ಬೆಂಗಳೂರು ಗಲಭೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಇಸ್ಲಾಂ – ಅಂತರ್ಜಾಲ ಸಂವಾದ ಪೂರ್ಣ ವರದಿ
ಆಯೋಜಕರು : ಪ್ರಜ್ಞಾ ಪ್ರವಾಹ ಕರ್ನಾಟಕ
ಅತಿಥಿಗಳು : ಡಾ. ಜಿ. ಬಿ. ಹರೀಶ್, ನಿರ್ದೇಶಕರು, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ, ವಿಯಟ್ನಾಂ
ಶ್ರೀ ಹರಿಪ್ರಕಾಶ ಕೋಣೆಮನೆ, ಪ್ರಧಾನ ಸಂಪಾದಕರು, ವಿಜಯ ಕರ್ನಾಟಕ ದಿನಪತ್ರಿಕೆ
ಶ್ರೀ ಶ್ರೀಧರ ಪ್ರಭು, ವಕೀಲರು, ಕರ್ನಾಟಕ ಉಚ್ಛನ್ಯಾಯಾಲಯ, ಬೆಂಗಳೂರು
ಕಾರ್ಯಕ್ರಮ ಸಂಚಾಲಕರು: ಶ್ರೀ ವೃಶಂಕ್ ಭಟ್, ಸಂಪಾದಕರು, ವಿಕ್ರಮ ವಾರಪತ್ರಿಕೆ ಮತ್ತು ಸಂವಾದ
ದಿನಾಂಕ : 23/08/2020.
ಪ್ರಜ್ಞಾ ಪ್ರವಾಹ ಕರ್ನಾಟಕ ಸಂಘಟನೆಯು ಆಯೋಜಿಸದ್ದ ಈ ಅಂತರ್ಜಾಲ ಸಂವಾದ ಕಾರ್ಯಕ್ರಮಕ್ಕೆ ಪ್ರಸ್ತಾವನೆಯನ್ನು ನೀಡುತ್ತಾ ಸಂಚಾಲಕರಾದ ಶ್ರೀ ವೃಶಂಕ್ ಅವರು ಬೆಂಗಳೂರಿನ ಕೆಜಿಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಯನ್ನು ಕಾನೂನು, ಮಾಧ್ಯಮಗಳು ಮತ್ತು ಮುಸ್ಲಿಂ ಚಿಂತನೆಯ ದೃಷ್ಟಿಯಲ್ಲಿ ಚರ್ಚಿಸಲು ಅತಿಥಿಗಳನ್ನು ಆಹ್ವಾನಿದರು.
ಸಂವಾದದಲ್ಲಿ ಮಾಧ್ಯಮ ಸ್ಪಂದನೆಯ ದೃಷ್ಟಿಯನ್ನಿಟ್ಟುಕೊಂಡು ಮೊದಲು ವಿಜಯ ಕರ್ನಾಟಕ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡುತ್ತಾ, ಮತೀಯ ಗಲಭೆಗಳಿಗೆ ಅನೇಕ ಕಾರಣಗಳಿರುತ್ತವೆ. ಸಾಮಾನ್ಯವಾಗಿ ಮತೀಯ ಗಲಭೆಗಳು ಎಲ್ಲಾ ಪ್ರದೇಶಗಳಲ್ಲೂ ನಡೆಯುವುದಿಲ್ಲ, ಮುಸ್ಲಿಂ ಬಾಹುಳ್ಯವಿರುವ ಮಂಗಳೂರು, ಭಟ್ಕಳ ಶಿವಾಜಿನಗರ, ಹೈದರಾಬಾದ್ ಗಳಂತಹ ಕೆಲವು ಪ್ರದೇಶಗಳಲ್ಲಿ ನಡೆದರೆ ಆಶ್ಚರ್ಯವಿಲ್ಲ, ಸಾಧಾರಣವಾಗಿ ಸರ್ಕಾರ ಆ ಪ್ರದೇಶಗಳನ್ನು ಮತೀಯವಾಗಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿರುತ್ತಾರೆ. ಸ್ವಲ್ಪಮಟ್ಟಿನ ಎಚ್ಚರಿಕೆಯನ್ನೂ ವಹಿಸಿರುತ್ತಾರೆ. ಆದರೆ ಬೆಂಗಳೂರಿನ ಪುಲಕೇಶಿನಗರ ವ್ಯಾಪ್ತಿಗೆ ಬರುವ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ನಡೆದಿರುವ ಗಲಭೆ ಬಹಳ ಆಘಾತಕಾರಿ ವಿಷಯವಾಗಿದೆ. ಆದರೂ ಈ ಗಲಭೆಗೆ ಮೂಲ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಎರಡು ಪೋಲಿಸ್ ಸ್ಟೇಷನ್ಗಳ ಮೇಲೆ ಒಂದು ಜನಾಂಗದ ಸಾವಿರಾರು ಜನರು ಸೇರಿ ದಾಳಿ ಮಾಡುತ್ತಾರೆ, ಆ ಭಾಗದ ಎಂಎಲ್ಎ ಮನೆಯನ್ನು ಸುಟ್ಟು ಹಾಕುತ್ತಾರೆ, ಸಾಯಂಕಾಲದವರೆಗೂ ಶಾಂತವಾಗಿದ್ದ ಪುಲಕೇಶಿನಗರ ಕೇವಲ ಎರಡು-ಮೂರು ಗಂಟೆಗಳಲ್ಲಿ ಅಸಹಾಯಕ ಭಯಗ್ರಸ್ತ ಪ್ರದೇಶವಾಗತೊಡಗುತ್ತದೆ. ಗಲಭೆಗೆ ಕಾರಣಗಳೇನು, ಉದ್ಧೇಶವೇನು, ಸಂತ್ರಸ್ತರು ಯಾರು, ಯಾರು ಯಾರ ಮೇಲೆ ದಾಳಿ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುವುದಿಲ್ಲ. ದಾಳಿಯ ಕುರಿತು ಸರ್ಕಾರದ ಒಂದು ರೀತಿಯ ವ್ಯಾಖ್ಯಾನ, ರಾಜಕೀಯ ಪಕ್ಷಗಳ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳು. ಒಟ್ಟಿನಲ್ಲಿ ಗಲಭೆಗೆ ಸಂಬಂಧಿಸಿದಂತೆ ಯಾರಿಗೂ ಸ್ಪಷ್ಟವಾದ ಕಾರಣಗಳು ತಿಳಿಯುತ್ತಿಲ್ಲ. ಒಂದು ಕ್ಷಣ ಸರ್ಕಾರ ಎಲ್ಲಅಂಗಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಕೂಡ ಅಸಹಾಯಕರಾಗಿ ಕಂಡರು. ನನ್ನ ಅಭಿಪ್ರಾಯದಲ್ಲಿ ಈ ಗಲಭೆಯನ್ನು ನಾವು ಇತಿಹಾಸಿಕ ದೃಷ್ಟಿಯಿಂದ ನೋಡಬೇಕು. ಈ ಗಲಭೆ ಆಗಾಗ ನಡೆಯುವ ಸಾಮಾನ್ಯ ಘಟನೆಯಂತಲ್ಲ. ಇದಕ್ಕೆ ವ್ಯವಸ್ಥಿತವಾದ ಹಿನ್ನೆಲೆಯಿದೆ, ಗಲಭೆಯ ಹಿಂದೆ ಒಂದು ಆಘಾತಕಾರಿ ಚಿಂತನೆ ಕೆಲಸ ಮಾಡುತ್ತಿದೆ. ನಮ್ಮ ಇತಿಹಾಸದಲ್ಲಿ ಇಂತಹ ಅನೇಕ ಘಟನೆಗಳನ್ನು ನಾವು ನೋಡಬಹುದು. ಇದು ಸಾಮಾನ್ಯ ಗಲಭೆಯಲ್ಲ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಆದಂತಹ ಮತ್ತು ನಿರಂತರವಾಗಿ ಆಗಬಹುದಾದಂತ ವ್ಯವಸ್ಥಿತವಾದ ದಾಳಿ. ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಮ್ಮೆ ಧರ್ಮ ಜಾತಿಯ ಆಧಾರದಲ್ಲಿ ದೇಶದ ಹೋಳಾಗಿ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ಸ್ವತಂತ್ರ ಪೂರ್ವ ಮತ್ತು ಅನಂತರದ ಕೆಲವೊಂದು ಘಟನೆಗಳನ್ನು ಗಲಭೆಯ ಸಂದರ್ಭದಲ್ಲಿ ಉದಾಹರಣೆಯಾಗಿ ನೋಡಬಹುದು. ಸ್ವಾತಂತ್ರಪೂರ್ವಕ್ಕಿಂತ ಮೊದಲು ಭಾರತದಲ್ಲಿ ಮುಸ್ಲಿಂ ಲೀಗಿನ ಸ್ಥಾಪನೆ. ಕಾರಣ ಸ್ಪಷ್ಟ, ಸ್ವತಂತ್ರ ಸಂಗ್ರಾಮದ ಅಂದಿನ ದಿನಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ, ಬಾಲಗಂಗಾಧರ್ ತಿಲಕ್ ಮತ್ತು ಲಾಲಾ ಲಜಪತ್ ರಾಯ್ ರವರು ಭಾರತದ ಹಿಂದೂ ಸಂಸ್ಕೃತಿ ಪರಂಪರೆಗಳನ್ನು ಆಧಾರವನ್ನಿಟ್ಟುಕೊಂಡು ಜನರನ್ನು ಒಗ್ಗೂಡಿಸುತ್ತಿದ್ದರು. ಈ ಸಮಯದಲ್ಲಿ ಇಸ್ಲಾಂನ ಅನುಯಾಯಿಗಳು ದೇಶದ ಸ್ವತಂತ್ರ ಸಂಗ್ರಾಮದಲ್ಲಿ ನಾವು ಭಾಗಿಯಾಗುತ್ತೇವೆ ಎಂದು ಮುಸ್ಲಿಂ ಲೀಗ್ ಸ್ಥಾಪನೆ ಮಾಡಿದರು. ಅವರು ಉದ್ದೇಶವೇ ಬೇರೆಯಾಗಿತ್ತು. ಮುಸ್ಲಿಂ ರಾಷ್ಟ್ರದ ಸಂಸ್ಥಾಪನೆ ಮಾಡುವದಾಗಿತ್ತು. ಲಾಲ್-ಬಾಲ್-ಪಾಲ್ ರ ಹಿಂದೂಸಂಸ್ಕೃತಿಯ ಪುನರುತ್ಥಾನವು ಅವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಯಾವುದೋ ಕಾರಣಗಳನ್ನಿಟ್ಟುಕೊಂಡು, ತಮ್ಮ ಬೇಳೆ ಬೇಯಿಸಿಕೊಳ್ಳಲು ಸ್ವತಂತ್ರ ಸಂಗ್ರಾಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೇವೆ ಎಂದು ಹೇಳಿಕೊಂಡು ಅಂತಿಮವಾಗಿ ದೇಶ ವಿಭಜನೆಗೆ ಕಾರಣವಾದರು. ಇದು ಅವರ ನಿಜವಾದ ಬಣ್ಣ. ಅಂದಿನ ಕಾಂಗ್ರೆಸ್ಸಿಗರಿಗೆ ಅವರ ನಿಜವಾದ ಒಳಾರ್ಥವನ್ನು ಅರಿತು ಅನುಭವಿಸಿದರೂ ಕೂಡ ಏನೂ ಆಗದವರಂತೆ ಅವರನ್ನೇ ಓಲೈತ್ತ ಸುಮ್ಮನಿದ್ದಬಿಟ್ಟರು. ಭಾರತದಲ್ಲಿ ಬಾಲಗಂಗಾಧರ ತಿಲಕರು ಗಣೇಶೋತ್ಸವದ ಮೂಲಕ ಹಿಂದುಗಳನ್ನು ಸಂಘಟಿಸುತ್ತಿದ್ದರೆ, ಭಾರತದ ಮುಸ್ಲಿಮರು ನಮಗೆ ಸಂಬಂಧವಿಲ್ಲದ ಇಂಗ್ಲೀಷರಿಂದ ಉಚ್ಛಾಟಿತ ಟರ್ಕಿ ಸುಲ್ತಾನನ ರಕ್ಷಣೆಗಾಗಿ 1919 ಲ್ಲಿ ಖಿಲಾಪತ್ ಚಳುವಳಿ ಆರಂಭಿಸಿದರು. ಅಂದಿನ ಕಾಂಗ್ರೆಸ್ ನಾಯಕರಿಗೆ ಇದು ಸ್ಪಷ್ಟವಾಗಿ ಅರ್ಥವಾಗಲಿಲ್ಲವೆನೋ, ಆದರೆ ಇಂದಿನ ಕಾಂಗ್ರೆಸ್ ನಾಯಕರಿಗೂ ಜನರ ಮುಂದೆ ಹೇಗೆ ಪುಲಕೇಶಿ ನಗರದ ಘಟನೆಯ ಕುರಿತು ಹೇಗೆ ಸ್ಪಷ್ಟನೆ ನೀಡಬೇಕೆಂದು ಅರ್ಥವಾಗುತ್ತಿಲ್ಲ. ಯಾವ ರೀತಿ ಪ್ರತಿಕ್ರಿಯೆಯನ್ನು ಕೊಡಬೇಕೆಂದು ಅವರಿಗೆ ಸರಿಯಾಗಿ ತಿಳಿಯುತ್ತಿಲ್ಲ. ಕಾರಣ ಅಂದಿನಿಂದ ಇಂದಿನವರೆಗೆ ಮಾಡಿಕೊಂಡು ಬಂದ ಮುಸ್ಲಿಂ ಓಲೈಕೆ. 1920 ರಲ್ಲಿ ಕೇರಳದ ಮಾಪಿಳ್ಳೆ ಹತ್ಯಾಕಾಂಡವನ್ನು ನೋಡಿ ಗಾಂಧೀಜಿ ಸುಮ್ಮನಾಗುತ್ತಾರೆ ಖಿಲಾಪತ್ ಚಳುವಳಿ ಅಸಹಕಾರ ಚಳುವಳಿಯ ದಿಕ್ಕನ್ನೇತಪ್ಪಿಸುತ್ತದೆ. ಭಾರತದ ಅಸ್ಮಿತೆಯ ಸ್ವಾತಂತ್ರ್ಯ ಹೋರಾಟದ ರಾಷ್ಟ್ರೀಯತೆಯ ದಿಕ್ಕನ್ನೇ ತಪ್ಪಿಸುವ ಅನೇಕ ಯೋಚನೆ ಮತ್ತು ಯೋಜನೆಗಳು ಅಂದಿನಿಂದಲೂ ನಿರಂತರವಾಗಿ ನಡೆಯುತ್ತಿವೆ, ಮೊನ್ನೆ ಕೆ ಜಿ ಹಳ್ಳಿ ಮತ್ತು ಡಿ ಜಿ ಹಳ್ಳಿಗಳಲ್ಲಿ ನಡೆದಿದ್ದು ಎಲ್ಲವೂ ಗೊತ್ತಿರುವ ಇತಿಹಾಸ. ಪ್ರತಿ ಹೋರಾಟ, ಚಳುವಳಿ ಮತ್ತು ಬದಲಾಣೆಗಳಿಗೆ ಅಲ್ಪಸಂಖ್ಯಾತರು, ಬಹುಸಂಖ್ಯಾತರು, ಹಿಂದೂಗಳು ಮತ್ತು ಮುಸ್ಲಿಮರು ಎಂಬ ಬಣ್ಣಗಳನ್ನು ಕೊಡುತ್ತ ದೇಶ ಹಿತಗಳನ್ನು ಬಲಿಕೊಡಲು ವ್ಯವಸ್ಥಿತವಾದ ರೂಪುರೇಷೆಗಳನ್ನು ಇವರು ಮಾಡುತ್ತಾರೆ. ಅವರ ಮುಂದಿನ ಉದ್ದೇಶವೇ ದೇಶವಿಭಜನೆ. ಇವರ ಯೋಚನೆ ಯೋಜನೆಗಳಿಗೆ ಸಹಕಾರ ಮಾಡಲು ಆಯಾಯಾ ಕಾಲಘಟ್ಟಗಳಲ್ಲಿ ಬುದ್ಧಿಜೀವಿಗಳು, ಪತ್ರಿಕೆ, ಮಾಧ್ಯಮಗಳು, ಕೆಲ ಇಂಟಲಕ್ಚುವಲ್ಗಳು, ಮಾನವ ಅಧಿಕಾರದ ಕೆಲ ನಕಲಿ ನೇತಾರರು ಟೊಂಕಕಟ್ಟಿ ನಿಂತಿರುತ್ತಾರೆ, ಅವರಿಗೇನು ಲಾಭವೋ ದೇವರೇ ಬಲ್ಲ. ಇತ್ತ ಹಿಂದೂ ಸಂಸ್ಕೃತಿಯಲ್ಲಿ ಜಾತಿಪದ್ಧತಿ, ಸತಿ ಪದ್ಧತಿ, ಬಾಲ್ಯ ವಿವಾಹದಂತಹ ಮುಂತಾದ ಸಾಮಾಜಿಕ ಕೆಡುಕುಗಳಿಂದ ನಾವುಗಳೆಲ್ಲರೂ ಹೊರಬಂದು ಪ್ರಗತಿಗೆ ಮುನ್ನಡೆಯಲು ಬಯಸುತ್ತಿದ್ದರೆ, ಅವರು ವ್ಯವಸ್ಥಿತವಾಗಿ ಸೀಮಿ, ಪಿಎಫ್ಐ, ಎಸ್ಡಿಪಿಐನಂತಹ ಅನೇಕ ಸಂಘಟನೆಗಳನ್ನು ಮಾಡಿಕೊಂಡು ವ್ಯವಸ್ಥಿತವಾಗಿ ಅವರವರ ಧರ್ಮದ ಪ್ರಚಾರ, ಪ್ರಸಾರ, ಹಕ್ಕುಸ್ಥಾಪನೆ, ದಾಳಿಗಲಭೆಗಳಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಅವರು ಎಂದಿಗೂ ದೇಶಕ್ಕೋಸ್ಕರ ಕಾಂಗ್ರೆಸ್ ಅನ್ನು ಬೆಂಬಲಿಸಲಿಲ್ಲ ಹಾಗೂ ಬೆಂಬಲಿಸುವುದೂ ಇಲ್ಲ. ಅಲ್ಪಸಂಖ್ಯಾತರ ಹೆಸರಿನಲ್ಲಿ ಸಕಲ ಸೌಲಭ್ಯಗಳನ್ನುಅನುಭವಿಸುತ್ತಾ ಬೇರೆಯವರಿಗೆ ತಮ್ಮ ಧರ್ಮದ ಸಂಗತಿಗಳನ್ನು ಚರ್ಚಿಸಲು ಕೂಡ ಅವಕಾಶನ್ನ ಕೊಡಲಿಲ್ಲ. ಈ ತೀವ್ರಗಾಮಿ ಗಲಭೆಕೋರರ ಓಟಿಗಾಗಿ ಓಲೈಸುವ ಕಾಂಗ್ರೆಸ್ಸಿಗರಿಗೆ ಮೊದಲು ಈ ದುಷ್ಪರಿಣಾಮಗಳ ಅರ್ಥ ಆಗಬೇಕಾಗಿದೆ. ಏಕೆಂದರೆ ಮೊನ್ನೆ ದಾಳಿ ನಡೆದದ್ದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿಗೆ ಸೇರಿದ ತಮ್ಮದೇ ಎಂಎಲ್ಎ ಮೇಲೆ. ಇದರಿಂದ ತಿಳಿಯುವ ಸ್ಪಷ್ಟ ವಿಚಾರವೇನೆಂದರೆ, ಮುಸ್ಲಿಂ ಸಂಘಟನೆಗಳು ಎಂದಿಗೂ ದೀನ ದಲಿತರ ಉದ್ಧಾರಕ್ಕಾಗಿ ಅಥವಾ ದೇಶದ ರಾಷ್ಟ್ರೀಯತೆಯ ಏಳಿಗೆಗಾಗಿ ಅಲ್ಲ. ಹೈದರಾಬಾದಿನ ಎಂಐಎಂ ಸೇರಿದಂತೆ ಎಲ್ಲಾ ಮುಸ್ಲಿಂ ಸಂಘಟನೆಗಳು ಕಾರ್ಯ ನಿರ್ವಹಿಸುವುದು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರ ಹಾಗೂ ಅಂಬೇಡ್ಕರ್ ಅವರ ಹೆಸರಿನಲ್ಲಿ ತಮ್ಮ ಧರ್ಮದ ಒಳಿತಿಗಾಗಿ ಡುಡಿಯುತ್ತಿವೆ. ಸಂಪೂರ್ಣ ಮುಸ್ಲಿಮರ ಇತಿಹಾಸವನ್ನು ಗಮನಿಸಿದಾಗ ಇಂತಹ ನಡುವಳಿಕೆಗಳನ್ನು ನಾವು ಮೊದಲಿನಿಂದಲೂ ನೋಡಬಹುದು. ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗೆ ಅವರ ಮುಸ್ಲಿಂ ತುಷ್ಟೀಕರಣ ಕಾರಣ. ಸ್ವಾತಂತ್ರ ನಂತರದ ಕಾಂಗ್ರೆಸ್ ಪಕ್ಷದ ಈ ತುಷ್ಟೀಕರಣಕ್ಕೆ ಬಲಿಪಶುವಾದ ನಾವು ಇಂದಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಂತಹ ಘಟನೆಗಳನ್ನು ನೋಡುತ್ತಿದ್ದೇವೆ. ಸೆಕ್ಯುಲರ್ ಮಾನಸಿಕತೆ ಹಿನ್ನೆಲೆಯಲ್ಲಿ ಯಾರ್ಯಾರು ಮತಾಂಧತೆ ಮತ್ತು ತುಷ್ಟಿಕರಣ ಮಾಡುತ್ತಾರೋ ಅವರೆಲ್ಲರೂ ಒಂದಲ್ಲ ಒಂದು ದಿನ ಈ ರೀತಿಯ ಗಲಭೆಗಳಿಗೆ ಬಲಿಪಶು ಆಗಲಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಸೋಲು-ಗೆಲುವುಗಳ ಲೆಕ್ಕಾಚಾರದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳನ್ನು ಬೆಂಬಲಿಸಿ ದೇಶವನ್ನ ಹೀನಾಯ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಪ್ರತ್ಯೇಕತಾವಾದಿಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇವರನ್ನು ಬೆಂಬಲಿಸುವ, ಉತ್ತರಪ್ರದೇಶದ ಅಕ್ಲಾಕ್ ಘಟನೆ, 370ರ ವಿಧಿ, ಸಿಎಎ ಕಾನೂನಿನ ವಿರುದ್ಧ ನಮ್ಮ ಟೌನ್ ಹಾಲ್ ಮುಂದೆ ಪ್ರದರ್ಶನ ಮಾಡುವ ಈ ಢೋಂಗಿ ಸೆಕುಲರಿಸ್ಟರ ಮಾನಸಿಕತೆ ಹಾಗೂ ಚಿಂತನೆಗಳ ಕುರಿತು ಬಹು ಎಚ್ಚರಿಕೆಯಿಂದ ಇರಬೇಕು. ಇವರಿಗೆ ಔರಂಗಜೇಬ್ ಬೇಕೋ ಶ್ರೀರಾಮನ ದೇಶ ಬೇಕೋ ಗೊತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮರಸ್ಯ ಕಾಪಾಡಬೇಕು ಎನ್ನುವುದು ಇವರು ತೊಟ್ಟ ಮುಖವಾಡ. ಯಾವ ಮಹಾನ್ ಚಿಂತಕರೂ ಈ ಘಟನೆಯ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿಲ್ಲ ಹಾಗೂ ತಿಳಿಸುವುದೂ ಇಲ್ಲ. ಇಂತಹ ಮುಖವಾಡದ ವ್ಯಕ್ತಿ ನಡುವಳಿಕೆವಿಚಾರಗಳನ್ನುಗಮನಿಸಿದರೆ ಇವರೆಲ್ಲರೂ ಒಂದೇ ಸಂಘಟನೆಯವರೆಂದು ಹೇಳಬಹುದು.ನಮ್ಮ ಸಮಾಜದಲ್ಲಿ ಇಂತಹ ದೇಶ ವಿಭಜಕರಕುರಿತು ಎಚ್ಚರಿಕೆಯನ್ನು ಮೂಡಿಸಬೇಕಿದೆ. ಡಿ ಜೆ ಹಳ್ಳಿ ಕೆ ಜಿ ಹಳ್ಳಿ ಘಟನೆಗಳನ್ನು ನಾವು ಪ್ರಸ್ತುತ ಸಮಾಜಕ್ಕೆ ಸರಿಯಾಗಿ ಅರ್ಥ ಮಾಡಿಸಬೇಕಿದೆ. ಎಂದು ವಿಶ್ಲೇಷಿಸಿದರು.
