ಅದು ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. 1975ರ ತುರ್ತು ಪರಿಸ್ಥಿತಿ ದೇಶದ ತುಂಬೆಲ್ಲ ದೊಡ್ಡ ಕೋಲಾಹಲವನ್ನೆಬ್ಬಿಸಿತ್ತು.
ಮಂಗಳೂರಿನ ಪ್ರತಾಪನಗರದ ಸಂಘನಿಕೇತನ ನಗರದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲ ಚಟುವಟಿಕೆಗಳ ತಾಣ, ಅಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಗಣೇಶೋತ್ಸವದ ಮೇಲೆ ಇದ್ದಕ್ಕಿದ್ದ ಹಾಗೆ ಕಡಿವಾಣ ಬಿದ್ದಿತ್ತು.
ಇಡಿಯ ಸಂಘದ ಕಾರ್ಯಾಲಯದಲ್ಲಿ ಯಾವುದೇ ಉತ್ಸವ, ಸಭೆ, ಜನ ಸೇರುವಂತೆ ನಿರ್ಬಂಧ ಹಾಕಲಾಯಿತು, ಇಡಿಯ ಅಂಗಳದ ತುಂಬೆಲ್ಲ ಪೋಲೀಸರ ಸರ್ಪಗಾವಲು. ಕಾಂಗ್ರೆಸ್ನ ನಾಯಕರು ಸಂಘನಿಕೇತನವನ್ನು ಸರಕಾರದ ವಿರುದ್ಧ ಮಾತಾಡಿದ ಕಾರಣಕ್ಕೆ ದೇಶ ದ್ರೋಹದ ಆಪಾದನೆ ಹೊರಿಸಿ, ಕಾರ್ಯಾಲಯವನ್ನು ಸುಪರ್ದಿಗೆ ಗಣೇಶೋತ್ಸವದ ಅವಧಿಗೆ ತೆಗೆದುಕೊಂಡಿದ್ದರು.
ಆಗೆಲ್ಲ ಇವಾಗಿನ ರೀತಿಯಲ್ಲಿ ಹವಾನಿಯಂತ್ರಿತ ಗಾಜಿನ ಒಳಾಂಗಣ ಸಭಾಂಗಣ ಇರಲಿಲ್ಲ, ಬದಲಾಗಿ ರಸ್ತೆಗೆ ಮುಖ ಮಾಡಿ ನಿಂತಿತ್ತು. ಸಭಾಂಗಣಕ್ಕೆ ಬರುವ ಹೋಗುವ ರಸ್ತೆಯನ್ನು ಮುಚ್ಚಿಹಾಕಲಾಗಿತ್ತು. ಜನರು ಸೇರಲಾಗದಂತೆ ಪೋಲೀಸರು ಕಾವಲು ಜೋರಾಗಿತ್ತು,ಯಾರಾದರೂ ಇತ್ತ ಸುಳಿದರೂ ಲಾಠಿ ಸಿದ್ಧವಿತ್ತು.
“ಇಷ್ಟೆಲ್ಲದರ ನಡುವೆಯೂ 1975ರ ಚತುರ್ಥಿಯಂದು ಗಣೇಶ ಇದ್ದಕ್ಕಿದ್ದ ಹಾಗೆ ಆಗಮಿಸೇಬಿಟ್ಟ.ಯಾರೂ ಸಹ ಯೋಚನೆಯೂ ಮಾಡದ ರೀತಿಯಲ್ಲಿ ಬಂದಿದ್ದ. ಒಬ್ಬ ಕಾರ್ಯಕರ್ತ ಯಾರಿಗೂ ಕಣದ ರೀತಿಯಲ್ಲಿ ಹಿಂದಿನ ದಿನ ಸಂಜೆಯೇ ಗಣಪತಿಯ ಮೂರ್ತಿಯೊಂದನ್ನ ಕಾರ್ಯಾಲಯದೊಳಗೆ ತರಲು ಯಶಸ್ವಿಯಾಗಿದ್ದ. ಗಣೇಶ ತನ್ನಿಂತಾನೆ ಪ್ರತ್ಯಕ್ಷನಾದ ಎಂಬ ಸುದ್ದಿ ಕೇಳಿ ಜನ ತಂಡೋಪತಂಡವಾಗಿ ಬರಲು ಆರಂಭಿಸಿದರು” ಎನ್ನುತ್ತಾರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪ್ರಭು.
