ಸಮಾರೋಪ ಸಮಾರಂಭದಲ್ಲಿ ಶ್ರೀ ಡಾ. ಕಲ್ಲಡ್ಕ ಪ್ರಭಾಕರ ಭಟ್

ಜೋಡುಕಲ್ಲು  Kasaragod: ಸ್ವಾಮಿ ವಿವೇಕಾನಂದರ 150 ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಸೇವಾಭಾರತಿ (ರಿ) ಜೋಡುಕಲ್ಲು ಇದರ ವತಿಯಿಂದ “ವಿವೇಕ ಪಥ” ಸಮಾಜ ಜಾಗೃತಿ ಸಮಾವೇಶ ಜನವರಿ 26 ರ ಗಣರಾಜ್ಯೋತ್ಸವದ ದಿನದಂದು ಜೋಡುಕಲ್ಲು  ಸೊಂದಿ ದುರ್ಗಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ರಾಷ್ಟ್ರಧ್ವಜಾರೋಹಣ ನಡೆಸಿ ಧ್ವಜ ವಂದನೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೇಶವ ಬಾಯಿಕಟ್ಟೆ,ಕಾರ್ಯದರ್ಶಿಗಳು, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ  ಅವರು ದೀಪ ಬೆಳಗಿಸುವುದರ ಮೂಲಕ ನಡೆಸಿದರು.ಶ್ರೀ ಶ್ರೀರಾಮ ಮೂಡಿತ್ತಾಯ, ಗೌರವಾಧ್ಯಕ್ಷರು, ಸೇವಭಾರತಿ ಇವರು ಉಪಸ್ಥಿತರಿದ್ದರು.ಪ್ರಸ್ತಾವನೆಯನ್ನು ಶ್ರೀ ಜನಾರ್ದನ ,ರಾ. ಸ್ವ ಸಂ ಮಂಗಳೂರು ವಿಭಾಗ ಸಹ ಕಾರ್ಯವಾಹ ಇವರು ನಡೆಸಿದರು.

ಸಮಾರೋಪ ಸಮಾರಂಭದಲ್ಲಿ ಶ್ರೀ ಡಾ. ಕಲ್ಲಡ್ಕ ಪ್ರಭಾಕರ ಭಟ್
ಸಮಾರೋಪ ಸಮಾರಂಭದಲ್ಲಿ ಶ್ರೀ ಡಾ. ಕಲ್ಲಡ್ಕ ಪ್ರಭಾಕರ ಭಟ್

ನಂತರ ಉಪಸ್ಥಿತ ಸುಮಾರು 500 ಕ್ಕೂ   ಹೆಚ್ಚಿನ ಪ್ರತಿನಿಧಿಗಳಿಗೆ     ಪ್ರತ್ಯೇಕ 4 ಗುಂಪುಗಳ ಸಮಾವೇಶಗಳು ನಡೆಯಿತು. ಪ್ರತೇಕ ಗುಂಪುಗಳಲ್ಲಿ ಸುಮಾರು 1 ಗಂಟೆಗಳ ವಿಚಾರವಿನಿಮಯ ನಡೆಯಿತು.

ಯುವಸಮಾವೇಶದಲ್ಲಿ  ಶ್ರೀ ರಮೇಶ್ ಕಾಸರಗೋಡ್ ಇವರು ಇವರು ಯುವಕರಿಗೆ ಮಾರ್ಗದರ್ಶನ ಮಾಡಿದರು. ಯುವ ಶಕ್ತಿ ರಾಷ್ಟ್ರದ ಶಕ್ತಿಯಾಗಿದೆ, ಯುವಕರು ತಮ್ಮ ಜೀವನವನ್ನು ರೂಪಿಸುವುದರೊಂದಿಗೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಳ್ಳಬೇಕು.ಹಿಂದುಗಳ ಶ್ರದ್ಧಾ ಕೇಂದ್ರಗಳ ರಕ್ಷಣೆಗಾಗಿ ನಾವು ಕಟಿಬದ್ಧರಾಗೋಣ ಎಂದು ತಿಳಿಸಿದರು.

ಉದ್ಘಾಟನೆ ಸಂದರ್ಭ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ
ಉದ್ಘಾಟನೆ ಸಂದರ್ಭ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ

ಮಾತೃ ಸಮಾವೇಶದಲ್ಲಿ ಶ್ರೀ ಜನಾರ್ದನ ಪ್ರತಾಪನಗರ ಅವರು ಇಂದಿನ ಹಿಂದೂ ಸಮಾಜದಲ್ಲಿ ಮಾತೆಯರು ತಮ್ಮ  ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವುದರ ಮೂಲಕ ಹೇಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡಬೇಕೆಂಬುದನ್ನು ತಿಳಿಸಿದರು.

ಭಗಿನೀ ಸಮಾವೇಶದಲ್ಲಿ ಶ್ರೀಮತಿ ನಿಶಾ ಟೀಚರ್ ಅವರು ಹಿಂದು ಯುವತಿಯರ ಮೇಲೆ ನಡೆಯುವ ಲವ್ ಜಿಹಾದ್ ನಂತಹ ಕುಕೃತ್ಯಗಳ ಬಗ್ಗೆ ಜಾಗೃತರಾಗಲು ತಿಳಿಸಿದರು. ಭಾರತದ ಭವ್ಯ ಇತಿಹಾಸದಲ್ಲಿ ವೀರ ವನಿತೆಯರು ಹೇಗೆ ರಾಷ್ಟ್ರ ನಿರ್ಮಾಣದಂತಹ ಮಹತ್ಕಾರ್ಯದಲ್ಲಿ ಹೇಗೆ ತಮ್ಮನ್ನು ತೊಡಗಿಸಿದ್ದರು ಎಂಬುದನ್ನು ತಿಳಿಸಿದರು.         ಕಿಶೋರಸಮಾವೇಶದಲ್ಲಿ ಶ್ರೀ ಚಂದ್ರಹಾಸ, ಪೆರ್ವಡಿಅವರು  ಮಕ್ಕಳಿಗೆ ಹೇಗೆ  ಉತ್ತಮ ಸಂಸ್ಕಾರವನ್ನು ತಮ್ಮಲ್ಲಿ ಬೆಳಸಬೇಕೆಂಬುದನ್ನು ಆದರ್ಶ ಕಥೆಗಳ ಮೂಲಕ ತಿಳಿಸಿದರು

