Kasaragod Aug 9: Condemning the brutal killing of Indian soldiers by Pakistan, RSS and Sanghparivar organisations staged a massive protest at Kasaragod today.
Photo0790
ಪೂಂಛ್  ಗಡಿ ನಿಯಂತ್ರಣ ರೇಖೆಯನ್ನು ಅತಿಕ್ರಮಿಸಿ ಐವರು ಭಾರತೀಯ ಸೈನಿಕರನ್ನು ಹತ್ಯೆಗೈದ ಪಾಕಿಸ್ತಾನದ ಕೃತ್ಯವನ್ನು ಖಂಡಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಹ ಸಂಘಟನೆಗಳ ಕಾರ್ಯಕರ್ತರು ಕಾಸರಗೋಡಿನಲ್ಲಿ ಪ್ರತಿಭಟನೆ ನಡೆಸಿದರು.ಕರಂದಕ್ಕಾಡ್ ನಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಕಾಸರಗೋಡ್  ಹೊಸ  ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಂಡಿತು. ನಂತರ ಹತರಾದ ವೀರ ಯೋಧರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Photo0776
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಐಕ್ಯವೇದಿಯ ಶ್ರೀ ರವೀಶ್ ತಂತ್ರಿ ಯವರು  ರಕ್ಷಣಾಸಚಿವ ಎ ಕೆ  ಆಂಟನಿಯವರ ಹೇಳಿಕೆಯನ್ನು ಖಂಡಿಸಿ,ಪಾಕಿಸ್ತಾನದ ಗಡಿಯಲ್ಲಿ ಅಲ್ಲಿಯ ಸೈನ್ಯಕ್ಕೆ ತಿಳಿಯದೆ ಆಕ್ರಮಣ ಮಾಡಲು ಸಾಧ್ಯವಿಲ್ಲ, ಹಾಗಾಗಿ  ಈ ದುಷ್ಕೃತ್ಯಕ್ಕೆ ಪಾಕಿಸ್ಥಾನದ್ದೇ ಎಂದು ಹೇಳಲು ಹಿಂದೇಟು ಹಾಕುವುದು ಯಾವ ಕಾರಣಕ್ಕೆಂದು  ಹೇಳಿದರು .  ವಿದೇಶದಲ್ಲಿ ಭಯೋತ್ಪಾದನೆಯ ಆರೋಪದಲ್ಲಿ ಮುಸಲ್ಮಾನನೊಬ್ಬ ಬಂಧಿಸಲ್ಪಟ್ಟಾಗ ಆತನ ತಾಯಿಯ ಕಣ್ಣೀರಿಗೆ ಮರುಗುವ ಪ್ರಧಾನಿ ಮನಮೋಹನ್  ಸಿಂಗ್ ಅವರಿಗೆ ನಮ್ಮ ಯೋಧರ ಪತ್ನಿಯರ ರೋದನ ಕೇಳಿಯೂ  ಇನ್ನೂ ತನ್ನ ದಿವ್ಯ ಮೌನವನ್ನು ಯಾಕೆ ಬಿಡುತ್ತಿಲ್ಲ ಎಂದು ಹೇಳಿದರು.ಮೃತ ಯೋಧರ ಪತ್ನಿಯರು ಸರಕಾರದ ಪರಿಹಾರದ ಚೆಕ್ ನ್ನು ನಿರಾಕರಿಸಿ, ಪಾಕಿಸ್ತಾನದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು . ದೇಶದ ರಕ್ಷಣೆಯ  ವಿಷಯದಲ್ಲಿ  ಸಂಘಟನೆ ಯಾವ ತ್ಯಾಗಕ್ಕೂ ಸಿದ್ಧವಾಗಿದೆ. ದೇಶ ರಕ್ಷಣೆ ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ಆ ಭಾರವನ್ನು ನಮಗೆ ಬಿಟ್ಟು ಕೊಡಿ ,ದೇಶ ರಕ್ಷಣೆ ಹೇಗೆಂದು ನಾವು ತೋರಿಸಿತ್ತೇವೆ ಎಂದರು
  ನಂತರ ಮಾತನಾಡಿದ ಭಾ ಜ ಪಾ ದ ಶ್ರೀ  ಶ್ರೀಕಾಂತ್  ಮಾತನಾಡಿ ನಮ್ಮ ರಾಷ್ಟ್ರದ ರಕ್ಷಣೆಯಲ್ಲಿ ತೊಡಗಿದ್ದ ನಮ್ಮ ಐವರು ವೀರ ಯೋಧರನ್ನು ಹತ್ಯೆಗೈದುದು ಪಾಕಿಸ್ತಾನದ ಒಂದು ವ್ಯವಸ್ಥಿತ ಷಡ್ಯಂತ್ರ ಎಂದರು. ದೇಶವಿಡೀ ಈ  ಘಟನೆಯ ಬಗ್ಗೆ ದು:ಖಿತರಾಗಿರುವಾಗ  ರಕ್ಷಣಾಸಚಿವ ಎ ಕೆ  ಆಂಟನಿಯವರು ಈ  ಕೃತ್ಯಕ್ಕೆ ಪಾಕಿಸ್ತಾನ ಹೊಣೆ ಅಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿರುವುದು ಒಂದು ಅಪಮಾನಕಾರಿ ಸಂಗತಿ . ಈ ಹಿಂದೆ ನಮ್ಮ ಇಬ್ಬರು ಯೋಧರನ್ನು ಕೊಂದು  ತಲೆ ಕಡಿದಾಗಲೂ ನಮ್ಮ ಈ ಸರಕಾರವು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇಷ್ಟೆಲ್ಲ ಘಟನೆ ನಡೆದಿದ್ದರೂ  ಪಾಕಿಸ್ತಾನವನ್ನು ಭಯೋತ್ಪಾದಕ ಎಂದು ಘೋಷಿಸಳು ವಿಶ್ವದ ಎಲ್ಲಾ ದೇಶಗಳಿಗೆ  ಸಂದೇಶ ಕೊಡುವುದರ ಬದಲು ಪಾಕಿಸ್ತಾನದ ಪರವಾಗಿ ಮಾತನಾಡುವ ರಕ್ಷಣಾಸಚಿವರು ಆ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದರು
ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದು ನಮ್ಮದೇಶಕ್ಕೆ ಹಿತ ಎಂದರು .
   ವಿ.ಹಿಂ.ಪ ದ ಜಿಲ್ಲಾಧ್ಯಕ್ಷ  ಶ್ರೀ ಅಂಗಾರ ಶ್ರೀಪಾದರು ಎಲ್ಲರನ್ನು  ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಕಾಸರಗೋಡು ಸಂಘಚಾಲಕ ಶ್ರೀ ದಿನೇಶ್ , ವಿ.ಹಿಂ.ಪ ನ ಬಾಯಾಡಿ ವೆಂಕಟರಮಣ ಭಟ್, ಬಿ ಎಂ ಎಸ್  ನ ಮುರಳಿಧರ್  ಮೊದಲಾದವರು  ಇದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.