19 ಅಕ್ಟೋಬರ್ 2019, ಬೆಂಗಳೂರು: ನಗರದಲ್ಲಿ ವಿಜಯದಶಮಿಯ ಪ್ರಯುಕ್ತ ರಾಷ್ಟ್ರ ಸೇವಿಕಾ ಸಮಿತಿಯ 700ಕ್ಕೂ ಹೆಚ್ಚು ಕಾರ್ಯಕರ್ತೆಯರು 4 ಕಡೆಗಳಲ್ಲಿ ಪೂರ್ಣ ಗಣವೇಶದಲ್ಲಿ ಭಾಗವಹಿಸಿದರು. ಪಥಸಂಚಲನವನ್ನು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ನಾಗರಿಕರು ಸೇರಿದ್ದರು. ನಗರದಲ್ಲಿ ಪಥಸಂಚಲನ ನಡೆಯುತ್ತಿದ್ದ ರಸ್ತೆಗಳಲ್ಲಿ ಸ್ಥಳೀಯರು ರಂಗೋಲಿ ಬಿಡಿಸಿ, ಪುಷ್ಪವೃಷ್ಟಿ ಮಾಡುತ್ತಾ, ಭಾರತ ಮಾತಾ ಕಿ ಜೈ ಎಂಬ ಘೋಷಣೆ ಕೂಗುತ್ತಾ, ಶ್ರದ್ಧೆ ಮೆರೆದರು.
1936ರಲ್ಲಿ ವಿಜಯದಶಮಿ ಹಬ್ಬದಂದು ಪ್ರಾರಂಭವಾದ ರಾಷ್ಟ್ರ ಸೇವಿಕಾ ಸಮಿತಿಗೆ ಈ ವರ್ಷ 84 ತುಂಬುತ್ತದೆ.
ಹೆಬ್ಬಾಳ ಹಾಗೂ ಹಲಸೂರು ಜಿಲ್ಲಾ ಸೇವಿಕೆಯರು ವಿಜಯದಶಮಿ ಉತ್ಸವವನ್ನು ಜಾಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆಚರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಮೂರ್ತಲಾ ಮಾಲತಿ ಲತಾ ಅವರು
ಮನೆ ಸಂಸ್ಕಾರ ಕೇಂದ್ರವಾದರೆ ಸಮಾಜ ಉನ್ನತ ಸ್ಥಾನದಲ್ಲಿ ಇರುತ್ತದೆ, ಭಾರತ ದೇಶ ವಿಶ್ವ ಗುರು ಆಗುತ್ತದೆ ಎಂದರು.
ಕ್ಷೇತ್ರ ಕಾರ್ಯವಹಿಕಾ ಮಾ. ಸಾವಿತ್ರಿ ಅಕ್ಕ ಹಾಗು ಹೆಬ್ಬಾಳ ಜಿಲ್ಲಾ ಸಂಚಾಲಿಕಾ ಶ್ರೀಮತಿ ಜಯಶ್ರೀ ವೆಂಕಟೇಶ್ ಅವರು ಶಸ್ತ್ರ ಪೂಜೆ ಮಾಡಿದರು.
ಬನಶಂಕರಿ ಮತ್ತು ಶಂಕರಪುರಂ ಸಮಿತಿಯ ಕಾರ್ಯಕರ್ತೆಯರು ಉದಯಭಾನು ಕಲಾ ಸಂಘ ಮೈದಾನದಲ್ಲಿ ವಿಜಯದಶಮಿಯ ಪ್ರಯುಕ್ತ ಗಣವೇಶ ಧರಿಸಿ ಭಾಗವಹಿಸಿದರು.
ಸಮಿತಿಯಲ್ಲಿ ವಿಜಯದಶಮಿ ಉತ್ಸವ ಆಚರಣೆಯ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಯ್ಸಳ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಮಾನನೀಯ ಶಾರದಾ ಮೂರ್ತಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಜಯಂತಿ ಮನೋಹರ್ ರವರು ಮಹಿಳೆರನ್ನು ಸಮನಾರಾಗಿ ಸಮ್ಮಾನಿಸಿದ ಸಂಸ್ಕೃತಿ ಕೇವಲ ಭಾರತ ಮಾತ್ರ. ಇಂತಹ ಸಂಸ್ಕೃತಿ ಉಳಿಸಿ ಬೆಳೆಸಲು ನಾವೆಲ್ಲ ಕಾರ್ಯೋನ್ಮುಖರಾಗೋಣ. ನಾವು ಶಸ್ತ್ರ ಹಿಡಿಯಬೇಕು ಶಾಸ್ತ್ರ ಓದಬೇಕು ಸಂಸ್ಕೃತಿ ಬೆಳಸಬೇಕು ಎಂಬ ಕರೆ ನೀಡಿದರು.
ಜಯನಗರ ಮತ್ತು ಚಂದಾಪುರ ಭಾಗದ ವಿಜಯದಶಮಿ ಉತ್ಸವ ಸರ್ಜಾಪುರ ರಸ್ತೆಯ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯಿತು.
ಶ್ರೀಮತಿ ಅನಸೂಯ ನಾಗಪ್ಪ – ಬೌದ್ಧಿಕ ಪ್ರಮುಖರು, ಕರ್ನಾಟಕ ದಕ್ಷಿಣ ಇವರು ವಿಜಯದಶಮಿಯ ಮಹತ್ವವನ್ನು ತಿಳಿಸಿ, ರಾಮಾಯಣದಲ್ಲಿ ಸೀತೆ – ತನಗೆ ಬಂದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಎಲ್ಲರಿಗೂ ಆದರ್ಶವಾಗಿದ್ದಾಳೆ ಎಂದು ಹೇಳಿದರು. ಪರಿಸರದ ಪೋಷಣೆ, ಸಂಪನ್ಮೂಲಗಳ ಸದ್ಬಳಕೆ ಆಗಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷರಾಗಿ ಆಗಮಿಸಿದ್ದ ಡಾ।। ನಾಗರತ್ನ ಅವರು – ಆರೆಸ್ಸೆಸ್ ಒಂದು ಮಹಾಸಾಗರ ಎಂದು ಅಭಿಪ್ರಾಯಪಟ್ಟರು. ಎಲ್ಲರೂ ರಾಷ್ಟ್ರದ ಏಳಿಗೆಗೆ ಸೈನ್ಯ ಸೇರುವಂತೆ ಕರೆ ನೀಡಿದರು.