ಸಂವಾದದಲ್ಲಿ ನ್ಯಾಯಾಂಗ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಚಿಂತನೆ ಮಾಡುತ್ತ ಪುಲಕೇಶಿ ನಗರದ ಒಟ್ಟು ಘಟನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ ಶ್ರೀಧರ್ ಪ್ರಭುರವರು ಹೀಗೆ ವಿವರಿಸುತ್ತಾರೆ. ನಾವುಸಂಘದ ಪ್ರಾರ್ಥನೆಯ “ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಂ” ಸಾಲಿನ ಅರ್ಥವನ್ನು ನೆನಪು ಮಾಡಿಕೊಳ್ಳಬೇಕಿದೆ, ವಿಧಿ ಅಥವಾ ವಿಧಾನವನ್ನು ರಕ್ಷಣೆ ಮಾಡುವಂತಹ ವೈವಿಧ್ಯತೆ ಹೆಸರೇ ಧರ್ಮ, ಅದನ್ನು ಪಾಲಿಸುವುದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರ. ಮಹಾತ್ಮ ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ಪ್ರವಾಸದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ದಕ್ಷಿಣ ಆಫ್ರಿಕಾದ ಭಾರತೀಯ ಮುಸ್ಲಿಮರಿಗಾಗಿಯೇ ಒಂದು ಸಂಘಟನೆ ಇತ್ತು. ಅದರ ಹೆಸರು ಬ್ರಿಟಿಷರ ಅಹಮಿದಿಯಾ ಇಸ್ಲಾಮಿಕ್ ಸೋಸೈಟಿ. ಅಜರ್ ಅಲಿ ಮತ್ತು ಅಬ್ದುಲ್ ಘನಿ ಅದರ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಭಾರತೀಯ ಮುಸಲ್ಮಾನರಿಗೆ ಪ್ರತ್ಯೇಕವಾದ ಒಂದು ಸಂಘಟನೆಯ ಆವಶ್ಯಕತೆ ಇರಲಿಲ್ಲ. ಆದರೆ ಗಾಂಧೀಜಿಯವರು ಅದನ್ನು ಪ್ರಶ್ನಿಸಲೂ ಇಲ್ಲ. ಇಸ್ಲಾಮಿಕ್ ಸೋಸೈಟಿಯೂ ಇರಲಿ ಮತ್ತು ಬ್ರಿಟಿಷ್ ಇಂಡಿಯನ್ ಸೊಸೈಟಿ ಇರಲಿ ಎಂದು ಗಾಂಧೀಜಿಯವರು ಪ್ರತಿಪಾದಿಸಿದರು. ಮಹಾತ್ಮ ಗಾಂಧಿಯವರ ಈ ಮುಸ್ಲಿಂ ಸಪೋರ್ಟ್ ಎಲ್ಲಿಯವರೆಗೆ ಮುಂದುವರೆಯಿತೆಂದರೆ ಕಲ್ಕತ್ತದ ಜಸ್ಟಿಸ್ ಅಮೀರ್ ಅಲಿ ನೇತೃತ್ವದಲ್ಲಿ 1906 ರಲ್ಲಿ ಇಂಗ್ಲೆಂಡನಲ್ಲಿ ಅಲಿ ಸಹೋದರರ ಸಹಕಾರದೊಂದಿಗೆ ಮುಸ್ಲಿಂ ಲೀಗ್ ನ ಬಿಜಾಂಕುರವಾಗುತ್ತದೆ. ಅದೇನೇ ಆದರೂ 1937ರ ಎಲೆಕ್ಷನ್ನಲ್ಲಿ ಮುಸ್ಲಿಂ ಲೀಗ್ ಸೋತು ಸುಣ್ಣವಾತ್ತದೆ. ನೆಹರೂರವರು ಇದನ್ನು ನೋಡಿ ತುಂಬಾ ಬೇಸರಗೊಳ್ಳುತ್ತಾರೆ, ಮುಸ್ಲಿಂರ ಕುರಿತು ಅವರಿಗೆ ಅದೇನು ಪ್ರೀತಿಯೋ ಗೊತ್ತಿಲ್ಲ, ಮುಸ್ಲಿಂ ಲೀಗನ್ನು ಸರಕಾರದೊಂದಿಗೆ ಸೇರಲು ಆಹ್ವಾನ ನೀಡುತ್ತಾರೆ. ಸೋತ ಮುಸ್ಲಿಂಲೀಗ್ ಮಹಮ್ಮದ್ ಆಲಿ ಜಿನ್ನಾ ರವರ ನೇತೃತ್ವದಲ್ಲಿ 20 ಷರತ್ತುಗಳನ್ನು ಕಾಂಗ್ರೆಸಿನೆದುರು ಮಂಡಿಸುತ್ತದೆ. ಅವುಗಳಲ್ಲಿ ಕಾಂಗ್ರೆಸ್ ಕೊನೆಗೆ 13 ಷರತ್ತುಗಳನ್ನು ಪೂರೈಸಲು ಒಪ್ಪಿಕೊಳ್ಳುತ್ತದೆ. ಕೋಮುವಾದಿ ಮೀಸಲಾತಿ, ಮುಸ್ಲಿಂ ವಯಕ್ತಿಕ ಕಾನೂನು, ಎಲ್ಲಾದರೂ ಮುಸ್ಲಿಮರಿಗೆ ಪ್ರಾರ್ಥನೆ ಮಾಡುವ ಹಕ್ಕು, ಗೋಹತ್ಯೆ ನಿಷೇಧ ಮಾಡಬಾರದು, ಒಂದೇಮಾತರಂ ಹಾಡನ್ನು ತ್ಯಾಗ ಮಾಡಬೇಕು, ತ್ರಿವರ್ಣ ಧ್ವಜ ಬಿಡಬೇಕು, ಇಂತಹ ಅನೇಕ ವಿಚಿತ್ರವಾದ ದೇಶವನ್ನು ವಿಭಜಿಸುವ ಷರತ್ತುಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಮುಸ್ಲಿಮರು ನಮ್ಮ ಜೊತೆ ಬರುತ್ತಾರೆ ಎಂಬ ಕಪೋಲಕಲ್ಪಿತ ಆಲೋಚನೆ ಇರಬೇಕು. ಇನ್ನು ಅನಂತರ ನಡೆದ 1946 ಚುನಾವಣೆಯಲ್ಲಿ ಮುಸ್ಲಿಂ ಲೀಗ್ 119 ಮುಸ್ಲಿಂ ಕ್ಷೇತ್ರಗಳಲ್ಲಿ 113 ಕ್ಷೇತ್ರಗಳನ್ನು ಗೆಲ್ಲುತ್ತದೆ. ಈ ಚುನಾವಣೆಯನ್ನು