ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ
ರಕ್ಷಾಬಂಧನ ಸಂದೇಶ
ಆತ್ಮೀಯ ಸಹೋದರ ಬಂಧುಗಳೇ,
ಶ್ರಾವಣ ಹುಣ್ಣಿಮೆಯೆಂದರೆ ರಕ್ಷಾಬಂಧನದ ಸಂಭ್ರಮ. ಮನೆ ಮನೆಗಳಲ್ಲಿ ಸೋದರ ಸೋದರಿಯರಿಗೆ ರಕ್ಷೆ ಕಟ್ಟುವ, ಕಟ್ಟಿಸಿಕೊಳ್ಳುವ ಸಡಗರ. ಯಾವುದೇ ವ್ಯಕ್ತಿಯೊಂದಿಗೆ ಆತ್ಮೀಯ ಸಹೋದರ ಬಾಂಧವ್ಯವನ್ನು ಬೆಸೆಯುವ ಸಂಕೇತವೇ ಈ ರಾಖಿ. ರಾಷ್ಟ್ರೀಯ ಸ್ವಯಂಸೇವಕ ಸಂಘ ರಕ್ಷಾಬಂಧನಕ್ಕೊಂದು ಹೊಸ ಸ್ವರೂಪವನ್ನೇ ನೀಡಿದೆ. ಇದು ಪರಸ್ಪರ ರಕ್ಷಣೆಯ ವಚನ ನೀಡುವುದರ ಜೊತೆಗೆ, ಸಂಘಟನೆಯನ್ನು ದೃಢಗೊಳಿಸುವ ಹಾಗೂ ಇಡೀ ಸಮಾಜಕ್ಕೆ ರಾಷ್ಟ್ರೀಯತೆಯ ಮೆರುಗನ್ನು ನೀಡುವ ಸಾಧನವಾಗಿದೆ. ಈ ರಕ್ಷೆ ದೇಶದ ಬಗ್ಗೆ ನಮಗಿರುವ ಜವಾಬ್ದಾರಿಯನ್ನು ನೆನಪಿಸುತ್ತದೆ.
ಭಾರತದ ಮುಕುಟಮಣಿ ಕಾಶ್ಮೀರದಲ್ಲಿನ ಬೆಳವಣಿಗೆಗಳು ಭಾರತದ ಏಕತೆಗೆ ಸವಾಲೊಡ್ಡುವಂತಿದೆ. ಕೇಂದ್ರ ಸರ್ಕಾರ ನೇಮಿಸಿದ್ದ ಸಂವಾದಕಾರರ ತಂಡ ನೀಡಿರುವ ವರದಿಯು ಹಿಂದು ವಿರೋಧಿಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಪ್ರಸ್ತಾಪವನ್ನೇ ಮಾಡದೆ, ನಮ್ಮ ವೀರ ಸೈನಿಕರು ನೆತ್ತರು ಹರಿಸಿ ಕಾಪಾಡಿದ್ದ ಪ್ರದೇಶವನ್ನೂ ದೇಶದಿಂದ ದೂರಮಾಡುವಂತಹ ಸಲಹೆಗಳು ಈ ವರದಿಯಲ್ಲಿದೆ. ಹಿಂದುಗಳ ಮೇಲಿನ ದೌರ್ಜನ್ಯವನ್ನು ಹೆಚ್ಚಿಸುವಂತಹ, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವಂತಹ ಈ ದೇಶದ್ರೋಹಿ ವರದಿಯನ್ನು ಒಕ್ಕೊರಲಿನಿಂದ ತಿರಸ್ಕರಿಸಬೇಕಾಗಿದೆ. ಅಸುರಕ್ಷಿತ ಗಡಿಗಳನ್ನು ಗುರುತಿಸಿ, ಸೈನಿಕ ಪಹರೆ ಹೆಚ್ಚಿಸಿ ದ್ರೋಹಿಗಳ ನುಸುಳುವಿಕೆಯನ್ನು ತಡೆಯಬೇಕಾಗಿದೆ.
