VIKRAMA 1948-2013

Article by Du Gu Lakshman

VIKRAMA 1948-2013
VIKRAMA 1948-2013

‘ವಿಕ್ರಮ ವಿಕ್ರಮ’

ರಾಷ್ಟ್ರೀಯ ವಾರಪತ್ರಿಕೆ

“ಕೇವಲ ಎರಡಾಣೆ”

ಇದ್ದಕ್ಕಿದ್ದಂತೆ ಒಂದು ಸಂಜೆ ಬೆಂಗಳೂರಿನ ಬೀದಿಗಳಲ್ಲಿ, ರೈಲು-ಬಸ್ ನಿಲ್ದಾಣಗಳಲ್ಲಿ ಕೇಳಿಬಂದ ಶಬ್ದಗಳು ಇವು. ಆಗ ಪತ್ರಿಕೆಯ ಹೆಸರು ಹೊಸದು.

ಮಾರುತ್ತಿದ್ದವರ ಮುಖ-ಸ್ವರ ಸಹ ಹೊಸದು. ಅವರೆಲ್ಲ ವಿದ್ಯಾವಂತರು. ಉತ್ಸಾಹೀ ಯುವಕರು ಮತ್ತು ಕಿಶೋರರು. ನೋಡಿದವರಿಗೆ ಅಚ್ಚರಿ. ಕೊಂಡವರಿಗೆ

ಓದುವ ಆತುರ. ಹಾದಿಗರು ನಿಂತಲ್ಲೇ ಓದುಗರಾದರು. ಅವರ ನೆರವಿಗೆಂದು ಬೀದಿಯ ದೀಪದ ಜೊತೆಗೆ ಬೆಳದಿಂಗಳೂ ಧಾವಿಸಿ ಬಂತು.

ಅಂದು ಶಾ. ಶಖೆ ೧೮೭೧ರ ಶ್ರಾವಣ ಹುಣ್ಣಿಮೆ.

೨೨-೭-೧೯೪೮ ಗುರುವಾರ

ವ್ಯಾಸಪೂರ್ಣಿಮೆಯ-ಗುರುವು ಶಿಷ್ಯರಿಗೆ ಜ್ಞಾನ-ಬೋಧನೆ ಆರಂಭಿಸುವ ಗುರು ಪೂರ್ಣಿಮೆಯ – ಶುಭದಿನ.

ಆಸ್ತಿ-ಸ್ಥೈರ್ಯ, ಸ್ಪೂರ್ತಿ !

ಪತ್ರಿಕೆಯ ಕಾರ್ಯಾಲಯಕ್ಕೆ ಎಷ್ಟು ಮಹಲುಗಳು? ಆರಂಭೋತ್ಸವಕ್ಕೆ ಯಾವ ಯಾವ ಸಚಿವ ಮಾನ್ಯರ ಭಾಷಣಗಳು? ಯಾವ ಯಾವ ಗುರುಹಿರಿಯರ

ಹರಕೆಗಳು? ಎಷ್ಟೆಷ್ಟು ಬಂಡವಾಳ-ಜಾಹೀರಾತುಗಳ ಆಶ್ವಾಸನೆಗಳು?

ಉತ್ತರ ನಾಸ್ತಿ. ಇನ್ನೇನಿತ್ತು ಪತ್ರಿಕೆಗೆ ಆಸ್ತಿಪಾಸ್ತಿ?

ಕೆಲವಾರು ಎಳೆಹರಯದ ತರುಣರು; ಅವರ ಸಂಕಲ್ಪ ಬಲ; ನ್ಯಾಯಕ್ಕೆ ಬಾಯಿ ತಂದುಕೊಡಬೇಕೆಂಬ ಅವರ ಛಲ; ಅವರ ಹೃದಯದಲ್ಲಿ ಬೆಳೆದು ನಿಂತಿದ್ದ

ಸ್ಫೂರ್ತಿ-ಸ್ಥೈರ್ಯಗಳ ಅಚಲ ಹೈಮಾಚಲ!

ಅವರು ಪದವೀಧರರು, ಪ್ರತಿಭಾವಂತರು. ಆದರೆ ನೌಕರಿ-ಸಂಬಳ ಬೇಡವೆಂದವರು ಮನೆ-ಮಠ ತೊರೆದವರು. ಸುಖವಿಲಾಸ ಒದ್ದವರು.

ಊಟ-ತಿಂಡಿ-ನಿದ್ರೆಗಳ ಪರಿವೆ ಬಿಟ್ಟವರು. ನ್ಯಾಯಕ್ಕಾಗಿ ಹೋರಾಡುವ ಶಪಥ ತೊಟ್ಟವರು. ಅನ್ಯಾಯದ ವಿರುದಟಛಿ ಗರ್ಜಿಸುವ ವೀರಕಂಕಣ ಕಟ್ಟಿದವರು.

ಅದಕ್ಕೆ ಕಾರಣ ಅಂದಿನ ಪರಿಸ್ಥಿತಿಯ ಆಹ್ವಾನ. ಪ್ರಜಾತಂತ್ರದ ಸತ್ಸಂಪ್ರದಾಯಗಳನ್ನು ತುಳಿದು ಅಡ್ಡದಾರಿ ಹಿಡಿಯುತ್ತಿದ್ದ ಸನ್ನಿವೇಶದ ಕರೆ.

ಸಂಘ-ದೇಶದ ಆಶಾಕೇಂದ್ರ

ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿ ಕೆಲವೇ ತಿಂಗಳುಗಳಾಗಿದ್ದವು. ಹೋಗುವ ಸಮಯದಲ್ಲಿ ಅವರು ದೇಶವನ್ನು ಹೋಳುಮಾಡಿ ಕಾಂಗ್ರೆಸಿಗೆ ಅಧಿಕಾರ ಒಪ್ಪಿಸಿದ್ದರು. ಆಗ ಇಳಿವಯಸ್ಸಿನಲ್ಲಿದ್ದ ನಮ್ಮ ನಾಯಕರಿಗೆ, ತಮ್ಮ ತ್ಯಾಗಕ್ಕೆ ಬೇಗ ಪ್ರತಿಫಲ ಸಿಕ್ಕಿ ಬಿಡಬೇಕೆಂಬ ಆತುರ. ಆದರೆ ದೇಶದ ತುಂಬ ಅಶಾಂತಿ. ವಿಭಜನೆಯ ಪರಿಣಾಮವಾಗಿ ಘೋರ ಹಿಂಸಾಚಾರ; ಗಡಿಯುದ್ದಕ್ಕೂ ಹಾಹಾಕಾರ; ನಿರಾಶ್ರಿತರ ಪರದಾಟ. ದೇಶ ಒಡೆದು ಹೋಗಿ ನಾಯಕರ ಬಣ್ಣ ಬದಲಾಯಿತು. ಸ್ವಾರ್ಥಿ ಮುಖಂಡರು ಅಭಿಪ್ರಾಯ ಭೇದ ಒಲ್ಲದಾದರು; ಟೀಕೆ-ಟಿಪ್ಪಣಿ ಸಹಿಸದಾದರು. ಹಿಂದುಗಳಿಗೆ ದೇಶ ವಿಭಜನೆ ಅನಿರೀಕ್ಷಿತ ಸಿಡಿಲಾಘಾತದಂತಿತ್ತು. ಸರ‍್ಕಾರಿ ಮುಖಂಡರ ಕೈಯಲ್ಲಿ ತಮ್ಮ ವಿತ್ತ-ಪ್ರಾಣಗಳಾಗಲೀ ದೇಶವಾಗಲೀ ಸುರಕ್ಷಿತವಾಗಿ ಉಳಿಯಲಾರದೆಂದು ಹಿಂದುಗಳು ಭಾವಿಸಿದರು. ಹಿಂದು ಸಮಾಜದ ಸಂಘಟನೆಗಾಗಿಯೇ ಮೈ ತಾಳಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಆ ವೇಳೆಗೆ ಜನಾದರಣೆ ಪಡೆದಿತ್ತು. ನಿರಾಶ್ರಿತರ ರಕ್ಷಣೆಗೆ ಧಾವಿಸಿ ಮುಂದಾಗಿತ್ತು; ದೇಶದ ಆಶಾಕೇಂದ್ರ ಆಗಿತ್ತು. ಇಡೀ ಹಿಂದು ಸಮಾಜ ಸಂಘದ ಮೂಲಕ ಜಾಗೃತಗೊಂಡು ಸಂಘಟಿತವಾಗತೊಡಗಿತ್ತು.

ಮೊಳೆಯುತ್ತಿದ್ದ ಒಳಸಂಚು

ಇದನ್ನು ಕಂಡು ರಾಷ್ಟ್ರವಿರೋಧಿ ಶಕ್ತಿಗಳಿಗೆ ಗಾಬರಿ. ಇಲ್ಲಿನ ಆಂಗ್ಲ- ಮುಸ್ಲಿಂ- ಕಮ್ಯುನಿಸ್ಟ್ ತ್ರಿಕೂಟಕ್ಕೆ, ಇನ್ನು ತಮ್ಮ ದೇಶಘಾತಕ ಕೃತ್ಯಗಳಿಗೆ ಆಸ್ಪದ ತಪ್ಪಿ ಹೋದೀತೆಂಬ ಚಿಂತೆ. ಸಂಘವು ಜನಮನದಲ್ಲಿ ಅರಳಿಸುತ್ತಿದ್ದ ಪ್ರಖರ ರಾಷ್ಟ್ರೀಯ ಭಾವನೆ ಅವರಿಗೆ ಸಿಂಹ ಸ್ವಪ್ನವಿದ್ದಂತೆ. ಹೀಗಾಗಿ ಅವರು ಕಾಂಗ್ರೆಸಿನ ತಲೆಕೆಡಿಸಲು ಸಂಚು ಹೂಡಿದರು. ಸಂಘ ಪ್ರಬಲವಾದರೆ ಅಧಿಕಾರವು ಕಾಂಗ್ರೆಸಿನ ಕೈಬಿಟ್ಟು ಹೋಗುವುದೆಂದು ಪ್ರಚಾರ ಮಾಡಿದರು. ಮನಸಾರೆ ಅಧಿಕಾರದ ಸುಖ ಅನುಭವಿಸಬೇಕೆಂದಿದ್ದ ನಾಯಕರಿಗೆ ದಿಗಿಲಾಯಿತು. ಸಂಘಕ್ಕೂ ರಾಜಕೀಯಕ್ಕೂ ಬಲು ದೂರ, ಸಂಘದ ಗುರಿ ಅಧಿಕಾರ ಪಡೆಯುವುದಲ್ಲ, ಎಂಬುದನ್ನು ಆಡಳಿತಗಾರರು ಗ್ರಹಿಸಲು ಅಸಮರ್ಥರಾಗಿದ್ದರು. ಗದ್ದುಗೆ ಏರಿದ ದೇವೇಂದ್ರನಿಗೆ ಋಷಿಗಳ ಭಯವಂತೆ! ಅವರೆಲ್ಲಿ ತಮ್ಮ ತಪಸ್ಸಿನ ಪ್ರಭಾವದಿಂದ ತನ್ನ ಸಿಂಹಾಸನ ಕಿತ್ತುಕೊಳ್ಳುತ್ತಾರೋ ಎಂಬ ಚಿಂತೆ! ಲೋಕಹಿತದ ಉದ್ದೇಶದಿಂದಲಾದರೂ ತಪಸ್ಸು ಮಾಡುತ್ತಿರಲಿ, ಅದನ್ನು ಕೆಡಿಸುವುದೇ ಅವನ ಮುಖ್ಯ ಉದ್ಯೋಗ. ಹಾಗಾಯಿತು ಕಾಂಗೆಸಿನ ಸ್ಥಿತಿ. ರಾಷ್ಟ್ರವಿರೋಧಿ ಶಕ್ತಿಗಳ ಒಳಸಂಚು ಫಲಿಸಿತು. ಸಂಘದ ಮೇಲೆ ನಿರ್ಬಂಧ ಹೇರಲು ೧೯೪೭ರ ನವೆಂಬರ್‌ನಲ್ಲಿಯೇ ಸರಕಾರದ ನಾಯಕರು ಆಲೋಚಿಸಿದರು.

ಆದರೆ ಇಡೀ ದೇಶದ ಜನತೆ ಸಂಘಕ್ಕೆ ಬೆಂಬಲವಾಗಿತ್ತು. ವಿಭಜನೆಯ ಪರಿಣಾಮವಾಗಿ ಕಾಂಗ್ರೆಸ್ಸು ಜನರಿಗೆ ಮುಖ ತೋರಿಸುವ ಸ್ಥಿತಿಯಲ್ಲಿರಲಿಲ್ಲ. ಹಿಂದು ಸಮಾಜವು ಸರಕಾರದ ಸ್ವೇಚ್ಛಾಚಾರವನ್ನು ನಡೆಯಗೊಡುತ್ತಿರಲಿಲ್ಲ. ಆದ್ದರಿಂದ ಸಂಘದ ಮೇಲೆ ಕಿರುಬೆರಳೆತ್ತುವುದಕ್ಕೂ ಕಾಂಗ್ರೆಸಿಗೆ ಆಗ ಧೈರ್ಯವಾಗಲಿಲ್ಲ.

ನಗ್ನ ತಾನಾಶಾಹಿ

ಅಷ್ಟರಲ್ಲಿ ಇದ್ದಕ್ಕಿದ್ದಂತೆ ೧೯೪೮ ಜನವರಿ ೩೦ರಂದು ಮಹಾತ್ಮಾ ಗಾಂಧಿಯವರ ದಾರುಣ ಹತ್ಯೆ ಆಯಿತು. ಹಿಂದುವಿರೋಧಿ ಶಕ್ತಿಗಳಿಗೆ ಆನಂದವಾಯಿತು. ಎಜಿqಛಿ ಠಿeಛಿ bಟಜ Z ಚಿZb Zಞಛಿ Zb eZಜ ಜಿಠಿ ಎಂಬಂತೆ, ಸಂಘವನ್ನು ತೊಡೆದು ಹಾಕಲು ಇದೇ ಸುಸಂದರ್ಭ ಎನಿಸಿತು. ಕಾಂಗ್ರೆಸಿನೊಳಗಿದ್ದ ಸ್ವಾರ್ಥಿಗಳೂ ಇಂಥದೊಂದು ಅವಕಾಶ ಸಿಕ್ಕೀತೆ ಎಂದು ಕಾದು ಕುಳಿತಿದ್ದರು. ಕೊಲೆಯ ಆಪಾದನೆಯನ್ನು ಸಂಘದ ಮೇಲೆ ಹೊರಿಸಿದರು. ಹಿಂದುಗಳ ಹಿತ ಸಾಧಿಸಲು ಹೊರಟಿದ್ದ ಎಲ್ಲರ ಮೇಲೆ-ಅದರಲ್ಲೂ ಸಂಘದ ಮೇಲೆ – ದ್ವೇಷ-ಹಿಂಸೆಗಳ ಕಿಚ್ಚು ಹಬ್ಬಿಸಿದರು. ಏಕಮುಖವಾದ ಸುಳ್ಳು ಪ್ರಚಾರ, ಪೊಲೀಸರ ದಾಳಿ, ಹಿಂಸಾಚಾರ, ೨೦ ಸಾವಿರಕ್ಕೂ ಹೆಚ್ಚು ನಿರಪರಾಧಿಗಳ ಬಂಧನ ಎಲ್ಲವೂ ನಡೆಯಿತು. ವಿಚಾರಣೆಯೇ ಇಲ್ಲದೆ ಅವರೆಲ್ಲ ಸೆರೆಯಲ್ಲೆ ಕೊಳೆಯುವಂತಾಯಿತು.

ಸಂಘವನ್ನು ನಿರ್ಬಂಧಿಸಲಾಯಿತು. ನಿರ್ಬಂಧಕ್ಕೆ ಮೊದಲೇ, (ಇಂದು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯಿಂದ ಮೊದಲ್ಗೊಂಡು ಶ್ರೀಸಾಮಾನ್ಯನವರೆಗೆ ಎಲ್ಲರೂ ಶ್ರೇಷ್ಠ ವ್ಯಕ್ತಿಯೆಂದು ಗೌರವಿಸುತ್ತಿರುವ) ಸಂಘದ ನಾಯಕರಾದ ಪೂಜನೀಯ ಶ್ರೀ ಗುರೂಜಿಯವರ ಮೇಲೆ ಕೊಲೆಯ ಆರೋಪ ಹೊರಿಸಿ, ಸೆರೆಮನೆಗೆ ದೂಡಲಾಗಿತ್ತು. ಸರಕಾರದ ಅನ್ಯಾಯದ ವಿರುದಟಛಿ ಯಾರೂ ಸೊಲ್ಲೆತ್ತದಂತೆ ಕರಾಳ ದಮನಚಕ್ರ ಉರುಳಿತು. ಎಲ್ಲೆಲ್ಲೂ ಭಯದ್ದೇ ವಾತಾವರಣ.

ಸತ್ಯ, ಅಹಿಂಸೆಗಳ ಹೆಸರಿನಲ್ಲಿ ಅಸತ್ಯ, ಹಿಂಸಾಚಾರ ಅನ್ಯಾಯ ದಬ್ಬಾಳಿಕೆಗಳು ಮೆರೆಯತೊಡಗಿದವು.

