ಆರೆಸ್ಸೆಸ್ ನ ಪರಮಪೂಜನೀಯ ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರ ವಿಜಯದಶಮಿ ಉತ್ಸವ ೨೦೨೦ ರ ಹಿಂದಿ ಭಾಷಣದ ಕನ್ನಡಾನುವಾದ
ಭಾನುವಾರ, ಅಕ್ಟೊಬರ್ ೨೫ ೨೦೨೦
ಈ ವರ್ಷದ ವಿಜಯದಶಮಿಯ ಸಂದರ್ಭ ನಮಗೆಲ್ಲರಿಗೂ ತಿಳಿದಿರುವಂತೆ ಸಂಭ್ರಮದ ಸಂಖ್ಯೆಯ ದೃಷ್ಟಿಯಿಂದ ಕಡಿಮೆಯಾಗಿದೆ. ಅದಕ್ಕೆ ಕಾರಣವೇನೆಂಬುದನ್ನೂ ನಾವು ಅರಿತಿದ್ದೇವೆ, ಕೊರೋನಾ ವೈರಾಣುವಿನ ಸಾಮೂಹಿಕ ಹರಡುವಿಕೆಯನ್ನು ತಡೆಯಲೋಸುಗ ಸಾಮಾಜಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.
ಈ ವರ್ಷದ ಮಾರ್ಚಿ ತಿಂಗಳಿನಿಂದ ಕೊರೋನಾ ಸಾಂಕ್ರಾಮಿಕದ ಚರ್ಚೆ ವಿಶ್ವದೆಲ್ಲೆಡೆಯ ವಿದ್ಯಮಾನಗಳನ್ನು ಬದಿಗೊತ್ತಿದೆ. ಕಳೆದ ವರ್ಷದ ವಿಜಯದಶಮಿಯಿಂದ ಈ ವರ್ಷದ ವರೆಗೆ ಹಲವು ಗಮನಾರ್ಹ ಸಂಗತಿಗಳು ಘಟಿಸಿವೆ. ೨೦೧೯ರ ವಿಜಯದಶಮಿಗೆ ಮುನ್ನವೇ ವಿಧಿ ೩೭೦ರ ರದ್ದತಿ ಸಾಂವಿಧಾನಿಕ ರೀತಿಯಲ್ಲಿ ನಡೆಯಿತು. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ದೀಪಾವಳಿಯ ಪರ್ವದ ನಂತರ ೯ನೇ ನವೆಂಬರ್ ೨೦೧೯ರಂದು ರಾಮ ಜನ್ಮಭೂಮಿ ವಿವಾದದ ಕುರಿತಾಗಿ ಸ್ಪಷ್ಟವಾದ ಹಾಗೂ ಐತಿಹಾಸಿಕ ತೀರ್ಪುನ್ನು ನೀಡಿತು. ನ್ಯಾಯಾಲಯದ ತೀರ್ಪಿಗಾಗಿ ಭಾರತೀಯರು ಸಂಯಮದಿಂದ ಕಾದು ಆಗಸ್ಟ್ ೫ರಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣಕ್ಕಾಗಿ ಭೂಮಿಪೂಜೆ, ಶಿಲಾನ್ಯಾಸದ ಸಮಾರಂಭವನ್ನು ಭಕ್ತಿ ಹಾಗೂ ಹಬ್ಬದ ಸಡಗರದೊಂದಿಗೆ ಸಂಭ್ರಮಿಸಿದ್ದು ಗೋಚರವಾಯಿತು. