ಬೆಂಗಳೂರು: ಫೆಬ್ರವರಿ 25: ಮಂಗಳೂರಿನಲ್ಲಿ ನಡೆದ ಆರ್ ಎಸ್ ಎಸ್ ಬೃಹತ್ ಸಮಾವೇಶ ‘ವಿಭಾಗ ಸಾಂಘಿಕ್’ ಇದೀಗ ವಿನೂತನ ತಂತ್ರಜ್ಞಾನದೊಂದಿಗೆ ಅಂತರ್ಜಾಲ ನೋಡುಗರ ಕಣ್ಮನ ಸೆಳೆಯುತ್ತಿದೆ. 360 Degree Virtual Tour ಎಂಬ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಆರ್ ಎಸ್ ಎಸ್ ಗಣವೇಷಧಾರಿ ಸ್ವಯಂಸೇವಕರು ಸೇರಿದಂತೆ, 1 ಲಕ್ಷಕ್ಕೂ ಮಿಕ್ಕಿ ಜನಸಾಗರ ನೆರೆದಿದ್ದ ಮಂಗಳೂರು ಸಮಾವೇಶವು
ಇಂಟರ್ನೆಟ್ ವೀಕ್ಷಕರಿಗೆ ಹೊಸ ಪುಳಕ ನೀಡುತ್ತಿದೆ. ಎಲ್ಲಾ ಕೋನಗಳನ್ನು ಏಕಕಾಲಕ್ಕೆ ಸೆರೆಹಿಡಿಯುವ (360 ಡಿಗ್ರಿ ಸುತ್ತಳತೆಯಲ್ಲಿ) ನೂತನ ತಂತ್ರಜ್ಞಾನದ ಡಿಜಿಟಲ್ ಕೆಮರಾದಲ್ಲಿ ಸೆರೆಹಿಡಿಯಲಾದ ಸಾಂಘಿಕ್ ಕಾರ್ಯಕ್ರಮದ ಅಂತರ್ಜಾಲತಾಣದ ಪುಟವನ್ನು ಆರ್ ಎಸ್ ಎಸ್ ಸಹ ಸರಕಾರ್ಯವಾಹ ಶ್ರೀ ಸುರೇಶ ಸೋನಿ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಸೋಮವಾರ ಉದ್ಘಾಟಿಸಿದರು.
ಆರೆಸ್ಸೆಸ್ ಅಖಿಲ ಭಾರತೀಯ ಮುಖಂಡರುಗಳಾದ ಡಾ। ಮನಮೋಹನ್ ವೈದ್ಯ, ಮಧುಭಾಯಿ ಕುಲಕರ್ಣಿ, ಜೆ. ನಂದಕುಮಾರ್, ಅರುಣ್ ಕುಮಾರ್, ಅಶೋಕ್ ಭೇರಿ ಸೇರಿದಂತೆ ಇತರ ಗಣ್ಯರು ಈ ಅಂತರ್ಜಾಲ ಪುಟವನ್ನು ವೀಕ್ಷಿಸಿದರು.
ಆರೆಸ್ಸೆಸ್ ವೆಬ್ ಸೈಟ್ www.samvada.org ಅಥವಾ www.vibhagsanghik.samvada.org ತಾಣಕ್ಕೆ ಭೇಟಿ ನೀಡಿ ಮಂಗಳೂರು ಆರೆಸ್ಸೆಸ್ ಸಮಾವೇಶದ ವಿಶೇಷ ಕ್ಯಾಮೆರಾ ಚಿತ್ರಗಳನ್ನು ವೀಕ್ಷಿಸಬಹುದು.
Hari Om,
This 360 degree Virtual Tour is amazing.
inti,
Swayam Sevaka
excellent work.hoping for a bright future for Bharath
GLORIUS HISTORY,VASCLLATING PRASENT AND BRIGHT FUTURE AHEAD WITH THE YOUNG PEOPLE