ದಾವಣಗೆರೆ: ದಾವಣಗೆರೆಯ ಸ್ವಾಮಿ ವಿವೇಕಾನಂದ ಚಿಂತನ ಪ್ರತಿಷ್ಠಾನ ಹಾಗೂ ರಾಮಕೃಷ್ಣ ಮಠ ಮತ್ತು ಮಿಶನ್ ಸ್ವಾಮಿ ವಿವೇಕನಂದ ಜ್ಯೋತಿ ಯಾತ್ರೆ ಹಾಗೂ ಬೃಹತ್ ಯುವ ಸಮಾವೇಶ ಕಾರ್ಯಕ್ರಮನಡೆಯಿತು.ದಿನಾಂಕ ಜನವರಿ ೧೮ ಮತ್ತು ೧೯ ರಂದು ದಾವಣಗೆರೆಯ ಮೋತಿವೀರಪ್ಪ ಕಾಲೇಜು ಆವರಣದಲ್ಲಿ ಕಾರ್ಯಕ್ರಮಗಳು ನಡೆದವು .
ದಿನಾಂಕ ೧೮ ಸಾಯಂಕಾಲ ಜ್ಯೋತಿಗೆ ಭವ್ಯ ಸ್ವಾಗತ ಮತ್ತು ಉದ್ಘಟನೆ ನಡೆಯಿತು .ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಉದ್ಘಟನೆ ನೆರವೇರಿಸಿದರು
ದಿನಾಂಕ ೧೯.೦೧.೧೨ ನೇ ಬೆಳಿಗ್ಗೆ ಬೃಹತ್ ಸಭಾ ಕಾರ್ಯಕ್ರಮದಲ್ಲಿ ಜಾಗೋ ಭಾರತ್ನ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣಕಾರರಗಿ ಮಾತನಾಡುತ್ತ. ವಿದೇಶದಲ್ಲಿ ಭಾರತಿಯರ ಧಾರ್ಮಿಕ , ಸಂಸೃತಿಕ ಪರಂಪರೆಯ ಡಿಂಡಿಮ ಭಾರಿಸಿದ ವಿವೇಕನಂದರ ೧೫೦ ನೇ ಜನ್ಮ ದಿನೋತ್ಯವವನ್ನು ದೇಶದಾದ್ಯಂತ ಅದ್ದೂರಿಯಾಗಿ ಆಚರಿಸುವ ಮೂಲಕ ನೂರಾರು ವರ್ಷಗಳಾದರು ಅವರನ್ನು ಯುವಕರು ಸೇರಿದಂತೆ ದೇಶಾದ್ಯಂತ ಈ ಕಾರ್ಯಕ್ರಮದ ಮೂಲಕ ಯುವ ಜಾಗೃತಿ ಮುಡುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಹರಟೆ ಕಾರ್ಯಕ್ರಮದ ಖ್ಯಾತಿಯ ಶ್ರೀ ಹಿರೇಮಂಗಳೂರು ಕಣ್ಣನ್ , ಶ್ರೀ ಮತಿ ಇಂದುಮತಿ ಕುಲಪತಿಗಳು ದಾವಣಗೆರೆ ವಿಶ್ವವಿದ್ಯಾನಿಲಯ , ಡಾಃ ಎ.ಹೆಚ್ ಶಿವಯೋಗಿಸ್ವಾಮಿ ,ಗುರುನಾಥ್ ಜಿ.ಎಂ ಸಿದ್ದೇಶ್ವರ (ಎಂ.ಪಿ) ಎಸ್.ಎ ರವೀಂದ್ರನಾಥ್ ಜಿಲ್ಲಾ ಉಸ್ತುವಾರಿ ಸಚಿವರು ಮುತಾದವರು ಭಾಗವಹಿಸಿದ್ದರು.