ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಫೆಬ್ರವರಿ 14, 2016 ರಂದು ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ “ವಿಜಯಧ್ವನಿ” ಘೋಷ್ ಪಥ ಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ನಡೆಯಲಿದೆ. ಇದರಲ್ಲಿ ಕಾಸರಗೋಡು ಸರಕಾರೀ ಜಿಲ್ಲೆಯ ಘೋಷ್ ವಾದಕರು ಭಾಗವಹಿಸಲಿದ್ದಾರೆ.
ಈ ಘೋಷ್ ಸಚಲನಕ್ಕೆಸಂಘದ ಕಾಂಞಂಗಾಡ್ ಜಿಲ್ಲೆಯ ಹೊಸದುರ್ಗ, ನೀಲೇಶ್ವರ,ಪನತ್ತಾಡಿ ಹಾಗೂ ಉದುಮ ತಾಲೂಕು ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜೇಶ್ವರ ಬದಿಯಡ್ಕ, ಕಾಸರಗೋಡು ನಗರ ಹಾಗೂ ಕಾಸರಗೋಡು ಗ್ರಾಮಾಂತರ ತಾಲೂಕುಗಳ ಒಟ್ಟು 33 ಘೋಷ್ ಕೇಂದ್ರಗಳ 2000 ದಷ್ಟು ಘೋಷ್ ವಾದಕರು ಭಾಗವಹಿಸಲಿದ್ದಾರೆ. ಸಮಾಜಕ್ಕೆ ಗೆಲುವಿನ ವಿಶ್ವಾಸವನ್ನು ಮೂಡಿಸಿ, ಸದೃಢಗೊಳಿಸುವ ದೃಷ್ಟಿಯಿಂದ ಆಯೋಜಿಸಿದ ಕಾರ್ಯಕ್ರಮ ಇದಾಗಿದೆ.
“ವಿಜಯ ಧ್ವನಿ” ಘೋಷ್ ಸಂಚಲನಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ಸ್ವಯಂಸೇವಕರು ಘೋಷ್ ಅಭ್ಯಾಸ ನಡೆಸುತ್ತಿದ್ದು ಅದರ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲೆಯ ವಿವಿಧ ಘೋಷ್ ಕೇಂದ್ರಗಳಲ್ಲಿ ಘೋಷ್ ಸಂಚಲನ ನಡೆಸಲಾಯಿತು. ಮಂಗಳೂರು ಗ್ರಾಮಾಂತರ ಜಿಲ್ಲೆಯ 18 ಘೋಷ್ ಕೇಂದ್ರಗಳ ಪೈಕಿ ಮಂಜೇಶ್ವರ, ಮೀಂಜ,ಮಂಗಲ್ಪಾಡಿ, ಉಪ್ಪಳ,ಪೈವಳಿಕೆ, ಬಾಯಾರು,ಕುಂಬಳೆ, ಬದಿಯಡ್ಕ, ಪುತ್ತಿಗೆ, ನೀರ್ಚಾಲು,ಪೆರ್ಲ , ಮುಳ್ಳೇರಿಯ, ಮುಳಿಯಾರು,ಮಧೂರು, ಮೊಗ್ರಾಲ್ ಪುತ್ತೂರು, ಹಾಗೂ ಹೊಸದುರ್ಗ ತಾಲೂಕಿನ 15 ಘೋಷ್ ಕೇಂದ್ರಗಳ ಪೈಕಿ ಮಡಿಕೈ, ತಯ್ಯನ್ನೂರು, ಬೇಳೂರು ಹಾಗೂ ಹೊಸದುರ್ಗ ನಗರ ಮೊದಲಾದ ಘೋಷ್ ಕೇಂದ್ರಗಳಲ್ಲಿ ಜನವರಿ 26, 2016 ನೇ ಮಂಗಳವಾರ .ಘೋಷ್ ಅಭ್ಯಾಸ ಮತ್ತು ಸಂಚಲನಗಳು ನಡೆದವು.