ಕೊನೆಗೆ ನಡೆದ  ಸಮಾರೋಪ ಸಮಾರಂಭದಲ್ಲಿ ಶ್ರೀ  ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಮಾತನಾಡಿ  ಸ್ವಾಮಿ ವಿವೇಕಾನಂದರು “ಏಳಿ ಎದ್ದೇಳಿ” ಎಂದು ಕರೆ ಕೊಟ್ಟರು , ಅವರು ಯಾಕೆ ಈ ಮಾತನ್ನು ಹೇಳಿದರೆಂದು ನಾವು ಚಿಂತನೆ ಮಾಡಬೇಕಾಗಿದೆ.  ನಮ್ಮ ರಾಷ್ಟ್ರಪತಿಗಳಾಗಿದ್ದ ಶ್ರೀ ಅಬ್ದುಲ್ ಕಲಾಂ ಅವರು ಎಲ್ಲಾ ಯುವಕರಲ್ಲಿ 2025 ರಲ್ಲಿ ನಮ್ಮ ಭಾರತ ದೇಶ ಜಗತ್ತಿನಲ್ಲಿ ಅತ್ಯಂತ ವೈಭವಶಾಲಿ, ಶಕ್ತಿಶಾಲಿ ರಾಷ್ಟ್ರವಾಗಬೇಕು ಎನ್ನುವ ಕನಸನ್ನು ಕಾಣಲು ಹೇಳಿದರು. ನಮ್ಮ ದೇಶದಲ್ಲಿ ಯುವ ಶಕ್ತಿಯ  ಪ್ರಮಾಣ ಅಧಿಕವಿದೆ. ಹಾಗಿದ್ದರೂ ನಮ್ಮ ದೇಶದ, ಧರ್ಮದ ಮೇಲಿನ ನಮ್ಮ ಶ್ರದ್ಧೆ ಕಡಿಮೆಯಾಗಿದೆ. ಯಾಕೆಂದರೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋದರೂ ಅವರು ಇಂಗ್ಲಿಷ್ ವ್ಯಾಮೋಹವೆಂಬ ದಾಸ್ಯತನವನ್ನು ನಮಗೆ ಕೊಡುಗೆಯಾಗಿ ನೀಡಿ ಹೋದರು ಬ್ರಿಟಿಷರು ಭಾರತಕ್ಕೆ ಕೇವಲ ತಕ್ಕಡಿ ಹಿಡಿದು ಬಂದರು.ಇಲ್ಲಿಗೆ ಬಂದಾಗ ಇಲ್ಲಿನ ಸಂಪತ್ತನ್ನು ಕಂಡು ಈ ದೇಶವನ್ನೇ ತಮ್ಮದನ್ನಾಗಿಸಲು ಹುನ್ನಾರ ನಡೆಸಿದರು. ನಮ್ಮಲ್ಲಿ ಒಡಕನ್ನು ಮೂಡಿಸಿ ನಮ್ಮನ್ನು ಆಳಲು ತೊಡಗಿದರು.ಮೆಕಾಲೆ ಎನ್ನುವ ಬ್ರಿಟಿಷ್ ಅಧಿಕಾರಿ ಇಂಗ್ಲಿಷ್ ಭಾಷೆಯನ್ನು ನಮ್ಮ ಶಿಕ್ಷಣ ಪದ್ಧಯಲ್ಲಿ ತಂದು ನಮ್ಮ ದೇಶದ ಜನರಲ್ಲಿ ಇಂಗ್ಲಿಷ್ ವ್ಯಾಮೋಹವನ್ನು ಬೆಳೆಸಿ ಅದರ ಮೂಲಕ ಸಂಸ್ಕೃತಿಯನ್ನು ನಾಶಪಡಿಸುವ ವ್ಯವಸ್ಥಿತ ಸಂಚನ್ನು ನಡೆಸಿದನು.ಭಾರತ ದೇಶದ ಉದ್ಧಾರ ತಮ್ಮಿಂದಲೇ ನಡೆಯಿತು ಎಂಬಂತೆ ನಡೆದರು. ಭಾರತವು  ಇಂದಿಗೂ  ಸಂಪದ್ಭರಿದ ದೇಶವಾಗಿದೆ. ವಿಜ್ನಾನ, ಜ್ಯೋತಿಷ್ಯ ತಂತ್ರಜ್ನಾನಗಳಲ್ಲಿ ಮೊದಲಿನಿಂದಲೇ ಭಾರತಕ್ಕೆ ಸರಿಸಾಟಿ ಇರಲಿಲ್ಲ.ನಮ್ಮನ್ನು ಆಳಿದ ಬ್ರಿಟಿಷರಿಗೆ ಭೂಮಿ ಉರುಟು ಎಂಬುದಾಗಿ ಗೊತ್ತಿರಲಿಲ್ಲ, ಆದರೆ ನಮ್ಮ ಜ್ಯೋತಿಷಿಗಳು ಭೂಮಿ ಉರುಟು ಎಂಬುದಾಗಿ ಮಾತ್ರವಲ್ಲ, ಗ್ರಹಗಳ ಸ್ಥಿತಿಗತಿ, ವೇಗ ಹಾಗೂ ವರ್ಷಗಳ ನಂತರ ನಡೆಯಲಿರುವ ಗ್ರಹಣವನ್ನು ಕೂಡ ಮೊದಲೇ ನಿಖರವಾಗಿ ತಿಳಿಸುವ ಸಾಮರ್ಥ್ಯವನ್ನು ಹೊಂದಿದ್ದರು.