ದಾಖಲೆಗೆ ಸಿಕ್ಕ ಹಲವು ಪತ್ರಗಳಲ್ಲಿ ಒಂದು 1977ರ ಆಗಸ್ಟ್ 28ರಂದು ಕಮಿಟಿಯ ಕಾರ್ಯದರ್ಶಿ ಎಂ.ನಾಮದೇವ್ ಶೆಣೈ ಅವರು ” ಸಂಘ ನಿಕೇತನದಲ್ಲಿ ಮೂರು ಅಡಿಗಳ ಗಣೇಶ ವಿಗ್ರಹ ಪ್ರತ್ಯಕ್ಷವಾಗಿದೆ ಎಂಬ ಸುದ್ದು ದೂರದೂರದವರೆಗೂ ಹರಡಿತ್ತು.” ಎಂದು ಬರೆಯುತ್ತಾರೆ.
ಅವರೇ ಮುಂದುವರೆದು ಬರೆಯುತ್ತಾರೆ, “ಅಂದು ಜೋರಾದ ಮಳೆ ಸುರಿಯುತ್ತಿದ್ದರೂ ಗಣೇಶ ಅವನ ಸ್ಥಾನದಲ್ಲಿ ನಗುತ್ತಾ ರಾಜಗಾಂಭೀರ್ಯದಲ್ಲಿ ಕುಳಿತಿದ್ದ, ಅವನೆದುರು ಹಣ್ಣು,ಕಾಯಿ,ಧೂಪ,ದೀಪಗಳು ನೈವೇದ್ಯಗೊಂಡಿದ್ದವು.ಜನ ಗಣಪತಿಯ ದರ್ಶನಕ್ಕೆ ದೂರದೂರದಿಂದ ಬಂದಿದ್ದರು, ಆದರೆ ಹತ್ತಿರದಿಂದ ದರ್ಶನ ಮಾಡಲು ಸಾಧ್ಯವಾಗದೆ, ದೂರದಿಂದಲೇ ಕೈ ಮುಗಿದು ಹೊರಟು ಹೋದರು.”
“ಪೋಲೀಸರು ಅವರ ವ್ಯಾನುಗಳನ್ನು ಎಲ್ಲ ರಸ್ತೆಯನ್ನು ಬಂದ್ ಮಾಡುವಂತೆ ನಿಲ್ಲಿಸಕೊಂಡು ಜನ ಬಾರದಂತೆ ತಡೆದಿದ್ದರು.ಆದರೆ ನಂತರ ಅವರೇ ಪೂಜೆ ಸಲ್ಲಿಸಿ ಶ್ರದ್ಧಾ ಭಕ್ತಿಯಿಂದ ಅಂದು ಸಂಜೆ ವಿಸರ್ಜನೆಯನ್ನೂ ಮುಗಿಸಿದರು” ಎಂದು ಮುಗುಳ್ನಕ್ಕರು ಪ್ರಭು.
ಸರಕಾರ ಹೇರಿದ ತುರ್ತು ಪರಿಸ್ಥಿತಿಯಲ್ಲಿ ಎರಡು ವರ್ಷವೂ ಕೂಡ ಸಂಘನಿಕೇತನದಲ್ಲಿ ಗಣೇಶೋತ್ಸವ ನಿಂತಿಲ್ಲ.ಹಬ್ಬದ ಹಿಂದಿನ ದಿನದವರೆಗೂ ಡೋಲಾಯಮಾನವಾಗಿಯೇ ಇರುತ್ತಿದ್ದ ಪ್ರತಿಷ್ಠಾಪನಾ ಕಾರ್ಯವು ಅದು ಹೇಗೋ ಗಣಪತಿಯ ಕೃಪೆಯಿಂದ ನಡೆಯುತ್ತಾ ಬಂದಿತು.