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಯನ್ನು ನ್ಯಾಯಯುತವಾಗಿ ಜಾರಿಗೆ ತರಲಾಯಿತು. ನಮ್ಮ ನೆರೆಯ ದೇಶಗಳಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ನೀಡಲಾಗುವ ಕಿರುಕುಳ, ಉಪದ್ರವಗಳಿಗೆ ಹೆದರಿ ನಮ್ಮ ದೇಶಕ್ಕೆ ವಲಸೆ ಬಂದು ಇಲ್ಲಿ ಆಶ್ರಯ ಪಡೆಯುವವರಿಗೆ ಪೌರತ್ವ ನೀಡುವ ಕಾರ್ಯಕ್ಕೆ ಈ ಕಾಯಿದೆಯಿಂದ ಸಾಧ್ಯವಾಯಿತು. ಈ ನೆರೆಯ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವುದು ತಿಳಿದಿರುವ ವಿಷಯವೇ. ಪೌರತ್ವ ಕಾಯಿದೆಗೆ ಮಾಡಿರುವ ಈ ತಿದ್ದುಪಡಿ ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ವಿದೇಶಿಗರಿಗೆ ನಮ್ಮ ಸಂವಿಧಾನದ ಅಡಿಯಲ್ಲಿ ನೀಡಲಾಗುವ ಪೌರತ್ವದಲ್ಲಿ ಯಾವುದೇ ಬದಲಾವಣೆಯನ್ನು ಈ ತಿದ್ದುಪಡಿಯಿಂದ ಮಾಡಲಾಗಿಲ್ಲ. ಆದರೆ ಈ ಹೊಸ ಕಾನೂನನ್ನು ವಿರೋಧಿಸುವವರು ನಮ್ಮ ಮುಸಲ್ಮಾನ ಬ್ರಾತೃಗಳಲ್ಲಿ ವಿಷ ಬಿತ್ತುವ ಯೋಜನೆ ರೂಪಿಸಿ, ಮುಸಲ್ಮಾನ ಜನಸಂಖ್ಯೆಯನ್ನು ನಿಯಂತ್ರಿಸಲು ಈ ಕಾನೂನನ್ನು ರಚಿಸಲಾಗಿದೆ ಎಂಬ ಮಿಥ್ಯವನ್ನು ಸಾರಿದರು. ಪ್ರತಿಭಟನೆಯ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಕಾರ್ಯದಲ್ಲಿ ಅವಕಾಶವಾದಿಗಳು ಈ ಸೂಕ್ಷ್ಮ ಪರಿಸ್ಥಿತಿಯನ್ನು ಬಳಸಿಕೊಂಡರು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೂ ಅಪಾಯವುಂಟಾಯಿತು. ಈ ಸಮಸ್ಯೆಯ ಮೂಲವನ್ನು ಹುಡುಕಿ ಬಗೆಹರಿಸುವ ಮುನ್ನವೇ ಕೊರೋನಾ ಮಹಾಮಾರಿ ಒಳನುಸುಳಿ ಸಮಸ್ತ ನಿಯಂತ್ರಣ ತೆಗೆದುಕೊಂಡಿತು. ದಂಗೆಕೋರರು, ಅವಕಾಶವಾದಿಗಳು ಸಂಘರ್ಷದ ಕಿಚ್ಚನ್ನು ಹೊತ್ತಿಸಬೇಕೆಂದು ಹವಣಿಸುತ್ತಿದ್ದಾರೆ. ಸಾಮೂಹಿಕ ಪ್ರಜ್ಞೆಯಿಂದಾಗಿಯೋ ಅಥವಾ ಮಾಧ್ಯಮಗಳಲ್ಲಿ ಕರೋನಾದ ಅತಿಯಾದ ಚರ್ಚೆಗಳಿಂದಾಗಿ ಇಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ.