ಸಂಘದ ಮೇಲಿನ ನಿರ್ಬಂಧ ಸರ್ವಸಾಧಾರಣ ಸಂಗತಿ ಆಗಿರಲಿಲ್ಲ. ಜನರ ಸಂಘಟನಾ ಸ್ವಾತಂತ್ರ್ಯದ ಮೇಲಿನ ಆಘಾತ ಅದಾಗಿತ್ತು. ಸ್ವತಂತ್ರ ರಾಷ್ಟ್ರಜೀವನದ

ಜೀವಾಳದಂತಿರುವ ವ್ಯಕ್ತಿ ಸ್ವಾತಂತ್ರ್ಯ ಮತ್ತು ವಿಚಾರ ಸ್ವಾತಂತ್ರ್ಯಗಳ ಮೇಲಿನ ಆಘಾತವಾಗಿತ್ತು. ಅದಕ್ಕೂ ಮಿಗಿಲಾಗಿ, ಸ್ವಾತಂತ್ರ್ಯದ ಶೈಶವದಲ್ಲೇ

ಆಡಳಿತಗಾರರು ಅಧಿಕಾರ ಬಲದಿಂದ ಅನುಸರಿಸುತ್ತಿದ್ದ ತಾನಾಶಾಹಿ ದೇಶಕ್ಕೆ ಗಂಡಾಂತರಕಾರಿಯಾಗಿತ್ತು; ಸ್ವರಾಜ್ಯದ ಆರೋಗ್ಯಕರ ಬೆಳವಣಿಗೆಗೆ ಅವಲಕ್ಷಣ

ಹಾಗೂ ಅನಿಷ್ಟಕರವೆನಿಸಿತ್ತು. ವ್ಯತ್ಯಾಸ ಆಗಿದ್ದುದೆಂದರೆ ಬಿಳಿ ಚರ್ಮದವರ ಜಾಗಕ್ಕೆ ನಮ್ಮವರು ಬಂದಿದ್ದರು, ಅಷ್ಟೆ. ಆದರೆ ಆ ಭಯಭೀತ ಸ್ಥಿತಿಯಲ್ಲಿ ಅವರ

ವಿರುದಟಛಿ ಯಾರೂ ಉಸಿರೆತ್ತರು. ಪತ್ರಿಕೆಗಳ ಬಾಯಿ ಸಹ ಕಟ್ಟಲಾಗಿತ್ತು. ಸರಕಾರದ ಒಳಸಂಚು ಬಯಲಿಗೆಳೆದರೆ ತಮ್ಮ ಗತಿ ಏನಾದೀತೋ ಎಂಬ ಆತಂಕ ಅವಕ್ಕೆ.

ಬ್ರಿಟಿಷರ ಕಾಲದಲ್ಲಿ ಪವಿತ್ರ ವ್ಯಕ್ತಿ ಸ್ವಾತಂತ್ರ್ಯದ ಘೋಷಣೆ ಮೊಳಗಿಸಿದವರೇ ಇಂದು ಅದನ್ನು ತಮ್ಮ ಕಾಲ ಕೆಳಗೆ ಹಾಕಿ ತುಳಿದಿದ್ದರು. ಗಾಂಧೀಜಿಯವರೊಟ್ಟಿಗೆ

ಅವರು ಬೋಧಿಸಿದ ಸತ್ಯ-ನ್ಯಾಯ ಅಹಿಂಸೆಗಳೂ ಸಮಾಧಿ ಸೇರಿದ್ದವು.

ಅಭಿನವ ಕೃಷ್ಣಾವತಾರ

ಕರ್ನಾಟಕದ ರಾಜಧಾನಿಯಿಂದ ಆಗೊಂದು ಒಂಟಿ ಧ್ವನಿ ಎದ್ದಿತು. ಬ್ರಹ್ಮಗಿರಿಯಿಂದ ಹೊಮ್ಮುವ ಕಾವೇರಿಯಂತೆ ಸಣ್ಣದಾಗಿ ಅದು ಹೊರಸೂಸಿತು. ಯಾವ

ಧ್ವನಿ ಅದು? ಪರಕೀಯ ಗುಲಾಮಗಿರಿಯನ್ನು ಕಿತ್ತೊಗೆದ ಈ ಭೂಮಿ ಅಸತ್ಯ ಅನ್ಯಾಯಗಳನ್ನು ಸಹಿಸದು ಎನ್ನುವ ಧ್ವನಿ. ದಬ್ಬಾಳಿಕೆಯನ್ನು ಪ್ರತಿಭಟಿಸುವ

ಅಪ್ರತಿಹತ ಧ್ವನಿ. ಬರಬರುತ್ತಾ ಅದೊಂದು ಸಿಂಹಗರ್ಜನೆ ಆಯಿತು. ತರುಣ ಹೃದಯಿಗಳಿಗೆ ಪ್ರತಿಜ್ಞೆ ಆಯಿತು; ಹೋರಾಟದ ವೀರಕಂಕಣ ಆಯಿತು.

ಕಂಸ ಶಾಸನದಲ್ಲಿ ಕಾರಾಗೃಹದ ಕತ್ತಲಿನಲ್ಲಿ ಶ್ರೀಕೃಷ್ಣ ಜನ್ಮತಾಳಿದಂತೆ, ಅಂದಿನ ಉಸಿರು ಕಟ್ಟಿಸುವ ಪರಿಸ್ಥಿತಿಯನ್ನು ಸೀಳಿಕೊಂಡು ಕಾಲಗರ್ಭದಿಂದ ‘ವಿಕ್ರಮ’ದ

ಕೃಷ್ಣಾವತಾರ ಆಯಿತು.

ಸ್ವಯಮೇವ ಮೃಗೇಂದ್ರತಾ

ರಾಷ್ಟ್ರೀಯ ಪ್ರಜ್ಞೆ ಜನಮನದಲ್ಲಿ ಎಚ್ಚರಿಸಲು ‘ವಿಕ್ರಮ’ ತೊಡೆತಟ್ಟಿ ಕಣಕ್ಕೆ ಇಳಿಯಿತು. ಮುಖಪುಟದ ಮೇಲಿನ ಸದಾಕಾಲದ ಸಂಕೇತ ಗರ್ಜಿಸುತ್ತಿರುವ ಸಿಂಹ.

ಅದಕ್ಕೊಂದು ಜತೆಗೂಡಿದ ಘೋಷವಾಕ್ಯ:

“ವಿಕ್ರಮಾರ್ಜಿತ ಸತ್ವಸ್ಯ ಸ್ವಯಮೇವ ಮೃಗೇಂದ್ರತಾ||”

ಸಿಂಹಕ್ಕೆ ಯಾರೂ ಕರೆದು ಕೂರಿಸಿ ಪಟ್ಟಾಭಿಷೇಕ ಮಾಡುವುದಿಲ್ಲ. ತನ್ನ ಸ್ವಪರಾಕ್ರಮದಿಂದ ಸಹಜವಾಗಿಯೇ ವನರಾಜನಾಗಿ ಅದು ಮೆರೆಯುತ್ತದೆ. ಉಳಿದೆಲ್ಲರ

ಗೌರವ ಪ್ರಶಂಸೆಗಳಿಗೆ ಪಾತ್ರವಾಗುತ್ತದೆ. ಪ್ರಭುತ್ವದ ಬೆಂಬಲ, ದೊಡ್ಡವರ ಪ್ರಭಾವ ಬೆನ್ನಿಗಿಲ್ಲದಿದ್ದರೂ ‘ವಿಕ್ರಮ’ವು ಸಿಂಹಗರ್ಜನೆ, ಸಿಂಹ ಗಾಂಭೀರ್ಯಗಳಿಂದಲೇ

ಮುಂದಡಿ ಇಟ್ಟಿತು.

ಬೆಂಗಳೂರಿನ ಸುಲ್ತಾನಪೇಟೆಯಲ್ಲಿದ್ದ ‘ವಿಕ್ರಮ’ ಕಾರ್ಯಾಲಯವು ದೇಶಭಕ್ತ ತರುಣರು ಬಂದುಹೋಗುವ, ಒಟ್ಟುಗೂಡುವ, ವಿಚಾರ ವಿನಿಮಯ ನಡೆಸುವ

ಕೇಂದ್ರವಾಯಿತು.

ಬವಣೆ-ಕಾರ್ಯನಿರ್ವಹಣೆ

ಪ್ರತಿ ಗುರುವಾರ ಪ್ರಕಟಣೆ. ಬೆಲೆ ಎರಡಾಣೆ. ಪುಟಗಳ ಸಂಖ್ಯೆ ಎಂಟು. ಅದು ಕೆಲವೊಮ್ಮೆ ಇಳಿಯುತ್ತಿದ್ದುದೂ ಉಂಟು. ಅದಕ್ಕೆ ಕಾರಣ ಕಾಗದದ ಅಭಾವ!

(‘ನೋಟು’ ಎನಿಸಿಕೊಳ್ಳುವ ಕಾಗದದ್ದು!)

ಶತಾಯ ಗತಾಯ ಪತ್ರಿಕೆ ಹೊರಡಿಸಲೇಬೇಕೆಂಬ ಕೆಚ್ಚು ಹೃದಯದಲ್ಲಿ. ಮನಸ್ಸಿನ ತುಂಬ ಹುಮ್ಮಸ್ಸು, ಮಿದುಳಿನ ತುಂಬ ವಿಚಾರ, ಬದುಕಿನ ತುಂಬ ಧಿ

ರ ನಿರ್ಧಾರ. ಆದರೆ ಜೇಬು ಮಾತ್ರ ಬರಿದೋಬರಿದು. ಹೊಟ್ಟೆಬಟ್ಟೆ ಕಟ್ಟಿ ಇನ್ನೆಷ್ಟೇ ಬೆವರು ಸುರಿದರೂ ಸಾಲದು. ಎಲ್ಲವೂ ಇದ್ದರೂ ‘ಅದು’ ಒಂದಿಲ್ಲ.

ಒಮ್ಮೊಮ್ಮೆಯಂತೂ ಮುದ್ರಣ ಮುಗಿದು, ಕಳುಹಿಸಲು ಕಟ್ಟುಗಳೆಲ್ಲ ಸಿದಟಛಿವಾದರೂ ಅದಕ್ಕೆ ಹಚ್ಚಬೇಕಾದ ಅಂಚೆಚೀಟಿ ಮಾತ್ರ ಅಂಚೆ ಕಚೇರಿಯಲ್ಲೇ!

ರಂಗು ಏರಿತು!

ಒಂದು ತಿಂಗಳ ನಂತರ ಶ್ರಾವಣ ಪೂರ್ಣಿಮೆ. ಅದರ ಪ್ರಯುಕ್ತ ಹತ್ತು ಪುಟದ ವಿಶೇಷಾಂಕ ಹೊರತರುವ ವಿಶೇಷ ಪ್ರಯತ್ನ. ಆಗ ಮುಖಪುಟದ ‘ವಿಕ್ರಮ’

ಶೀರ್ಷಿಕೆಯನ್ನು ಮೊದಲ ಬಾರಿಗೆ ಬಣ್ಣದಲ್ಲಿ ಮುದ್ರಿಸಿದಾಗ ‘ವಿಕ್ರಮ’ದ ಪರಿವಾರದ ಕಣ್ಣಿಗೆ ಒಂದು ದೊಡ್ಡ ಹಬ್ಬ!

ಮೊದಲ ವಿಜಯದಶಮಿ ಸಂಚಿಕೆ ಹೊರಬಂದುದು ೧೪-೧೦-೪೮ರಂದು. ಪುಟಗಳು ೧೬. ಹೆಚ್ಚಿನ ಬೇಡಿಕೆ ಪೂರೈಸಲು ಎರಡನೆಯ ಬಾರಿ ಸಂಚಿಕೆಯ

ಮುದ್ರಣ. ಒಟ್ಟು ಹತ್ತು ಸಹಸ್ರ ಪ್ರತಿ ಮುದ್ರಿಸಿದರೂ ಸಾಲದಾಯಿತು. ಅದರ ರಕ್ಷಾಕವಚದ ಮೇಲಿದ್ದ ರುದ್ರಸುಂದರ ‘ಮಹಿಷಾಸುರಮರ್ದಿನಿ’ಯೇ ಪತ್ರಿಕೆಯ

ರಕ್ಷಾದೇವತೆಯಾದಳು. ಇಡೀ ಕರ್ನಾಟಕದಾದ್ಯಂತ ‘ವಿಕ್ರಮ’ದ ಸಿಂಹನಾದ ಮೊಳಗಲಾರಂಭಿಸಿತು.

ದಬ್ಬಾಳಿಕೆಗೆ ಸವಾಲು

ಕೆಲದಿನಗಳಲ್ಲೇ ‘ಮಾಧವ-ನಿರೀಕ್ಷೆ’ ಎಂಬ ಮಾರ್ಮಿಕ ಲೇಖನ ಪ್ರಕಟವಾಯಿತು. ಭಾರತೀಯ ಯುವ ಜನಾಂಗವು ಸ್ವಾರ್ಥಿ ಆಡಳಿತಗಾರರ ಭ್ರಷ್ಟಾಚಾರಕ್ಕೂ

ಹಿಂಸಾಚಾರಕ್ಕೂ ಬೇಸತ್ತು ಹೊಸ ನಾಯಕನ ಬರವನ್ನು ಎದುರು ನೋಡುತ್ತಿದ್ದಾರೆಂಬುದು ಅದರ ಸಾರಾಂಶ. ಆಗ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ರಾಜರ್ಷಿ

ಟಾಂಡನ್ ಅವರು ಅಧಿಕಾರಾರೂಢ ಕಾಂಗ್ರೆಸ್ಸಿಗರ ಸ್ವಾರ್ಥವನ್ನೂ ಘೋರ ಅನಾಚಾರವನ್ನೂ ಖಂಡಿಸಿ ನೀಡಿದ ಹೇಳಿಕೆಗಳನ್ನು ‘ವಿಕ್ರಮ’ ದಿಟ್ಟವಾಗಿ ಪ್ರಕಟಿಸಿತು.

‘ಗಾಂಧಿ ಸ್ಮಾರಕ ನಿಧಿ’ಯ ದುರುಪಯೋಗವನ್ನು ಖಂಡಿಸಿತು. ಹುತಾತ್ಮ ಭಗತಸಿಂಗರ ತಂದೆ ಸರದಾರ ಕಿಶನಸಿಂಗರು ರಾ.ಸ್ವ.ಸಂಘದ ಮೇಲಿನ ನಿರ್ಬಂಧ

ತೆಗೆಯುವಂತೆ ಒತ್ತಾಯಿಸಿ ಪ್ರಧಾನಿ ನೆಹರೂರವರಿಗೆ ಬರೆದ-ಇನ್ನಾವ ಪತ್ರಿಕೆಯೂ ಪ್ರಕಟಿಸಲು ಧೈರ್ಯ ಮಾಡದಿದ್ದ-ಪತ್ರವೂ ‘ವಿಕ್ರಮ’ದಲ್ಲಿ ಬೆಳಕು

ಕಂಡಿತು.

ಮರುನುಡಿದ ಪ್ರಹ್ಲಾದ !

ಸರಕಾರವು ‘ದೇಶದಲ್ಲಿ ನ್ಯಾಯ ನೀತಿ ಇದೆ, ಎಲ್ಲವೂ ಸರಿಯಾಗಿದೆ’ ಎಂದು ಜನತೆಗೆ ನಂಬಿಸುತ್ತಿದ್ದಾಗ, ‘ವಿಕ್ರಮ’ದ ಈ ಹೊಸ ಸ್ವರ, ಜನಜಾಗೃತಿಯ ಹೂಂಕಾರ

ಆಳರಸರ ನಿದ್ದೆ ಕೆಡಿಸಹತ್ತಿತು. ಎಳೆಯ ‘ವಿಕ್ರಮ’ಕ್ಕೆ ಸರ್ಕಾರದ ಬುದಿಟಛಿವಾದ ಆರಂಭವಾಯಿತು. ಹಿಂದೆ ಹಿರಣ್ಯಕಶಿಪುವೂ ಎಳೆಯ ಪ್ರಹ್ಲಾದನಿಗೆ ಹೀಗೇ ಬೋಧಿ

ಸಿದ್ದ. “ನನ್ನನ್ನೇ ಹೊಗಳು; ನಾನು ಸರ್ವಶಕ್ತ. ನಾನೇ ಇಂದ್ರ-ಚಂದ್ರ-ದೇವೇಂದ್ರ. ನನ್ನನ್ನು ಬಿಟ್ಟು ಬೇರೆ ದೇವರಿಲ್ಲ” ಎಂದು ಪರಿಪರಿಯಿಂದ ಹೇಳಿದ್ದ.

ಆದರೆ ಪ್ರಹ್ಲಾದ ಪ್ರತಿಭಟಿಸಿದ: “ನಿಜವಾದ ದೇವರು ಬೇರೆ ಇದ್ದಾನೆ. ನನ್ನ ಭಕ್ತಿ, ಸ್ತುತಿ ಎಲ್ಲ ಆ ನಾರಾಯಣನಿಗೇ ಮೀಸಲು” ಎಂದ. ಆಡಳಿತ ರಕ್ಕಸನ

ಧಾಟಿಯೂ ಹಿರಣ್ಯಕಶಿಪುವಿನದೇ. ತನ್ನ ಮಾತೇ ಸತ್ಯ, ತಾನು ಹೇಳಿದಂತೆ ಲೋಕವೆಲ್ಲ ಕೇಳಬೇಕು ಎಂದು. ‘ವಿಕ್ರಮ’ ಕೇಳಲಿಲ್ಲ. “ನನ್ನ ಆರಾಧ್ಯವಸ್ತು ನೀನಲ್ಲ,

ರಾಷ್ಟ್ರದೇವತೆ” ಎಂದಿತು. “ನನ್ನ ಪೂಜೆ ನಿನಗಲ್ಲ, ನಾಡ ನಾರಾಯಣನಿಗೆ” ಎಂದಿತು. ಸತ್ಯದ ಉರಿನಾಲಿಗೆಯಿಂದ ದಮನವನ್ನು ಖಂಡಿಸಿತು. ಜನಮನದಲ್ಲಿ

ಸರಕಾರವು ಹರಡಿದ್ದ ಸುಳ್ಳಿನ ಭ್ರಮಜಾಲಗಳನ್ನು ಕಿತ್ತೆಸೆಯತೊಡಗಿತು.

ನ್ಯಾಯದ ಬಾಯಿಗೆ ಬೀಗ!

ಅನ್ಯಾಯದ ಅರಗಿನಮನೆ ಕರಗಿ ಜಾರತೊಡಗಿದಾಗ ಅದರ ಸೃಷ್ಟಿಕಾರನಾದ ಸರಕಾರ ಹೇಗೆ ಸಹಿಸೀತು? ಅದು ಸಮಯ ಕಾಯುತ್ತಲೇ ಇತ್ತು. ಕೃಷ್ಣನು

ಬೆಳೆದಂತೆಲ್ಲಾ ಕಂಸನಿಗೆ ಅಂಜಿಕೆ-ಅಸೂಯೆ ಇದ್ದದ್ದೇ ತಾನೇ?

