
Poet Sumatheendra Nadig
7 ಆಗಸ್ಟ್ 2018, ಬೆಂಗಳೂರು: ಕನ್ನಡ ಸಾರಸ್ವತ ಲೋಕಕ್ಕೆ ಸುಮತೀಂದ್ರ ನಾಡಿಗರ ಕೊಡುಗೆ ಅಪಾರವಾಗಿತ್ತು. ನವ್ಯ ಸಾಹಿತ್ಯದ ಹರಿಕಾರ, ಕವಿ, ಸಾಹಿತಿ, ವಿದ್ವಾಂಸರಾದ ನಾಡಿಗರ ಮರಣದಿಂದ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸೋಣ ಎಂದು ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನೊಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ಆರೆಸ್ಸೆಸ್ ಸಂಘಚಾಲಕರಾದ ಶ್ರೀ ವಿ ನಾಗರಾಜ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
