ನಾಗ್ಪುರ. ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗವು ಇಂದು ಬೆಳಿಗ್ಗೆ ನಾಗಪುರದ ರೇಶಿಮ್ಬಾಗ್ನಲ್ಲಿರುವ ಡಾ. ಹೆಡ್ಗೆವಾರ್ ಸ್ಮೃತಿ ಭವನ ಸಂಕೀರ್ಣದ ಮಹರ್ಷಿ ವ್ಯಾಸ ಸಭಾಂಗಣದಲ್ಲಿ ಪ್ರಾರಂಭವಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಶ್ರೀ.ಮಂಗೇಶ್ ಭೇಂಡೆಯವರು ಮಾತನಾಡುತ್ತಾ” ಸಂಘದ ಶಿಕ್ಷಾ ವರ್ಗಕ್ಕೆ ಬಂದ ಶಿಕ್ಷಾರ್ಥಿಗಳ ಭಾಷೆ ಬೇರೆ, ಆದರೆ ಎಲ್ಲರ ಹೃದಯದ ಭಾಷೆ ಒಂದೇ. ಈ ಏಕಾತ್ಮತೆಯಿಂದಲೇ ಎಲ್ಲರಿಗೂ ಭಾವ ಅರ್ಥವಾಗುತ್ತದೆ ಹಾಗಾಗಿ ಭಾಷೆಯ ಯಾವುದೇ ತೊಂದರೆ ಇರುವುದಿಲ್ಲ. ಇದೇ ಸಂಘದ ಶಿಕ್ಷಣ ವರ್ಗದ ವಿಶೇಷತೆ. ಮುಂದಿನ ಇಪ್ಪತ್ತೈದು ದಿನಗಳ ಕಾಲ ಇಲ್ಲಿ ಶಿಕ್ಷಣಾರ್ಥಿಗಳು ಒಟ್ಟಾಗಿ ಕಲೆಯುತ್ತಾರೆ. ವರ್ಗ ಮುಗಿದು ಹೊರಡುವಾಗ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳತೊಡಗುತ್ತಾರೆ.” ಎಂದರು.
ಮುಂದುವರೆದು ಮಾತನಾಡುತ್ತಾ “ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಮನಸ್ಸಿನಲ್ಲಿ ಕೆಲಸದ ಕಡೆಗೆ, ಆಲೋಚನೆಯ ಕಡೆಗೆ ನಂಬಿಕೆ ಇರಬೇಕು. ನಂಬಿಕೆ ಇದ್ದಾಗ ಎಲ್ಲವೂ ಸಾಧ್ಯ ಮತ್ತು ಅದರಿಂದ ಜ್ಞಾನವೂ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಂಡು, ಕಲಿಯುತ್ತಾ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು.ಇದಕ್ಕೆ ಸಂಘದ ಶಿಕ್ಷಣ ವರ್ಗವೂ ಸಹಾಯಕವಾಗುತ್ತದೆ.”
1927 ರಲ್ಲಿ ನಡೆದ ಮೊದಲ ಸಂಘ ಶಿಕ್ಷಾ ವರ್ಗವನ್ನು ಉಲ್ಲೇಖಿಸಿದ ಮಂಗೇಶ್ ಭೇಂಡೆ ಅವರು ನಾಗ್ಪುರದ ಕೇಂದ್ರ ಕಚೇರಿ ಬಳಿಯ ಹಳೆಯ ಮೋಹಿತೆ ವಾಡಾದಲ್ಲಿ ನಡೆದ ಈ ವರ್ಗವು ಆರಂಭವಾದಾಗ ಒಟ್ಟು ಹದಿನೇಳು ಸ್ವಯಂಸೇವಕರಿದ್ದರು.ಅಂದಿನಿಂದ ನಿರಂತರವಾಗಿ ಈ ವರ್ಗವು ನಡೆಯುತ್ತಿವೆ. ಇವುಗಳಲ್ಲಿ, 1948 ಮತ್ತು 1977 ರಲ್ಲಿ ಸಂಘದ ಮೇಲೆ ವಿಧಿಸಲಾದ ನಿರ್ಬಂಧಗಳು ಹಾಗು ಕರೋನಾ ಅವಧಿಯ ಸಮಯ ಮಾತ್ರ ಅಪವಾದವಾಗಿದ್ದು, ಉಳಿದ ವರ್ಷಗಳಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ತೃತೀಯ ವರ್ಷದ ಶಿಕ್ಷಾ ವರ್ಗದ ಪದಾಧಿಕಾರಿಗಳು ಹಾಗೂ ಉಪಸ್ಥಿತರಿದ್ದ ಅಖಿಲ ಭಾರತ ಪದಾಧಿಕಾರಿಗಳನ್ನು ಪರಿಚಯಿಸಲಾಯಿತು. ಪುಷ್ಪಾರ್ಚನೆಯನ್ನು ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾದ ಭಯ್ಯಾಜಿ ಜೋಶಿ ನೆರವೇರಿಸಿದರು.
