ಜಗತ್ತು ಅಭಿವೃದ್ಧಿಯೆಡೆಗೆ ಸಾಗಿದಂತೆಲ್ಲಾ ಎಲ್ಲಾ ಕ್ಷೇತ್ರಗಳಲ್ಲೂ ಮಹತ್ತರವಾದ ಬದಲಾವಣೆಗಳಾಗುತ್ತವೆ. ಇಂತಹ ಬದಲಾವಣೆಗಳಾದ ಮಾತ್ರಕ್ಕೆ ಒಂದು ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ಎಲ್ಲಾ ತಂತ್ರಜ್ಞಾನಗಳು ಮೂಲೆಗುಂಪಾಗಲಾರದು. ಸಾರ್ವಕಾಲಿಕವಾಗಿ ಉಳಿಯಬಲ್ಲ ತಂತ್ರಜ್ಞಾನಗಳನ್ನು ಪ್ರತಿ ಕಾಲಘಟ್ಟವೂ ಕೊಡುಗೆಯಾಗಿ ನೀಡಿದೆ‌. ಸಾರಿಗೆ ಕ್ಷೇತ್ರದಲ್ಲೂ ಈ ಬದಲಾವಣೆ ಸಹಜವಾಗಿಯೇ ಆಗಿದ್ದರೂ ಸೈಕಲ್ ಎಂಬ ಸಾರ್ವಕಾಲಿಕವಾಗಿ ಉಳಿಯಬಲ್ಲ ಆವಿಷ್ಕಾರ ಇಂದಿಗೂ ಅಸಂಖ್ಯಾತ ಮಂದಿಗೆ ಅಚ್ಚುಮೆಚ್ಚಿನ ವಸ್ತುವಾಗಿದೆ‌.

ಇಂದಿನ ದಿನಗಳಲ್ಲಿ ಆರೋಗ್ಯ ದೃಷ್ಟಿಯಿಂದ ದೇಹದ ಫಿಟ್ನೆಸ್ ಅತ್ಯವಶ್ಯಕ. ಯಾಕೆಂದರೆ ಈಗ ಒತ್ತಡ ಜೀವನಶೈಲಿ, ಆಹಾರ ಪದ್ಧತಿಗಳಿಂದ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರೂ ಅನಾರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ಕಾರಣಕ್ಕಾಗಿ ದೇಹದ ದೈಹಿಕ ಯೋಗಕ್ಷೇಮ ಮತ್ತು ಮಾನಸಿಕವಾಗಿ ಸದೃಡವಾಗಿರಲು ಯೋಗ, ವ್ಯಾಯಾಮ, ಸೈಕ್ಲಿಂಗ್‌ ಇತ್ಯಾದಿಗಳತ್ತ ಜನರು ಚಿತ್ತವನ್ನು ವಹಿಸಿದ್ದಾರೆ. ಅದರಲ್ಲೂ ಬೈಸಿಕಲ್‌ ಸವಾರಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಾಕಾರಿಯಲ್ಲದೆ ಅತ್ಯಂತ ಆನಂದದಾಯಕ ಚಟುವಟಿಕೆಗಳಲ್ಲಿ ಒಂದಾಗಿದೆ. ಈ ಕಾರಣಕ್ಕಾಗಿ ಇದರ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವುದಾಗಿ ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷದ ವಿಶ್ವ ಬೈಸಿಕಲ್‌ ದಿನದ ಥೀಮ್‌ “Promoting Health, Equity and Sustainability through Cycling.”


ಇತಿಹಾಸ
ಆರೋಗ್ಯವಾಗಿರಲು ಬೈಸಿಕಲ್‌ ಗಳನ್ನು ತಮ್ಮ ಆದ್ಯತೆಯ ಸಾರಿಗೆ ವಿಧಾನವಾಗಿ ಆಯ್ಕೆ ಮಾಡಲು, ಸುಸ್ಥಿರ ಸಾರಿಗೆ ವಿಧಾನವಾಗಿ ಬೈಸಿಕಲ್‌ ಗಳ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿಸುತ್ತದೆ. ಹೀಗಾಗಿ ಏಪ್ರಿಲ್‌ 2018ರಲ್ಲಿ ಪ್ರತಿ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವಾಗಿ ಆಚರಿಸಲಾಗುವುದು ಎಂದು ವಿಶ್ವಸಂಸ್ಥೆ ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಜೂನ್ 3 ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಸೈಕ್ಲಿಂಗ್ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗುವ ಉತ್ತಮ ವ್ಯಾಯಾಮದ ಮಾರ್ಗವಾಗಿದೆ.


ಮಹತ್ವ

  1. ಫಿಟ್ನೆಸ್ : ಇದು ಪ್ರಾಯೋಗಿಕತೆ ಮತ್ತು ವ್ಯಾಯಾಮವನ್ನು ಸಂಯೋಜಿಸುವ ಮೂಲಕ ಜಾಗತಿಕವಾಗಿ ಲಕ್ಷಾಂತರ ಜನರು ಬಳಸುವ ಸಕ್ರಿಯ ಸಾರಿಗೆಯನ್ನು ಈ ದಿನ ಪ್ರೋತ್ಸಾಹಿಸಲಾಗುತ್ತದೆ
  2. ಪರಿಸರ : ಬೈಸಿಕಲ್ ಬಳಕೆ ಪರಿಸರಕ್ಕೆ ಪೂರಕವಾಗಿದ್ದು ಯಾವುದೇ ರೀತಿಯ ಮಾಲಿನ್ಯವನ್ನು ಈ ಸಾರಿಗೆಯ ಉಪಯೋಗ ಒಳಗೊಂಡಿರುವುದಿಲ್ಲ.
  3. ಜೀವನಶೈಲಿ: ಉತ್ತಮ ಜೀವನಶೈಲಿಯ ಭಾಗವಾಗಿ ಇಂದು ಸೈಕಲ್ ಗಳ ಬಳಕೆಯಾಗುತ್ತಿದ್ದು, ಸಮಾನ ಮನಸ್ಕ ಸೈಕ್ಲಿಸ್ಟ್ ಗಳ ನಡುವೆ ಸಾಹಸ ಮತ್ತು ಬಂಧವನ್ನು ಬೆಸೆಯುವ ಕೊಂಡಿಯೂ ಆಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.