೧೯೪೮ ಡಿಸೆಂಬರ ೯ರಂದು ‘ವಿಕ್ರಮ’ದ ಮುಖಪುಟದಲ್ಲಿ ಗೀತೋಪದೇಶದ ಚಿತ್ರ. ಧರ್ಮದ ಪುನರ್‌ಸ್ಥಾಪನೆಗಾಗಿ ಶ್ರೀಕೃಷ್ಣನು ಅರ್ಜುನನನ್ನು ಸಮರಕ್ಕೆ

ಪ್ರೇರೇಪಿಸುತ್ತಿದ್ದ ದೃಶ್ಯ! ರಾಷ್ಟ್ರೀಯ ಸ್ವಯಂಸೇವಕ ಸಂಘವು ತನಗಾಗಿದ್ದ ಘೋರ ಅನ್ಯಾಯವನ್ನು ತೊಳೆದುಹಾಕುವ ದೃಢಸಂಕಲ್ಪ ತೊಟ್ಟು ಅಹಿಂಸಾತ್ಮಕ

ಸತ್ಯಾಗ್ರಹ ಹೂಡಿದ್ದೂ ಅದೇ ದಿನ.

ಎರಡು ದಿನಗಳಲ್ಲೇ ಸತ್ಯಾಗ್ರಹದ ವಾರ್ತೆ ಸಾರುವ ಒಂದು ಹಾಳೆಯ ‘ವಿಕ್ರಮ’ ಪುರವಣಿ ಪ್ರಕಟವಾಯಿತು. ಸರಕಾರದ ಕರಾಳ ಹಸ್ತ ಎರಗಲು ಅಷ್ಟು

ನೆಪ ಸಾಕಾಯಿತು. ‘ವಿಕ್ರಮ’ದ ಕಾರ್ಯಾಲಯಕ್ಕೆ ಪೊಲೀಸರು ದಾಳಿಯಿಟ್ಟರು. ಝಡತಿ ಮಾಡಿ ಅಲ್ಲಿ ಇದ್ದ ಬಿದ್ದ ಪತ್ರಿಕೆಗಳನ್ನೆಲ್ಲ ವಶಪಡಿಸಿಕೊಂಡರು.

ಕಾರ್ಯಾಲಯಕ್ಕೆ ಬೀಗಮುದ್ರೆ ಬಿತ್ತು. ಪತ್ರಿಕೆಯ ಪ್ರಕಟಣೆ ನಿಷೇಧಿಸಲ್ಪಟ್ಟಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಕೋಲೆ ತೊಡಿಸಿದರು. ನ್ಯಾಯದ ಬಾಯಿ ಹೊಲಿದು

ಹಾಕಿದರು. ತಮ್ಮ ಪೊಳ್ಳನ್ನು ಬಯಲಿಗೆಳೆಯುವ ಏಕಮಾತ್ರ ಪತ್ರಿಕೆಯ ಸೊಲ್ಲನ್ನು ಅಡಗಿಸಿದೆವೆಂದು ಸರ್ವಾಧಿಕಾರಿ ಶಾಸಕರಿಗೆ ಸಂತೃಪ್ತಿಯಾಯಿತು.

ಒಮ್ಮೆ ಲೋಕಮಾನ್ಯ ತಿಲಕರನ್ನು ಯಾರೋ ಪ್ರಶ್ನಿಸಿದರಂತೆ- “ಸ್ವಾತಂತ್ರ್ಯ ಬಂದ ಮೇಲೆ ನಿಮ್ಮ ಸ್ಥಾನ ಯಾವುದು?” “ಸೆರೆಮನೆ” ಎಂದರಂತೆ ತಿಲಕರು.

ಆಗ ಪ್ರಶ್ನಿಸಿದವರು ಅಚ್ಚರಿಗೊಂಡು ಕೇಳಿದರು: “ಅದು ಹೇಗೆ?” “ಹೇಗೆಂದರೆ ಸ್ವರಾಜ್ಯ ಬಂದ ನಂತರ ಶಾಸಕರು ನಮ್ಮವರೇ ಆದರೂ, ಅವರೂ ಅನ್ಯಾಯ

ಮಾಡಬಹುದು. ಆಗ ನಾನು ಅದನ್ನು ವಿರೋಧಿಸಲೇಬೇಕಾಗುತ್ತದೆ. ಜನರ ಸ್ವಾತಂತ್ರ್ಯ, ಅಧಿಕಾರ ರಕ್ಷಿಸಬೇಕಾಗುತ್ತದೆ. ಆಗ ಸೆರೆಮನೆಯೇ ನನ್ನ ಸ್ಥಾನ!”

‘ವಿಕ್ರಮ’ಕ್ಕೂ ಅದೇ ಸ್ಥಿತಿ ಆಯಿತು!

ದುರ್ದಮ್ಯ ಸಾಹಸ

ಆದರೆ ಕಾರ್ಯಕರ್ತರ ಕೆಚ್ಚು ಆರಲಿಲ್ಲ. ಅವರ ಸ್ಫೂರ್ತಿಯ ಸೊಲ್ಲು ಅಡಗಲಿಲ್ಲ. ಅವರ ಅಂತರ್ವಾಣಿಯ ಪ್ರೇರಣೆ ಬತ್ತಲಿಲ್ಲ. ‘ವಿಕ್ರಮ’ದ ಪುನರುದಯಕ್ಕೆ

ಅವರ ಯತ್ನ ಮುಂದುವರೆಯಿತು. ‘ವಿಕ್ರಮ’ವು ನಾಲ್ಕು ತಿಂಗಳ ಅಲ್ಪಾವಧಿಯಲ್ಲೇ ಕರ್ನಾಟಕದಾದ್ಯಂತ ಸದ್ಭಾವನೆಯನ್ನು ನಿರ್ಮಿಸಿತ್ತು. ಅದು ನಿಂತು

ಹೋದುದಕ್ಕಾಗಿ ಪರಿತಪಿಸುತ್ತಿದ್ದವರು ಅನೇಕರು. ಪುನಃ ಎಂದಿಗೆ ಬಂದೀತೋ ಎಂದು ಹಂಬಲಿಸುವ ಹಿತೈಷಿಗಳು ಸಾವಿರಾರು. ಅವರೆಲ್ಲರಿಗೂ ೧೦ ರೂ.

ಶೇರುಗಳನ್ನು ಕೊಳ್ಳುವಂತೆ ಮನವಿ ಮಾಡಲಾಯಿತು. ಮನುಷ್ಯ-ಮನುಷ್ಯರ ನಡುವಿನ ನಂಬಿಕೆ ಬಿಟ್ಟು ಬೇರೆ ಇನ್ನಾವುದೇ ಭರವಸೆ ಇಲ್ಲ. ವಿಶ್ವಾಸದಿಂದ

ಹಣ ನೀಡಿದರು. ಅದರಿಂದ “ಕೇಸರಿ ಪ್ರೆಸ್” ಎಂಬ ಸಣ್ಣ ಮುದ್ರಣಾಲಯವನ್ನು ಕೊಳ್ಳಲಾಯಿತು. ಚಾಮರಾಜಪೇಟೆ ಎರಡನೇ ರಸ್ತೆಯಲ್ಲಿ ಬಾಡಿಗೆ

ಕಟ್ಟಡವೊಂದರಲ್ಲಿ ಅದಕ್ಕೆ ನೆಲೆ.

ಇಷ್ಟೆಲ್ಲ ಆಗುವ ಹೊತ್ತಿಗೆ ಆರೇಳು ತಿಂಗಳು ಕಳೆದವು. ೧೯೪೯ ಜುಲೈ ೧೨ ರಂದು ರಾ.ಸ್ವ.ಸಂಘದ ಮೇಲಿನ ನಿರ್ಬಂಧವನ್ನು ಯಾವುದೇ ಷರತ್ತಿಲ್ಲದೆ ಸರಕಾರ

ಹಿಂತೆಗೆದುಕೊಂಡಿತು. ಸಂಘ ಗೆದ್ದಿತು. ಇನ್ನೂ ‘ವಿಕ್ರಮ’ದ ಗ್ರಹಣ ಮಾತ್ರ ಕಳೆದಿರಲಿಲ್ಲ. ಆದರೆ ಪ್ರಬಲ ಜನಾಭಿಪ್ರಾಯಕ್ಕೆ ತಲೆಬಾಗಿ ಸರಕಾರ ೧೯೪೯ ಸೆಪ್ಟೆಂಬರ್

ನಲ್ಲಿ ತನ್ನ ತಪ್ಪು ತಿದ್ದಿಕೊಂಡು ‘ವಿಕ್ರಮ’ದ ಪ್ರಕಟಣೆಗೆ ಅವಕಾಶ ನೀಡಿತು.

ಪುನಶ್ಚ ಹರಿಃ ಓಂ

ವಿಕ್ರಮದ ಸುತ್ತ ಸಾವಿರಾರು ಆತ್ಮೀಯರ ಪ್ರೀತಿ ಕೂಡಿತು. ಕಾರ್ಯತತ್ಪರ ತರುಣರ ಶ್ರದೆಟಛಿ, ಶ್ರಮ ಜತೆಗೂಡಿತು. ಅದರ ಪರಿಣಾಮವಾಗಿ ಪುನಃ ಚೇತನ

ಜಾಗೃತವಾಯಿತು. ಅದರಿಂದ ಮೊಳೆಗಳು ಜೋಡಿಸಿಕೊಂಡವು. ಯಂತ್ರಗಳು ಚಲಿಸತೊಡಗಿದವು.

‘ವಿಕ್ರಮ’ವು ಸುಮಾರು ಒಂಭತ್ತು ತಿಂಗಳ ಕಾರಾವಾಸದ ನಂತರ ‘ಪುನಶ್ಚ ಹರಿಃ ಓಂ’ ಎನ್ನುತ್ತಾ, ಆಶ್ವಯುಜ ಶುದಟಛಿ ತದಿಗೆ ಭಾನುವಾರ ೨೫-೯-೧೯೪೯ರಂದು

ಹೊರಬಂದಿತು. ಹಗಲಿರುಳೆನ್ನದೆ ಬೆವರು ಹರಿಸಿ ಬರೆದು ಮೊಳೆ ಜೋಡಿಸಿ-ಮುದ್ರಿಸಿ ಸಜ್ಜುಗೊಳಿಸಿದ ಹಲವರ ಬೆರಳುಗಳಿಗೆ ಧನ್ಯತೆಯ ಅನುಭವ ಆಯಿತು.

ಎದುರು ನೋಡುತ್ತಿದ್ದ ಸಾವಿರಾರು ಕಣ್ಣುಗಳಿಗೆ ತೃಪ್ತಿ ಮೂಡಿತು.

ಬೆನ್ನು ತಟ್ಟಿದ ಹರಕೆ

‘ವಿಕ್ರಮ’ದ ಕಾರ್ಯಕ್ಕೆ ಟೊಂಕಕಟ್ಟಿ ನಿಂತಿದ್ದ ಧ್ಯೇಯವಾದಿ ಯುವಕ ವೃಂದಕ್ಕೆ ಆಗ ರಾ.ಸ್ವ. ಸಂಘದ ಕರ್ನಾಟಕ ಪ್ರಾಂತ ಪ್ರಚಾರಕರಾಗಿದ್ದ ಮಾ. ಶ್ರೀ

ಯಾದವರಾವ್ ಜೋಶಿಯವರ ನೇತೃತ್ವ, ಕರ್ತೃತ್ವ ಆರಂಭದಿಂದಲೂ ಪ್ರೇರಕಶಕ್ತಿ. ಅವರ ಸಂದೇಶವೂ ಅದೇ ಸಂಚಿಕೆಯಲ್ಲೇ ಪ್ರಕಟಗೊಂಡಿತು:

“…ಅಗ್ನಿ ಪರೀಕ್ಷೆಯಿಂದ ಪುಟವಿಟ್ಟಂತೆ ತೇಜಸ್ವಿಯಾಗಿ ಹೊರಬಿದ್ದಿರುವ ‘ವಿಕ್ರಮ’ವು ಮುಂದೆಯೂ ಸತ್ಯ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ಉಗ್ರವ್ರತವನ್ನು

ಅನುಸರಿಸುತ್ತಾ ಭಾರತಕ್ಕೂ ಮತ್ತು ಜಗತ್ತಿಗೂ ಮಾಂಗಲ್ಯಪೂರ್ಣವಾದ ನಮ್ಮ ಸಂಸ್ಕೃತಿಯ ಸಾಂಸ್ಕೃತಿಕ ಪ್ರಕಾಶವನ್ನು ಬೀರುತ್ತದೆ ಎಂಬುದು ನನ್ನ ಪೂರ್ಣ

ನಂಬಿಕೆ. ಪರಮೇಶ್ವರನು ನಿಮಗೆ ಅಗತ್ಯವಾದ ಧೈರ್ಯ, ಸಾಹಸ, ತ್ಯಾಗ ಮತ್ತು ತೇಜಸ್ಸುಗಳನ್ನು ಅನುಗ್ರಹಿಸಿ ನಿಮ್ಮ ಹಸ್ತದಿಂದ ನಮ್ಮ ಈ ಪವಿತ್ರ ಭಾರತ

ಭೂಮಿಯ ಚಿರಂತನ ಸೇವೆ ನಡೆಸಲಿ. ಇದೇ ಆ ಜಗನ್ನಿಯಾಮಕನ ಚರಣಕಮಲಗಳಲ್ಲಿ ನನ್ನ ಪ್ರಾರ್ಥನೆ.”

ಊರೂರುಗಳಲ್ಲಿ, ಬೀದಿ ಬೀದಿಗಳಲ್ಲಿ ಪುನಃ ಸ್ವರ ಕೇಳತೊಡಗಿತು:

“ವಿಕ್ರಮ, ವಿಕ್ರಮ !”

“ಉಜ್ವಲ ರಾಷ್ಟ್ರೀಯ ವಾರಪತ್ರಿಕೆ !”

ಆ ದಿನಗಳಲ್ಲಿ ‘ವಿಕ್ರಮ’ವು ರಾಷ್ಟ್ರೀಯವಾದಿ ತರುಣರ ವಿಚಾರ ಪ್ರಕಟಣೆಯ ವೇದಿಕೆ ಆಯಿತು. ‘ವಿಕ್ರಮ’ ಕಾರ್ಯಾಲಯವು ಅವರ ಭೇಟಿಯ ಕೇಂದ್ರ

ಆಯಿತು.

ವಿಶಿಷ್ಟ ಪಾತ್ರದಲ್ಲಿ

ದೇಶದ ಸ್ವಾತಂತ್ರ್ಯಕ್ಕಾಗಿ ೧೯೪೭ಕ್ಕೆ ಮೊದಲು ಉಗ್ರ ರಾಷ್ಟ್ರೀಯ ಪತ್ರಿಕೆಗಳು ಯಾವ ಪಾತ್ರವನ್ನು ನಿರ್ವಹಿಸಿದವೋ ಸ್ವಾತಂತ್ರ್ಯದ ರಕ್ಷಣೆಗಾಗಿ ಅದೇ ರೀತಿಯ

ಪಾತ್ರವನ್ನು ನಿರ್ವಹಿಸಲು ‘ವಿಕ್ರಮ’ವು ಸ್ವಾಂತಂತ್ರ್ಯೋತ್ತರ ಕಾಲದಲ್ಲಿ ಮುಂದಾಯಿತು. ವಿಲಾಸವೃತ್ತಿಯತ್ತ ಹೆಜ್ಜೆ ಹಾಕಿ ಹೊರಟಿದ್ದ ಯುವ ಜನಾಂಗದ

ಹೃದಯದಲ್ಲಿ ರಾಷ್ಟ್ರೀಯ ಜಾಗೃತಿ ನಿರ್ಮಿಸಿ, ಗುಣವಿಕಾಸ ಮಾಡಿತು. ಸ್ವಾತಂತ್ರ್ಯಗಳಿಕೆಗೆ ಹೇಗೋ ಹಾಗೆಯೇ ರಾಷ್ಟ್ರದ ಪುನನಿರ್ಮಾಣ ಮತ್ತು ಏಳಿಗೆಗೆ ಸಹ

ತ್ಯಾಗ-ಶಿಸ್ತು-ಪರಿಶ್ರಮ-ಒಗ್ಗಟ್ಟುಗಳ ಅಗತ್ಯವಿದೆಯೆಂಬುದನ್ನು ಮನಗಾಣಿಸಿಕೊಟ್ಟಿತು.

ತಿಲಕರ ‘ಕೇಸರಿ’ ಪತ್ರಿಕೆಯನ್ನು ಆ ಕಾಲದಲ್ಲಿ ಜನರು ಕಾತರದಿಂದ ಎದುರು ನೋಡುತ್ತಿದ್ದರು. ಹೆಂಗಸರು ಮಕ್ಕಳು ಸಹ ಪತ್ರಿಕೆ ಬರುತ್ತಲೇ ಅರ್ಧ ಊಟದಲ್ಲಿ

ಎದ್ದು ಓದತೊಡಗಿದ್ದರಂತೆ. ‘ವಿಕ್ರಮ’ವು ಸಹ ಮನೆ ಮಂದಿಯ ಮನಗಳಲ್ಲಿ ಅದೇ ರೀತಿಯ ಸ್ಥಾನ ಗಳಿಸಿತು. ಕರ್ನಾಟಕದ ಯುವವಾಣಿ ಅದಾಯಿತು.

ಕಷ್ಟಗಳ ಕಣಿವೆಹಾದಿ

ಸ್ವಂತ ಮುದ್ರಣಾಲಯ ಇದ್ದ ಮಾತ್ರಕ್ಕೆ ಇತರ ಸಮಸ್ಯೆಗಳು ಇಲ್ಲವಾದಾವೇ? ಜಾಹೀರಾತುಗಳು ಬಹು ವಿರಳ. ಸರಕಾರಿ ಜಾಹೀರಾತುಗಳ ಪ್ರಶ್ನೆಯೇ ಇಲ್ಲ.