ವಿಶ್ವದೆಲ್ಲೆಡೆ ಒಂದೇ ರೀತಿಯ ಸನ್ನಿವೇಶವಿದೆ. ಭಾರತ ಉಳಿದ ದೇಶಗಳ ತುಲನೆಯಲ್ಲಿ ಕೊರೋನಾ ವಿಪತ್ತನ್ನು ಧೈರ್ಯವಾಗಿ ಎದುರಿಸಿ ಸಮರ್ಥವಾಗಿ ಮುನ್ನುಗ್ಗುತ್ತಿದೆ. ಕೊರೋನಾವನ್ನು ನಾವು ದುರ್ಬಲಗೊಳಿಸಿದ್ದುದರ ಹಿಂದೆ ಹಾಗೂ ಇತರ ದೇಶಗಳು ಆ ಸಾಧನೆ ಮಾಡದ ಹಿಂದೆ ಹಲವು ಕಾರಣಗಳಿವೆ. ನಮ್ಮ ಸರ್ಕಾರಿ, ಆಡಳಿತ ವರ್ಗಗಳು ಪ್ರಾಮಾಣಿಕ ಪ್ರಯತ್ನವನ್ನು ಮುಂದಿಟ್ಟು ಕಾರ್ಯ ನಿರ್ವಹಿಸಿದವು. ನಾಗರಿಕರನ್ನು ಎಚ್ಚರಿಸುತ್ತಾ, ತುರ್ತು ನಿಗಾ ಘಟಕಗಳನ್ನು ರಚಿಸುತ್ತಾ ಸಮರ್ಥವಾಗಿ ಕೊರೋನಾ ನಿಯಂತ್ರಿಸುವ ಕಾರ್ಯವನ್ನು ನಿರ್ವಹಿಸಿದರು. ಮಾಧ್ಯಮದವರು ಈ ಸುದ್ದಿಯನ್ನು ಸದಾ ಬಿತ್ತರಿಸುತ್ತಿದ್ದರು. ಜನಸಾಮಾನ್ಯರಿಗೆ ಇದರಿಂದಾಗಿ ಅಪಾರವಾದ ಭಯದ ವಾತಾವರಣ ಉಂಟಾಯಿತಾದರೂ ಸಮಾಜದ ನಿಯಮಗಳನ್ನು ಪಾಲಿಸುತ್ತಾ, ಸಂಯಮವನ್ನು ಕಾಪಾಡುತ್ತಾ, ಜಾಗರೂಕರಾಗತೊಡಗಿದರು. ಸರ್ಕಾರಿ ಸೇವೆಯಲ್ಲಿನ ಅಧಿಕಾರಿಗಳು, ಯಾವುದೇ ವೈದ್ಯಕೀಯ ಕ್ರಮವನ್ನು ಪಾಲಿಸುವ ವೈದ್ಯರು, ಆರಕ್ಷಕ ದಳದವರು, ಸ್ವಚ್ಛತಾಕರ್ಮಿಗಳು ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ಪಾಲಿಸಿ ರೋಗಿಗಳ ಸೇವೆಯಲ್ಲಿ ತೊಡಗಿದರು. ಸಾಮಾಜಿಕ ಅಂತರವನ್ನು ತಮ್ಮ ಕುಟುಂಬದವರೊಂದಿಗೂ ಪಾಲಿಸುತ್ತಾ, ಕೊರೋನಾ ಯೋಧರು ತಮ್ಮ ಜೀವವನ್ನು ಒತ್ತೆ ಇಟ್ಟು, ವೈರಾಣು ಒಡ್ಡುವ ಜೀವ ಭಯವನ್ನು ಎದುರಿಸಿ, ಧೈರ್ಯವಾಗಿ ನಿಂತು ದಿನವಿಡೀ ಕಾರ್ಯ ನಿರ್ವಹಿಸಿದರು. ದೇಶದ ನಾಗರಿಕರು ತಮ್ಮ ಕೈಲಾದ ಸಹಾಯವನ್ನು ನೀಡಿದರು. ಸಮಾಜದಲ್ಲಿನ ತಮ್ಮ ಬಂಧುಗಳಿಗೆ ನೆರವಾಗಿ ನಿಂತರು. ಇಂತಹ ಕಠಿಣ ಸಮಯದಲ್ಲಿ ತಮ್ಮ ಅವಕಾಶಕ್ಕಾಗಿ ದುರ್ಬಲರನ್ನು ಶೋಷಿಸುವ ಘಟನೆಗಳು ಅಲ್ಲಲ್ಲಿ ನಡೆದವಾದರೂ, ಸರ್ಕಾರಿ ಆಡಳಿತಾತ್ಮಕ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳ ನಡುವಿನ ಭಾವಾತಿರೇಕತೆ, ಸಹಕಾರ ಮತ್ತು ಪರಸ್ಪರ ನಂಬಿಕೆಗಳು ಎದ್ದುತೋರುತ್ತಿದ್ದವು. ದೇಶದ ಮಾತೆಯರು ಸ್ವ-ಪ್ರೇರಣೆಯಿಂದ ಸಮಾಜದ ಕಾರ್ಯದಲ್ಲಿ ಧುಮುಕಿದರು. ಮಹಾಮಾರಿಯಿಂದಾಗಿ ಹಸಿವಿನಿಂದ ಬಳಲುತ್ತಿದ್ದವರು, ಕೆಲಸ ಕಳೆದುಕೊಂಡವರು, ಸ್ಥಳಾಂತರಗೊಂಡವರು ತಾಳ್ಮೆ ಸಹಿಷ್ಣುತೆಯನ್ನು ಮೆರೆದರು. ತಮ್ಮ ಸಮಸ್ಯೆಗಳನ್ನು ಬದಿಗೊತ್ತಿ, ಇತರರ ಸಮಸ್ಯೆಯನ್ನು ಬಗೆಹರಿಸುವವರು ಮುನ್ನೆಲೆಗೆ ಬಂದ ಎಷ್ಟೋ ನಿದರ್ಶನಗಳಿವೆ. ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸುವುದು, ಅವರಿಗೆ ಆಹಾರ ವ್ಯವಸ್ಥೆ, ತಂಗಲು ವ್ಯವಸ್ಥೆ, ಆಹಾರ- ಔಷಧದ ಅವಶ್ಯಕತೆ ಇದ್ದವರಿಗೆ ಅದನ್ನು ಪೂರೈಸುವುದು ಸಾಗಿತು. ಏಕತೆ ಹಾಗೂ ಭಾವಾತಿರೇಕತೆಯ ಸಮರ್ಥ ಉದಾಹರಣೆಗಳನ್ನು ಇಂತಹ ಸೇವಾ ಕಾರ್ಯಗಳಲ್ಲಿ, ಸಮಾಜದ ಅತಿ ದೊಡ್ಡ ವಿಪತ್ತನ್ನು ಎದುರಿಸಲು ಎಲ್ಲರೂ ಮುಂದಾದರು. ಈ ಅವಧಿಯಲ್ಲಿ ನಮ್ಮ ಪಾರಂಪರಿಕ ಅಭ್ಯಾಸಗಳಾದ ಸ್ವಚ್ಛತೆ, ನೈರ್ಮಲ್ಯ, ಆರೋಗ್ಯಕರ ಜೀವನಶೈಲಿ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಆಯುರ್ವೇದ ವಿಜ್ಞಾನದ ಬಳಕೆ ಉಪಯುಕ್ತವೆಂದು ಸಾಬೀತಾದವು.
ಸಮಾಜದ ಏಕರೂಪತೆ ಮತ್ತು ಏಕತೆ, ಕಷ್ಟದ ಸಮಯದಲ್ಲಿ ಸಹಾನುಭೂತಿ ಮತ್ತು ಸಹಕಾರ; “ಸಾಮಾಜಿಕ ಬಂಡವಾಳ” ಎಂದು ಕರೆಯಲ್ಪಡುವ ಈ ಎಲ್ಲ ಅಂಶಗಳನ್ನು ಈ ಸಮಯದಲ್ಲಿ ಅನುಭವಿಸಿದಂತಾಗಿದೆ. ಇದು ನಮ್ಮ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ನೀತಿಯನ್ನು ಪ್ರತಿಬಿಂಬಿಸುತ್ತದೆ. ಅನೇಕರಿಗೆ, ಒಂದು ರೀತಿಯ ತಾಳ್ಮೆ, ಸಾಮೂಹಿಕತೆ ಮತ್ತು ಆತ್ಮವಿಶ್ವಾಸಗಳ ಅನುಭವ ಸ್ವಾತಂತ್ರ್ಯಾನಂತರದಲ್ಲಿ ಮೊದಲನೆಯದು. ಪರಿಚಿತ, ಅಪರಿಚಿತ ಸ್ವಯಂಸೇವಕರು, ಜೀವಂತವಾಗಿರುವವರು ಮತ್ತು ಸೇವೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದವರು, ವೈದ್ಯರು, ಸ್ವಚ್ಛತಾಕರ್ಮಿಗಳು ಮತ್ತು ಸಮಾಜದ ವಿವಿಧ ವರ್ಗದ ಎಲ್ಲರಿಗೂ ನಾನು ಗೌರವಯುತವಾಗಿ ನಮಸ್ಕರಿಸುತ್ತೇನೆ. ಅವರೆಲ್ಲರೂ ಶ್ಲಾಘನೆಗೆ ಪಾತ್ರರು. ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನಮ್ಮ ಪ್ರಾಮಾಣಿಕ ಗೌರವ ಸಲ್ಲಿಸೋಣ.