ಪಾಕಿಸ್ತಾನದ ನಿರ್ಮಾಣದ ಚುನಾವಣೆ ಎಂದೇ ಬಿಂಬಿತವಾಗುತ್ತದೆ. ಬೆಂಗಳೂರು-ಮೈಸೂರುಗಳಿಂದ ಹಿಡಿದು ತಮಿಳುನಾಡು ಕೆಲವಡೆ ಸೇರಿದಂತೆ ಎಲ್ಲೆಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿವೆಯೋ ಅಲ್ಲಿ ಮುಸ್ಲಿಂ ಲೀಗ್ ಆರಿಸಿ ಬರುತ್ತದೆ. ಸಂವಿಧಾನ ನಿರ್ಮಾತೃ ಅಂಬೇಡ್ಕರ್ ತಮ್ಮ ಪುಸ್ತಕದಲ್ಲಿ ಮುಸ್ಲಿಂ ಬ್ರದರ್ ಫುಡ್ ಎಂಬುದು ವಿಶ್ವಮಾನವತ್ವವಲ್ಲ ಅದು ಬರಿ ಮುಸ್ಲಿಂ ಬ್ರದರ್ ಹುಡ್ ಮಾತ್ರ, ಇದರರ್ಥ ಮುಸ್ಲಿಂ ಧರ್ಮ ಬೇರೆ ಧರ್ಮದ ಸಹೋದರತ್ವವನ್ನು ಬಯಸುವುದಿಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ಏಕೆಂದರೆ ಅಂಬೇಡ್ಕರ್ ಹೇಳಿಕೆಗಳು ನಮಗೆ ಕನ್ನಡಿಯಂತೆ, ನಾವು ಹೇಗಿದ್ದೇವೆಯೋ ಹಾಗೆಯೇ ಕಾಣುತ್ತೇವೆ. ವಿಘಟನೆಯೇ ಅವರ ಮೂಲ ಮುಸ್ಲಿಮರ ಮಂತ್ರ. ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಂ ಎಂಬ ತತ್ವವನ್ನು ಅವರು ಎಂದಿಗೂ ಪಾಲಿಸುವುದಿಲ್ಲ. ಇನ್ನು ಸ್ವಾತಂತ್ರಾನಂತರದ ಇಂಡಿಯನ್ ಮುಸ್ಲಿಂ ಲೀಗ್ ಇದೇ ತತ್ವವನ್ನು ಪಾಲಿಸಿಕೊಂಡುಬಂದಿದೆ. 1977 ಎಮರ್ಜೆನ್ಸಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಭಾರತದ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸುವ ಪ್ರಯತ್ನವನ್ನು ಮಾಡಿದರು. ಅದೇ ಸಂದರ್ಭದಲ್ಲಿ ಮುಸ್ಲಿಮರ ಏಳಿಗೆಗೋಸ್ಕರ ಸಿಮಿ ಸಂಘಟನೆಯ ಪ್ರತಿಷ್ಠಾಪನೆಯಾಯಿತು. ಸಿಮಿಯ ನಡುವಳಿಕೆ ಅಂದಿನಿಂದಲೇ ಚಟುವಟಿಕೆಗಳು ಜಗಜ್ಜಾಹೀರಾಗಿದೆ. ಕೇರಳದ ಉಪನ್ಯಾಸಕನ ಕೈಕಡಿದ ಘಟನೆಯಂತಹ ಅನೇಕ ದೇಶವಿರೋಧಿ ಚಟುವಟಿಕೆಗಳ ಆಧಾರದಲ್ಲಿ ಸಿಮಿ ಸಂಘಟನೆಯನ್ನು ಬ್ಯಾನ್ ಮಾಡಲಾಗುತ್ತದೆ. ನ್ಯಾಯಾಲಯಗಲ್ಲಿ ಇದನ್ನು ಅನೇಕ ಬಾರಿ ಪ್ರಶ್ನಿಸಲಾಗುತ್ತದೆ. ಅನಂತರ ಪಿಎಫ್ಐ, ಎಸ್ಡಿಪಿಐ ನಂತಹ ಅನೇಕ ಡೆಮೊಕ್ರಟಿಕ್ ಹೆಸರುಗಳನ್ನು ಇಟ್ಟುಕೊಂಡು ದಲಿತ ಹಿಂದುಳಿದ ವರ್ಗಗಳ ಸೇವೆ ಮಾಡುವ ನೆಪದಲ್ಲಿ ಇವರು ತಮ್ಮ ವಿಘಟನಾ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ. ಈಗ ಅವರ ಸಂಘಟನೆಗಳನ್ನು ಬ್ಯಾನ್ ಮಾಡ್ಬೇಕು ಎಂಬದು ಕೆಲವರ ಅಭಿಪ್ರಾಯವಾಗಿದೆ. ಆದರೆ ನನಗನ್ನಿಸುವಂತೆ ಇದು ಅವರ ಉಪಟಳಗಳಿಗೆ ಪರಿಹಾರವಲ್ಲ. ಮುಸ್ಲಿಂ ಮೂಲಭೂತವಾದಿಗಳು ನಮ್ಮನ್ನು ಅಟ್ಯಾಕ್ ಮಾಡುವುದಿಲ್ಲ ಎಂಬ ಕಲ್ಪನೆಯನ್ನು ನಾವು ಮೊದಲು ಬಿಡಬೇಕು. ನಮ್ಮದೇ ಅಂತಿಮ ಜಾತಿ, ನಾವೇ ಮೂಲ ಎನ್ನುವವರ ಕುರಿತು ನಾವು ಸ್ವಲ್ಪ ಚಿಂತನೆ ಮಾಡಿಕೊಳ್ಳಬೇಕು. ಪುಲಿಕೇಶಿನಗರದಲ್ಲಿ ನಡೆದ ಈ ಘಟನೆ ನಮ್ಮೆಲ್ಲರಿಗೂ ಒಂದು ಪಾಠವಾಗಬೇಕು. ಒಂದು ಸೈದ್ಧಾಂತಿಕ ಸಂಘರ್ಷ ದೇಶದಲ್ಲಿ ಪ್ರಾರಂಭವಾಗಿದೆ. ನಮ್ಮನ್ನ ಯಾರೂ ರಕ್ಷಿಸಲು ಬರುವುದಿಲ್ಲ. ಡಿ ಜಿ ಹಳ್ಳಿ ಮತ್ತು ಕೆ ಜಿ ಹಳ್ಳಿಗಳು 20-30 ದೇವಸ್ಥಾನಗಳಿಂದ ಕೂಡಿದ ಹಳ್ಳಿಗಳಾಗಿದ್ದವು. ಇಂದು ದೇವಸ್ಥಾನಕ್ಕೆ ಪುರೋಹಿತರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಸಮಾಜದಲ್ಲಿ ಅರಿವು ಮೂಡಿಸುವುದು ಅತ್ಯಾವಶ್ಯಕವಾಗಿದೆ ಎಂದು ತಿಳಿಸಿದರು.