ವಾರವಾರವೂ ಅನಿವಾರ್ಯ ಖರ್ಚಿನ ಬೆಳವಣಿಗೆ. ಅಂಚೆ ವೆಚ್ಚ ಹವಣಿಸಲು ವ್ಯವಸ್ಥಾಪಕರ ಪ್ರಯಾಸ. ಒಂದು ಸಂಚಿಕೆ ರವಾನಿಸಿ ಸಮಾಧಾನದ ನಿಟ್ಟುಸಿರು

ಸೋಕುತ್ತಿರುವಂತೆಯೇ ಅದು ಮುಂದಿನ ಸಂಚಿಕೆಗೆ ಕಾಗದ ಹವಣಿಸಬೇಕಾದ ಆತಂಕದ ಉಸಿರಾಗುತ್ತಿತ್ತು. ಕಟ್ಟಡದ ಬಾಡಿಗೆ, ಕೆಲಸಗಾರರ ಸಂಬಳ, ಅಂಚೆ

ವೆಚ್ಚ ಇತ್ಯಾದಿಗಳನ್ನೆಲ್ಲ ಎದುರಿಸಬೇಕಾಗಾಗಿ ಬಂದಾಗ ಆ ನಿಟ್ಟುಸಿರು ಇನ್ನೂ ನಿಡಿದಾಗಿ ಜೀವ ಹಿಂಡುತ್ತಿತ್ತು. ಅಂತಃಕರಣದಲ್ಲಿ ತಳಮಳ; ಎಂತಹ ಕಷ್ಟಕ್ಕೂ

ಸಿದಟಛಿವೆಂಬ ಮನೋನಿರ್ಧಾರ; ಹಗಲಿರುಳೂ ಶ್ರಮಿಸುವ ಸಿದಟಛಿತೆ-ಇಷ್ಟೆಲ್ಲ ಇತ್ತು. ಆದರೆ ಹಣ? ಅದರ ಕೊರತೆ ಮುನ್ನಡೆಗೆ ಸಂಕೋಲೆ. ಹೇಗೋ ಈ ವಾರ

ಕಳೆದರೆ ಸಾಕೆಂಬ ಅನ್ನಿಸಿಕೆ.

ಅಷ್ಟರಲ್ಲಿ ಮೂರು ವರ್ಷಗಳ ಅವಧಿ ಕಳೆದು, ಶೇರುಗಳನ್ನು ಹಿಂದಿರುಗಿಸಬೇಕಾದ ಸಮಯ ಬೇರೆ ಬಂತು. ಅದಕ್ಕೂ ಹಣವಿಲ್ಲ. ವಾಪಸು ಕೊಡಲೇಬೇಕೆಂದು

ಇಚ್ಛೆ ಪಟ್ಟವರಿಗೆ ಹಿಂದಿರುಗಿಸಲಾಗುವುದೆಂಬ ಮನವಿ ಮಾಡಿಕೊಳ್ಳಲಾಯಿತು. ಪರಿಸ್ಥಿತಿಯನ್ನು ಅರಿತ ಅನೇಕರು, ಉದಾರತೆ ತೋರಿದರು; ತಮ್ಮ ಶೇರುಗಳನ್ನು

ಸಹಾಯಧನವಾಗಿ ಪರಿಗಣಿಸಬೇಕೆಂದು ತಿಳಿಸಿದರು. ಉಳಿದವರಿಗೆ ವಾಪಸು ಮಾಡಲಾಯಿತು.

ಪರ್ವಕಾಲ

ಇಂಥ ತೀವ್ರ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಸಕಲ ಹೊಣೆಯನ್ನೂ ಕೆಚ್ಚಿನಿಂದ ನಿರ್ಧಾರ ಪೂರ್ವಕವಾಗಿ ನಿರ್ವಹಿಸುತ್ತಿದ್ದ ವ್ಯಕ್ತಿಗಳು ಅನ್ಯಕ್ಷೇತ್ರಕ್ಕೆ ಹೋಗಬೇಕಾಗಿ

ಬಂತು. ಮುಂದೇನು ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ‘ವಿಕ್ರಮ’ಕ್ಕೆ ಎದುರಾಯಿತು. ಜನ ಇಲ್ಲ, ಧನವಂತೂ ಮೊದಲೇ ಇಲ್ಲ. ಹಾಗಾದರೆ? ಪತ್ರಿಕೆಯನ್ನು

ನಿಲ್ಲಿಸುವುದೊಂದೇ ಮಾರ್ಗ!

ಆದರೆ ಧ್ಯೇಯನಿಷ್ಠೆ ಅದಕ್ಕೊಪ್ಪದು. ಅಂಥ ಕಲ್ಪನೆಯೇ ಅಸಹ್ಯ. ಇಷ್ಟು ವರ್ಷಗಳು ಅಸಂಖ್ಯ ಆಪತ್ತುಗಳನ್ನೆದುರಿಸಿ, ಇಡೀ ಲೋಕ ಅಡ್ಡಿ ಬಂದರೂ

ಮುಂದೊಯ್ಯುತ್ತೇವೆ ಎಂಬ ಛಲದಿಂದ ಬೆವರು-ನೆತ್ತರು ಬಸಿದು ಬೆಳೆಸಿದುದನ್ನು ಅದೇ ಕೈಗಳಿಂದಲೇ ಅಳಿಸಿಬಿಡಬೇಕೇ? ನಿಲ್ಲಿಸಿಬಿಡುವುದು ಸುಲಭ. ಅದಕ್ಕೆ

ಏನೂ ಶ್ರಮಿಸಬೇಕಾಗಿಲ್ಲ. ಅದರಲ್ಲಿ ಪುರುಷಾರ್ಥವಿಲ್ಲ. ಮುನ್ನಡೆಸುವುದರಲ್ಲೇ ನಿಜವಾದ ಎದೆಗಾರಿಕೆ, ಗಂಡಸುತನ ಇರುವುದು. ಹಾಗಾದರೆ ಮುಂದಿನ

ದಾರಿ ಏನು?

ನೂತನ ಅಧ್ಯಾಯ

ಇಂಥ ಆಪತ್ತಿನ ಸಮಯದಲ್ಲೂ ಹೊಸ ಹೊಸ ಕಾರ್ಯಕರ್ತರು ಮುಂದೆ ಬಂದರು. ‘ವಿಕ್ರಮ’ದ ಧ್ವಜವನ್ನು ನೆಲಕ್ಕೆ ಬೀಳಗೊಡುವುದಿಲ್ಲ ಎಂದರು.

ಸ್ವಾವಲಂಬನೆಯ ಬೆವರು ಹಾದಿಯಲ್ಲಿ ದಿಟ್ಟವಾಗಿ ಹೆಜ್ಜೆ ಹಾಕತೊಡಗಿದರು. ಪತ್ರಿಕೆಯು ಕಾಲಕ್ಕೆ ಸರಿಯಾಗಿ ನಿಯಮಿತವಾಗಿ ಹೊರಡಲಾರಂಭಿಸಿತು. ಹೊಸ

ಆಸೆ ಭರವಸೆ ಮೂಡಿ, ‘ವಿಕ್ರಮ’ವು ಸ್ವಂತ ಕಾಲಮೇಲೆ ನಿಲ್ಲಲು ನಾಂದಿಯಾಯಿತು.

ಹಿಡಿಯಷ್ಟು ತರುಣರ ಅಹೋರಾತ್ರಿಯ ಏಕನಿಷ್ಠ ಕಾರ್ಯತತ್ಪರತೆ ಮತ್ತು ಅಪಾರ ಪರಿಶ್ರಮದಿಂದ ನೂತನ ಅಧ್ಯಾಯ ತೆರೆಯಿತು. ಮೊದಲಿಂದ ಇದ್ದ

‘ಭಾರತ್ ಟ್ರೆಡಲ್’ ಜೊತೆಗೆ ೧೯೫೬ರ ವೇಳೆಗೆ ಹೊಸದೊಂದು ‘ಸಿಲಿಂಡರ್ ಯಂತ್ರ’ ಬಂತು. ಮುದ್ರಣ ಕಾರ್ಯವೂ ಅದಕ್ಕೆ ತಕ್ಕಂತೆ ಹೆಚ್ಚಿತು.

೧೯೫೫ರ ನಡುವೆ ‘ವಿಕ್ರಮ’ದ ಒಡೆತನವನ್ನು ‘ವಿಕ್ರಮ ಪ್ರಕಾಶನ ಟ್ರಸ್ಟ್’ ವಹಿಸಿಕೊಂಡಿತು.

ಸ್ವಗೃಹ ಪ್ರವೇಶ !

೧೯೬೩ ‘ವಿಕ್ರಮ’ದ ಇತಿಹಾಸದಲ್ಲಿ ಚಿರಸ್ಮರಣೀಯ ವರ್ಷ. ಆ ವರ್ಷ ಯುಗಾದಿಯಂದು ಕಾರ್ಯಾಲಯ ಮತ್ತು ಮುದ್ರಣಾಲಯ ಎರಡನ್ನೂ

ಚಾಮರಾಜಪೇಟೆಯ ಐದನೇ ರಸ್ತೆಯಲ್ಲಿ ಈಗಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಮುದ್ರಣಾಲಯ ಇನ್ನಷ್ಟು ದೊಡ್ಡದಾಯಿತು. ದೊಡ್ಡದೊಂದು

‘ಸಿಲಿಂಡರ್ ಮಶಿನ್’ ಮತ್ತು ‘ಕಟಿಂಗ್ ಮಶಿನ್’ ಸಹ ಯಂತ್ರಗಳ ಪರಿವಾರಕ್ಕೆ ಸೇರಿದವು. ಇದೀಗ ಬಾಲಾರಿಷ್ಟಗಳೆಲ್ಲ ಕಳೆದು ಅಸಹಾಯಕತೆಯ ಸ್ಥಿತಿ

ದೂರವಾಗತೊಡಗಿತು. ಬೆಂಬಲ ಸಹಾನುಭೂತಿಗಳ ಕ್ಷೇತ್ರ ವಿಸ್ತಾರಗೊಳ್ಳತೊಡಗಿತು.

ಇನ್ನೊಂದು ಮೈಲಿಗಲ್ಲು

ಸಂಸ್ಥೆಯು ಬೆಳೆದಂತೆಲ್ಲ ಕಾರ್ಯಬಾಹುಳ್ಯವೂ ಹೆಚ್ಚಿತು. ಸಂಪಾದಕರೊಬ್ಬರಿಗೇ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಬಿಡುವು ಸಾಲದಾಯಿತು. ಅದಕ್ಕಾಗಿ

೧೯೬೪ರಲ್ಲಿ ‘ವಿಕ್ರಮ ಪ್ರಕಾಶನ ಟ್ರಸ್ಟ್’ಗೆ ಕಾರ್ಯದರ್ಶಿಯೊಬ್ಬರು ನೇಮಕಗೊಂಡರು. ಆಡಳಿತ ವ್ಯವಸ್ಥೆ, ಜಾಹೀರಾತು ಸಂಪರ್ಕ, ಮುದ್ರಣಾಲಯ ಇವು

ವಿಸ್ತರಿಸಿ ಹೆಚ್ಚು ದಕ್ಷಗೊಂಡವು. ‘ವಿಕ್ರಮ’ದ ಸ್ವಾವಲಂಬನೆ ಮತ್ತು ಪ್ರಭಾವದ ದಿಕ್ಕಿನಲ್ಲಿ ಇನ್ನೊಂದು ಮೈಲಿಗಲ್ಲು ಮೂಡಿ, ‘ವಿಕ್ರಮ’ದ ಪ್ರಸಾರವೂ ಏರುತ್ತಾ

ಹೋಯಿತು.

ವಿಜಯದಶಮಿಯ ಸಂಗಾತಿ – ವಿಕ್ರಮ ವಿಶೇಷಾಂಕ

ಕನ್ನಡ ವಿಶೇಷಾಂಕಗಳ ಶ್ರೇಣಿಯಲ್ಲಿ ‘ವಿಕ್ರಮ’ವು ತನ್ನದೇ ಆದ ವಿಶಿಷ್ಟ ಸ್ಥಾನ-ಘನತೆಗಳನ್ನು ಗಳಿಸಿಕೊಂಡಿದೆ. ಇದನ್ನು ದೇಶದ ಸುಪ್ರಸಿದಟಛಿ ಪತ್ರಿಕೆಗಳ ವಿಮರ್ಶೆಗಳೇ

ಸಾರಿವೆ. ವಿಕ್ರಮದ ವಿಜಯದಶಮಿ ವಿಶೇಷಾಂಕವಂತೂ ಕರ್ನಾಟಕದಾದ್ಯಂತ ಮತ್ತು ಕನ್ನಡಿಗರಿರುವ ಹೊರ ಊರುಗಳಲ್ಲಿಯೂ ಖ್ಯಾತಿ ಪಡಿದಿದೆ. ‘ವಿಕ್ರಮ’ದ

ದಸರಾ ವಿಶೇಷಾಂಕಗಳು ವರ್ಷದಿಂದ ವರ್ಷಕ್ಕೆ ಗುಣದಲ್ಲೂ ಗಾತ್ರದಲ್ಲೂ ಹೆಚ್ಚೆಚ್ಚು ಮೈತುಂಬಿಕೊಂಡು ಬರುತ್ತಿರುವುದು ಸರ್ವಾದರಣೀಯ ಸಂಗತಿ. ಇದಲ್ಲದೆ

‘ವಿಕ್ರಮ’ವು ಕಾಲಕಾಲಕ್ಕೆ ರಾಷ್ಟ್ರೀಯ ಮಹತ್ವದ ವಿಶೇಷ ಸಂದರ್ಭಗಳಲ್ಲಿ ಪ್ರೇರಣಾಪ್ರದವಾದ ವಿಶೇಷಾಂಕಗಳನ್ನು ಹೊರತಂದಿತು. ೧೯೬೮ರ ಗಣರಾಜ್ಯ

ದಿನೋತ್ಸವದ ಸಂಚಿಕೆಯನ್ನು ನಮ್ಮ ದೇಶದ ಔದ್ಯೋಗಿಕ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯ ನಿರೂಪಣೆಗೆ ಮೀಸಲಾಗಿಟ್ಟು ವಿಶೇಷ ಆಕಾರದಲ್ಲಿ ‘ಉದ್ಯಮ

ವಿಶೇಷಾಂಕ’ವಾಗಿ ಹೊರಡಿಸಲಾಯಿತು.

‘ವಿಕ್ರಮ’ದಲ್ಲಿ ಪ್ರಕಟವಾಗಿರುವ ಐತಿಹಾಸಿಕ ಕಥೆಗಳು ಮತ್ತು ದೇಶಭಕ್ತಿ ಗೀತೆಗಳು ಗುಣದಲ್ಲೂ ಸಂಖ್ಯೆಯಲ್ಲೂ ಕನ್ನಡ ಪತ್ರಿಕಾ ರಂಗದಲ್ಲೇ ಹೊಸ ದಾಖಲೆ

ನಿರ್ಮಿಸಬಲ್ಲವು. ಕರ್ನಾಟಕದ ಹಾಗೂ ಭಾರತದ ಖ್ಯಾತ ಲೇಖಕ-ಲೇಖಕಿಯರು ತಮ್ಮ ಱಲೇಖನ ಯೋಗೞದಿಂದ ‘ವಿಕ್ರಮ’ದ ಪುಟಪುಟಗಳನ್ನೂ

ಶ್ರೀಮಂತಗೊಳಿಸಿ ಅದರ ಖ್ಯಾತಿಯನ್ನು ಹೆಚ್ಚಿಸಿದ್ದಾರೆ. ಅನೇಕ ಮಹಾನುಭಾವರು ಬೇರೆ ಬೇರೆ ಸಂದರ್ಭಗಳಲ್ಲಿ ಱವಿಕ್ರಮೞ ಕಾರ‍್ಯಾಲಯಕ್ಕೆ ಆಗಮಿಸಿ ಅಲ್ಲಿನ

ಕೆಲಸ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ, ಪ್ರೋತ್ಸಾಹಿಸಿದ್ದಾರೆ. ಅವರೆಲ್ಲರ ಹೆಸರುಗಳನ್ನು ಬರೆಯಬೇಕೆಂಬ ಮನದಾಸೆಗೆ ಇಲ್ಲಿನ ಸ್ಥಳಾವಕಾಶ ಅಡ್ಡಿ ಬರುತ್ತಿದೆ.

ಅವರೆಲ್ಲರಿಗೂ ಇಲ್ಲಿ ಕೃತಜ್ಞತೆಗಳನ್ನು ಅರ್ಪಿಸಿ ತೃಪ್ತಿಗೊಳ್ಳಬೇಕಾಗಿದೆ.

ಹೋರಾಟ: ಕಾಶ್ಮೀರ-ಕನ್ಯಾಕುಮಾರಿ

ಹೋರಾಟದ ಗರ್ಭದಿಂದ ಹೋರಾಟದ ಸಲುವಾಗಿಯೇ ಹುಟ್ಟಿಬಂದು ಹೋರಾಟ ಮುಂದುವರಿಸುತ್ತಿದೆ ‘ವಿಕ್ರಮ’. ಈ ಹೋರಾಟ ಸ್ವದೇಶದ ಹಿತಕ್ಕಾಗಿ,

ಮೇಲ್ಮೆಗಾಗಿ; ರಾಷ್ಟ್ರದ ವೈರಿಗಳ ಮತ್ತು ರಾಷ್ಟ್ರಘಾತಕ ನೀತಿಗಳ ವಿರೋಧವಾಗಿ.

ಸ್ವಾತಂತ್ರ್ಯ ಬಂದ ನಂತರ ನಮ್ಮ ದೇಶಕ್ಕೆ ಎದುರಾದ ಬಹುಮುಖ್ಯ ಸಮಸ್ಯೆಗಳಲ್ಲಿ ಒಂದು – ಕಾಶ್ಮೀರದ ನಾಯಕರ ಒಡಕು ಪ್ರವೃತ್ತಿ. ಆಗ ಅಲ್ಲಿಗೇ ಒಬ್ಬ

ಪ್ರತ್ಯೇಕ ಪ್ರಧಾನಿ; ಪ್ರತ್ಯೇಕ ಧ್ವಜ, ಪ್ರತ್ಯೇಕ ರಾಜ್ಯಾಂಗ. ‘ವಿಕ್ರಮ’ ಇದನ್ನು ಬಲವಾಗಿ ಪ್ರತಿಭಟಿಸಿತು. ಆಗ ಪತ್ರಿಕಾರಂಗವೂ ಒಳಗೊಂಡಂತೆ ಸರ್ವರೂ ಶೇಖ್

ಅಬ್ದುಲ್ಲಾನನ್ನು ‘ಕಾಶ್ಮೀರದ ಸಿಂಹ’ ಎಂದು ಹೊಗಳುತ್ತಿದ್ದ ಕಾಲ. ಎಲ್ಲೆಲ್ಲೂ ನೆಹರೂ-ಅಬ್ದುಲ್ಲಾ ಗೆಳೆತನ್ನದ್ದೇ ಸ್ತುತಿಪಾಠ, ಶೇಖ ಸಾಹೇಬರು ಸಿಂಹದ ತೊಗಲಿನ

ನರಿ ಎಂಬುದನ್ನು ‘ವಿಕ್ರಮ’ ದಿಟ್ಟವಾಗಿ ಬಯಲು ಮಾಡಿತು.