ಹಿಂದು ಸಮಾಜದಲ್ಲಿಂದು ಕಂಡು ಬರುತ್ತಿರುವ ಸಂಕುಚಿತ ಮನೋಭಾವ ನಮ್ಮನ್ನು ದುರ್ಬಲಗೊಳಿಸುತ್ತಿದೆ. ಜಾತಿಯ ಭೂತದ ಜಾಲಕ್ಕೆ ಸಿಕ್ಕಿ ವಿಶಾಲತೆಯನ್ನು ಮರೆಯುತ್ತಿದ್ದೇವೆ. ಆಡಳಿತದಿಂದ ಹಿಡಿದು ಆಧ್ಯಾತ್ಮದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಜಾತೀಯತೆಯ ಹಾವಳಿ ಮೇರೆ ಮೀರಿದೆ. ಪರಸ್ಪರ ದ್ವೇ?, ಅಸೂಯೆ, ಅವಿಶ್ವಾಸ ಮತ್ತು ಸ್ವಾರ್ಥ ಲಾಲಸೆಗಳು ದೇಶದ ಅಖಂಡತೆಗೆ ಮಾರಕವಾಗಿದೆ. ಶಕ್ತಿಶಾಲಿ ಸಮಾಜ ನಿರ್ಮಾಣಕ್ಕಾಗಿ ನಾವಿದನ್ನು ಬದಲಿಸಲೇಬೇಕು. ’ನಾವೆಲ್ಲಾ ಹಿಂದು ನಾವೆಲ್ಲಾ ಒಂದು’ ಎಂಬ ಕೂಗು ಪ್ರತಿಯೊಬ್ಬ ದೇಶವಾಸಿಯ ಹೃದಯದಿಂದ ಬರಬೇಕಾಗಿದೆ. ಪ್ರತಿ ವ್ಯಕ್ತಿಯೂ ಸiಗ್ರತೆಯೆಡೆಗೆ ಸಾಗುವ, ಸಂಪೂರ್ಣ ಹಿಂದು ಸಮಾಜದ ಏಕತೆಯ ಸಂದೇಶವನ್ನಿಂದು
ಒಕ್ಕೊರಲಿನಿಂದ ಸಾರಬೇಕಾಗಿದೆ.
ಹಿಂದು ಧರ್ಮದ ಹಿರಿಮೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ಜನಿಸಿ ೧೫೦ ವ? ಪೂರ್ಣಗೊಳ್ಳುವ ಶುಭ ಸಮಯ ಈಗ ಬಂದಿದೆ. ತಮ್ಮ ಹಿರಿಮೆಯನ್ನೇ ಮರೆತು ನಿಷ್ಕ್ರಿಯತೆಯಿಂದ ಕೂಡಿದ್ದ ಹಿಂದು ಸಮಾಜಕ್ಕೆ ಉತ್ಥಾನದ ಮಾರ್ಗವನ್ನು ತೋರಿದ ದೇಶಪ್ರೇಮಿ ಸಂನ್ಯಾಸಿ ವಿವೇಕಾನಂದರು. ವಿಶ್ವಗುರುವಿನ ಸ್ಥಾನದಲ್ಲಿರುವ ಶಕ್ತಿಶಾಲಿಯಾದಂತಹ ಭವ್ಯ ಭಾರತದ ನಿರ್ಮಾಣವೇ ಅವರ ಕನಸು. ಪ್ರತಿ ಹಿಂದುವಿನಲ್ಲೂ ಸುಪ್ತವಾಗಿರುವ ಚೈತನ್ಯವನ್ನು ಜಾಗೃತಗೊಳಿಸಿ ಸ್ವಾಭಿಮಾನದ ಸಂದೇಶವನ್ನು ಸಾರಿದ ಆ ಮಹಾಪುರು?ನ ಮಾರ್ಗದಲ್ಲಿ ನಡೆಯೋಣ. ನಿರ್ಭಯತೆ ಮತ್ತು ಶಕ್ತಿಯ ಉಪಾಸನೆಯನ್ನು ಮೈಗೂಡಿಸಿಕೊಳ್ಳೋಣ.
ನಾವೆಲ್ಲರೂ ಸ್ನೇಹ ಹಾಗೂ ಸದ್ಭಾವನೆಗಳಿಂದ ಹೆಗಲಿಗೆ ಹೆಗಲು ಸೇರಿಸುವುದೇ ಇಂದಿನ ಅಗತ್ಯ. ಬಂಧುತ್ವದ ಭಾವನೆಯೊಂದಿಗೆ, ಶುದ್ಧವೂ, ಪವಿತ್ರವೂ ಮತ್ತು ಸುಸಂಘಟಿತವಾದ ರಾ?ಜೀವನವನ್ನು ನಿರ್ಮಿಸಬೇಕಾಗಿದೆ. ಬನ್ನಿ, ರಕ್ಷೆಯನ್ನು ಧರಿಸೋಣ. ರಕ್ಷಾಬಂಧನದ ಈ ಶುಭ ಸಂದರ್ಭದಲ್ಲಿ ಸಮಾಜ ಕಾರ್ಯಕ್ಕೆಂದು ಹೆಚ್ಚಿನ ಸಮಯವನ್ನು ಮೀಸಲಿರಿಸಿ ಅಧಿಕ ಪರಿಶ್ರಮದೊಂದಿಗೆ ನಮ್ಮೀ ದೇಶವನ್ನು ಪ್ರಬಲ ಹಾಗೂ ಮಹಾನ್ ರಾ?ವನ್ನಾಗಿ ಮಾಡುವ ಪ್ರಯತ್ನದಲ್ಲಿ ಸಹಭಾಗಿಗಳಾಗೋಣ.
ಕಲಿಯುಗಾಬ್ದ 5114, ನಂದನ ಸಂವತ್ಸರ
ಶ್ರಾವಣ ಪೂರ್ಣಿಮಾ, 2 ಆಗಸ್ಟ್ 2012