ಒಟ್ಟು 735 ಪ್ರಶಿಕ್ಷಣಾರ್ಥಿಗಳು ತರಗತಿಯಲ್ಲಿ ಭಾಗವಹಿಸಿದ್ದಾರೆ. 35 ಪ್ರಾಂತ ಪ್ರಮುಖರು ಮತ್ತು 96 ಶಿಕ್ಷಕರು ಉಪಸ್ಥಿತರಿರುತ್ತಾರೆ.ಮೇ 21ರಂದು ಸಂಜೆ ಪಥ ಸಂಚಲನ ನಡೆಯಲಿದ್ದು ವರ್ಗವು 2 ಜೂನ್ 2022 ರಂದು ಕೊನೆಗೊಳ್ಳುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷದ ಶಿಕ್ಷಾ ವರ್ಗ – ಅಧಿಕಾರಿ ಪರಿಚಯ
ಶಿಬಿರದ ಸರ್ವಾಧಿಕಾರಿ : ಶ್ರೀ. ಅಶೋಕ್ ಪಾಂಡೆ (ಪ್ರಾಂತ ಸಂಘಚಾಲಕರು, ಮಧ್ಯ ಭಾರತ)
ಕಾರ್ಯವಾಹ : ಶ್ರೀ. ಖ್ವಾ. ರಾಜೇನ್ ಸಿಂಗ್ (ಕ್ಷೇತ್ರ ಕಾರ್ಯವಾಹ, ಅಸ್ಸಾಂ ಕ್ಷೇತ್ರ)
ಪಾಲಕ ಅಧಿಕಾರಿ: ಶ್ರೀ. ಮಂಗೇಶ್ ಭೇಂಡೆ ಜಿ (ಅಖಿಲ ಭಾರತ ವ್ಯವಸ್ಥಾ ಪ್ರಮುಖ್)
ಮುಖ್ಯ ಶಿಕ್ಷಕ: ಶ್ರೀ ಪ್ರಶಾಂತ್ (ಪ್ರಾಂತ ದೈಹಿಕ ಶಿಕ್ಷಣ ಪ್ರಮುಖ, ಕೇರಳ ಪ್ರಾಂತ)
ಸಹ ಮುಖ್ಯ ಶಿಕ್ಷಕರು : ಶ್ರೀ ಎ. ಸಿ. ಪ್ರಭು (ಪ್ರಾಂತ ದೈಹಿಕ ಶಿಕ್ಷಣ ಪ್ರಮುಖ್, ತಮಿಳುನಾಡು ಪ್ರಾಂತ)
ಬೌದ್ಧಿಕ ಪ್ರಮುಖ್ : ಶ್ರೀ. ಅನಿಲ್ ಜೋಶಿ (ಬೌದ್ಧಿಕ ಶಿಕ್ಷಣ ಪ್ರಮುಖ್, ಪಶ್ಚಿಮ ಕ್ಷೇತ್ರ)
ಸಹ-ಬೌದ್ಧಿಕ ಪ್ರಮುಖ್: ಶ್ರೀ ಶ್ರೀಧರ ಸ್ವಾಮೀ (ಬೌದ್ಧಿಕ ಶಿಕ್ಷಣ ಪ್ರಮುಖ , ದಕ್ಷಿಣ ಮಧ್ಯ ಕ್ಷೇತ್ರ)
ಸೇವಾ ಪ್ರಮುಖ್: ಶ್ರೀ ಪದ್ಮಕುಮಾರ್ ಜಿ (ಕ್ಷೇತ್ರ ಸೇವಾ ಪ್ರಮುಖ್, ದಕ್ಷಿಣ ಕ್ಷೇತ್ರ)
ವ್ಯವಸ್ಥಾ ಪ್ರಮುಖ್ : ಶ್ರೀ ಸುನೀಲ್ ಗಾರ್ಕಟೆ (ಸಹ-ವ್ಯವಸ್ಥಾ ಪ್ರಮುಖ್, ನಾಗ್ಪುರ ಮಹಾನಗರ)
ಸಹ-ವ್ಯವಸ್ಥಾ ಪ್ರಮುಖ್: ಶ್ರೀ ಪರಾಗ್ ಪಚ್ಪೋರೆ (ಭಾಗ ಕಾರ್ಯವಾಹ, ನಾಗ್ಪುರ ಮಹಾನಗರ)