“ತುರ್ತು ಪರಿಸ್ಥಿತಿಯಲ್ಲಿ ಮೊದಲ ಬಾರಿಗೆ ಗಣೇಶೋತ್ಸವ ಹೀಗೆ ನಡೆಸಿಬಿಟ್ಟೆವು.ಆದರೆ ಮುಂದಿನ ಬಾರಿಗೆ ನಾವು ಕೋರ್ಟಿನ ಮೆಟ್ಟಿಲೇರಿದರೂ ನಮಗೆ ಪರವಾನಗಿ ದೊರೆಯಲಿಲ್ಲ.ಹಾಗಾಗಿ ನಾವು ಅಲ್ಲೇ ಪಕ್ಕದಲ್ಲಿದ್ದ ಸ್ವಯಂಸೇವಕರಾದ ಸುಜಿರ್ ನಾಯಕ್ ಅವರ ಮನೆಯ ಮುಮದಿನ ಅಂಗಳದಲ್ಲಿ ಸರಳವಾಗಿ ಸಾಮೂಹಿಕವಾಗಿ ಗಣಪತಿ ಇಡಬೇಕಾಯಿತು” ಎಂದು ನೆನಪಿಸಿಕೊಳ್ಳುತ್ತಾರೆ ಸಮಿತಿಯ ವಿನೋದ್ ಶೆಣೈ ಅವರು.
ತುರ್ತು ಪರಿಸ್ಥಿತಿಯವರೆಗೂ ಇದು ಕೇವಲ ಸಂಘ ಗಣಪತಿಯಾಗಿದ್ದು, ಕೆಲವು ಹಿಡಿಯಷ್ಟು ಸ್ವಯಂಸೇವಕರು ಮೂಲ್ಕಿ ಮಾರ್ತಪ್ಪ ಪ್ರಭು ಅವರ ನೇತೃತ್ವದಲ್ಲಿ ಸಾವರ್ಜನಿಕವಾಗಿ ಗಣೇಶೋತ್ಸವ ಆಚರಿಸಲು ಮುಂಬೈನಿಂದ ಬಾಲಗಂಗಾಧರ ತಿಲಕರು ಕೊಟ್ಟ ಕರೆಗೆ ಓಗೊಟ್ಟು ಆರಂಭಿಸಿದ್ದರು.ಆದರೆ ನಂತರದಲ್ಲಿ ನಿಜವಾಗಿಯೂ ಸಾರ್ವಜನಿಕ ಗಣಪತಿಯಾಗಿಯೇ ಮಾರ್ಪಾಡುಗೊಂಡಿತು.
ಆ ಪತ್ರದಲ್ಲಿ ಉಲ್ಲೇಖವಾದ ಬಹಳ ವಿಶಿಷ್ಟವಾದ ವಿಚಾರವೇನೆಂದರೆ 1948ರಿಂದ ಇಲ್ಲಿಯವರೆಗೂ ಅತ್ಯಂತ ಹೆಚ್ಚಿನ ಸಾರ್ವಜನಿಕ ದೇಣಿಗೆ ಸಂಗ್ತಹವಾಗಿದ್ದು 1976ರಲ್ಲಿ. ಸಾರ್ವಜನಿಕರು ತಾವೇ ತಾವಾಗಿ ಸ್ವಯಂ ಪ್ರೇರಣೆಯಿಂದ ಮನದುಂಬಿ ಸಂಘದ ಕಾರ್ಯಕರ್ತರು ತುರ್ತು ಪರಿಸ್ಥಿತಿಯಲ್ಲಿಯೂ ಉತ್ಸಾಹ ತೋರಿ ನಡೆಸುತ್ತಿದ್ದ ಚಟುವಟಿಕೆಗಳಿಗೆ ಬೆಂಬಲ ನೀಡಿ ಕೈಜೋಡಿಸಿದ್ದರು.
