12 ಆಗಸ್ಟ್ 2019, ಕೋಲಾರ: ಜಿಲ್ಲೆಯ ಅಂತರಗಂಗೆಯಲ್ಲಿನ ದಿವ್ಯಾಂಗ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಸಹೋದರತೆಯನ್ನು ಸಾರುವ ರಕ್ಷಾಬಂಧನ ಕಾರ್ಯಕ್ರಮವನ್ನು ದಿವ್ಯಾಂಗ ಮಕ್ಕಳೊಂದಿಗೆ ಆಚರಿಸಿತು.
ವಿಶೇಷ ಚೇತನರ ಸಂಘಟನೆ ‘ಸಕ್ಷಮ’ದ ಸಂಘಟನಾ ಕಾರ್ಯದರ್ಶಿ ಶ್ರೀ ಜಯರಾಮ ಬೊಳ್ಳಾಜೆ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿವ್ಯಾಂಗ ಮಕ್ಕಳು , ಪೋಷಕರು ಹಾಗೂ ದಿವ್ಯಾಂಗ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಗೆ ರಾಷ್ಟ್ರೀಯ ಸಹೋದರತೆಯ ರಕ್ಷೆಯನ್ನು ಕಟ್ಟಿ ನಾವು ಈ ರಾಷ್ಟ್ರದ ತಾಯಿ ಭಾರತಿಯ ಮಕ್ಕಳು. ಸಹೋದರ ಭಾವದಿಂದ ಬದುಕೋಣ ಎಂಬ ಸಂದೇಶವನ್ನು ನೀಡಿದರು ಹಾಗೂ ವಿಶೇಷ ಚೇತನ (ದಿವ್ಯಾಂಗ) ಮಕ್ಕಳು ಸಹ ನಮ್ಮ ಹಿಂದು ಸಮಾಜದ ಅವಿಭಾಜ್ಯ ಅಂಗವೆಂಬುವದನ್ನು ಹಿಂದು ಸಮಾಜ ನೆನಪಿನಲ್ಲಿಡಬೇಕು ಎಂಬ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸಿದರು.