ಸಮಾಜದಲ್ಲಿ ಶೋಷಣೆ, ಜಾತಿ, ಧರ್ಮ, ಶಿಕ್ಷಣದಲ್ಲಿ ಅಸಮಾನತೆ , ಮೂಢನಂಭಿಕೆಗಳಂತಹ ಅನರ್ಥ ಆಚರಣೆ ಇಂದಿಗೂ ಕಾಣುತ್ತವೆ. ಇಂತಹ ಯಾವುದೇ ತಾರತಮ್ಯಗಳನ್ನು ನಿರ್ಮೂಲನೆ ಮಾಡಲು ಮತ್ತು ತಾರತಮ್ಯದಿಂದ ಜನರನ್ನು ರಕ್ಷಿಸಲು ಕೆಲವು ಕಾನೂನುಗಳನ್ನು ಜಾರಿಗೊಳಿಸುವ ನೈತಿಕ ಮತ್ತು ಕಾನೂನು ಬಾಧ್ಯತೆಯನ್ನು ರಾಜ್ಯಗಳು ಹೊಂದಿದೆ. ಹೀಗಾಗಿ ಪ್ರತಿಯೊಬ್ಬರೂ ವಯಸ್ಸು, ಲಿಂಗ, ಜನಾಂಗೀಯತೆ, ಬಣ್ಣ, ಎತ್ತರ, ತೂಕ ಈ ಎಲ್ಲವನ್ನು ಮರೆತು ಒಬ್ಬರಿಗೊಬ್ಬರು ಗೌರವವನ್ನು ನೀಡುವ ಬಾಧ್ಯತೆಯನ್ನು ಜಾಗೃತಗೊಳಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 1 ರಂದು ಶೂನ್ಯ ತಾರತಮ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಶೂನ್ಯ ತಾರತಮ್ಯ ದಿನದ ಥೀಮ್ “ಜೀವಗಳನ್ನು ಉಳಿಸಿ, ಅಪರಾಧಮುಕ್ತಗೊಳಿಸಿ” ಎಂಬ ವಿಷಯದ ಅಡಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.


ಇತಿಹಾಸ
ವಿಶ್ವಸಂಸ್ಥೆ ಮತ್ತು ಇತರ ಅಂತರಾಷ್ಟ್ರೀಯ ಸಂಸ್ಥೆಗಳು ಪ್ರತಿವರ್ಷ ಮಾರ್ಚ್ 1 ರಂದು ಶೂನ್ಯ ತಾರತಮ್ಯ ದಿನವನ್ನಾಗಿ ಆಚರಿಸುತ್ತವೆ. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳಲ್ಲಿ ಕಾನೂನಿನ ಮುಂದೆ ಮತ್ತು ಆಚರಣೆಯಲ್ಲಿ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಈ ದಿನ ಹೊಂದಿದೆ. ಹ್ಯೂಮನ್ ಇಮ್ಯುನೊಡಿಫಿಷಿಯನ್ಸಿ ವೈರಸ್ (ಎಚ್ಐವಿ) ಮತ್ತು ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಕುರಿತ ವಿಶ್ವಸಂಸ್ಥೆಯ ಜಂಟಿ ಕಾರ್ಯಕ್ರಮವಾದ ಯುಎನ್ಎಐಡಿಎಸ್ (United Nations Programme on HIV/AIDS) 2013 ರ ಡಿಸೆಂಬರ್ ನಲ್ಲಿ ‘ವಿಶ್ವ ಏಡ್ಸ್ ದಿನ’ ದಂದು ಶೂನ್ಯ ತಾರತಮ್ಯ ಅಭಿಯಾನವನ್ನು ಪ್ರಾರಂಭಿಸಿದ್ದರು. ನಂತರ ಮಾರ್ಚ್ 1, 2014 ರಂದು ಈ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಯುಎನ್ಎಐಡಿಎಸ್ ನ ಆಗಿನ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಸಿಡಿಬೆ 2014 ರಲ್ಲಿ ಬೀಜಿಂಗ್ನಲ್ಲಿ ನಡೆದ ಪ್ರಮುಖ ಕಾರ್ಯಕ್ರಮದೊಂದಿಗೆ ಈ ದಿನವನ್ನು ಪ್ರಾರಂಭಿಸಿದರು.


ಮಹತ್ವ
ಈ ದಿನ ಎಲ್ಲಾ ರೀತಿಯ ತಾರತಮ್ಯವನ್ನು ಹೊಗಲಾಡಿಸುವ ಸಲುವಾಗಿ ವಿಶ್ವಾದ್ಯಂತ ಒಗ್ಗಟ್ಟಿನಿಂದ ಅಭಿಯಾನ ರಚಿಸಲು ಮಹತ್ವ ಕೊಡುಗೆ ನೀಡುತ್ತದೆ. 2014 ಮಾರ್ಚ್‌ 1 ರಂದು ಶೂನ್ಯ ತಾರತಮ್ಯ ದಿನವನ್ನಾಗಿ ಆಚರಿಸುತ್ತದೆ. ಹೆಚ್‌ ಐವಿ ಏಡ್ಸ್‌ ಹೊಂದಿರುವ ವ್ಯಕ್ತಿಗಳ ಮೇಲೆ ಆಗುತ್ತಿರುವ ತಾರತಮ್ಯವನ್ನು ನಿರ್ಮೂಲನೆ ಮಾಡುವುದು ಇದರ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ಎಚ್‌ ಐವಿ ಹಾಗೂ ಏಡ್ಸ್‌ ಹೊಂದಿದ ವ್ಯಕ್ತಿಗಳ ವಿರುದ್ಧ ಹೋರಾಡುವ ಯುಎನ್ಐಡಿಎಸ್‌ ನಂತಹ ಸಂಸ್ಥೆಗಳು ಈ ದಿನವನ್ನು ವಿಶೇಷವಾಗಿ ಗಮನ ನೀಡುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.