Kasaragodu February, 2016: RSS Kasaragod revenue districts VIJAYADHWANI Ghosh Sanchalan was held on Sunday evening in a most spectacular way in which more than one thouand Swayamsevaks marched with pride at streets of Nileshwara, Kasaragod.  Valsan Thillangeri, RSS Kerala Pranth Karyakarini Sadasya addressed the gathering.

12742584_1094519000568961_1110038799041323716_n

10420396_1094518863902308_430754034103941318_n 12705790_1094518027235725_7252782962527357449_n (1) 12717514_1094518720568989_3527770956887321341_n 12717744_1094517977235730_752143142104576383_n

ಕಾಸರಗೋಡು  ಫೆಬ್ರವರಿ 14, 2016 : ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ  ಫೆಬ್ರವರಿ 14, 2016  ರಂದು ಕಾಸರಗೋಡು ಜಿಲ್ಲೆಯ ನೀ:ೇಶ್ವರದಲ್ಲಿ “ವಿಜಯಧ್ವನಿ” ಘೋಷ್ ಪಥ ಸಂಚಲನ  ನಡೆಯಿತು.ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಾಂತ ಕಾರ್ಯಕಾರಿಣಿ ಸದಸ್ಯ ವಲ್ಸನ್ ತಿಲ್ಲಂಗೇರಿ ಇಂದು ಸಂಘದ ಘೋಷ್ ಸಂಚಕನ ಹಾಗೂ ಘೋಷ್  ಪ್ರದರ್ಶನ ನಡೆದಿದೆ. ಸಂಘ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಕಾರ್ಯವಿಸ್ತಾರ ಮಾಡಿದೆ.ಅದೇ ರೀತಿ ಘೋಷ್ ನಲ್ಲೂ ತನ್ನದೇ ಆದ ಛಾಪನ್ನು ಬೀರಿದೆ.ಹಿಂದೆ ವಿದೇಶೀ ಸಂಗೀತದ ಉಪಯೋಗ ಆಗುತ್ತಿತ್ತು. ಆದರೆ ಸಂಘ ಭಾರತೀಯ ಸಂಗೀತವನ್ನು ಘೋಷ್ ನಲ್ಲಿ ಅಳವಡಿಸಿದೆ.ವೇದ ಕಾಲದಲ್ಲೂ ಘೋಷ್ ನ ಉಪಯೋಗ ಮಾಡುತ್ತಿದ್ದ ಉಲ್ಲೇಖ ಇದೆ. ದೇವರನ್ನು ಆರಾಧಿಸಲು ಕೂಡ ಸಂಗೀತವನ್ನು ಉಪಯೋಗಿಸುತ್ತಿದ್ದರು. ಭಾವ, ರಾಗ ಹಾಗೂ ತಾಳಗಳ ಸಮ್ಮಿಲನವೇ ಭಾರತ. ಭಾರತವನ್ನು ಇಂದು ಜಗತ್ತೇ ಒಪ್ಪಕೊಳ್ಳುತ್ತಿದೆ.ಭಾರತದ ಯೋಗವನ್ನು ಇಡೀ ವಿಶ್ವವೇ ಒಪ್ಪಕೊಂಡಿದೆ.ಎಲ್ಲಾ ಸಮಸ್ಯೆಗಳಿಗೆ ಇಂದು ಪರಿಹಾರವನ್ನು ಭಾರತದಿದಂದ ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಅವರು ಮಾತನಾಡುತ್ತಾ ಈ ದೇಶದಲ್ಲಿ ಎರಡು ರೀತಿಯ ಶಕ್ತಿಗಳು ಕೆಲಸ ಮಾಡುತ್ತಿದ್ದು ದೇಶ ಹಿತಕ್ಕಾಗಿಯೇ ಒಂದು ವಿಭಾಗ ಕೆಲಸ ಮಾಡುತ್ತಿದ್ದು ಇನ್ನೊಂದು ವಿಭಾಗ ದೇಶದ ಸವಲತ್ತನ್ನು ಪಡೆದು ದೇಶವಿರೋಧಿ ಕೃತ್ಯವನ್ನು ನಡೆಸುತ್ತಿದೆ.ಆದರೂ ಎದುರಾಳಿಗಳು ದುರ್ಬಲಾಗುತ್ತಿದ್ದಾರೆ ಅವರ ಹತಾಶೆಯಿಂದ ಇದು ತಿಳಿಯುತ್ತದೆ.ವಿಜಯಕ್ಕಾಗಿ ಹೋರಾಟವನ್ನು ನಾವು ನಡೆಸಬೇಕಾಗಿದೆ.ಆ ಹೋರಾಟದ ಧ್ವನಿ ಇಂದಿನ ವಿಜಯಧ್ವನಿಯ ಮೂಲಕ ಮೊಳಗಲಿ ಎಂದು ಹೇಳಿದರು.