ಕಾಶ್ಮೀರದ ಪ್ರತ್ಯೇಕತೆಯ ಕೂಗನ್ನು ಭಾರತದ ಜನತೆ ಸಹಿಸಲಿಲ್ಲ. ೧೯೫೩ರ ಜೂನ್ ತಿಂಗಳಲ್ಲಿ ಕಾಶ್ಮೀರ ಸತ್ಯಾಗ್ರಹ ಆರಂಭವಾಯಿತು. ಸಹಸ್ರಾರು ಕಂಠಗಳಿಂದ

“ಏಕ್ ಪ್ರಧಾನ್, ಏಕ್ ವಿಧಾನ್, ಏಕ್ ನಿಶಾನ್” ಘೋಷಣೆ ಮೊಳಗಿತು. ಅದನ್ನು ಕರ್ನಾಟಕದ ಜನತೆಗೆ ವಿವರವಾಗಿ ಪರಿಚಯಿಸಿದ ಶ್ರೇಯಸ್ಸು ‘ವಿಕ್ರಮ’ದ್ದು.

ಕರ್ನಾಟಕದಿಂದಲೂ ಅಲ್ಲಿಗೆ ಸತ್ಯಾಗ್ರಹಿಗಳ ತಂಡ ಹೊರಡುವಂತೆ ಕರೆ, ಪ್ರೇರಣೆ ನೀಡಿತು. ‘ವಿಕ್ರಮ’ ಶೇಖ್ ಅಬ್ದುಲ್ಲನ ದೇಶದ್ರೋಹವನ್ನು ನಿರ್ಭಯವಾಗಿ

ಖಂಡಿಸಿತು. ಆಗಿನ ಸತ್ಯಾಗ್ರಹದ ನಾಯಕತ್ವ ವಹಿಸಿದ್ದ ಡಾ. ಶ್ಯಾಮಪ್ರಸಾದ ಮುಖರ್ಜಿಯವರಂತಹ ಮೇಧಾವಿ ರಾಷ್ಟ್ರನಾಯಕರು ತಮ್ಮ ಅಮೂಲ್ಯ ಪ್ರಾಣ

ತೆರಬೇಕಾಗಿ ಬಂದಿತ್ತು.

ಕನ್ಯಾಕುಮಾರಿಯ ಬಳಿಯ ‘ವಿವೇಕಾನಂದ ಶಿಲೆ’ಯ ಮೇಲೆ ಕ್ರಿಶ್ಚಿಯನ್ನರ ಆಕ್ರಮಣ ಆದಾಗಲೂ ‘ವಿಕ್ರಮ’ವು ಹೋರಾಟಕ್ಕಿಳಿಯಿತು. ವಿವೇಕಾನಂದ ಸ್ಮಾರಕದ

ನಿರ್ಮಾಣಕ್ಕೆ ಬೆಂಬಲವಿತ್ತು, ಕನ್ನಡ ಜನತೆಗೆ ಆ ಭವ್ಯ ಯೋಜನೆಯ ಪರಿಚಯ ಮೊದಲು ನೀಡಿತು.

ಗೋವಾ ಸಮಸ್ಯೆಯ ಕಡೆಗೂ ಆರಂಭದಲ್ಲೇ ‘ವಿಕ್ರಮ’ ಜನರ ಗಮನ ಸೆಳೆಯಿತು. ಪೋರ್ಚುಗೀಸರ ದಬ್ಬಾಳಿಕೆಯನ್ನೂ ಹಿಂಸಾಚಾರವನ್ನೂ ಜನರೆದುರು ಎತ್ತಿ

ಸಾರಿತು. ಕುರುಡಾಗಿ ಕುಳಿತಿದ್ದ ಧೃತರಾಷ್ಟ್ರ ಸರಕಾರಕ್ಕೆ ಗೋವಾ ಸತ್ಯಾಗ್ರಹದ ಕುರುಕ್ಷೇತ್ರವನ್ನು ವರ್ಣಿಸಲು ಸಂಜಯನ ಪಾತ್ರ ನಿರ್ವಹಿಸಿತು. ಅದೇ ಸ್ವರದಿಂದಲೇ

ಜನ ಜಾಗೃತಿಯನ್ನು ಸಾಧಿಸಿತು. ಸತ್ಯಾಗ್ರಹದ ಸೇನಾನಿ ಶ್ರೀ ಜಗನ್ನಾಥರಾವ್ ಜೋಶಿಯವರ ಜೀವನ ಪರಿಚಯವನ್ನೂ, ಪೋರ್ಚುಗೀಸರ ಜೈಲಿನಲ್ಲಿ ಅವರಿಗೆ

ಕೊಟ್ಟ ಚಿತ್ರಹಿಂಸೆಗಳನ್ನೂ ಮೊಟ್ಟ ಮೊದಲಿಗೆ ವರದಿ ಮಾಡಿದ್ದು ‘ವಿಕ್ರಮ’ವೇ. ಗೋವಾ ಮುಕ್ತಿಗೆ ಸೈನಿಕ ಕಾರ್ಯಾಚರಣೆ ಅನಿವಾರ್ಯವೆಂದು ‘ವಿಕ್ರಮ’ ಒತ್ತಿ

ನುಡಿಯಿತು. ಕಡೆಗೆ ಆದದ್ದೂ ಹಾಗೆಯೇ.

‘ಪಂಚಶೂಲ’ ಕುರಿತು ಎಚ್ಚರಿಕೆ

ಎಲ್ಲ ಪತ್ರಿಕೆಗಳೂ ಏಕಮುಖವಾಗಿ ಪಂ. ನೆಹರೂರವರ ‘ಪಂಚಶೀಲ’ವನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದಾಗ, ಅವು ‘ಪಂಚಶೂಲ’ವೆಂಬುದನ್ನು ‘ವಿಕ್ರಮ’

ಮನಗಾಣಿಸಿಕೊಟ್ಟಿತು. ೧೯೫೪ರಷ್ಟು ಹಿಂದೆಯೇ ನೆಹರೂ-ಚೌ ಭೇಟಿಯನ್ನು ಖಂಡಿಸಿತು. ಚೀನವನ್ನು ನಂಬಬಾರದೆಂದು ಎಚ್ಚರಿಸಿತು. ಆ ನಂತರದ ದಿನಗಳಲ್ಲಿ

ಇಡೀ ದೇಶ ಮತ್ತು ಬಹುಪಾಲು ಪತ್ರಿಕೆಗಳು “ಚೀನಾ ನಂಬಿಕೆಗೆ ದ್ರೋಹ ಬಗೆಯಿತು. ಬೆನ್ನಿನಲ್ಲಿ ಇರಿಯಿತು” ಎಂದು ಗೋಳಾಡಿದವು. ‘ವಿಕ್ರಮ’ದ

ಭವಿಷ್ಯವಾಣಿ ನಿಜವಾಯಿತು. (ಚೀನಾವನ್ನು ಆ ನಂತರ ದೂಷಿಸಿದವರು, ಅದನ್ನು ನಂಬಿದ ತಮ್ಮ ಅಪರಾಧವನ್ನು ಮರೆಯುವಂತಿಲ್ಲ! ಇದು ‘ವಿಕ್ರಮ’ದ

ನಿಲುವು.)

ಚೀನಾದೆದುರು ಭಾರತದ ಸೋಲಿಗೂ, ಅಪಮಾನಕ್ಕೂ ಮುಖ್ಯ ಕಾರಣರಾದ ರಕ್ಷಣಾಮಂತ್ರಿ ಕೃಷ್ಣ ಮೆನನರ ರಾಜೀನಾಮೆಗೆ ಒತ್ತಾಯಿಸಿ, ‘ವಿಕ್ರಮ’ವು

ಜನಾಭಿಪ್ರಾಯವನ್ನು ಯಶಸ್ವಿಯಾಗಿ ರೂಪಿಸಿತು.

ಸೆಕ್ಯುಲರ್ ನಿದ್ದೆಗೆ ಗುದ್ದು

೧೯೫೪-೫೫ರಲ್ಲಿ ದೇಶದಲ್ಲಿರುವ ಪಾಕಿಸ್ಥಾನಿ ಶಕ್ತಿಗಳು ಊರೂರಿನಲ್ಲಿ ಪಾಕ್ ಧ್ವಜ ಹಾರಿಸಿ ಗಲಭೆ ಎಬ್ಬಿಸಲು ಪ್ರಯತ್ನಿಸಿದವು. ಅಂಥ ರಾಷ್ಟ್ರದ್ರೋಹಿ ಕೃತ್ಯವನ್ನು

ಖಂಡಿಸಲು ‘ವಿಕ್ರಮ’ ಮುಂದಾಯಿತು. ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಾಗ ಅವನ ಮೇಲೆ ಕ್ರಮ ಕೈಗೊಳ್ಳಬೇಕಾಗಿ

ಬಂದುದು ‘ವಿಕ್ರಮ’ದ ಒತ್ತಾಯದಿಂದಲೇ.

ಮಲ್ಲಪುರಂ ಜಿಲ್ಲೆಯ ರಚನೆಗೆ ಎದ್ದ ಮೊದಲ ವಿರೋಧದ ಸ್ವರ ‘ವಿಕ್ರಮ’ದ್ದು. ಬಾಗಲಕೋಟೆ, ಚಾಮರಾಜನಗರ ಮುಂತಾದ ಎಷ್ಟೋ ಕಡೆಗಳಲ್ಲಿ

‘ಅಲ್ಪಸಂಖ್ಯಾಕ’ರು ಗಲಭೆ ಎಬ್ಬಿಸಿ ಸಭ್ಯ ನಾಗರಿಕ ಹಕ್ಕುಗಳಿಗೆ ಮಾತ್ರವಲ್ಲ, ಅವರ ಪ್ರಾಣ-ಮಾನ-ಆಸ್ತಿಪಾಸ್ತಿಗಳಿಗೂ ಹಾನಿ ತಂದಾಗ ಸೆಕ್ಯೂಲರ್ ನಿದ್ದೆಯಿಂದ

ಆಡಳಿತಗಾರರನ್ನು ಎಚ್ಚರಗೊಳಿಸಿ ಕಣ್ಣು ತೆರೆಸಲು ‘ವಿಕ್ರಮ’ದ ಸಿಂಹಗರ್ಜನೆಯೇ ಬೇಕಾಯಿತು.

ಲಾಲಬಹಾದ್ದೂರರಿಗೆ ಕಿವಿಮಾತು

ಪಾಕಿಸ್ಥಾನದ ಯುದಟಛಿ ಸಿದಟಛಿತೆಗಳ ಬಗ್ಗೆ ಱವಿಕ್ರಮೞವು ೧೯೬೫ಕ್ಕಿಂತ ಬಹು ಮೊದಲೇ ಎಚ್ಚರಿಕೆಯ ಕಹಳೆ ಆರಂಭಿಸಿತ್ತು. ಕಛ್ ಒಪ್ಪಂದವು ರಾಷ್ಟ್ರ ಹಿತಕ್ಕೆ ಒದಗಿದ

ದೊಡ್ಡ ಧಕ್ಕೆ ಮತ್ತು ಜನತೆಯ ನಂಬಿಕೆಗೆ ದ್ರೋಹ ಎಂದು ಸಾರಿದ್ದೂ ‘ವಿಕ್ರಮ’ವೇ. ೧೯೬೫ರಲ್ಲಿ ಪಾಕಿಸ್ಥಾನದ ಮೇಲಿನ ವಿಜಯದಿಂದ ಜನತೆ ಮೈಮರೆತಿದ್ದಾಗಲೂ

ಕರೆಗಂಟೆ ಬಾರಿಸಿದ್ದು ‘ವಿಕ್ರಮ’ವೊಂದೇ: ನಮ್ಮ ಸೇನೆಗೆ ಮುಕ್ತ ಅವಕಾಶ ನೀಡದೆ ಅರ್ಧದಲ್ಲೆ ತಡೆಹಿಡಿದಿದ್ದರಿಂದ ಪಾಕಿಸ್ಥಾನದ ಯುದಟಛಿಪಿಪಾಸೆ ಅಡಗಿಲ್ಲ,

ಮತ್ತೊಂದು ಆಕ್ರಮಣಕ್ಕೆ ಅದು ಹಾತೊರೆಯುತ್ತದೆ ಎಂದು. ಭಾರತೀಯ ಸೈನಿಕರು ರಕ್ತ ಹರಿಸಿ ಗೆದ್ದ ನೆಲವನ್ನು, ಸಂಧಾನದ ಶಾಯಿ ಗೆರೆಯಿಂದ

ಕಳೆದುಕೊಳ್ಳಬಾರದೆಂದೂ ಱವಿಕ್ರಮೞ ಎಚ್ಚರಿಸಿತು. ಟಾಷ್ಕೆಂಟ್ ಒಪ್ಪಂದದ ಏರ್ಪಾಡು ಕೇವಲ ರಷ್ಯದ ಕುತಂತ್ರ, ಲಾಲಬಹದ್ದೂರ ಶಾಸ್ತ್ರಿಯವರು ಅಲ್ಲಿಗೆ

ಹೋಗದಿರುವುದೇ ಕ್ಷೇಮ ಎಂದು ಮುನ್ನೆಚ್ಚರಿಕೆ ನುಡಿಯಿತು. ಇಲ್ಲೂ ‘ವಿಕ್ರಮ’ದ ಸ್ವರ ಭವಿಷ್ಯದ ತೋರು ಬೆರಳೇ ಆಯಿತು.

೧೯೭೧ರಲ್ಲಿ ಬಂಗ್ಲಾದ ದಮನ ಆರಂಭವಾದಾಗಲೇ ಭಾರತವು ಪಾಕಿಸ್ಥಾನದ ಮೇಲೆ ಕ್ರಮ ಕೈಗೊಂಡಿದ್ದಲ್ಲಿ ತದನಂತರ ಅನೇಕ ಜಟಿಲ ಸಮಸ್ಯೆಗಳು

ಹುಟ್ಟಿಕೊಳ್ಳುತ್ತಿರಲಿಲ್ಲ ಎಂಬ ‘ವಿಕ್ರಮ’ದ ಬಹು ಮುಂಚಿನ ಅಭಿಪ್ರಾಯವನ್ನೇ ಇಂದು ತಜ್ಞರು ಅನುಮೋದಿಸುತ್ತಾರೆ.

ಕೇಂದ್ರದ ಮಂತ್ರಿ ಕೆ.ಡಿ. ಮಾಳವೀಯ-ಸಿರಾಜುದ್ದೀನ್ ಭ್ರಷ್ಟಾಚಾರ ಕಾಂಡವನ್ನು ‘ವಿಕ್ರಮ’ ನಿರ್ಭಯವಾಗಿ ಬಯಲಿಗೆಳೆಯಿತು.

ಗೋಹತ್ಯಾ ನಿರೋಧದ ಹೋರಾಟ ಮತ್ತು ಪ್ರಚಾರದಲ್ಲಿ ಸಹ ‘ವಿಕ್ರಮ’ ಪ್ರಮುಖ ಪಾತ್ರ ವಹಿಸಿತು.

ಶ್ರೀಮತಿ ಇಂದಿರಾಗಾಂಧಿಯವರು ೧೯೫೯ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಪದವಿಗೇರಿದಾಗ, ಅದರ ಸಂಕೇತ ಗ್ರಹಿಸಿದ ಶ್ರೀ ಎಂ.ಎನ್. ಥೋಲಾಲ್ ‘ನೆಹರೂ ನಂತರ

ಇಂದಿರಾಗಾಂಧಿ’ ಎಂಬ ಲೇಖನ ಬರೆದರು. ಅದನ್ನು ‘ವಿಕ್ರಮ’ವು ದಿ.೧೨.೩.೧೯೫೯ರ ಸಂಚಿಕೆಯಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಕಟಿಸಿತು. ಈಗಿನ

ಸಂದರ್ಭವು ಅದನ್ನು ಹೆಚ್ಚು ಅರ್ಥಭರಿತಗೊಳಿಸಿದೆಯಲ್ಲವೇ?

ದೊಡ್ಡವರ ಸಣ್ಣತನ

೧೯೬೨ರಲ್ಲಿ ‘ವಿಕ್ರಮ’ವು ತನ್ನ ಹೋರಾಟದ ಪ್ರವೃತ್ತಿಗೆ ತಕ್ಕಂತೆ ಮೈಸೂರಿನ ಜತ್ತಿ ಸರಕಾರದ ಅನ್ಯಾಯಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸಿತು. ಅದರ ಪರಿಣಾಮ

ಎಂದರೆ ಸರಕಾರಿ ಜಾಹೀರಾತಿಗೆ ಸಂಚಕಾರ ! (ಬರುತ್ತಿದ್ದುದೇ ತಿಂಗಳಿಗೆ ೮ ರೂ. ಗಳಷ್ಟು ಎಂಬ ಮಾತು ಬೇರೆ!) ಆಡಳಿತದ ಈ ಕೃಪಾಪ್ರಸಾದವನ್ನು ‘ವಿಕ್ರಮ’

ಎಂದೂ ನೆಚ್ಚಿ ಹೊರಟಿರಲಿಲ್ಲವೆನ್ನಿ.

ಮೈಸೂರು ರಾಜ್ಯದ ಗೃಹಮಂತ್ರಿಗಳೊಬ್ಬರು ಒಮ್ಮೆ ‘ವಿಕ್ರಮ’ ಸಂಪಾದಕರನ್ನು ತಾವಿದ್ದಲ್ಲಿಗೇ ಕರೆಸಿಕೊಂಡರು. “ನಿಮ್ಮ ಪತ್ರಿಕೆಯಲ್ಲಿ ಸರಕಾರದ ವಿರುದಟಛಿ ಬರೆದರೆ

ಕ್ರಮ ತೆಗೆದುಕೊಳ್ಳುತ್ತೇನೆ” ಎಂಬ ಬೆದರಿಕೆ ಹಾಕಿದರು. ಸರಕಾರಿ ‘ತೋಳ’ಗಳಿಗೆ ‘ವಿಕ್ರಮ’ದ ಸಿಂಹ ಜಗ್ಗಲಿಲ್ಲ. ಅದರ ಗರ್ಜನೆ ತಗ್ಗಲಿಲ್ಲ; ತಲೆ ಬಗ್ಗಲಿಲ್ಲ; ಆಗ

ಶಾಸನದಿಂದ ಮೊದಲ ಅಸ್ತ್ರಪ್ರಯೋಗ-ಜಾಹೀರಾತಿಗೆ ಖೋತಾ!

