ಬೆಂಗಳೂರು: ರಾಜ್ಯದ ಸುದ್ದಿ ಸಂವಹನ ಸಂಸ್ಥೆ ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವರ್ಷಂಪ್ರತಿ ಕೊಡಮಾಡುವ ಮಾಧ್ಯಮ ಪ್ರಶಸ್ತಿಗಳು ಪ್ರಕಟವಾಗಿದೆ‌. 2025ನೇ ಸಾಲಿನ ಪ್ರಶಸ್ತಿ ವಿಜೇತರ ಕುರಿತು ಮಾಹಿತಿ ಇಲ್ಲಿದೆ‌.

ತಿ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿಗೆ ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ, ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಗೆ ಸುಧರ್ಮ ಸಂಸ್ಕೃತ ಪತ್ರಿಕೆಯ ಸಂಪಾದಕಿ ಕೆ.ಎಸ್.ಜಯಲಕ್ಷ್ಮಿ, ಎಂ.ವಿ.ಕಾಮತ್ ಪತ್ರಿಕೋದ್ಯಮ ಪ್ರಶಸ್ತಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಹಾಯಕ ಸ್ಥಾನೀಯ ಸಂಪಾದಕ ರಾಮು ಪಾಟಿಲ್, ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿಗೆ ನ್ಯೂಸ್ 18 ಕನ್ನಡದ ಹರಿಪ್ರಸಾದ್ ಎ, ಹೊ.ವೆ.ಶೇಷಾದ್ರಿ ಅಂಕಣಕಾರ ಪ್ರಶಸ್ತಿಗೆ ಖ್ಯಾತ ಅಂಕಣಕಾರ ರಾಧಾಕೃಷ್ಣ ಕಲ್ಚಾರ್, ವಿಎಸ್ ಕೆ ಡಿಜಿಟಲ್ ಮಾಧ್ಯಮ ಪ್ರಶಸ್ತಿಗೆ ಟಿವಿ ವಿಕ್ರಮದ ಮುಮ್ತಾಜ್ ಅಬ್ದುಲ್ ನೆಲ್ಯಡ್ಕ ಭಾಜನರಾಗಿದ್ದಾರೆ.

ಶ್ರೀ ರವಿ ಹೆಗಡೆ
ಶ್ರೀಮತಿ ಕೆ.ಎಸ್. ಜಯಲಕ್ಷ್ಮೀ

ಶ್ರೀ ರಾಮು ಪಾಟೀಲ್
ಶ್ರೀ ಹರಿಪ್ರಸಾದ್ ಎ
ಶ್ರೀ ರಾಧಾಕೃಷ್ಣ ಕಲ್ಚಾರ್
ಕು. ಮುಮ್ತಾಸ್ ಅಬ್ದುಲ್ ನೆಲ್ಯಡ್ಕ

ವಿಎಸ್ ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 29, 2025 ಭಾನುವಾರ ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್, ವಿಶ್ವ ಸಂವಾದ ಕೇಂದ್ರ ಕರ್ನಾಟಕ ಇದರ ಅಧ್ಯಕ್ಷ ವಿ.ಶ್ರೀಧರ ಉಪಸ್ಥಿತರಿರಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 8722552497ಗೆ ಸಂಪರ್ಕಿಸಿ.

Leave a Reply

Your email address will not be published.

This site uses Akismet to reduce spam. Learn how your comment data is processed.