎಂದು ಸಂಯುಕ್ತ ಕರ್ನಾಟಕದ ಸಂಪಾದಕ ಮಹಾಬಲ ಸೀತಾಳಭಾವಿ ಹೇಳಿದರು.
ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ನ ಕೇಶವಶಿಲ್ಪ ಸಭಾಂಗಣದಲ್ಲಿ ಉತ್ಥಾನ ಮಾಸಪತ್ರಿಕೆ ‘ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ : ವಿಚಾರ, ವಿಶೇಷತೆ ಮತ್ತು ಕೊಡುಗೆಗಳು’ ವಿಷಯದ ಕುರಿತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ 2025ರ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪತ್ರಿಕೋದ್ಯಮದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದು ಬರುವ ವಿದ್ಯಾರ್ಥಿಗಳಿಗೆ ಪತ್ರಿಕಾರಂಗದ ಶೈಲಿ, ಸುದ್ದಿ ನಿರೂಪಣೆಯ ವಿಧ ಮುಂತಾದವುಗಳನ್ನು ಹೇಳಿಕೊಡಬಹುದು. ಆದರೆ ಪತ್ರಕರ್ತರಾಗಬೇಕೆಂದು ಬರುವವರಿಗೆ ಕನ್ನಡವನ್ನು ಯಾವ ಪತ್ರಿಕಾ ಕಛೇರಿಯೂ ಹೇಳಿಕೊಡಲಾಗದು. ಅವರ ಭಾಷಾ ತಜ್ಞತೆಯನ್ನು ಹೆಚ್ಚಿಸುವುದಕ್ಕೆ ಇಂತಹ ಸ್ಪರ್ಧೆಗಳು ಪೂರಕವಾಗಿರುತ್ತವೆ.
ಉತ್ಥಾನ ಮಾಸಪತ್ರಿಕೆ ಮಾಧ್ಯಮವಲಯದಲ್ಲೂ ಮೌಲ್ಯಕ್ಕಾಗಿ ಹೆಸರುವಾಸಿ. ಯುವಕರಿಗಾಗಿ ಆಯೋಜಿಸಿದ ಪ್ರಬಂಧ ಸ್ಪರ್ಧೆಯ ಮೂಲಕ ಮೌಲ್ಯಗಳನ್ನು ಉಳಿಸುವ ಅವಕಾಶವನ್ನು ಕಲ್ಪಿಸಿದೆ ಎಂದರು.



ಪತ್ರಿಕೋದ್ಯಮ ನಿರಂತರವಾಗಿ ಮತ್ತು ವೇಗವಾಗಿ ಬದಲಾವಣೆಯನ್ನು ಕಾಣುತ್ತಿರುವ ಕ್ಷೇತ್ರ. ಕೋವಿಡ್ ನಂತರ ಪತ್ರಿಕೆಗಳು ಕಾರ್ಯನಿರ್ವಹಿಸುವ ಶೈಲಿಯಲ್ಲಿ ಅತ್ಯಂತ ಹೆಚ್ಚು ಬದಲಾವಣೆಗಳಾದವು. ಇಂದು ಸಂಪೂರ್ಣವಾಗಿ ಮಾರುಕಟ್ಟೆ ಕೇಂದ್ರಿತವಾಗಿ ಪತ್ರಿಕೆಗಳು ನಡೆಯುತ್ತಿವೆ. ಆದರೆ ಉತ್ಥಾನ ಅದರ ಮೌಲ್ಯವನ್ನು ಹೇಳುವ ಗತಿಯನ್ನು ಮಾರುಕಟ್ಟೆಯ ಅಗತ್ಯಗಳಿಗಾಗಿ ಬದಲಾಯಿಸಿಲ್ಲ. ಉದಾತ್ತ ಜೀವನದ ಆದರ್ಶವನ್ನು ಸಾರುವ ಸಲಕರಣೆಯಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಹಿನ್ನೆಲೆಯಲ್ಲಿ ಅದರ ಕುರಿತಾದ ವಿಷಯವನ್ನು ಪ್ರಬಂಧ ಸ್ಪರ್ಧೆಗೆ ನೀಡಲಾಗಿತ್ತು. ಮಾತೃಭೂಮಿ, ಹಿಂದುತ್ವ, ಹಿಂದುರಾಷ್ಟ್ರ ಎಂಬ ಮೂರು ವಿಚಾರ ಆರೆಸ್ಸೆಸ್ ನ ವೈಚಾರಿಕ ಅಧಿಷ್ಠಾನ ಎಂದರು.
ಕಾರ್ಯಕರ್ತರ ಆಧಾರದ ಸಂಘಟನೆ, ಸಾಮೂಹಿಕ ಚಿಂತನೆ, ಅನುಶಾಸನ, ಅಖಿಲ ಭಾರತೀಯ ದೃಷ್ಟಿಕೋನ, ಆತ್ಮನಿರ್ಭರ ಸಂಘಟನಾತ್ಮಕ ವ್ಯವಸ್ಥೆ, ಅತಿವಿಶಿಷ್ಟವಾದ ಪ್ರಚಾರಕ ವ್ಯವಸ್ಥೆ, ಸರ್ವಸ್ಪರ್ಶಿ ತಲುಪುವಿಕೆ, ಸರ್ವವ್ಯಾಪಿ ಪಸರಿಸುವಿಕೆ, ತತ್ವಕೇಂದ್ರಿತ ಧ್ಯೇಯನಿಷ್ಠೆ ಮುಂತಾದವು ಸಂಘದ ಕಾರ್ಯಪದ್ಧತಿಯ ವಿಶೇಷತೆಗಳು ಎಂದು ನುಡಿದರು.

ಸಂಘದ ವಿಸ್ತಾರವಾದ ಪತ್ರಿಕಾವಲಯದ ಬಗ್ಗೆ ಮಾಹಿತಿ ನೀಡಿದ ಅವರು ವಿಕ್ರಮ, ಅಸೀಮಾ, ಉತ್ಥಾನ, ವಿದ್ಯಾರ್ಥಿಪಥ ಮುಂತಾದ ಪತ್ರಿಕೆಗಳಿಗೆ ನಿಯಮಿತವಾಗಿ ಬರೆಯಿರಿ ಎಂದು ಯುವಬರಹಗಾರರಿಗೆ ಆಹ್ವಾನನೀಡಿದರು. ಮಂಥನ ಮೊದಲಾದ ವೈಚಾರಿಕ ವೇದಿಕೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ವೈಚಾರಿಕ ಚಿಂತನೆಯ ವ್ಯಾಪ್ತಿ ಹೆಚ್ಚಿಸುತ್ತಾ, ಸಂಘದ ಕುರಿತು ಸದಾ ಅಧ್ಯಯನಶೀಲರಾಗಿ ಎಂದು ಕರೆನೀಡೀದರು.




ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ ನ ಖಜಾಂಚಿ ಕೆ.ಎಸ್.ನಾರಾಯಣ, ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು.



ಉತ್ಥಾನ ಪ್ರಬಂಧ ಸ್ಪರ್ಧೆ 2025 ವಿಜೇತರು:
