ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಿತರಾಗಿ, ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಸಮನ್ವಯ ಸಭೆಯನ್ನು ಈ ತಿಂಗಳು ಅಂದರೆ ಸೆಪ್ಟೆಂಬರ್ 10 ರಿಂದ 12, 2022 ರವರೆಗೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ಆಯೋಜಿಸಲಾಗಿದೆ.

ಈ ಅಖಿಲ ಭಾರತ ಮಟ್ಟದ ಸಮಗ್ರ ಸಮನ್ವಯ ಸಭೆಯು ವರ್ಷಕ್ಕೊಮ್ಮೆ ನಡೆಯುತ್ತದೆ. ಪೂಜ್ಯ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಮತ್ತು ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ, ಐವರು ಸಹ ಸರಕಾರ್ಯವಾಹರು ಮತ್ತು ಸಂಘದ ಇತರ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಭಾರತೀಯ ಮಜ್ದೂರ್ ಸಂಘದ ಶ್ರೀ ಹಿರಣ್ಯಮ್ ಪಾಂಡ್ಯ ಮತ್ತು ಶ್ರೀ ಬಿ ಸುರೇಂದ್ರನ್, ವಿಶ್ವ ಹಿಂದೂ ಪರಿಷತ್ತಿನ ಶ್ರೀ ಅಲೋಕಕುಮಾರ್ ಮತ್ತು ಶ್ರೀ ಮಿಲಿಂದ್ ಪರಾಂಡೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಶ್ರೀ ಆಶಿಶ್ ಚೌಹಾಣ್ ಮತ್ತು ನಿಧಿ ತ್ರಿಪಾಠಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜೆಪಿ ನಡ್ಡಾ ಮತ್ತು ಶ್ರೀ ಬಿಎಲ್ ಸಂತೋಷ್ ಮತ್ತು ಭಾರತೀಯ ಕಿಸಾನ್ ಸಂಘದ ಶ್ರೀ ದಿನೇಶ್ ಕುಲಕರ್ಣಿ, ವಿದ್ಯಾಭಾರತಿಯ ಶ್ರೀ ರಾಮಕೃಷ್ಣ ರಾವ್ ಮತ್ತು ಜಿ.ಎಂ.ಕಾಶಿಪತಿ, ರಾಷ್ಟ್ರ ಸೇವಿಕಾ ಸಮಿತಿಯ ವಂದನಿಯ ಶ್ರೀ ಶಾಂತಕ್ಕ ಮತ್ತು ಕುಮಾರಿ ಅನ್ನದಾನಂ ಸೀತಕ್ಕ, ವನವಾಸಿ ಕಲ್ಯಾಣ ಆಶ್ರಮದ ಶ್ರೀ ರಾಮಚಂದ್ರ ಖರಾಡಿ ಮತ್ತು ಶ್ರೀ ಅತುಲ್ ಜೋಗ್ ಸೇರಿದಂತೆ ಒಟ್ಟು 36 ಸಂಸ್ಥೆಗಳ ಪ್ರತಿನಿಧಿಗಳು ಹಾಗು ಕೆಲವು ಪ್ರಮುಖ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲಾ ಸಂಘಟನೆಗಳು ರಾಷ್ಟ್ರೀಯತೆಯ ಭಾವವನ್ನು ಸಮಾಜ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಹಿತದೃಷ್ಟಿಯಿಂದ ಮೂಡಿಸುವಲ್ಲಿ ಸಕ್ರಿಯವಾಗಿವೆ.

ಶಿಕ್ಷಣ ಮತ್ತು ಸೈದ್ಧಾಂತಿಕ ಕ್ಷೇತ್ರ, ಆರ್ಥಿಕ, ವಿಶ್ವೈಕ ಹಾಗು ಸೇವಾ ಕಾರ್ಯಗಳು ಮತ್ತು ವಿವಿಧ ಸಾಮಾಜಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ನಿರಂತರವಾಗಿ ಈ ಸಂಘಟನೆಗಳು ಸಕ್ರಿಯವಾಗಿದ್ದು, ಈ ಸಭೆಯಲ್ಲಿ, ಪ್ರತಿ ಸಂಘಟನೆಯೂ ತಮ್ಮ ಕೆಲಸ ಮತ್ತು ಸಾಧನೆಗಳನ್ನು ವಿವರವಾಗಿ ಚರ್ಚಿಸಿ ಪ್ರಸ್ತುತ ಪಡಿಸುತ್ತಾರೆ. ಅವರೆಲ್ಲರೂ ಪ್ರಸ್ತುತ ಆದ್ಯತೆಗಳ ಆಧಾರದ ಮೇಲೆ ಸಂಬಂಧಿಸಿದ ಅಗತ್ಯ ಕಾರ್ಯಗಳ ಕುರಿತು ವಿಸ್ತಾರವಾದ ಚರ್ಚೆ ಮಾಡುತ್ತಾರೆ.

ಈ ರೀತಿ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಸ್ವಯಂಸೇವಕರೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ನಿರಂತರವಾಗಿ ಸಮನ್ವಯವನ್ನು ಹೊಂದಿದ್ದು ಪರಿಸರ, ಕುಟುಂಬ ಮತ್ತು ಸಾಮಾಜಿಕ ಸಾಮರಸ್ಯದಂತಹ ವಿಷಯಗಳ ಮೇಲೆ ಸಂಘಟಿತ ಪ್ರಯತ್ನಗಳ ಅಗತ್ಯವಿದ್ದು ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

ಸುನೀಲ್ ಅಂಬೇಕರ್ ಅಖಿಲ ಭಾರತ ಪ್ರಚಾರ ಪ್ರಮುಖ್,ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.