ರಾಷ್ಟ್ರಧ್ವಜಾರೋಹಣ
ರಾಷ್ಟ್ರಧ್ವಜಾರೋಹಣ

೧೨೦ ವರ್ಷಗಳ ಹಿಂದೆ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರು ಅಮೇರಿಕಾ ಹೋದಾಗ ಮೊದಲು ಅವರನ್ನು ಹೀನಾಯವಾಗಿ ಕಾಣಲಾಯಿತು. ಆದರೆ ವಿಶ್ವ ಧರ್ಮ ಸಮ್ಮೇಳನದಲ್ಲಿ ಅವರ ಭಾಷಣದ ನಂತರ ಅವರು ವಿಖ್ಯಾತರಾದರು. ಭಾರತದ ಶ್ರೇಷ್ಠತೆಯನ್ನು ಅವರು ಅಲ್ಲಿ ಸಾರಿದರು. ಭಾರತದಲ್ಲಿರುವ ದೀನ ದಲಿತರು ಉದ್ಧಾರವಾಗಬೇಕೆಂಬ ಸಂಕಲ್ಪವನ್ನು  ಹೊಂದಿದ್ದ ಸಾಮೀಜಿ ೪ ವರ್ಷಗಳಲ್ಲಿ ಮರಳಿ ಭಾರತಕ್ಕೆ ಬಂದರು.ಭಾರತಕ್ಕೆ ಬಂದ ಅವರು ಮುಂದಿನ 50 ವರ್ಷಗಳಲ್ಲಿ ಯಾವ ದೇವರ ಆರಾಧನೆಯನ್ನೇ ಮಾಡುವುದು ಬೇಡ , ಕೇವಲ ಭಾರತ ಮಾತೆಯ ಪೂಜೆ ಮಾತ್ರ  ಮಾಡುವಂತೆ ಕರೆ ಕೊಟ್ಟರು. ಅವರ ಮಾತಿನಂತೆ ಮುಂದಿನ 50 ವರ್ಷ ಅಂದರೆ 1947  ಅಸಂಖ್ಯಾತ ವೀರ ದೇಶ ಭಕ್ತರ ತ್ಯಾಗ ಬಲಿದಾನ ದಿಂದ ಭಾರತ ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಯಿತು.   ಆದರೆ ಆ ಸಂದರ್ಭದಲ್ಲಿ ಭಾರತ ಸ್ವಾತಂತ್ರಕ್ಕೆ ಪ್ರೇರಕ ಶಕ್ತಿಯಾಗಿದ್ದ ಬಂಕಿಮ ಚಂದ್ರರ “ವಂದೇ ಮಾತರಂ” ಗೀತೆಯನ್ನು ಮುಸಲ್ಮಾನರ  ಓಲೈಕೆಗಾಗಿ ತುಂಡರಿಸಲಾಯಿತು, ಎಲ್ಲಕಿಂತ ಹೆಚ್ಚಾಗಿ ನಮ್ಮ ಭಾರತ ದೇಶವನ್ನೇ ಭಾಗ ಮಾಡಲಾಯಿತು.ಮುಸಲ್ಮಾನರ ತುಷ್ಟೀಕರಣ ಇಂದಿನವರೆಗೆ ನಿರಂತರವಾಗಿ ನಡೆಯುತ್ತಾ ಬಂದಿದೆ.

ಮಾತೃ ಸಮಾವೇಶ

ಭಾರತದ ಇಂದಿನ ಸ್ಥಿತಿ ಹೇಗಿದೆ ? ಪಾಕಿಸ್ಥಾನದ ನಿರಂತರವಾಗಿ ನಮ್ಮ ದೇಶದೊಳಗೆ ಅರಾಜಕತೆಯನ್ನು ನಿರ್ಮಾಣ ಮಾಡುತ್ತಿದೆ. ಈಗಿನ  ಸರಕಾರಗಳು ಕೇವಲ ಮುಸ್ಲಿಂ ಓಟಿನ ಆಸೆಯಿಂದಾಗಿ ಅವರನ್ನು ಒಲೈಸುತ್ತಿದೆ. ಅದರ ಫಲವಾಗಿ ಗೋ ಹತ್ಯೆ,ಲವ್ ಜಿಹಾದ್ ನಂತಹ ಕ್ಕೃತ್ಯಗಳು ನಮ್ಮಲ್ಲಿ ನಿರಂತರವಾಗಿ ಅವ್ಯಾಹತವಾಗಿ ನಡೆಯುತ್ತಿದೆ.ಮುಖ್ಯವಾಗಿ ಹಿಂದುಗಳ ಶ್ರದ್ಧಾ ಕೆಂದ್ರಗಳಾದ ಗೋವು,ದೇವಸ್ಥಾನ,  ಮೇಲೆ ದಾಳಿ ನಡೆಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಮುಖ್ಯವಾಗಿ ಲವ್ ಜಿಹಾದ್ ನಂತಹ ಸಮಾಜ ಘಾತುಕ ಕೃತ್ಯವನ್ನು ತಡೆಯುವಲ್ಲಿ ನಮ್ಮ ಮಾತೆಯರು ತುಂಬಾ ಎಚ್ಚರ ವಹಿಸಬೇಕು.ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ನೀಡುವ ಜವಾಬ್ದಾರಿಯುತ ಕೆಲಸ ಇದೆ.