ಸಮಾರಂಭದ ಮೊದಲು ನೀಲೇಶ್ವರ ನಗರದಲ್ಲಿ  ಅಕರ್ಷಕವಾದ ಘೋಷ್ ಪಥಸಂಚಲನ ನಡೆಯಿತು. ಸಂಚಲನದುದ್ದಕ್ಕೂ ಸುಮಾರು ಸಾವಿರಕ್ಕೂ ಸಂಘದ ಹಿತೈಷಿಗಳು, ಮಾತಾ ಭಗಿನಿಯರಿಂದ ಭಗಧಗವಾಜಕ್ಕೆ ಪುಷ್ಪಾರ್ಚನೆ ಮೂಲಕ  ಭವ್ಯ ಸ್ವಾಗತ ದೊರೆಯಿತು.ಪಥಸಂಚನಲದ ನಂತರ ಆಕರ್ಷಕ ಘೋಷ್ ಪರ್ದರ್ಶನ ನಡೆಯಿತು.ವಿಜಯಧ್ವನಿ ಕೇರಳ ಹಾಗೂ ಕರ್ನಾಟಕದ ಸರ್ಕಾರಿ ಗಡಿ ಜಿಲ್ಲೆಗಳನ್ನೊಳಗೊಂಡ 8 ತಾಲೂಕುಗಳ ಕೇವಲ ಘೋಷ್ ವಾದಕರ ಈ   ಪಥ ಸಂಚಲನದಲ್ಲಿ ಭಾಗವಹಿಸಿದ್ದರು.ಇದಕ್ಕೆ ಸಂಘದ  ಕಾಂಞಂಗಾಡ್ ಜಿಲ್ಲೆಯ ಹೊಸದುರ್ಗ, ನೀಲೇಶ್ವರ, ಪನತ್ತಾಡಿ ಹಾಗೂ ಉದುಮ ತಾಲೂಕು. ಮಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜೇಶ್ವರ, ಬದಿಯಡ್ಕ, ಕಾಸರಗೋಡು ನಗರ, ಕಾಸರಗೋಡು  ಗ್ರಾಮಾಂತರ ಭಾಗದ 33 ಘೋಷ್  ಕೇಂದ್ರಗಳಿಂದ ಸುಮಾರು 1000 ಕ್ಕೂ ಹೆಚ್ಚಿನ ಘೋಷ್ ವಾದಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಘಚಾಲಕ್ ಮಾನನೀಯ ಟಿ.ಗೋಪಾಲಕೃಷ್ಣನ್ ಮಾಸ್ಟರ್ ಅವರು ವಹಿಸಿದ್ದರು. ಮಂಗಳೂರು ವಿಭಾಗ ಸಹ ಕಾರ್ಯವಾಹ ಶ್ರೀ ಜನಾರ್ಧನ ಪ್ರತಾಪನಗರ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿಂದೂ ಸಮಾಜಕ್ಕೆ ಗೆಲುವಿನ ವಿಶ್ವಾಸವನ್ನು ಮೂಡಿಸಿ, ಸದೃಢಗೊಳಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.