ಆಗಸ್ಟ್ 1 ರಿಂದ ‘ನನ್ನ ಭಾರತ’ ರಾಜ್ಯಮಟ್ಟದ ಯುವ ಅಭಿಯಾನ

ಬೆಂಗಳೂರು, ಜುಲೈ 20, 2020: ರಾಜ್ಯಮಟ್ಟದ ನಮ್ಮ ಭಾರತ (My Bharat) ಆನ್‍ಲೈನ್ ಯುವ ಅಭಿಯಾನವನ್ನು ಖ್ಯಾತ ಯುವ ಅಭಿನೇತ್ರಿ ಪ್ರಣೀತಾ ಸುಭಾಷ್ ಉದ್ಘಾಟಿಸಿದರು. ದಿಶಾ ಭಾರತ್ ಸಂಸ್ಥೆಯ ವಿ ನಾಗರಾಜ್, ಡಾ. ಎನ್. ವಿ. ರಘುರಾಮ್, ರೇಖಾ ರಾಮಚಂದ್ರನ್, ಪರಿಮಳಾ ಮೂರ್ತಿ, ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು.

ದಿಶಾ ಭಾರತ್ ಸಂಸ್ಥೆಯು ಕಾಲೇಜು ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಪೋಷಿಸಿ ಬೆಳೆಸುವ ಕಾರ್ಯದಲ್ಲಿ ಕಳೆದ 15 ವರ್ಷಗಳಿಂದ ತೊಡಗಿಸಿಕೊಂಡಿದ್ದು ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ. ಇದೀಗ ದಿಶಾ ಭಾರತ್ ಸಂಸ್ಥೆಯು ದೇಶದ 74ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ 1 ರಿಂದ 15 ವರೆಗೆ 15 ದಿನಗಳ ರಾಜ್ಯಮಟ್ಟದ ನಮ್ಮ ಭಾರತ (#MyBharat) ಎಂಬ ಆನ್‍ಲೈನ್ ಯುವ ಅಭಿಯಾನವನ್ನು ಅಯೋಜಿಸಿದೆ.

ಈ ಯುವ ಅಭಿಯಾನಕ್ಕೆ ಕೇಂದ್ರಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮøತಿ ಇರಾನಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಯುವಸಂಸದ ತೇಜಸ್ವಿ ಸೂರ್ಯ, ಅನೇಕ ಶಿಕ್ಷಣ ತಜ್ಞರು, ಉಪಕುಲಪತಿಗಳು, ಪ್ರಾಧ್ಯಾಪಕರು ಶುಭಹಾರೈಸಿದ್ದಾರೆ.

ಪ್ರತಿನಿತ್ಯ ಬೆಳಗ್ಗೆ 11 ರಿಂದ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯ ವಿಚಾರಗಳ ಕುರಿತು ಭಾಷಣ, ದೇಶಭಕ್ತಿಗೀತೆಗಳ ಗಾಯನ, ಸಾಮಾಜಿಕ ವಿಷಯಗಳ ಕುರಿತು ಏಕಪಾತ್ರಾಭಿನಯ, ರಾಷ್ಟ್ರಭಾವ ಜಾಗರಣದ ನೃತ್ಯಗಳು ಸೇರಿದಂತೆ ವಿವಿಧ ಚಟುವಟಿಕೆಗಳು ಮೂಡಿಬರಲಿವೆ.

ಪ್ರತಿನಿತ್ಯ ಸಂಜೆ 6 ಕ್ಕೆ ಉಪನ್ಯಾಸ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಷಯ ತಜ್ಞರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯೋತ್ತರ ಭಾರತ, ಭವಿಷ್ಯದ ಭಾರತ, ಇತ್ಯಾದಿ ವಿವಿಧ ವಿಷಯಗಳ ಕುರಿತು ಉಪನ್ಯಾಸ
ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ. ಈ ಎಲ್ಲಾ ಕಾರ್ಯಕ್ರಮಗಳು ಆನ್‍ಲೈನ್ ಮೂಲಕ ನಡೆಯಲಿದ್ದು ದಿಶಾ
ಭಾರತ್ ಫೇಸ್‍ಬುಕ್ ಪೇಜ್ www.facebook.com/DishaBharat ಮೂಲಕ ನೇರ ಪ್ರಸಾರವಾಗಲಿದೆ.
****************************************************************

ಹೆಚ್ಚಿನ ಮಾಹಿತಿಗಾಗಿ:
ರಾಜೇಶ್ ಪದ್ಮಾರ್ 9880621824

Leave a Reply

Your email address will not be published.

This site uses Akismet to reduce spam. Learn how your comment data is processed.