ಅಪ್ರಬುದಟಛಿ ಕೊಲೆಗಡುಕರು

ದೇಶದ ಒಳಗಿನ ಪಾಕಿಸ್ಥಾನಿ ಚಟುವಟಿಕೆಗಳನ್ನು ಬಯಲು ಮಾಡುತ್ತಲೇ ಬಂದಿದೆ ‘ವಿಕ್ರಮ’. ಅದರಿಂದ ಟಿಪ್ಪು ಸೇನೆ, ಮುಜಾಹಿದ್ ಸೇನೆ ಇವುಗಳಿಗೆ

ಆತಂಕವಾಯಿತು. ಅವುಗಳ ಹೆಸರಿನಲ್ಲಿ ಸಂಪಾದಕರಿಗೆ ಕೊಲೆ ಬೆದರಿಕೆ ಪತ್ರಗಳು ಬಂದವು. ಇತ್ತೀಚಿನ ‘ಸುಮಿತ್ರಾ ಪ್ರಕರಣ’ದ ವಿವರಗಳನ್ನು ಪ್ರಕಟಿಸಿದ್ದಕ್ಕಾಗಿಯೂ

ಅನಾಮಧೇಯರಿಂದ ಕೊಲೆ ಬೆದರಿಕೆಯ ಪುರಸ್ಕಾರವೇ ದೊರೆಯಿತು. ಪ್ರಾಣವನ್ನೇ ಪಣವಾಗಿಟ್ಟು ಮುನ್ನಡೆದಿರುವ ‘ವಿಕ್ರಮ’ ಇದಕ್ಕೆಲ್ಲ ಸೊಪ್ಪು ಹಾಕಲು ಹೇಗೆ

ಸಾಧ್ಯ?

ಕಿರುಕುಳದ ಕಿರಿಕಿರಿ

‘ವಿಕ್ರಮ’ದ ಲೇಖಕರು, ವರದಿಗಾರರ ಮೇಲೆ ಆಗಾಗ ಪೊಲೀಸರ ಕೃಪಾದೃಷ್ಟಿ ಬೀಳುವುದುಂಟು. ೧೯೬೨ರಲ್ಲಿ ಶ್ರೀ ಗೋಪಾಲಕೃಷ್ಣ ಅಡಿಗರ ‘ಗಜೇಂದ್ರ

ಮೋಕ್ಷ’ ಕವನ ‘ವಿಕ್ರಮ’ದಲ್ಲಿ ಪ್ರಕಟ ಆದಾಗ ಅವರ ಕಾಲೇಜಿಗೆ ಮ? ಮಹನೀಯರ ಭೇಟಿ! ಅರೆಶಿಕ್ಷಿತರಿಗೆ ಕಾಲೇಜು ಮೆಟ್ಟಿಲು ಹತ್ತುವ ಭಾಗ್ಯ! ಒಮ್ಮೆ

ಮೈಸೂರಿನ ‘ವಿಕ್ರಮ’ದ ವರದಿಗಾರರು ಅಲ್ಲಿನ ಆಹಾರ ಚಳುವಳಿ ಸಂಬಂಧವಾಗಿ ವರದಿ ಕಳಿಸಿದ್ದರು. ಅದು ಪ್ರಕಟಗೊಂಡಾಗ, ಅವರಿಗೂ ‘ಖಾಕಿ’ ದರ್ಶನ

ಆಯಿತು. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಶೋರಾಪುರದಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಯಿತು. ಅದರ ವಿವರ ‘ವಿಕ್ರಮ‘ದಲ್ಲಿ ಬಂತು. ಪೊಲೀಸರು ಆ ವರದಿ

ಕಳಿಸಿದವರನ್ನು ಪತ್ತೆಹಚ್ಚಿ, ಬೆದರಿಕೆ ಹಾಕಿದರು. ಈ ವಿಷಯವೂ ವರದಿಯಾಗಿ ಪ್ರಕಟವಾಯಿತು. ನೆತ್ತರನ್ನೇ ನೀರು ಮಾಡಿ ‘ವಿಕ್ರಮ’ವನ್ನು ಬೆಳೆಸಿರುವ ಜನ

ಇವಕ್ಕೆಲ್ಲ ಬಗ್ಗುವುದು ಸಾಧ್ಯವಾಗದ ಮಾತು.

ನ್ಯಾಯದ ಕೂಗಿಗೆ ಧ್ವನಿವರ್ಧಕ

ರಾಜ್ಯ ಪುನರ್ವಿಂಗಡಣೆಗೆ ಬಹು ಮೊದಲೇ ‘ವಿಕ್ರಮ‘ದ ಪ್ರಸಾರ ಕರ್ನಾಟಕದಾದ್ಯಂತ ಹರಡಿತ್ತು. ಕರ್ನಾಟಕ ಏಕೀಕರಣಕ್ಕೆ ಮತ್ತು ಕನ್ನಡವೇ ಎಲ್ಲ ಹಂತಗಳಲ್ಲೂ

ಆಡಳಿತ ಭಾಷೆ ಆಗಬೇಕೆಂಬುದಕ್ಕೆ ‘ವಿಕ್ರಮ’ದ ಒತ್ತಾಸೆ ಇದ್ದದ್ದೇ.

‘ವಿಕ್ರಮ’ವು ಆಗಿಂದಾಗ್ಗೆ ವಿದ್ಯಾರ್ಥಿಗಳು, ಅಧ್ಯಾಪಕರು, ಸರಕಾರಿ ಮತ್ತು ಇತರ ನೌಕರರು, ಕಾರ್ಮಿಕರು, ಇವರೆಲ್ಲರ ನ್ಯಾಯೋಚಿತ ಬೇಡಿಕೆಗಳಿಗಾಗಿ,

ಅವರ ಹಿತ ಸಾಧನೆಗಾಗಿ ಹೋರಾಡಿದೆ. ಆರ್ಥಿಕರಂಗದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಹೆಚ್ಚು ಉದ್ಯೋಗಾವಕಾಶ ಲಭಿಸುವಂತೆ ಮತ್ತು ಕೃಷಿಗೆ ಆದ್ಯತೆ

ದೊರೆಯುವಂತೆ ಪುನರ್ರೂಪಿಸಬೇಕೆಂದು ಒತ್ತಾಯಿಸುತ್ತಾ ಬಂದಿದೆ. ಅಲ್ಲದೆ, ಎಲ್ಲ ಹಂತಗಳಲ್ಲಿನ ಭ್ರಷ್ಟಾಚಾರ, ಲಂಚಗುಳಿತನ, ದುಂದುವೆಚ್ಚ, ಕಳ್ಳಸಾಗಾಣಿಕೆ

ಮುಂತಾದುವನ್ನು ಪರಿಣಾಮಕಾರಿಯಾಗಿ ಬಯಲಿಗೆಳೆದಿದೆ. ಉದ್ದಿಮೆಗಳ ರಾಷ್ಟ್ರೀಕರಣವನ್ನು ವಿರೋಧಿಸಿ, ಅನಿವಾರ್ಯ ಬುನಾದಿ ಕೈಗಾರಿಕೆಗಳನ್ನು ಮಾತ್ರ

ಸರಕಾರ ನಡೆಸಿ, ಉಳಿದವನ್ನು ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡಬೇಕೆಂದು ‘ವಿಕ್ರಮ’ವು ಸಾರಿದೆ.

ಪತ್ರಿಕಾ ಸ್ವಾತಂತ್ರ್ಯಕ್ಕಾಗಿ

ಪತ್ರಿಕಾ ಸ್ವಾತಂತ್ರ್ಯಕ್ಕೆ ಚ್ಯುತಿ ಬಂದಾಗಲೆಲ್ಲ ‘ವಿಕ್ರಮ’ದ ಗರ್ಜನೆ ಮೇಲೆದ್ದಿದೆ. ೧೯೫೦-೫೧ರಷ್ಟು ಹಿಂದೆಯೇ ‘ವಿಕ್ರಮ‘ವು ಆಗಿನ ಸರಕಾರದ ಮೊಂಡು ನೀತಿಯನ್ನು

ಖಂಡಿಸಿತು. ಅಭಿಪ್ರಾಯ ಸ್ವಾತಂತ್ರ್ಯದ ಕುರಿತು ಅಗ್ರಲೇಖನಗಳನ್ನು ಬರೆಯಿತು. ಇತರ ಪತ್ರಿಕೆಗಳಿಗೆ ಸರಕಾರದಿಂದ ಅನ್ಯಾಯವಾದಾಗಲೂ-ಉದಾಹರಣೆಗೆ,

೧೯೫೩ರಲ್ಲಿ ದಿಲ್ಲಿಯ ಉರ್ದು ಪತ್ರಿಕೆ ‘ದೈನಿಕ ಪ್ರತಾಪ್’ ಪ್ರಕಟಣೆಗೆ ಅಡ್ಡಿಪಡಿಸಿದಾಗ – ‘ವಿಕ್ರಮ’ ಅದನ್ನು ಬಲವಾಗಿ ವಿರೋಧಿಸಿತು. ‘ವಿಕ್ರಮ’ದ ಸಾರ್ಥಕ

ಅಸ್ತಿತ್ವವೇ ಅದರ ಪತ್ರಿಕಾ ಸ್ವಾತಂತ್ರ್ಯದ ಹೋರಾಟಕ್ಕೆ ಜೀವಂತ ಸಾಕ್ಷಿ.

ಸರ್ಕಾರಕ್ಕೆ ಮಂಗಳಾರತಿ!

ರಾಷ್ಟ್ರಹಿತಕ್ಕೆ ಹಾನಿಮಾಡಿ, ಪ್ರಜಾಕೋಟಿಯ ಖರ್ಚಿನಲ್ಲಿ ಅಲ್ಪಸಂಖ್ಯಾತರ

ರಕ್ಷಣೆ-ಪೋಷಣೆ-ರಂಜನೆಗಳಿಗಾಗಿಯೇ ಶ್ರಮಿಸುವುದು ತನ್ನ ಕರ್ತವ್ಯವೆಂಬಂತೆ ಭಾವಿಸುತ್ತಿದ್ದ ಕಾಂಗ್ರೆಸ್ ಸರಕಾರಕ್ಕೆ ‘ವಿಕ್ರಮ’ದ ಮೇಲೆ ಕಣ್ಣು ಕೆಂಪಾಗಿದ್ದರವಲ್ಲಿ

ಅಚ್ಚರಿಯೇನು? ಮಂಗಳೂರಿನಲ್ಲಿ ನಡೆದ ಮುಸಲ್ಮಾನರ ಗಲಭೆಗಳ ವಿವರವನ್ನು ಪ್ರಕಟಿಸಿದ್ದಕ್ಕಾಗಿ ಮೈಸೂರು ರಾಜ್ಯ ಸರಕಾರವು ‘ವಿಕ್ರಮ’ದ ಮೇಲೆ ‘ಪ್ರೆಸ್

ಕೌನ್ಸಿಲ್’ಗೆ ದೂರು ಕೊಟ್ಟಿತು. ಅದರ ಮರುತಿಂಗಳಲ್ಲೇ, ‘ಇನ್ನೂ ಅಳಿಸದಿರುವ ಇತಿಹಾಸದ ಕಳಂಕ’ ಎಂಬ ಲೇಖನ ಪ್ರಕಟವಾದುದರ ಬಗ್ಗೆ ಆಕ್ಷೇಪವೆತ್ತಿ

ಇನ್ನೊಂದು ದೂರು ಒಯ್ದಿತು. ೧೯೭೦ರಲ್ಲಿ “ಮಾಪಿಳ್ಳೆಗಳ ನೂರು ವರ್ಷಗಳ ರಕ್ತದಾಹದ ಚರಿತ್ರೆ”ಯನ್ನು ಮುದ್ರಿಸಿದ್ದಕ್ಕಾಗಿಯೂ ರಾಜ್ಯ ಸರಕಾರ ‘ಪ್ರೆಸ್

ಕೌನ್ಸಿಲ್’ ಮೆಟ್ಟಿಲು ಹತ್ತಿತು. ಕೌನ್ಸಿಲ್ ಈ ಮೂರೂ ಸಂದರ್ಭಗಳಲ್ಲಿ ‘ವಿಕ್ರಮ’ದ ಪರವಾಗಿ ತೀರ್ಪು ಕೊಟ್ಟಿತು. ಪತ್ರಿಕಾ ಕ್ಷೇತ್ರದಲ್ಲಿ ಈ ಮಂಡಲಿಯ

ತೀರ್ಮಾನವೇ ಅಂತಿಮವೂ ಸರ್ವಸಾಮಾನ್ಯವೂ ಆಗಿದ್ದು, ಅದರಿಂದ ‘ವಿಕ್ರಮ’ದ ಘನತೆ ಅಖಿಲ ಭಾರತ ಮಟ್ಟದಲ್ಲೂ ಏರಿತಲ್ಲದೆ, ಅಲ್ಪಸಂಖ್ಯಾತರ ಬಗ್ಗೆ

ಮೈಸೂರು ಸರಕಾರದ ತುಷ್ಟೀಕರಣ ಪ್ರವೃತ್ತಿಯೂ ಬಯಲಾಯಿತು. ‘ವಿಕ್ರಮ’ದ ಹೋರಾಟ ಇದೇ ರೀತಿಯಲ್ಲೇ ಅಪ್ರತಿಹತವಾಗಿ ಮುನ್ನಡೆಯಿತು.

ಆದರೆ ಸರಕಾರವು ರಾಷ್ಟ್ರಹಿತ ಮತ್ತು ಜನಹಿತವನ್ನು ಗಮನದಲ್ಲಿಟ್ಟು ಕೈಗೊಂಡ ಕ್ರಮಗಳಿಗೂ, ಯೋಜನೆಗಳಿಗೂ, ‘ವಿಕ್ರಮ’ವು ಸದಾ ಸ್ವಾಗತವನ್ನೇ ಬಯಸಿತು.

ಅಂತಹ ಪ್ರಸಂಗಗಳಲ್ಲಿ ಸರಕಾರವನ್ನು ಪ್ರಶಂಸಿಸಿ ಸಂಪಾದಕೀಯ ಲೇಖನಗಳನ್ನು ಬರೆಯಿತು. ವಿದೇಶಗಳಲ್ಲಿ ನಮ್ಮ ದೇಶಕ್ಕಾಗಲೀ, ದೇಶನಾಯಕರಿಗಾಗಲೀ

ಅಪಮಾನವಾಗುವುದನ್ನು ‘ವಿಕ್ರಮ’ ಎಳ್ಳಷ್ಟೂ ಸಹಿಸಿಲ್ಲ.

ರಾಷ್ಟ್ರೀಯ ಅಧಿಷ್ಠಾನ

ಯಾವುದೇ ಸಂಗತಿಯಿರಲಿ ಅದರಲ್ಲಿ ದೇಶಹಿತ ಎಷ್ಟರ ಮಟ್ಟಿಗೆ ಅಡಗಿದೆ ಎಂಬುದೇ ‘ವಿಕ್ರಮ’ದ ಅಳತೆಗೋಲು. ಭಾರತವು ಮೂಲತಃ ಹಿಂದುರಾಷ್ಟ್ರವೆಂದೂ,

ಹಿಂದುವಿನ ಉತ್ಥಾನವೇ ಈ ದೇಶದ ಉತ್ಥಾನ ಮತ್ತು ಹಿಂದುವಿನ ಪತನವೇ ಈ ದೇಶದ ಪತನ ಎಂದೂ ‘ವಿಕ್ರಮ’ವು ಮನಗಂಡಿದೆ. ಅದಕ್ಕಾಗಿಯೇ ಇಲ್ಲಿ

ನಡೆಯುವ ಎಲ್ಲ ಹಿಂದು ಕಾರ್ಯಗಳಿಗೂ ‘ವಿಕ್ರಮ’ವು ದೊಡ್ಡ ಬೆಂಬಲದ ಶಕ್ತಿಯಾಗಿದೆ. ಹಿಂದು ಸಮಾಜದ ದುಃಖದುಮ್ಮಾನಗಳಲ್ಲಿ ಸಹತಾಪವನ್ನೂ

ಸುಖಸಂತೋಷಗಳಲ್ಲಿ ಆನಂದವನ್ನೂ ವ್ಯಕ್ತಪಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದು ಪರಿಷತ್ ಮುಂತಾದ ಸಂಸ್ಥೆಗಳಿಗೆ ಒತ್ತಾಸೆಯನ್ನೂ

ಉತ್ತೇಜನವನ್ನೂ ನೀಡುತ್ತಿರುವುದೂ ಇದೇ ಕಾರಣದಿಂದಲೇ.