ಗಲಭೆಯ ಕುರಿತು ತಾತ್ವಿಕ ಹಿನ್ನೆಲೆಯನ್ನು ಪರಾಮರ್ಷಿಸುತ್ತ, ದೂರದ ವಿಯೆಟ್ನಾಮ್ ನಲ್ಲಿರುವ ಚಿಂತಕರಾದ ಡಾ. ಜಿ. ಬಿ ಹರೀಶ್ ರವರು ನಮ್ಮನ್ನುದ್ದೇಶಿಸಿ ಮಾತನಾಡಿದರು. ಈ ರೀತಿ ಪ್ರಜ್ಞಾ ಪ್ರವಾಹದಂತಹ ಚರ್ಚೆಗಳನ್ನು ಮಾಡಬಾರದು ಎನ್ನುವುದೇ ಹಲ್ಲೆ ಮಾಡುವವರು ಉದ್ದೇಶ. ಸಮಾಜದಲ್ಲಿ ಭಯವನ್ನು ಮೂಡಿಸುವುದು ಇವರ ಮೂಲ ಗುಣ. ದಕ್ಷಿಣ ಭಾರತದ ಬಹುತೇಕ ಹಿಂದೂ ಮದುವೆಗಳು ಹಗಲಿನಲ್ಲಿ ನಡೆಯುತ್ತವೆ, ಆದರೆ ಉತ್ತರ ಭಾರತದ ಬಹುತೇಕ ಮದುವೆಗಳು ರಾತ್ರಿ ನಡೆಯುತ್ತೇವೆ. ಕಾರಣ ಸ್ಪಷ್ಟ. ನಮ್ಮ ಸಂಸ್ಕೃತಿ, ಧರ್ಮ, ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವುದು ನಮಗೆ ಇಂದು ದೊಡ್ಡ ಸಮಸ್ಯೆಯಾಗಿದೆ. ಗುಳೆ ಹೋಗುವುದು, ಹೆದರುವುದು, ಶಾಂತಿ ಅಹಿಂಸೆಯ ಜಪ ಮಾಡುವುದು ನಮ್ಮ ಸಂಸ್ಕೃತಿ ನಿಯಮಗಳನ್ನು ಬದಲಾಯಿಸಿಕೊಂಡು ರಾತ್ರಿ ಮದುವೆ ಮಾಡಿಕೊಳ್ಳುವುದು, ನಾವು ಅವರನ್ನು ಒಪ್ಪಿಕೊಂಡು ಅವರಿಗೆ ಹೆದರಿಕೊಂಡು ಬಂದದ್ದರಿಂದ ಹೀಗೆಲ್ಲಾ ಆಗುತ್ತಿವೆ. ದೆಹಲಿಯ ಗಲಭೆ ಸೇರಿದಂತೆ ಪುಲಕೇಶಿನಗರದ ಗಲಭೆಗಳು ನನ್ನ ಪ್ರಕಾರ ಕೇರಳದ ಮಲಬಾರ್ ಮೋಪ್ಲಾ ದಂಗೆಯ ನೂರು ವರ್ಷಗಳ ಜಿಹಾದಿ ಆಚರಣೆಯ ಫಲವಾಗಿ ನಡೆಯುತ್ತಿವೆ ಎನಿಸುತ್ತಿದೆ. ವಿಶ್ವದೆಲ್ಲೆಡೆ ಅತಿ ಹೆಚ್ಚು ಜನಸಂಖ್ಯ ಇರುವಂತೆ ಮಾಡುವುದು, ಹದೀಸ್ ಇಸ್ಲಾಮಿಕ್ ತಾತ್ವಿಕ ನೆಲೆಗಳನ್ನು ಗಟ್ಟಿಗೊಳಿಸುವುದು, ತಮ್ಮ ಧರ್ಮಕ್ಕೆ ನಿಷ್ಠೆಯನ್ನು ತೋರುವುದೇ ಇವರ ಆದ್ಯ ಚಿಂತನೆ. ಇವರಿಗೆ ಇಂಗ್ಲೀಷ್ ಬರದಿದ್ದರೂ ಚಿಂತೆಯಿಲ್ಲ, ಇವರಿಗೆ ಆಕ್ರಮಣಕಾರಿ ಭಾಷೆ ಗೊತ್ತಿದೆ. ಧರ್ಮದ ಹೆಸರಿನಲ್ಲಿ ಸಮಯ ಕಾದು ಹೊಡೆಯುತ್ತಾರೆ. ಮತಾಂಧತೆಗೆ ನಿಷ್ಠೆ ತೋರಿಸುವುದೇ ಇವರ ಧರ್ಮ. ಏಕಾಏಕಿ ಎಲ್ಲರೂ ಒಟ್ಟುಗೂಡುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ದಾಳಿ ಮಾಡುತ್ತಾರೆ, ಗಲಭೆ ನೆಡೆಸುತ್ತಾರೆ, ಮಾರಕ ಆಯುಧಗಳನ್ನು ಬಳಸುತ್ತಾರೆ ಬೆಂಕಿ ಹಚ್ಚುತ್ತಾರೆ. ಇವರ ಮುಂದೆ ಯಾವುದೇ ನಿಯಮ ಸಂವಿಧಾನ ಕಾನೂನುಗಳಿಲ್ಲ. ಪಾಕಿಸ್ತಾನದ ಹಿಂದೂಗಳು, ಬಾಂಗ್ಲಾದೇಶದ ಹಿಂದೂಗಳು, ಕಾಶ್ಮೀರದ ಪಂಡಿತರ ಸ್ಥಿತಿಗಳನ್ನು ನೋಡಿದಾಗ ಇವರ ಮನೋಭಾವದ ಸಂಪೂರ್ಣ ಅರಿವು ನಮಗೆ ಆಗುತ್ತದೆ. ಇವರ ದಾಹಕ್ಕೆ ಇಡಿ ವಿಶ್ವವೇ ಬಲಿಯಾಗುತ್ತಿದೆ. ಇವರ ಮೂಲ ತತ್ವಗಳ ಬಗ್ಗೆ ಯಾರೂ ಮಾತನಾಡಬಾರದು. ಯಾರು ಇವರನ್ನು ಪ್ರಶ್ನಿಸಬಾರದು. ಎಲ್ಲರೂ ಇವರ ಧರ್ಮವನ್ನು ಗೌರವಿಸಬೇಕು, ಇಲ್ಲವೇ ಸುಮ್ಮನಿರಬೇಕು, ಅವರ ಧರ್ಮವೇ ಅಂತಿಮ ಶ್ರೇಷ್ಠ, ಪ್ರವಾದಿ ಮಹಮ್ಮದ್ರ ಜೀವನ ಘಟನೆಗಳನ್ನು ನಾವು ಅಂತಿಮ ಎಂದು ಭಾವಿಸಬೇಕು. ನಾವು ಅವುಗಳನ್ನು ವಿಶ್ಲೇಷಿಸಿದರೆ, ಅವುಗಳಿಗೆ ಹೆಸರು ಮತ್ತು ನಾಮರೂಪಗಳನ್ನು ಕೊಡಬೇಕಾಗುತ್ತದೆ. ಇವರ ಧರ್ಮ ಎಲ್ಲದನ್ನು ಮೀರಿದ್ದು. ಒಟ್ಟಿನಲ್ಲಿ ಮುಸ್ಲಿಂ ಒಂದು ಪೊಲಿಟಿಕಲ್ ಐಡಿಯಾಲಜಿ. ಇವರ ವಿರುದ್ದ ಮಾತನಾಡಿದ ಲಜ್ಜಾ ಕಾದಂಬರಿ ಲೇಖಕಿ ತಸ್ಲೀಮಾ ನಸ್ರೀನ್ರನ್ನು ನೆಲೆಯಿಲ್ಲದೆ ಮಾಡಿದರು. ಲಜ್ಜಾ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ ಅನುವಾದಕರಿಗೆ 10ವರ್ಷ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದರು. ಯುರೋಪಿನ ಎಲ್ಲ ಭಾಗಗಳಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿದಂತೆ ಅವರ ಮತಾಂಧತೆಯ ಉಪಟಳದ ತೀವ್ರತೆಯೂ ಹೆಚ್ಚುತ್ತಿದೆ. ಈಗಾಗಲೇ ಯೂರೋಪಿನ ದೇಶಗಳು ಇವರ ಭಯಾನಕತೆಯನ್ನು ಅನುಭವಿಸಿ ಅರ್ಥ ಮಾಡಿಕೊಳ್ಳುತ್ತಿವೆ. ಇವರು ತಮ್ಮ ಪರವಾಗಿ ಎರಡು-ಮೂರು ಗಂಟೆಗಳಲ್ಲಿ ಸಾವಿರಾರು ಜನರನ್ನು ಬೇಕಾದರೂ ಸೇರಿಸಬಹುದು. ಯಾರ ಮನೆಯನ್ನಾದರೂ ಸುಡಬಹುದು, ಏನು ಬೇಕಾದರೂ ಮಾಡಬಹುದು. ಇದು ಸಾಮಾನ್ಯ ಜನರು ಮಾಡುವ ಕೆಲಸವಲ್ಲ. ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬರ್ಡ್ ಎಂಬ ಸಂಸ್ಥೆಯಿತ್ತು. ವಿಭಿನ್ನ ಧರ್ಮದ ಹಿರಿ-ಕಿರಿಯರು ತಮ್ಮ ಧರ್ಮದ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡುತ್ತಿದ್ದರು. ಆದರೆ ಇಸ್ಲಾಂನಲ್ಲಿ ಇಂತಹ ಚರ್ಚೆಗಳಿಗೆ ಅವಕಾಶವೇ ಇಲ್ಲ. ಇವರು ಎಂದಿಗೂ ಚರ್ಚೆಗೆ ಬರುವುದಿಲ್ಲ. ಇವರಿಗೆ ಪ್ರವಾದಿ ಮಹಮ್ಮದರೇ ಅಂತಿಮ. ಇವರ ಧರ್ಮದಲ್ಲಿ ಚರ್ಚೆ ಸಂವಾದಕ್ಕೆ ಅವಕಾಶವೇ ಇಲ್ಲ. ಹಣತೆ ಹಚ್ಚು, ಜ್ಞಾನದ ಬೆಳಕನ್ನು ಅರಿತುಕೋ ಎಂಬ ಕ್ರಮವೇ ಇಲ್ಲ. ಧರ್ಮದಲ್ಲಿ ಗಂಡಸರೇ ಮುಖ್ಯ,ಅವರಿಗೇ ಅಧಿಕಾರ, ಸ್ತ್ರೀಯರು ಮತ್ತು ಮಕ್ಕಳು ಇವರ ಯಕಶ್ಚಿತ್ ಸೇವಕರು. ದೆಹಲಿಯ ಸಂಚು, ಹ್ಯೂಮನ್ ಬಾಂಬುಗಳು, ಬಾಂಗ್ಲಾ-ಪಾಕಿಸ್ತಾನ-ಕಾಶ್ಮೀರ ಗಳಲ್ಲಿ ನೆಡೆದಂತಹ ಘಟನೆಗಳು ಇವರಿಗೆ ಪ್ರೇರಣೆಗಳು. ಬೆಂಗಳೂರಿನ ಪುಲಕೇಶಿನಗರದ ಘಟನೆ ಕೂಡ ಆಕಸ್ಮಿಕವಾಗಿ ನೆಡೆದುದಲ್ಲ. ಇದು ಇವರ ಸಾರ್ವಕಾಲಿಕ ಚಿಂತನೆ, ಪ್ಯಾಟರ್ನ್. ಇಂದಿನ ಆಧುನಿಕ ಯುಗದಲ್ಲಿ ಸೈಬರ್ ಸೆಕ್ಯುರಿಟಿಗೆ ಇವರದೇ ದೊಡ್ಡ ತಲೆನೋವು. ಇವರದೇ ಆದ ಆನ್ಲೈನ್ ಪತ್ರಿಕೆಗಳಿವೆ, ರಿಕ್ರೂಟ್ಮೆಂಟ್ ಗಳಾಗುತ್ತವೆ. ಕಾಲಕಾಲಕ್ಕೆ ಕಾಯ್ದು ಅನ್ಯಧರ್ಮೀಯರನ್ನು ಸದೆಬಡಿಯುತ್ತಾರೆ. ಮತಾಂತರಗಳು, ಗುಳೆ ಹೋಗುವುದು ಇವರ ಪ್ರಾಜೆಕ್ಟಗಳು. ದಾರುಲ್ ಹಲಬ್, ದಾರುಲ್ ಇಸ್ಲಾಂಗಳೇ ಇವರ ನಿಯಮಗಳು, ಸ್ತ್ರೀಯರು ಓದಬಾರದು, ಮಕ್ಕಳಿಗೆ ಶಿಕ್ಷಣ ಬೇಡ, ವೈಜ್ಞಾನಿಕತೆಯಿಂದ ದೂರವಿರುವುದು, ವಹಾಬಿಸಂನ ಆಚರಣೆಗಳೇ ಇವರ ಮೂಲಮಂತ್ರಗಳಾಗಿವೆ. ನನ್ನಂತೆಯೇ ಎಲ್ಲರೂ ಎನ್ನುವುದು ಹಿಂದು ಧರ್ಮವಾದರೆ, ನಾನೇ ಶ್ರೇಷ್ಠವೆಂಬುದು ಇವರ ಧರ್ಮ. ಹಿಂದು ಧರ್ಮದಲ್ಲಿ ದಯಾನಂದ ಸರಸ್ವತಿ, ಶ್ರದ್ಧಾನಂದ, ರಾಮಸ್ವರೂಪ್ ವಿವೇಕಾನಂದರು ಹೀಗೆ ಎಲ್ಲರೂ ಏಳಿಗೆಗಳನ್ನು ಬಯಸಿದರೆ, ಇವರದು ಹಿಂಸಾತ್ಮಕ ಉಗ್ರವಾದ.
ಅವರು ಅದರ ಪರವಾಗಿ ಎರಡು-ಮೂರು ಗಂಟೆಗಳಲ್ಲಿ ಸಾವಿರಾರು ಜನ ಸೇರಿ ಹೀಗೆ ಮಾಡಿರುವುದು ಸಾಮಾನ್ಯವಾದ ಘಟನೆಯಲ್ಲ. ಸಾಮಾನ್ಯರಿಗೆ ಹೀಗೆ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ರಾಜಕೀಯ ಪಕ್ಷಗಳ ಮಾನಸಿಕತೆಯೇ ಇದಕ್ಕೆಲ್ಲ ಕಾರಣ. ನಮ್ಮಲ್ಲಿ ಜಾಗೃತಿ ಬರಬೇಕಾದರೆ ದಾರಿ ತಪ್ಪಿದ ಟಿವಿ ಚಾನಲ್ಗಳನ್ನು ನೋಡುವುದನ್ನು ನಾವು ನಿಲ್ಲಿಸಬೇಕು. ನಶಿಸಿರುವ ನ್ಯೂಸ್ಪೇಪರ್ ಗಳನ್ನು ಓದುವುದರಿಂದ ಯಾವ ಪ್ರಯೋಜನವೂ ಆಗದು. ಹಿಂದೂಗಳಲ್ಲಿ ಕ್ಷತ್ರಿಯತೆ ಬರಬೇಕು, ಸಕಲರಲ್ಲಿ ಜ್ಞಾನ ಒಡಮೂಡಬೇಕು. ಬುದ್ಧನ ಜ್ಞಾನ ಮೂಡಬೇಕು ಎಂದು ವಿವರಿಸಿದರು.
