

ವಿಜಯದಶಮಿಯನ್ನು ಇಡೀ ಸಮಾಜ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದ್ದು, ಶಕ್ತಿ ಮತ್ತು ನವದುರ್ಗೆಯರ ಆರಾಧನೆಯ ಉತ್ಸವವಾಗಿದೆ ಎಂದು ಸೇವಾ ಭಾರತಿ ಕೊಡಗು ಜಿಲ್ಲಾಧ್ಯಕ್ಷರಾದ ಟಿ.ಸಿ.ಚಂದ್ರನ್ ಹೇಳಿದರು.
ಮಡಿಕೇರಿ ಗ್ರಾಮಾಂತರ ತಾಲೂಕಿನ ಮರಗೋಡು ಮಂಡಲದ ವಿಜಯದಶಮಿ ಉತ್ಸವದಲ್ಲಿ ಬೌದ್ಧಿಕ್ ಮಾಡಿದರು.
ದೇಶವನ್ನು ಪರಮ ವೈಭವದ ಕಡೆಗೆ ಕೊಂಡೊಯ್ಯುವುದು ಸಂಘದ ಮೊದಲ ಆಧ್ಯತೆಯಾಗಿದ್ದು, ತಾಯಿ ಭಾರತಿಯ ಸೇವೆಗೆ ಸಂಘದ ಸ್ವಯಂಸೇವಕರು ತನು,ಮನ,ಧನದ ಮೂಲಕ ತಮ್ಮ ಜೀವನವನ್ನು ಸಮರ್ಪಣೆ ಮಾಡುತ್ತಾರೆ. ಸಂಘದ ಸ್ವಯಂಸೇವಕರಿಗೆ ಸಮಾಜದ ಹೊಣೆಗಾರಿಕೆಯಿದ್ದು, ಸಂಘ ಅಥವಾ ಹಿಂದುತ್ವದ ಶಕ್ತಿ ಅಸುರೀ ಶಕ್ತಿಯಲ್ಲ, ಬದಲಾಗಿ ದೈವೀ ಶಕ್ತಿಯಾಗಿದೆ ಎಂದರು.

ಸಂಘ ಇವತ್ತು ಗ್ರಾಮ ವಿಕಾಸದ ಮೂಲಕ ಗ್ರಾಮದ ಅಭ್ಯುದಯ, ಕೌಟುಂಬಿಕ ಪದ್ಧತಿಯನ್ನು ಉಳಿಸುವ ನಿಟ್ಟಿನಲ್ಲಿ ಕುಟುಂಬ ಪ್ರಭೋದನ್, ಗೋ ಸೇವೆ ಮೂಲಕ ಸಮಾಜದ ಪರಿವರ್ತನೆಯ ಕಾರ್ಯ ಮಾಡುತ್ತಿದೆ. ಸಂಘವು 96 ವರ್ಷಗಳ ನಿರಂತರ ಸೇವೆಯಿಂದ ಇಡೀ ವಿಶ್ವದಲ್ಲೇ ದೇಶಕ್ಕೆ ಗೌರವ ಸಿಗುತ್ತಿದೆ ಎಂದರು.
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕರಾದ ಚಕ್ಕೇರ ಮನು ಕಾವೇರಪ್ಪ ಇದ್ದರು.
ಇದಕ್ಕೂ ಮೊದಲು ಅರೆಕಾಡು ಗ್ರಾಮದಿಂದ ಮರಗೋಡು ತನಕ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ನಡೆಯಿತು.
ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಹಕಾರ್ಯವಾಹರಾದ ಕುಟ್ಟಂಡ ಮಿರನ್ ಕಾವೇರಪ್ಪ, ಜಿಲ್ಲಾ ಸಹಶಾರಿರಿಕ್ ಪ್ರಮುಖ್ ಶ್ರೀ ಅಯ್ಯಪ್ಪ, ಬಿಜೆಪಿ ಮಡಿಕೇರಿ ತಾಲೂಕು ಅಧ್ಯಕ್ಷರಾದ ಕಾಂಗೀರ ಸತೀಶ್, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಪ್ರಚಾರ ಪ್ರಮುಖ್ ಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ಮಗೇರನ ಬೆಳ್ಯಪ್ಪ, ಪ್ರಮುಖರಾದ ಪ್ರದೀಪ್, ಅರುಣ್, ಚಿದಂಬರ, ಕಾರ್ತಿಕ್, ಶಿವರಾಜ್ ಹಾಗೂ ಇನ್ನಿತರರು ಇದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಪ್ರಚಾರ ಪ್ರಮುಖ್ ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