ಹೃದಯದ ಹಂಬಲ

ನಿಷ್ಕಳಂಕ ಪತ್ರಿಕೋದ್ಯಮದ ಹುಟ್ಟಿಗೆ ಜನಸೇವೆಯ ಕಳಕಳಿಯೇ ಪ್ರೇರಣೆ. ಅಂತಹ ಪತ್ರಿಕೆಗಳ ಬದುಕೆಂದರೇ ಒಂದು ದೊಡ್ಡ ಹೋರಾಟ. ‘ವಿಕ್ರಮ’ದ

೬೫ ವರ್ಷಗಳ ಯಶಸ್ವೀ ಜೀವನ ನಡೆದು ಬಂದ ದಾರಿ ಇದು. ಜನಮನಕ್ಕೊಂದು ಉತ್ತುಂಗ ದಿಕ್ಸೂಚಿ ಆಗಿ, ಕನ್ನಡ ಪತ್ರಿಕಾರಂಗದಲ್ಲಿ ತನ್ನದೇ ಆದ ವಿಶಿಷ್ಟ

ಪ್ರಯೋಜನಕಾರಿ ಪಾತ್ರ ಅದು ನಿರ್ವಹಿಸುತ್ತಾ ಬಂದಿದೆ. ಇಷ್ಟೆಲ್ಲ ಸಾರ್ಥಕ ಬದುಕಿಗೆ, ಸ್ವಾಭಾವಿಕವಾದ ಸುದೃಢ ಬೆಳವಣಿಗೆಗೆ ಕಾರಣ, ಓದುಗರ-ಜಾಹೀರಾತ

ದಾರರ-ಏಜೆಂಟರ ಆದರಾಭಿಮಾನಗಳ ನೀರು; ಮತ್ತು ಅದೆಷ್ಟೋ ಅಜ್ಞಾತ ಧ್ಯೇಯಜೀವಿಗಳ ತ್ಯಾಗ ಪರಿಶ್ರಮಗಳ ಬೆವರು! ಸ್ವರಾಷ್ಟ್ರ, ಸ್ವಸಂಸ್ಕೃತಿಗಳ ನಿಷ್ಠೆಯ

ಸೊಡರೇ ‘ವಿಕ್ರಮ’ದ ಕೈದೀವಿಗೆ. ಅದರ ಪಾವನ ಪ್ರಕಾಶದಿಂದ ಸಮಸ್ತ ಮಾನವಕುಲವನ್ನು ಬೆಳಗಬೇಕೆಂಬುದೇ ಅದರ ಹೃದಯದ ಹಂಬಲ.

ಮಂತ್ರಿಗಳ ಮೇಜಿನಿಂದ ಮತದಾರನ ಪಡಸಾಲೆಯವರೆಗೆ

ಇಂದಿನ ಪ್ರಚಾರ ಯುಗದಲ್ಲಿ ಯಾವುದೇ ವ್ಯಕ್ತಿಗಳ ಅಥವಾ ಪಕ್ಷಗಳ ಕೈಗೊಂಬೆಯಾಗದೆ, ಕೀಳುತಂತ್ರಗಳಿಗಿಳಿಯದೆ, ಸ್ವಂತ ಕಾಲಮೇಲೆ ಧ್ಯೇಯನಿಷ್ಠವಾಗಿ

ನಿಂತು ಪತ್ರಿಕೆ ನಡೆಸುವುದು ಒಂದು ದೊಡ್ಡ ಸವಾಲೇ ಸರಿ. ಆ ಸವಾಲನ್ನು ಸಹರ್ಷ ಸ್ವೀಕರಿಸಿ, ನಿರ್ಭಯತೆ, ಸತ್ಯಪ್ರಿಯತೆ, ವೈಚಾರಿಕ ಪ್ರಖರತೆ, ಮೇಲಾಗಿ

ರಾಷ್ಟ್ರಸೇವಾ ತತ್ಪರತೆಗಳ ಮೂಲಕ ‘ವಿಕ್ರಮ’ ಇಂದು ಕನ್ನಡ ನಾಡಿನಲ್ಲೇ ಅಲ್ಲದೆ ಕನ್ನಡಿಗರು ಇರುವಲ್ಲೆಲ್ಲ ಸುಪರಿಚಿತ. ಜನಜಾಗೃತಿಯ ಪ್ರಬಲ ಸಾಧನ,

ಪ್ರಭಾವಿ ಹರಿಕಾರ ಆಗಿದೆ ಅದು. ಸತತವಾಗಿ ರಾಷ್ಟ್ರದ ಸ್ವಾಭಿಮಾನಕ್ಕೆ ಪ್ರೇರಣೆ, ಸ್ವಾವಲಂಬನೆಗೆ ಸ್ಫೂರ್ತಿ ಕೊಡುತ್ತಿದೆ. ದೇಶದ್ರೋಹದ ಸುಳಿವು ಸಿಕ್ಕಾಗಲೆಲ್ಲ

ರಣಕಹಳೆ ಮೊಳಗಿಸಿದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ರಚನಾತ್ಮಕ ಸಲಹೆಗಳನ್ನು ಮುಂದಿಟ್ಟು ತಜ್ಞರ

ಯೋಜನೆಗಳನ್ನು ಅಚ್ಚುಕಾಣಿಸಿ, ದೇಶದ ಏಳಿಗೆಯ ದಿಗ್ದರ್ಶನವನ್ನೂ ಮಾಡಿದೆ. ಇಂದು ಜನಜೀನವದ ಸಕಲ ಶ್ರೇಣಿಗಳವರೂ ‘ವಿಕ್ರಮ’ದ ಓದುಗರಾಗಿದ್ದಾರೆ.

ಪಟ್ಟಣದ ಯಂತ್ರಜ್ಞನಿಂದ ಹಿಡಿದು ಹಳ್ಳಿಗಾಡಿನ ನೇಗಿಲಯೋಗಿಯವರೆಗೆ, ಮಂತ್ರಿಗಳ ಮೇಜಿನಿಂದ ಹಿಡಿದು ಮತದಾರನ ಪಡಸಾಲೆಯವರೆಗೆ ‘ವಿಕ್ರಮ’

ಹೋಗಿ ಮುಟ್ಟುತ್ತಿದೆ.

ತುರ್ತುಪರಿಸ್ಥಿತಿಯ ಕರಾಳತೆ

ಅಂದಿನ ಪ್ರಧಾನಿ, ಸರ್ವಾಧಿಕಾರಿಣಿ ಶ್ರೀಮತಿ ಇಂದಿರಾ ಗಾಂಧಿಯವರ ಕೃಪೆಯಿಂದ ಜೂನ್ ೧೯೭೫ರ ಕೊನೆಯಲ್ಲಿ ವಿಕ್ರಮ ಕಾರ್ಯಾಲಯ ಮತ್ತು ಕೇಸರಿ

ಮುದ್ರಣಾಲಯಕ್ಕೆ ಬೀಗಮುದ್ರೆ ಹಾಕಲಾಯಿತು. ಸಂಪಾದಕ ಬೆ.ಸು.ನಾ. ಮಲ್ಯ ಮತ್ತು ಕಾರ್ಯದರ್ಶಿ ಅರಕಲಿ ನಾರಾಯಣ್ ಅವರನ್ನು ಬಂಧಿಸಿ, ಮೀಸಾ

ಅನ್ವಯ ೨೧ ತಿಂಗಳ ಕಾಲ ಕಾರಾಗೃಹಕ್ಕೆ ತಳ್ಳಲಾಯಿತು. ೨೧ ತಿಂಗಳ ಬಳಿಕ ‘ವಿಕ್ರಮ’ದ ಬೀಗಮುದ್ರೆ ತೆಗೆದ ನಂತರ ‘ಪುನಶ್ಚ ಹರಿಓಂ‘ ಎಂಬಂತೆ ವಿಕ್ರಮದ

ಪ್ರಕಟಣೆ ಪುನರಾರಂಭಗೊಂಡಿತು. ಮತ್ತಾವ ಪತ್ರಿಕೆಯಾಗಿದ್ದಲ್ಲಿ ಈ ಘೋರ ಆಘಾತದಿಂದ ತಲೆಯೆತ್ತಲೂ ಸಾಧ್ಯವಾಗುತ್ತಿರಲಿಲ್ಲ; ಜನತೆಯ ಅಭಿಮಾನವೇ

ಪತ್ರಿಕೆಯ ಬಂಡವಾಳವಾಗಿತ್ತೆಂದೇ, ಪತ್ರಿಕೆಗೆ ನವಚೈತನ್ಯವುಂಟಾಯಿತು, ಮತ್ತೆ ನ್ಯಾಯಕ್ಕಾಗಿ ಸಂಘರ್ಷ ಮಾಡುವ ತನ್ನ ಕಾಯಕ ಮುಂದುವರಿಸಿತು.

ದ್ವಿತೀಯ ಏಜಂಟರ ಸಮ್ಮೇಳನ

ವಿಕ್ರಮವು ೪೦ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದಿ. ೩-೫-೧೯೮೭ರಂದು ವಿಕ್ರಮದ ಏಜಂಟರ ದ್ವಿತೀಯ ಪ್ರಾಂತೀಯ ಸಮ್ಮೇಳನವನ್ನು ಯಾದವರಾವ್

ಜೋಶಿಯವರು ಉದ್ಘಾಟಿಸಿದರು.ಹೊ. ವೆ. ಶೇಷಾದ್ರಿ ಮತ್ತು ಕೃ. ಸೂರ್ಯನಾರಾಯಣರಾವ್ ಅವರೂ ಮಾರ್ಗದರ್ಶನ ಮಾಡಿದರು. ಈ ಸಮಯದಲ್ಲಿ

ಸಂಪಾದಕ ಬೆ. ಸು. ನಾ. ಮಲ್ಯರ ಷಷ್ಠ್ಯಬ್ದಿ ಸಮಾರಂಭ ನಡೆದಿದ್ದು ಸ್ಮರಣೀಯ.

ತತ್ವನಿಷ್ಠ ಪತ್ರಕರ್ತನಿಗೆ ಸನ್ಮಾನ

ತತ್ವನಿಷ್ಠ ನಿರ್ಭೀತ ಸಂಪಾದಕ ಬೆ. ಸು. ನಾ. ಮಲ್ಯರು ವಿಕ್ರಮದಲ್ಲಿ ೪೦ ವರ್ಷಗಳ ಕಾಲ ಸತತವಾಗಿ ಸೇವೆ ಸಲ್ಲಿಸಿದ ನಿಮಿತ್ತ ದಿ. ೧-೧-೧೯೯೪ರಂದು

ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಅವರನ್ನು ಹಾರ್ದಿಕವಾಗಿ ಸನ್ಮಾನಿಸುವ ಭವ್ಯ ಕಾರ್ಯಕ್ರಮ ನಡೆಯಿತು. ಮಲ್ಯರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ

ಅಧ್ಯಕ್ಷ ನಾಡೋಜ ಜಿ. ನಾರಾಯಣ ಮತ್ತು ನಾಗಪುರದ ಹಿರಿಯ ಪತ್ರಕರ್ತ ಮಾ. ಗೋ. ವೈದ್ಯ ಅವರು ಗೀತೋಪದೇಶದ ಶ್ರೀಗಂಧದ ಕಲಾಕೃತಿಯನ್ನು

ನೀಡಿದರು. ಹಿರಿಯ ಪತ್ರಕರ್ತ ಇ. ಆರ್. ಸೇತುರಾಂ ಸನ್ಮಾನ ಸಮಿತಿಯ ಅಧ್ಯಕ್ಷರಾಗಿದ್ದರು. ಹಿರಿಯ ಪತ್ರಕರ್ತ ವೈ. ಕೆ. ರಾಜಗೋಪಾಲ್ ಅವರೂ ಮಲ್ಯರ

ಸದ್ಗುಣಗಳನ್ನು ಸ್ಮರಿಸಿದರು. ಹಿರಿಯ ಪ್ರಚಾರಕ ನ. ಕೃಷ್ಣಪ್ಪನವರು ತಮ್ಮ ಭಾಷಣದಲ್ಲಿ ಮಲ್ಯರ ಸ್ನೇಹಯುತ ವ್ಯವಹಾರವನ್ನು ಶ್ಲಾಘಿಸಿದರು.

ಸ್ವರ್ಣ ಜಯಂತಿ ಸಮಾರಂಭ

ವಿಕ್ರಮದ ಸ್ವರ್ಣ ಜಯಂತಿ ಕಾರ್ಯಕ್ರಮದ ಅಂಗವಾಗಿ ೧೯೯೮ರ ಸೆಪ್ಟೆಂಬರ್ ೨೬,೨೭ರಂದು ಪತ್ರಕರ್ತರ ಸಮ್ಮೇಳನ, ಏಜಂಟರ ಸಮ್ಮೇಳನ ನಡೆದವು.

ಸೆಪ್ಟೆಂಬರ್ ೨೭ರಂದು ಕುವೆಂಪು ಕಲಾಕ್ಷೇತ್ರದಲ್ಲಿ ಭವ್ಯ ಸಾರ್ವಜನಿಕ ಸಮಾರಂಭ ನಡೆಯಿತು.ನಾಡೋಜ ಜಿ. ನಾರಾಯಣ ಅವರು ವಿಕ್ರಮದ ಸ್ವರ್ಣ ಜಯಂತಿ

ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಸಾರ್ವಜನಿಕ ಸಮಾರಂಭದಲ್ಲಿ ಸಂಘದ ಸರಕಾರ್ಯವಾಹ ಹೊ. ವೆ. ಶೇಷಾದ್ರಿ ಮತ್ತು ಕೇರಳದ ವೇದ,

ಸಂಸ್ಕೃತ ವಿದ್ವಾಂಸ, ಖ್ಯಾತ ಮಲಯಾಳಂ ಕವಿ ಪ್ರೊ. ವಿಷ್ಣು ನಾರಾಯಣ ನಂಬೂದಿರಿಯವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಸಂಪಾದಕ

ಬೆ. ಸು. ನಾ. ಮಲ್ಯ, ಪ್ರಸರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ. ಕೃಷ್ಣಪ್ಪ, ಸಂಪಾದಕೀಯ ವಿಭಾಗದಲ್ಲಿ ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದ

ಕಾ. ರಮಾನಂದ ಆಚಾರ್ಯ, ಮೂರು ದಶಕಗಳಿಂದ ಜಾಹಿರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂ. ಎಸ್. ನಾಗರಾಜ ಇವರನ್ನು ಸನ್ಮಾನಿಸಲಾಯಿತು.

ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಕಾರ್ಯದರ್ಶಿ ಅರಕಲಿ ನಾರಾಯಣ್‌ಅವರ ಶ್ರೀಮತಿ ಅನ್ನಪೂರ್ಣ ಅರಕಲಿ ನಾರಾಯಣ್ ಅವರನ್ನೂ

ಸನ್ಮಾನಿಸಲಾಯಿತು. ಆಧ್ಯಾತ್ಮಿಕತೆಯೇ ಎಲ್ಲ ರಂಗಗಳ ನೆಲೆಗಟ್ಟಾಗಬೇಕು ಎಂದು ನಂಬೂದಿರಿಯವರು ಹಾರೈಸಿದರು. ರಾಷ್ಟ್ರೀಯ ಹಿತಾಸಕ್ತಿಯ ವಿಕ್ರಮ

ಬೆಳೆಯಬೇಕು ಎಂದರು ಹೊ. ವೆ. ಶೇಷಾದ್ರಿ. ವಿಕ್ರಮವು ವಜ್ರಮಹೋತ್ಸವವನ್ನು, ಶತಮಾನೋತ್ಸವವನ್ನು ಆಚರಿಸಲಿ, ಎಂದು ಅಧ್ಯಕ್ಷತೆ ವಹಿಸಿದ್ದ ನಾಡೋಜ

ಜಿ. ನಾರಾಯಣರು ಹಾರೈಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಮಾವೇಶವನ್ನು ಹಿರಿಯ ಪತ್ರಕರ್ತ ಸಂತೋಷ್‌ಕುಮಾರ ಗುಲ್ವಾಡಿಯವರು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತ

ನಿರಂಜನ ವಾನಳ್ಳಿ ಮತ್ತು ಬೆ. ಸು. ನಾ. ಮಲ್ಯ ಉಪಸ್ಥಿತರಿದ್ದರು.

ನವೀಕೃತ ಕಟ್ಟಡದಲ್ಲಿ ಕಾರ್ಯಾರಂಭ

ಬುದಟಛಿಪೂರ್ಣಿಮೆ, ಮೇ ೨೫ರಂದು ವಿಕ್ರಮದ ಸುಸಜ್ಜಿತ, ನವೀಕೃತ ಮೂರು ಮಹಡಿಯ ಕಟ್ಟಡದಲ್ಲಿ ಪ್ರಕಟಣೆಯ ಶುಭಾರಂಭವಾಯಿತು. ಎಲ್ಲ ಆಧುನಿಕ

ಸಂಪರ್ಕ ಸಾಧನ, ಅಂತರ್ಜಾಲ ಇತ್ಯಾದಿ ವ್ಯವಸ್ಥೆಗಳು ಈ ಕಾರ್ಯಾಲಯದಲ್ಲಿವೆ. ವಿಕ್ರಮದ ಸಂಪಾದಕ ಹಿರಿಯ ಪತ್ರಕರ್ತರಾದ ದು. ಗು. ಲಕ್ಷ್ಮಣ ಮತ್ತು

ವ್ಯವಸ್ಥಾಪಕರು ಶಿ. ನಾ. ಚಂದ್ರಶೇಖರ್.

ನಿಮಗಿದೋ ಭರವಸೆ!

ಹೋರಾಟ, ನಿತ್ಯ ಹೋರಾಟ, ನಿರಂತರ ಹೋರಾಟ-ಇದು ‘ವಿಕ್ರಮ’ದ ಜೀವದುಸಿರು. ಜೀವನದ ಶಾಶ್ವತ ಮೌಲ್ಯಗಳ ರಕ್ಷಣೆಗೆ ಪಣತೊಟ್ಟವರ ಧ್ಯೇಯವಾಕ್ಯ

ಇದು. ರಾಷ್ಟ್ರದೇವನ ಚರಣಗಳಲ್ಲಿ ಸೇವೆಗಾಗಿ ಮುಡುಪಾಗಿರುವ ಪ್ರತಿಜ್ಞೆಯನ್ನು ಪುನರುಚ್ಚರಿಸುತ್ತಾ, ಭಗವಂತನ ಕೃಪೆ ಮತ್ತು ಸಹೃದಯಿ ಬಾಂಧವರೆಲ್ಲರ ಸ್ನೇಹ

ಪೂರ್ಣ ಸಹಕಾರದಿಂದ ಸದಾ ಮುನ್ನಡೆಯುವ ಹಾಗೂ ರಾಷ್ಟ್ರಹಿತದ ಶಕ್ತಿಗಳನ್ನು ಬಲಪಡಿಸುವ ಮತ್ತು ರಾಷ್ಟ್ರಹಿತಕ್ಕೆ ವಿರೋಧವಾಗಿರುವ ಎಲ್ಲ ಶಕ್ತಿಗಳೊಡನೆ

ಹೋರಾಟ, ನಿತ್ಯ ಹೋರಾಟ, ನಿರಂತರ ಹೋರಾಟ ನಡೆಸುವ ಭರವಸೆಯನ್ನು ‘ವಿಕ್ರಮ’ನೀಡುತ್ತದೆ. ಅದಕ್ಕಾಗಿಯೇ, ಎಲ್ಲಿಯವರೆಗೆ ಅಧಿಕಾರಮದದಿಂದ

ಸ್ವಾರ್ಥಿ ಆಳರಸರು ಪ್ರಜಾ ಸಮುದಾಯವನ್ನು ಅಜ್ಞಾನದಲ್ಲಿಟ್ಟು ಶೋಷಿಸುತ್ತಾ ತಮ್ಮ ಅನ್ಯಾಯ ದಬ್ಬಾಳಿಕೆಗಳನ್ನು ಮುಂದುವರಿಸುವರೋ ಅಲ್ಲಿಯವರೆಗೂ

ಮತ್ತು ಅಲ್ಲಿಂದಾಚೆಗೂ ‘ವಿಕ್ರಮ’ವು ತನ್ನ ಕರ್ತವ್ಯಪಥ ಬಿಟ್ಟು ಕದಲದು; ತನ್ನ ಹೋರಾಟ, ಜನಜಾಗೃತಿಯ ಕಾರ್ಯ ನಿಲ್ಲಿಸದು.