1977ರ ಪತ್ರದಲ್ಲಿ ಮತ್ತೂ ಮುಂದುವರೆದು ‘ಗಣೇಶೋತ್ಸವ ಸಮಿತಿಯಲ್ಲಿದ್ದ ಸ್ವಯಂಸೇವಕರು ತುರ್ತು ಪರಿಸ್ಥಿತಿಯ ಕಾರಣಕ್ಕೆ ಜೈಲಿಗೆ ಹೋಗಿ, ಭೂಗತರಾಗಿದ್ದವರು ಇದೀಗ ಬಿಡುಗಡೆಗೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸುತ್ತಾ ಅತ್ಯಂತ ಸಂಭ್ರಮದಿಂದ ‘ಸ್ವಾತಂತ್ರ್ಯ ಗಣಪ’ನನ್ನು ಕೂರಿಸಲು ಸಜ್ಜಾಗುತ್ತಿದ್ದಾರೆ ಎಂದು ಬರೆಯಲಾಗಿದೆ.
ಅದು ಮಂಗಳೂರಿನಲ್ಲಿ ನಡೆದ, ಹಾಗು ಇಡಿಯ ಅವಿಭಜಿತ ದಕ್ಷಿಣ ಕನ್ನಡ ಜಿಲೆಯಲ್ಲಿ ನಡೆದ ಮೊದಲ ಸಾರ್ವಜನಿಕ ಗಣೇಶೋತ್ಸವವಾಗಿದ್ದು, ಇಂದು ಜಿಲ್ಲೆಯಲ್ಲಿ ನೂರಾರು ಈ ರೀತಿಯ ಗಣೇಶೋತ್ಸವಗಳು ಈಗ ನಡೆಯುತ್ತಿದೆ. ಅನೇಕ ದೊಡ್ಡ ದೊಡ್ಡ ಗಣೇಶೋತ್ಸವಗಳನ್ನು ,ಬೇರೆ ಬೇರೆ ಹೆಸರಿನಲ್ಲಿ ಸಂಘದ ಸ್ವಯಂಸೇವಕರೇ ನಡೆಸುತ್ತಿದ್ದಾರೆ, ಜೊತೆಗೆ ಹಲವಾರು ಸಣ್ಣ ಸಣ್ಣ ಗಣೇಶೋತ್ಸವಗಳಿಗೂ ಪ್ರೇರಣೆಯಾಗಿದ್ದಾರೆ.
“ಆದರೆ ಸದ್ಯ ಮೂಲದಲ್ಲಿ ನಡೆಯುತ್ತಿದ್ದ ಸಂಘನಿಕೇತನದ ಆವರಣದ ಗಣೇಶೋತ್ಸವವು ಈಗಲೂ ಅಲ್ಲಿನ ಸಮಿತಿಯವರು ಹೇಳುವ ಹಾಗೆ ಧಾರ್ಮಿಕ ಆಚರಣೆಗಳ ಮೂಲಕವೇ ಸಡಗರದಿಂದ ನಡೆಯುತ್ತದೆ. ಅಲ್ಲಿ ನಡೆಯುವ ಕಾರ್ಯಕ್ರಮಗಳು ಧಾರ್ಮಿಕತೆಯನ್ನು ಜಾಗೃತಗೊಳಿಸುವುದರ ಜೊತೆ ಜೊತೆಗೆ ಸಾಮಾಜಿಕ ಜಾಗೃತಿಯನ್ನು ಜನರಲ್ಲಿ ಉಂಟು ಮಾಡುತ್ತಾ ರಾಷ್ಟ್ರೀಯತೆಯ ಕಡೆಗೆ ಹೊರಳುವ ರೀತಿಯಲ್ಲೆ ಆಚರಿಸಲಾಗುತ್ತದೆ.” ಎನ್ನುತ್ತಾ ಅಲ್ಲಿನ ಸಮಿತಿಯ ಕಾರ್ಯಕ್ರಮಗಳ ಕುರಿತು ವಿವರವಾಗಿ ಉದಾಹರಿಸುತ್ತಾ ಅಲ್ಲಿನ ಸದಸ್ಯರು ಹೇಳುತ್ತಾರೆ.
