ಆರ್ಎಸ್ಎಸ್ನ ರಾಮನಗರ ಜಿಲ್ಲಾ ಘಟಕ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದೂ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನಾ ಧರಣಿಯಲ್ಲಿ ಸಂಘದ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಮಂಜುನಾಥ್ ಮಾತನಾಡಿದರು. ಎಬಿವಿಪಿ ಮುಖಂಡ ಸುನೀಲ್, ರಾಮನಗರದ ಆರ್ಎಸ್ಎಸ್ ಮುಖಂಡ ರವೀಂದ್ರನಾಥ್ ಉಪಸ್ಥಿತರಿದ್ದರು.
‘1975ರ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಜನತೆಯಲ್ಲಿ ಭಯ ಮತ್ತು ಭೀತಿ ಮೂಡಿಸಿದ್ದರು. ಈ ಮೂಲಕ ದೇಶದ ಲಕ್ಷಾಂತರ ಜನರ ಹಕ್ಕುಗಳನ್ನು ದಮನ ಮಾಡಿದ್ದರು’ ಎಂದು ಅವರು ಹೇಳಿದರು.
‘ ದೇಶದ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ, ದೇಶಪ್ರೇಮ ಹಾಗೂ ಸಂಘಟನಾ ಚಟುವಟಿಕೆಯಲ್ಲಿ ತೊಡಗಿರುವ ಆರ್ಎಸ್ಎಸ್ ಸ್ವಯಂ ಸೇವಕರನ್ನು ಕಾಂಗ್ರೆಸ್ನವರು ಕೇಸರಿ ಭಯೋತ್ಪಾದಕರು ಎಂದು ಕರೆಯುತ್ತಿರುವುದು ಸರಿಯಲ್ಲ’ ಎಂದು ಅವರು ಎಚ್ಚರಿಸಿದರು.