ಸ್ವಯಮೇವ ಮೃಗೇಂದ್ರತಾ

‘ವಿಕ್ರಮ’ದ ಜಾತಿ ರಾಷ್ಟ್ರೀಯತೆ. ರಾಷ್ಟ್ರಕಾರ್ಯಕ್ಕಾಗಿ ಜನಮನವನ್ನು ಸಿದಟಛಿಗೊಳಿಸುವುದೇ ಅದರ ಧರ್ಮ. ದೇಶವೇ ಅದರ ದೇವರು. ಪ್ರಜಾತಂತ್ರಕ್ಕಾಗಿ

ಹೋರಾಡುವುದೇ ಅದರ ವ್ರತ. ರಾಷ್ಟ್ರಹಿತದ ಮಾರ್ಗದಲ್ಲಿ ನ್ಯಾಯತೂರ್ಯ ಮೊಳಗಿಸುತ್ತಾ ಅದು ಸಾಗುತ್ತದೆ.

ಏಕೋಽಹಮಸಹಾಯೋಽಹಂ ಕೃಶೋಽಹಮಪರಿಚ್ಛದಃ |

ಸ್ವಪ್ನೇಪ್ಯೇವಂವಿಧಾ ಚಿಂತಾ ಮೃಗೇಂದ್ರಸ್ಯ ನ ಜಾಯತೇ ||

(ನಾನು ಒಂಟಿಗ, ಸಹಾಯಕ್ಕೂ ಯಾರಿಲ್ಲ, ಕೃಶನಾಗಿರುವೆ, ಸಾಧನಗಳೊಂದೂ ಬಳಿಯಿಲ್ಲ ಎಂಬ ಚಿಂತೆ ಮೃಗರಾಜ ಸಿಂಹಕ್ಕೆ ಕನಸಿನಲ್ಲೂ ಬರುವುದಿಲ್ಲ.)

‘ವಿಕ್ರಮ’ದ ಸಿಂಹವೂ ಅದೇ ರೀತಿ ನಿರ್ಭಯವಾಗಿ ಗರ್ಜಿಸುತ್ತಾ ಮುನ್ನಡೆಯುತ್ತದೆ. ಅದು ಭಿಕ್ಷೆಯನ್ನೊಲ್ಲದು, ಎಂಜಲಿಗೆ ಬಾಯೊಡ್ಡದು; ಯಾರೋ

ಬೀಳಿಸಿದ ಹಳಸಲು ಶಿಕಾರಿ ಮೂಸದು. ಸದಾ ಉದ್ಯಮಶೀಲವಾಗಿ ಅಡ್ಡಿ ಆತಂಕಗಳ ಗಜ ಕುಂಭಗಳನ್ನು ಸೀಳಿಕೊಂಡು, ವರ್ಷವರ್ಷವೂ ಹಿಂದಿನದನ್ನು

ಸಿಂಹಾವಲೋಕನ ಮಾಡುತ್ತಾ ಮುಂದಿನ ತನ್ನ ಪಥವನ್ನು ತಾನೇ ನಿರ್ಮಿಸಿಕೊಳ್ಳುತ್ತಾ ಸಿಂಹಗಾಂಭೀರ್ಯದಿಂದ ಸಾಗಲಿದೆ. 

3 thoughts on “‘ವಿಕ್ರಮ’ 1948 – 2013 – ಸಾಗಿಬಂದ ಬಗೆ

  1. ತ್ರಿವಿಕ್ರಮವಾಗಿ ಮೆರೆಯುತ್ತಿರುವ ಸೆಲೆ…
    ಬಂಧುಗಳನ್ನು ಬೆಸೆದ ಬಲೆ…
    ಬಿತ್ತರಿಸುತ್ತಿದೆ ಹಿಂದುತ್ವದ ಅಲೆ..
    ಇದಕ್ಕೆ ಕಟ್ಟಲಾಗದು ಬೆಲೆ…

  2. ಮಾನ್ಯರೇ
    ವಿಕ್ರಮದ ಹೊಸದಾದ ಕಟ್ಟಡದ ಉದ್ಘಾಟನೆ ನೋಡಿ ಸಂತೋಷವಾಯಿತು. ಸುಮಾರು 45 ವರ್ಷಗಳಿಂದ ವಿಕ್ರಮವನ್ನು ಓದುತ್ತಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಹಿರಿಮೆ ಮತ್ತು ಗರಿಮೆಗಳು ಕಡಿಮೆಯಾಗುತ್ತಾ ಬಂದಾಗ ಅದಕ್ಕೆ ಚಂದಾದಾರನಾಗುವುದನ್ನು ನಿಲ್ಲಿಸಿದೆ. ವಿಕ್ರಮಕ್ಕೆ ಹಲವಾರು ಲೇಖನಗಳನ್ನು ಬರೆದಿದ್ದೇನೆ. ಎಲ್ಲವೂ ಧ್ಯೇಯದ ಒಲವಿನಿಂದ ಬರೆದನೇ ಹೊರತು ನಾನು ಒಂದು ಪೈಸೆಯನ್ನೂ ಸಂಭಾವನೆಯನ್ನಾಗಿ ಪಡೆಯಲಿಲ್ಲ. ವಿಕ್ರಮವು ಹಳೆಯ ಪೊರೆಯನ್ನು ಕಳಚಿ ಇನ್ನೂ ಹೆಚ್ಚು ಆಕರ್ಷಕವಾಗಿ ಹೊರಬರಲಿ ಎನ್ನುವುದೇ ನನ್ನ ಆಶಯ.
    ಮತ್ತೊಂದು ವಿಷಯ. ಇದು ಜಾಹಿರಾತಿಗೆ ಸಂಬಂದಿಸಿದುದು. ಹಣದ ಆಕರ್ಷಣೆಗೆ ಒಳಗಾಗಿ ವಿಕ್ರಮ ಎಲ್ಲ ತರಹೆ ಜಾಹೀರಾತನ್ನು ಪ್ರಕಟಿಸುತ್ತದೆ. ಇದು ತಪ್ಪು. ಉದಾಹರಣೆಗೆ ಮಂಗಳೂರು ಗಣೇಶ ಬೀಡಿ, 30 ಮಾರ್ಕಿನ ಬೀಡಿ ಮುಂತಾದ ಬೀಡಿ ಕಂಪನಿಗಳ ಜಾಹೀರಾತನ್ನು ವಿಕ್ರಮ ಹಾಕುತ್ತಲೇ ಬಂದಿದೆ. ತಂಬಾಕಿನ ಸೇವನೆ ಅಪಾಯಕಾರಿ ಎಂದು ಗೊತ್ತಿದ್ದೂ ಇಂತಹ ಪ್ರಕಟಣೆಗಳಿಗೆ ವಿಕ್ರಮ ಆಸ್ಪದ ನೀಡಿದ್ದದು ಅದರ ಮೇಲಿನ ಕಪ್ಪು ಚುಕ್ಕೆ ಎಂದು ನನ್ನ ಭಾವನೆ. ಈಗ ಬೀಡಿ, ಸಿಗರೇಟ್ ಮುಂತಾದ ತಂಬಾಕಿನ ತಯಾರಿಕೆಗಳ ಜಾಹೀರಾತಿಗೆ ಅವಕಾಶವಿಲ್ಲ ವೆಂದು ನನ್ನ ಅನಿಸಿಕೆ, ಇನ್ನು ಮುಂದಾದರೂ ಇಂತಹ ಜಾಹೀರಾತುಗಳನ್ನು ವಿಕ್ರಮ ಒಪ್ಪಬಾರದು.
    ವಿಕ್ರಮ ಒಂದು ಸಿದ್ಧಾಂತ ನಿಷ್ಠೆಯುಳ್ಲ ಪತ್ರಿಕೆ. ಸಿದ್ಧಾಂತ, ಆದರ್ಶಗಳು ಒಳ್ಲೆಯದೇ. ಆದರೆ ಸಂಘಟನೆ ಹೆಸರಿನಲ್ಲಿ ಜನತೆಯಲ್ಲಿ ವಿಸಂಘಟನೆ ಆಗುವ ಭಯದಿಂದ ಮೌಢ್ಯವನ್ನು ವಿರೋಧಿಸಿದೇ ಬಿಡಬಾರದು. ಉದಾಹರಣೆ, ಹಿಂದೂ ದೇವಸ್ಥಾನಗಳಲ್ಲಿ ನಡೆಯುವ ಬಹಿರಂಗ ಭೇದ ಮತ್ತು ಮೌಢ್ಯತೆ. ಮಡೆಸ್ನಾನ ಮತ್ತು ಭೋಜನ ಪಂಕ್ತಿಯಲ್ಲಿ ಭೇದ ಮುಂತಾದ ಸಮಾಜ ವಿದ್ರೋಹಿ ಕ್ರಿಯೆಗಳನ್ನು ವಿಕ್ರಮ ಬಲವಾಗಿ ವಿರೋಧಿಸಬೇಕು. ಯಾವುದೇ ಮಠಾದೀಶರ ಮುಲಾಜಿಗೆ ಒಳಗಾಗಿ ಇಂತಹ ಕೃತ್ಯಗಳನ್ನು ಸಹಿಸಬಾರದು.
    ವಿಕ್ರಮ ಸಮಾಜದಲ್ಲಿ ವೈಚಾರಿಕತೆಗೆ ಪ್ರೋತ್ಸಾಹವನ್ನು ಕೊಡಬೇಕು. ನಮ್ಮ ಸಮಾಜದಲ್ಲಿ ವೈಚಾರಿಕತೆಗೆ ನಾಂದಿ ಹಾಡಿದ್ದೇ ಆರ್ಯಸಮಾಜ. ವೇದೋಕ್ತ ವಿಚಾರಗಳನ್ನು, ಮತ್ತು ಆಚರಣೆಗಳನ್ನು ಎತ್ತಿಹಿಡಿದು ಅವೈದಿಕ ಅಚರಣೆಗಳನ್ನು ಆಮೂಲಾಗ್ರವಾಗಿ ವಿರೋಧಿಸಿ ಸಮಾಜಕ್ಕೆ ಒಂದು ದಾರಿದೀಪವನ್ನು ತೋರಿಸಿದ್ದೇ ಆರ್ಯಸಮಾಜ. ಆದರೆ ವಿಕ್ರಮದಲ್ಲಿ ಆರ್ಯಸಮಾಜಕ್ಕೆ ಸಂಬಂದಿಸಿದಂತೆ ಲೇಖನಗಳನ್ನು ಪ್ರಕಟಿಸುವುದೇ ಇಲ್ಲ. ಇದು ತುಂಬಾ ತಪ್ಪು. ಇಂದು ನಮ್ಮ ಬುದ್ಧಿ ಜೀವಿಗಳಿಗೆ ಧರ್ಮದ ಕುರಿತು ಸರಿಯಾದ ಮಾಹಿತಿಯಿಲ್ಲ. ಕೇವಲ ದೇವಸ್ಥಾನ ಮತ್ತು ಕೆಲವು ಆಚರಣೆಗಳೇ ಧರ್ಮವೆಂಬ ಕಲ್ಪನೆ ಅವರಲ್ಲಿದೆ. ಅವರಿಗೆ ಸಾರ್ವಕಾಲಿಕವಾದ್ದೂ, ಸಾರ್ವದೇಶಿಕವಾದದ್ದೂ ಮತ್ತು ಸಾರ್ವಭೌಮ ವೇದಗಳ ಬಗ್ಗೆ ಯಾವುದೇ ಪರಿಚಯವಿಲ್ಲ. ಸಂಘದ ಸ್ವಯಂಸೇವಕರಿಗೂ ಇದರ ಪರಿಚಯವಿಲ್ಲ. ಹಾಗಾಗಿ ಮತೀಯ ಮೌಢ್ಯವನ್ನೇ ಧರ್ಮವೆಂದು ಬಿಂಬಿಸಲಾಗುತ್ತಿದೆ. ಇದು ಹೋಗಬೇಕು. ಕೊನೆ ಪಕ್ಷ ಸಂಘ ಪರಿವಾರದವರಿಗೆ ನಮ್ಮ ಅಮೂಲ್ಯವೇದಗಳ ನಿಜವಾದ ಅರ್ಥದ ಪರಿಚಯವಾಗಬೇಕು. ಕೇವಲ ಮಂತ್ರದ ಪಠಣ ವೇದವಲ್ಲ. ಅದರಲ್ಲಿರುವ ಏಕತೆ, ಐಕ್ಯತೆ ಮತ್ತು ಸಮಾನತೆಗಳ ಪರಿಚಯವಾಗಬೇಕು. ಇದು ಸಾಧ್ಯವಾಗಬೇಕಾದಲ್ಲಿ ವಿಕ್ರಮವು ಆರ್ಯಸಮಾಜದೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸಿ, ವೈಜ್ಞಾನಿಕತೆಯನ್ನು ಜನತೆಯಲ್ಲಿ ಬಿತ್ತುವ ಪ್ರಯತ್ನ ಮಾಡಬೇಕು. ಇದು ಸಾಧ್ಯವಾದಲ್ಲಿ ವಿಕ್ರಮದ ನೂತನ ಮರುಹುಟ್ಟಿಗೆ ಒಂದು ಅರ್ಥಬರುತ್ತದೆ. ಇಲ್ಲವಾದಲ್ಲಿ ಅದು ಒಂದು ಕರ್ಮಠತೆಯಲ್ಲಿ ಸಿಗುವ ಸಂಭವವಿರುತ್ತದೆ. ಕರ್ಮಠತೆ ಒಳಗಾಗಿದ್ದರಿಂದಲೇ ವಿಕ್ರಮದ ಪ್ರಸಾರ ಯಾವ ಕಾಲದಲ್ಲೂ 20000 ದಾಟಲಿಲ್ಲ. ವಿಕ್ರಮದ ಪ್ರಸಾರಕ್ಕೆ ಒಂದು ಬಾರಿ ಸಹಿ ಹಾಕುವ ಪ್ರಮೇಯ ಒದಗಿ ಬಂದುದರಿಂದ ನನಗೆ ಈ ವಿಷಯ ಗೊತ್ತಿದೆ. ಜನತೆಯಲ್ಲಿ ಕೇವಲ ಕ್ಷೋಭೆ, ದ್ವೇಷ ಉಂಟು ಮಾಡುತ್ತಿರುವ ಕೆಲವು ಪೀತ ಪತ್ರಿಕೆಗಳ ಪ್ರಸಾರ ಲಕ್ಷಕ್ಕೂ ಮೀರಿದೆ. ಆದರೆ ಜನಗಳ ನಡುವೆ ಪ್ರೀತಿ, ಸಮಾನತೆಯನ್ನು ಮೂಡಿಸುವ ಕಂಕಣ ತೊಟ್ಟಿರುವ ವಿಕ್ರಮದ ಪ್ರಸಾರ ಇನ್ನು ಮುಂದಾದರೂ ಹೆಚ್ಚಾಗಲಿ ಎಂದು ಆಶಿಸಿ ನನ್ನ ಅನಿಸಿಕೆಗೆ ವಿರಾಮ ಹಾಡುತ್ತೇನೆ.

  3. ಅದೆಷ್ಟೋ ವರುಷಗಳಿಂದ ವಿಕ್ರಮ ಓದುತ್ತಿರುವ ನನಗೆ ಈ ಪತ್ರಿಕೆಯಲ್ಲಿ ಕಾಲ ಕಾಲಕ್ಕೆ ಆಗುತ್ತಿರುವ ಬದಲಾವಣೆಯ ಮಹತ್ವ ತಿಳಿದಿದೆ. ದು.ಗು.ಲ. ಅವರ ಸಂಪಾದಕತ್ವದಲ್ಲಿ ಇಂದು ಇನ್ನಷ್ಟು ಮೆರಗು ಪಡೆದಿದೆ. ಅಂದು ಬೆ.ಸು.ನಾ.ಮಲ್ಯರು ಪಟ್ಟ ಅವಿರತ ಶ್ರಮ ಇಂದಿನ ಪೀಳಿಗೆಗೆ ತಿಳಿಯದಿದ್ದರೂ ಆ ಪತ್ರಿಕೆಯು ಉಳಿದು ನಮ್ಮೆಲ್ಲರಿಗೂ ರಾಷ್ಟ್ರ ಕಾರ್ಯದಲ್ಲಿ ಸದಾ ಪ್ರೇರಣೆಯಾಗುತ್ತಿರುವುದಂತೂ ಖಂಡಿತ. ಸ್ವಂತ ಕಟ್ಟಡವನ್ನು ಹೊಂದಿದ ಸಮಯದಲ್ಲಿ ನಡೆಸಿದ ಕಾರ್ಯಕ್ರಮದಿಂದ ಸಂತೋಷವಾಗಿದೆ. ಪ್ರಸಾರ ಸಂಖ್ಯೆ ಜಾಸ್ತಿಯಾಗಲಿ. ಕೊಂಡು ಓದುವವರು ಹೆಚ್ಚಾಗಲಿ. ದೇಶ ಕಾರ್ಯಕ್ಕೆ ಸದಾ ಸ್ಫೂರ್ತಿಯ ಸೆಲೆಯಾಗಿರಲಿ ಎಂದು ಈ ಸಂದರ್ಭದಲ್ಲಿ ಆಶಿಸುವೆ.

Leave a Reply

Your email address will not be published.

This site uses Akismet to reduce spam. Learn how your comment data is processed.