ಗಣಪತಿಯು ವಿಶ್ವಂಬರನ ಅವತಾರದಲ್ಲಿ 50th ನೆಯ ವರ್ಷದ ಸಂಭ್ರಮದಲ್ಲಿ ಚಾರಿತ್ರಿಕವಾಗಿ ವಂದೇ ಮಾತರಂ ಹಾಡಿನ ರೀತಿಯಲ್ಲಿ ವಿಶಿಷ್ಠವಾಗಿ ನಿರ್ಮಿಸಲಾಗಿತ್ತು. ಮಗುವಿನ ರೂಪದಲ್ಲಿದ್ದ ಈ ಸ್ವರಾಜ್ಯ ಗಣಪ ಸುಮಾರು 8ಕ್ವಿಂಟಲ್ ತೂಗುತ್ತಿದ್ದು ಇಡಿಯ ಸಭಾಂಗಣದಲ್ಲಿ ಅಂದು ವಂದೇ ಮಾತರಂ ಗುಂಯ್ಯ್ಗುಡುತ್ತಿತ್ತು.
ಪೂರ್ಣ ವಂದೇ ಮಾತರಂ ಹಾಡುವ ಸ್ಪರ್ಧೆಯನ್ನು ಅಂದು ತರುಣ ತರುಣಿಯರಿಗೆ ಆಯೋಜನೆ ಮಾಡಲಾಗಿತ್ತು. ಬರೀ ಅಷ್ಟೇ ಅಲ್ಲದೆ ಪ್ರಬಂಧ, ಹಾಡುವಿಕೆ,ಹಾಗು ಭಾರತೀಯ ಕ್ರೀಡೆಗಳಾದ ಕಬ್ಬಡ್ಡಿ ಖೋ ಹಾಗು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಅಂದಿನಿಂದ ಇಂದಿನವರೆಗೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಯಾವುದೇ ವಿಚಾರದ ಮೇಲೆ ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ ಗಣೇಶನನ್ನು ಸ್ವಾಗತಿಸಲಾಗುತ್ತಿದೆ ಎನ್ನುತ್ತಾರೆ ಆಯೋಜಕರು.
ಯಾವುದೇ ಡಿಜೆ, ಸಿನೇಮಾ ಹಾಡು, ಅಥವಾ ನೃತ್ಯ ಹೀಗೆ ಸಾಂಸ್ಕೃತಿಕವಾಗಿ ಯಾವುದು ಈ ನೆಲದ್ದಲ್ಲವೋ ಅದು ಇಲ್ಲಿನ ಸಂಭ್ರಮಾಚರಣೆಯ ಭಾಗವಲ್ಲ, ಅದರಲ್ಲೂ ಇತ್ತೀಚೆಗಿನ ಅನೇಕ ಗಣೇಶೋತ್ಸವದಲ್ಲಿ ಪಾಪ್ ಕಲ್ಚರ್ ಹೊಸದಾಗಿ ಆರಂಭವಾಗಿದೆ.ಇಲ್ಲಿ ಅದರ ಲವಲೇಶವೂ ಕಾಣದೆ ಸಂಪೂರ್ಣ ಭಾರತೀಯ ಹಾಗು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಶಿಸ್ತು ಇಲ್ಲಿನ ಪರಂಪರಾನುಗತವಾಗಿ ಬೆಳೆದುಕೊಂಡು ಬಂದಿದೆ. ಮತ್ತು ಎಲ್ಲ ಕಾರ್ಯಗಳಲ್ಲೂ ಕೂಡ ಧಾರ್ಮಿಕತೆಯೇ ಮುನ್ನಲೆಯಲ್ಲಿ ನಿಲ್ಲುತ್ತದೆ. ಇಡಿಯ ಹಿಂದೂ ಸಮಾಜ, ಯಾವುದೇ ಜಾತಿ,ಮತ,ಪಂಥಗಳ ಭೇದವಿಲ್ಲದೆ ಒಟ್ಟುಗೂಡಿ ಗಣಗಳ ಅಧಿಪತಿಯನ್ನು ಎದುರುಗೊಂಡು ಆಚರಿಸುತ್ತಾರೆ.
