ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಗಿಡ ಮರಗಳನ್ನು ಬಳಸಿ ಪರಿಸರ ಉಳಿಸಿ ಎಂಬ ಮಾತುಗಳನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಇಂದು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಮಾಲಿನ್ಯಗಳಿಂದ ವಾತಾವರಣ ಹದೆಗೆಡುತ್ತಿದೆ. ಇದರಿಂದಾಗಿ ಎಲ್ಲರ ಆರೋಗ್ಯದಲ್ಲೂ ಏರುಪೇರು ಆಗುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಮರಗಳನ್ನು ಸಂರಕ್ಷಿಸುವ ಬದಲು ಕಡಿಯುವ ಸಂಖ್ಯೆ ಹೆಚ್ಚಳವಾಗಿದೆ. ಈ ಕಾರಣದಿಂದ ಸರಿಯಾದ ಸಮಯಕ್ಕೆ ಮಳೆ, ಬೆಳೆಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಭವಿಷ್ಯದಲ್ಲಿ ಉತ್ತಮ ಜೀವನಕ್ಕೆ ಈಗಿರುವ ಪರಿಸರವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯತೆ ನಿರ್ಮಾಣವಾಗಿದೆ. ನಾವು ಜೀವನದಲ್ಲಿ ಪ್ರಕೃತಿಯನ್ನೇ ಸಂಪೂರ್ಣವಾಗಿ ಅವಲಂಬಿಸಿಕೊಂಡಿದ್ದೇವೆ. ಪರಿಸರವಿಲ್ಲದೆ ನಾವು ಈ ಗ್ರಹದಲ್ಲಿ ಜೀವಸಂಕುಲವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಪರಿಸರಕ್ಕೆ ಪೂರಕವಲ್ಲದ ಹೊಸ ಹೊಸ ಆವಿಷ್ಕಾರಗಳು ಇಂದು ಹಲವಾರು ಬದಲಾವಣೆಗಳನ್ನು ತಂದುವೊಡ್ಡಿದೆ. ಇದರಿಂದ ಪ್ರಕೃತಿ ನಾಶ ಆಗುತ್ತಿದೆ. ಇದಕ್ಕಾಗಿಯೇ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆ ನಮ್ಮ ಕರ್ತವ್ಯ ಎನ್ನುವುದನ್ನು ತಿಳಿಸುವ ಸಲುವಾಗಿ ಪ್ರತಿ ವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.


ಮನುಷ್ಯರು, ಪ್ರಾಣಿ-ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವ ಸಂಕುಲದ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗೆ ಪರಿಸರ ಬಹಳ ಮುಖ್ಯವಾಗಿದೆ. ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಪರಿಸರ ದಿನದ ಥೀಮ್‌ “Land restoration, desertification and drought resilience”.


ಇತಿಹಾಸ
ವಿಶ್ವಸಂಸ್ಥೆಯಲ್ಲಿ 1972ರಂದು ಮಾನವ ಪರಿಸರದ ಸಮ್ಮೇಳನ ಸ್ವೀಡನ್ ನ ಸ್ಟಾಕ್‌ ಹೋಮ್‌ ನಲ್ಲಿ ನಡೆದಿತ್ತು. ಈ ವೇಳೆ ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸುವುದಾಗಿ ಘೋಷಣೆ ಮಾಡಿತು. ಆದ್ದರಿಂದ ಯುಎನ್ಇಪಿ ನೇತೃತ್ವದಲ್ಲಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1974ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜೂನ್‌ 5ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಇದು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಮತ್ತು ಪರಿಸರ ರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.


ವಿಶ್ವ ಪರಿಸರ ದಿನ ಆಚರಣೆ ಏಕೆ?
ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಅರಿವು ಮೂಡಿಸುವುದು ಮತ್ತು ಮಾನವ ಚಟುವಟಿಕೆಗಳಿಂದ ಉಂಟಾಗುವ ಹೆಚ್ಚಿನ ಹಾನಿಯನ್ನು ತಡೆಗಟ್ಟಲು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಪರಿಸರದ ಮೇಲೆ ಪರಿಣಾಮ ಬೀರಲು ಜಾಗತಿಕ ತಾಪಮಾನವು ಮುಖ್ಯ ಕಾರಣ. ಹೀಗಾಗಿ, ಪರಿಸರವನ್ನು ಉಳಿಸುವುದು ಮತ್ತು ರಕ್ಷಿಸುವುದು ನಮ್ಮ ಕರ್ತವ್ಯ. ನಮ್ಮ ಉಳಿವಿಗಾಗಿ ಮತ್ತು ಮುಂದಿನ ಪೀಳಿಗೆಗೆ ಪರಿಸರ ಮೂಲಭೂತ ಅವಶ್ಯಕತೆಯಾಗಿದೆ.


ಮಹತ್ವ
• ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೇಪಿಸಲಾಗುವುದು.
• ಪ್ರಕೃತಿಯ ಉದ್ಯಾನವನಗಳನ್ನು ಅನ್ವೇಷಿಸಲು ಈ ದಿನ ಪ್ರೋತ್ಸಾಹಿಸಲಾಗುತ್ತದೆ.

• ಮಾನವ ಯೋಗಕ್ಷೇಮದಲ್ಲಿ ಪ್ರಕೃತಿಯ ಸಂಕೀರ್ಣಗಳ ಪಾತ್ರದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
• ಪರಿಸರಕ್ಕೆ ಹಾನಿ ಮಾಡದಂತೆ ಜನರಿಗೆ ಜಾಗೃತಿ ಮೂಡಿಸಲು ಸಹಾಯವಾಗುತ್ತದೆ.
• ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ನಡೆಸಲು ಸಹಾಯಕವಾಗಿದೆ
• ಗಾಳಿ, ಭೂಮಿ ಮತ್ತು ನೀರನ್ನು ಹಾಳು ಮಾಡುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ದಿನ ಪ್ರಯೋಜನಕಾರಿಯಾಗಿದೆ.
• ನಮ್ಮ ಉಳಿವಿಗೆ ಬೆದರಿಕೆಗಳನ್ನು ಪರಿಹರಿಸಲು ಸಹಯೋಗದ ಪ್ರಯತ್ನಗಳನ್ನು ಪ್ರೇರೇಪಿಸುತ್ತದೆ.
• ಭೂಮಿಯ ದುರ್ಬಲ, ಅನಿವಾರ್ಯ ಸಂಪನ್ಮೂಲಗಳ ಬಗ್ಗೆ ಶಿಕ್ಷಣ ನೀಡುವುದಕ್ಕೆ ಉಪಯೋಗವಾಗುತ್ತದೆ‌.

Leave a Reply

Your email address will not be published.

This site uses Akismet to reduce spam. Learn how your comment data is processed.