ಸಂವಾದದ ಕೊನೆಯಲ್ಲಿ ಸಂವಿಧಾನ, ನ್ಯಾಯಾಂಗದ ಅಡಿಯಲ್ಲಿ ಕಾನೂನಾತ್ಮಕವಾಗಿ ಈ ಸಮಸ್ಯೆಗಳಿಗೆ ಪರಿಹಾರವಿದೆಯೇ ಎಂಬ ಪ್ರಶ್ನೆಗೆ ಶ್ರೀ ಶ್ರೀಧರ ಪ್ರಭು ಅವರು ಉತ್ತರಿಸುತ್ತ – ಕಾನೂನು ಸಂಕುಚಿತ ಅದರ ವ್ಯಾಪ್ತಿ ಕಡಿಮೆ, ಮೊರಾಲಿಟಿ ಅದಕ್ಕಿಂತ ದೊಡ್ಡದು, ಇವೆರಡನ್ನು ಮೀರಿದ್ದು ಧರ್ಮದ ಪರಿಪಾಲನೆ, ಜಾಗೃತಿಯೊಂದೇ ಇದಕ್ಕೆ ಪರಿಹಾರ, ನಾವು ಹಿಂದು ಸಮಾಜ ಸಂಘಟನೆಯ ಸದ್ಬಳಕೆ ಮಾಡಬೇಕು. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೂ ಅನೇಕ ಸುಧಾರಣೆಗಳನ್ನು ಮಾಡಬಹುದು, ಸರ್ದಾರ್ ಪಟೇಲರು ಇದೇ ವ್ಯವಸ್ಥೆಯಲ್ಲಿ ದೇಶವನ್ನು ಒಗ್ಗೂಡಿಸಿದರು. 2014 ಮತ್ತು 2019 ರ ಚುಣಾವಣೆಗಳು ಈ ದಾರಿಯಲ್ಲಿ ಆಶಾಭಾವನೆಗಳನ್ನು ಮೂಡಿಸಿವೆ. ರಾಷ್ಟ್ರೀಯತೆಯೊಂದಿಗೆ ಎಲ್ಲವನ್ನೂ ದೇಶವಾಗಿ ನೋಡುವುದು ಇಸ್ಲಾಂ ಅನುಯಾಯಿಗಳಿಗೆ ಕಷ್ಟಸಾಧ್ಯ. ಹಿಂದೂಗಳು ಕಡಿಮೆಯಾಗುವವರೆಗೆ ಅವರಿಗೆ ಪ್ರಜಾಪ್ರಭುತ್ವದ ಅವಶ್ಯಕತೆ ಇರುತ್ತದೆ. ತಮ್ಮ ಜನಸಂಖ್ಯೆ ಹೆಚ್ಚಿದ ನಂತರ ಅವರು ಡಿಕ್ಟೇಟರ್ ಆಗುತ್ತಾರೆ. ಬಹು ಸಂಖ್ಯಾತರಾಗುವವರಿಗೆ ಡಿಮ್ಯಾಂಡ್ ಮಾಡುತ್ತಾರೆ. ಅನಂತರ ದಬ್ಬಾಳಿಕೆ ತೋರಿಸುತ್ತಾರೆ. ನಮಗೆ ಸಾಫ್ಟ್ ಡೆಮಾಕ್ರಸಿಯ ಅಗತ್ಯವಿಲ್ಲ, ಸ್ಟ್ರಾಂಗ್ ಡೆಮಾಕ್ರಸಿ ಅಗತ್ಯವಿದೆ. ಎಂದು ಹೇಳಿದರು.
ಡಾ. ಜಿ ಬಿ ಹರೀಶರವರು ಉತ್ತರಿಸುತ್ತ, ಮುಸ್ಲಿಮರಿಗೆ ಸತ್ಯ ದರ್ಶನ ಮಾಡಿಸಬೇಕು, ಪ್ರಜ್ಞಾವಂತ ಚರ್ಚೆಗೆ ಅವರನ್ನು ಕರೆಯಬೇಕು, ಅವರಿಗೆ ಸತ್ಯಾರ್ಥದ ಪ್ರಕಾಶವಾಗಬೇಕು. ಸ್ಪಷ್ಟವಾದ ನಿರ್ದೇಶನ ಕೊಟ್ಟರೆ ಬದಲಾವಣೆ ಮಾಡಲು ಸಾಧ್ಯ. ಎಸ್ಎಲ್ ಭೈರಪ್ಪನವರ ಆವರಣದಲ್ಲಿ ಅವರು ಪ್ರಯತ್ನಪಟ್ಟರು. ಆದರೆ ನಮ್ಮಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಅವರನ್ನು ಇಂತಹ ಗಲಭೆಗಳನ್ನು ನೋಡಿ ಹೆದರುವ ಅವಶ್ಯಕತೆ ಇಲ್ಲ. ಅವರದು ಪುಕ್ಕಲು ಸ್ವಭಾವ. ಇಂದಿನ ಜಮ್ಮು-ಕಾಶ್ಮೀರವನ್ನು ನೋಡಿದರೆ ಗೊತ್ತಾಗುತ್ತದೆ. ಇಸ್ಲಾಮಿನ ಅನುಯಾಯಿಗಳದ್ದು ಬೇಟೆಗಾರರ ಸ್ವಭಾವ. 60ರ ದಶಕದಲ್ಲಿ ಅವರ ಧರ್ಮದಲ್ಲಿ ಒಳ್ಳೆಯ ಕೆಲಸ ಮಾಡಿದ ಹಮಿದ್ ದಳವಾಯಿ ಅವರಿಗೆ ಶವಸಂಸ್ಕಾರಕ್ಕೂ ಸಹ ಜಾಗ ಕೊಡಲಿಲ್ಲ. ಒಳ್ಳೆಯವರಿಗೆ ರಕ್ಷಣೆ ಕೊಡುವುದು ಇಂದು ಅತ್ಯಗತ್ಯ. ತಾರೀಕ್ ಫತೇ ವಿದೇಶದಲ್ಲೆ ಸುರಕ್ಷಿತವಾಗಿದ್ದು ಕೊಂಡು ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಜೈನರು ಮತ್ತು ಬೌದ್ಧರ ಅಹಿಂಸೆ ಮತ್ತು ಶಾಂತಿಗಳು ನಮ್ಮ ನಡುವಳಿಕೆಗಳನ್ನು ಸ್ವಲ್ಪ ಬದಲಾಯಿಸಿವೆ, ಕಾಲಕ್ಕೆ ತಕ್ಕಂತೆ ನಾವು ಬದಲಾಗಲಿದೆ. ಗಾಂಧೀಜಿಯವರ ಶಿಷ್ಯರಾದ ವಿನೋಬಾ ಭಾವೆಯವರ ಅಹಿಂಸೆ ನಮಗೆ ಬೇಡ. ಚೀನಾ ಸೈನಿಕರೆದುರು ಗುಲಾಬಿ ಹೂ ಹಿಡಿದ ಮಕ್ಕಳನ್ನು ಕಳುಹಿಸಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಇಂತಹ ಅಹಿಂಸೆ ವಿಕೃತಿಯಾಗುತ್ತದೆ. ಕರ್ನಾಟಕದ ಜೈನ ಗಂಗವಂಶವೂ ಕೂಡ ದೇಶ ರಕ್ಷಣೆಯಲ್ಲಿ ಪರಾಕ್ರಮಿಯಾಗಿತ್ತು. ಆಳುವವರು ಗಟ್ಟಿಯಿದ್ದರೆ, ದುಡಿಯುವವರು ಗಟ್ಟಿರುತ್ತಾರೆ. ಇಂದು ನಮ್ಮ ಸೇನೆ ಮಾಡುತ್ತಿರುವ ದೇಶ ರಕ್ಷಣೆಯ ಕಾರ್ಯಗಳೆ ಇದಕ್ಕೆ ಉದಾಹರಣೆ. ನಮ್ಮ ವಿರೋಧ ಮುಸ್ಲಿಮರ ಮೇಲೆ ಅಲ್ಲ, ಅವರ ಪೂರ್ವಜರು ನಮ್ಮಂತೆಯೇ ಹಿಂದುಗಳಾಗಿದ್ದವರು. ನಮ್ಮ ಹೋರಾಟ ಇಸ್ಲಾಂನ ನೀತಿಗಳ ವಿರುದ್ಧ. ಪುಲಕೇಶಿನಗರ ಗಲಭೆಯನ್ನು ಒಂದು ಘಟನೆಯಾಗಿ ನೋಡಬಾರದು. ಚಿಂತೆನೆ ಮಾಡಿ ಮುಂದಿನ ಹೆಜ್ಜೆ ಇಡಬೇಕೆಂದು ಎಚ್ಚರಿಸಿದರು.
ವರದಿ: ಡಾ. ಶ್ರೀಧರ ಪಿ ಡಿ, ಬೆಂಗಳೂರು.