ಕಳೆದ 7-8 ವರ್ಷದಿಂದಲಂತೂ ಮತಾಂತರಗೊಂಡು ಕ್ರಿಶ್ಚಿಯನ್ನರಾಗಿ ತಮ್ಮ ಹಿಂದಿನವರನ್ನು ನೆನಪಿಸಿಕೊಳ್ಳದ ಮಂಗಳೂರಿನ ಕ್ರಿಶ್ಚಿಯನ್ನರೂ ಸಹ ಸಂಘನಿಕೇತನದ ಗಣಪತಿ ಹಬ್ಬಕ್ಕೆ ಆಗಮಿಸಿ ಗೌರವ ಸಲ್ಲಿಸುತ್ತಾರೆ ಎನ್ನುತ್ತಾರೆ ಆಯೋಜಕರು.
ಮೊದಮೊದಲು ಕರಾವಳಿ ಭಾಗದ ಗೌಡ ಸಾರಸ್ವತರೇ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದ ಈ ಉತ್ಸವದಲ್ಲಿ ಇಂದು ಎಲ್ಲ ಜಾತಿಯ ಪಂಥದ ಜನರೂ ಕೂಡ ಪ್ರೀತಿಯಿಂದ ಪಾಲ್ಗೊಂಡು ‘ಇಲ್ಲಿನ ಸಂಭ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯತೆಯೊಂದೇ ಮಾನದಂಡ’ ಎನ್ನುತ್ತಾ ಜೊತೆಗೂಡಿದ್ದಾರೆ.
ಪ್ರತಿ ವರ್ಷವೂ ಕೂಡ ಮಾತೃ ಸಂಸ್ಥೆ ಕೇಶವ ಸ್ಮೃತಿ ಸಂವರ್ಧನಾ ಸಮಿತಿ(ರಿ)ಯ ಅಡಿಯಲ್ಕಿ ಹೊಸದಾಗಿ ಸಮಿತಿ ರಚನೆಯಾಗುತ್ತಿದ್ದು, ದೇಣಿಗೆಯ ಆಡಿಟ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಅದನ್ನು ವಿಸರ್ಜಿಸಲಾಗುತ್ತದೆ.
ಐದು ದಿನಗಳ ಕಾಲ ನಡೆಯುವ ಈ ಉತ್ಸವವು ಮೊದಮೊದಲು ಸರಳವಾಗಿ ನಡೆಯುತ್ತಿತ್ತು, ಯಾವಾಗ ನಿರ್ಭಂಧ ಹಾಕಲಾಯಿತೋ ಆಗ ಅದು ಇಡಿಯ ಸಮಾಜದ ಶಕ್ತಿಯಾಗಿ ಅದ್ಧೂರಿಯಾಗಿ ನಡೆದು ‘ವಿಘ್ನ ವಿನಾಶಕ’ನ ಆಶೀರ್ವಾದ ಪಡೆಯಲು ಸಾವಿರಾರು ಮಂದಿ ಆಗಮಿಸತೊಡಗಿದರು.
ಇನ್ನು 1988ರಲ್ಲಿ ದಿನಪತ್ರಿಕೆಯ ಸಂಪಾದಕರೊಬ್ಬರ ಕೊಲೆಯಾಗಿ ಸೆಕ್ಷನ್ 144ಜಾರಿ ಮಾಡಲಾಗಿತ್ತು.ಉತ್ಸವ ಮುಗಿಯುತ್ತಾ ಬಂದು ವಾರವಾದರೂ ಕೂಡ ವಿಸರ್ಜನಾ ಮೆರವಣಿಗೆಗೆ ದಾರಿ ಮಧ್ಯೆ ಮಸೀದಿಯಿದ್ದುದರಿಂದ ತಡೆ ಒಡ್ಡಲಾಗಿತ್ತು.
ಹೀಗಾಗಿ ಆಯೋಜಕರೂ ಮತ್ತೂ ಒಂದು ವಾರ ಮುಂದೆ ತಳ್ಳಿದರೂ ಸಹ ಜನ ಅಷ್ಟೇ ಚಟುವಟಿಕೆಗಳಿಂದ ಭಾಗವಹಿಸಿದರು. ಉತ್ಸಾಹದಿಂದ ಪಾಲ್ಗೊಂಡರು ಇಷ್ಟೆಲ್ಲ ಆದ ಮೇಲೂ ಕೂಡ ವಿಸರ್ಜನಾ ಮೆರವಣಿಗೆಗೆ ಪರವಾನಗಿ ದೊರೆಯಲೇ ಇಲ್ಲ, ಆ ವರ್ಷ 21ದಿನಗಳ ಕಾಲ ಗಣೇಶೋತ್ಸವ ನಡೆದು ಎಂದಿಗಿಂಲೂ ಮೂರು ನಾಲ್ಕು ಪಟ್ಟು ಜನ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಅಲ್ಲಿಯವರೆಗೂ ಸಂಘ ಗಣಪನೆಂದೇ ಕರೆಯಲಾಗುತ್ತಿದ್ದ ಗಣೇಶೋತ್ಸವ ನಿಜಾರ್ಥದಲ್ಲಿ ಸಾರ್ವಜನಿಕ ಉತ್ಸವವಾಗಿ ಆಚರಿಸಲ್ಪಡತೊಡಗಿತು.ವಿಘ್ನ ನಿವಾರಕನೇ ಎಲ್ಲ ವಿಘ್ನಗಳನ್ನು ಪರಿಹರಿಸಿ ಉತ್ಸವ ನಡೆಯಿತು.
ಈ ಗಣೇಶೋತ್ಸವಕ್ಕೆ ಯಾವುದೇ ದಾನವನ್ನು ಸ್ವೀಕರಿಸಲಾಗುವುದಿಲ್ಲ ಬದಲಾಗಿ ಬೇರೆ ಬೇರೆ ಪೂಜೆಗಳನ್ನು ಆಯೋಜಿಸಲಾಗುತ್ತದೆ. ಅಲಂಕಾರ ಪೂಜೆಗೆ ಎರಡು ಸಾವಿರ ರೂಗಳನ್ನು ನಿಗದಿ ಮಾಡಲಾಗಿದ್ದು ನೂರಾರು ಜನ ಮನಸ್ಸಾರೆ ಅಲಂಕಾರ ಸಮರ್ಪಣೆಗೆ ಬರುತ್ತಾರೆ.ಇನ್ನು ವಿದ್ಯಾ ನಿಧಿ ಪೂಜೆ ಎನ್ನುವ ಪೂಜೆಯಿದ್ದು, ಇದರ ಸಮರ್ಪಣೆಗೆ ಬಂದ ಎಲ್ಲ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುತ್ತದೆ.
ಈ ಭಾಗದಲ್ಲಿ ಜನ್ಮಾಷ್ಠಮಿ ಮತ್ತು ಗಣೇಶೋತ್ಸವಗಳು ಮುಖ್ಯವಾಗಿ ಸಾಂಸ್ಕೃತಿಕ ವಲಯದಲ್ಲಿ ಮತ್ತು ಧಾರ್ಮಿಕವಾಗಿಯೂ ಪ್ರಾಮುಖ್ಯತೆ ಪಡೆದುಕೊಂಡಿದ್ದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಿತಿಯೂ ಸಗ ಮುಖ್ಯವಾಹಿ ಸಮಾಜೋ ಆರ್ಥಿಕ ಸೇವೆ ಮತ್ತು ಯೋಗ ಸಂಸ್ಕೃತ ತರಗತಿಗಳು ಮತ್ತು ಶಿಕ್ಷಣವನ್ನು ಅಗತ್ಯವಾದವರಿಗೆ ತಲುಪಿಸುವಲ್ಲಿ, ಹಾಗು ವಸತಿ ಸಹಿತವಾಗಿ ಶಿಕ್ಷಣ ನೀಡುತ್ತಾ ಅನೇಕ ಮಕ್ಕಳಿಗೆ ಪುನರ್ವಸತಿ ನೀಡುವುದಲ್ಲದೆ ಪೂರ್ವಾಂಚಲದಿಂದ ವಿದ್ಯಾರ್ಥಿಗಳಿಗೂ ನೆಲೆ ಒದಗಿಸಿದೆ.
ಕೃಪೆ : ಸ್ವರಾಜ್ಯ