ಸಮಾರೋಪ ಸಮಾರಂಭ ೧

ಇದೇ ರೀತಿ ಈಶಾನ್ಯ ಭಾರತದ 7 ರಾಜ್ಯಗಳಲ್ಲಿ ಕ್ರಿಶ್ಚಿಯನ್ ರು 95%  ಹಿಂದುಗಳ ಮತಾಂತರ ನಡೆಸಿದ್ದಾರೆ. ಹಿಂದುಗಳ ಶ್ರದ್ಧಾಕೇಂದ್ರವಾದ ತಿರುಪತಿಯಲ್ಲಿ ಅಕ್ರಮವಾಗಿ ಕ್ರಿಶ್ಚಿಯನ್ ರು ಇರುವಂತೆ ಮಾಡಿ ದೇವಸ್ಥಾನದ ಕೆಲಸಗಳಲ್ಲಿ ಕ್ರಿಶ್ಚಿಯನ್ ರನ್ನು ನೇಮಿಸಿ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಕೆಲಸವನ್ನು ಈಗಿನ ಕೇಂದ್ರ ಸರಕಾರ ಮಾಡಿತು. ನಂತರ ಪೇಜಾವರ ಶ್ರೀ ಗಳ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ನಮಗೆ ಜಯ ದೊರೆಯಿತು.

“ಕೋಮು ಹಿಂಸಾಚಾರ ತಡೆ ಕಾಯ್ದೆ” ಎಂಬ ಹೊಸ ಕಾನೂನು ತರುವ ಈಗಿನ ಕೇಂದ್ರ ಸರಕಾರಕ್ಕೆ ಇದೆ. ಅದರ ಪ್ರಕಾರ ಯಾವುದೇ ಗಲಭೆಯಾಗಿದ್ದಲ್ಲಿ ಅಲ್ಪ ಸಂಖ್ಯಾತನ ಮೇಲೆ ದೂರು ಕೊಡುವಂತಿಲ್ಲ.ಈ ರೀತಿಯಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ಶೋಷಣೆಯನ್ನು ಮಾದುವ ಪ್ರಯತ್ನ ಇದೆ. ಹಿಂದು ವಿಗೆ ಭಾರತವನ್ನು ಬಿಟ್ಟರೆ ಬೇರೆ ಯಾವುದೇ ದೇಶದಲ್ಲಿ ಬದುಕಲು ಅವಕಾಶ ಇಲ್ಲ, ಏಕೆಂದರೆ ಜಗತ್ತಿನಲ್ಲಿ ಹಿಂದುಗಳ ಏಕೈಕ ದೇಶವೇ ಭಾರತ.ಹಾಗಾಗಿ ನಾವು  ಇಲ್ಲೇ ಬದುಕಬೇಕಾಗಿದೆ.

ಯುವಸಮಾವೇಶದಲ್ಲಿ  ಶ್ರೀ ರಮೇಶ್ ಕಾಸರಗೋಡ್

ಸಿಂಹವನ್ನು ಯಾರೂ ಕಾಡಿನ ರಾಜನಾಗಿ ನೇಮಿಸುವುದಿಲ್ಲ ಬದಲಾಗಿ ತನ್ನ ಸಾಮರ್ಥ್ಯದಿಂದ ಸ್ವಯಂ ಮೃಗರಾಜ ಎನಿಸಿಕೊಂಡಿದೆ.ಅದೇ ರೀತಿ ಹಿಂದುವಿಗೆ ತನ್ನ ಶಕ್ತಿಯ ಅರಿವು ಮೂಡಬೇಕಾಗಿದೆ.ಅದಕ್ಕಾಗಿ ತಲೆಯೆತ್ತಿ ,ಎದೆಯೆತ್ತಿ ಹಿಂದು ಎಂದು ಹೇಳಬೇಕಾಗಿದೆ.ಅದಕ್ಕಾಗಿ “ವಿವೇಕ ಪಥ”ದಲ್ಲಿ ಸಾಗೋಣ’ ಎಂದರು.

ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ನಿಶಾ ಟೀಚರ್, ಮಹಿಳಾ ಐಕ್ಯವೇದಿ, ಕೇರಳ ಪ್ರಾಂತ ಅಧ್ಯಕ್ಷರು, ಶ್ರೀ ರಮೇಶ್ ಕಾಸರಗೋಡ್, ಹಾಗೂ ಶ್ರೀ ಪ್ರಭಾತ್ ರೈ ಬೊಳಂಪಾಡಿ ಇವರು ಉಪಸ್ಥಿತರಿದ್ದರು. ಎಲ್ಲಾ ಪ್ರತಿನಿಧಿಗಳು ಭೋಜನ ದ ನಂತರ ಸ್ವಸ್ಥಾನಗಳಿಗೆ ತೆರಳಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.