ಪ್ರಸ್ತುತ ಸನ್ನಿವೇಶದಿಂದ ಹೊರಬರಲು ವಿಭಿನ್ನ ರೀತಿಯ ಸೇವಾ ಉಪಕ್ರಮಗಳ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವುದು, ಶಿಕ್ಷಕರಿಗೆ ಸೂಕ್ತ ಪರಿಹಾರ ನೀಡುವುದು, ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಕಾಲೇಜುಗಳಿಗೆ ಶುಲ್ಕವನ್ನು ಪಾವತಿಸಿ, ಕಳುಹಿಸುವುದು – ಈ ಕಾರ್ಯಗಳು ಪ್ರಯಾಸಕರವಾಗಿರುತ್ತವೆ. ಆದಾಯವೇ ನಿಂತುಹೋದ ಶಾಲೆಗಳಿಗೆ ತಮ್ಮ ಶಿಕ್ಷಕರಿಗೆ ಸಂಬಳ ಪಾವತಿಸಲು ಸಾಧ್ಯವಾಗುತ್ತಿಲ್ಲ. ಉದ್ಯೋಗ ಕಳೆದುಕೊಂಡ ಅಥವಾ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸಿದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಒದಗಿಸುವುದು ಕಷ್ಟ. ಶಾಲೆಗಳ ಪ್ರಾರಂಭ, ಶಿಕ್ಷಕರ ಸಂಬಳ ಮತ್ತು ವಿದ್ಯಾರ್ಥಿಗಳ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಾವು ಸೇವಾ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಸ್ಥಳಾಂತರಗೊಂಡವರು ನಿರುದ್ಯೋಗಿಗಳಾಗಿದ್ದಾರೆ. ಪರ್ಯಾಯ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ. ನೂತನ ವಲಯದಲ್ಲಿ ಉದ್ಯೋಗ ಪಡೆಯುವುದು ಪೂರ್ವ ತರಬೇತಿಯನ್ನು ಕಡ್ಡಾಯಗೊಳಿಸುತ್ತದೆ. ಇಂದು ಸ್ಥಳಾಂತರಗೊಂಡವರು ಎದುರಿಸುತ್ತಿರುವ ಸಮಸ್ಯೆಗಳು ಇವು. ವಲಸೆ ಕಾರ್ಮಿಕರ ಸ್ಥಳಾಂತರದಿಂದಾಗಿ ಅಪೂರ್ಣವಾಗಿ ಉಳಿದ ಕಾರ್ಯವನ್ನು ಪೂರ್ಣಗೊಳಿಸಲು ಬದಲಿ ನೌಕರರನ್ನು ಹುಡುಕುವುದೂ ಒಂದು ಸವಾಲಾಗಿ ಪರಿಣಮಿಸುತ್ತಿದೆ. ಆದ್ದರಿಂದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಕೌಶಲ್ಯರಹಿತರಿಗೆ ತರಬೇತಿ ನೀಡುವುದು ಅತ್ಯಗತ್ಯ. ಕುಟುಂಬಗಳು ಅಂತಹ ಅಭಾವವನ್ನು ಎದುರಿಸುತ್ತಿರುವ ಸಂದರ್ಭಗಳಲ್ಲಿ, ಮನೆಗಳಲ್ಲಿ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಅಪರಾಧ, ಖಿನ್ನತೆ ಮತ್ತು ಆತ್ಮಹತ್ಯೆಯಂತಹ ನಕಾರಾತ್ಮಕ ನಿಲುವುಗಳನ್ನು ತಡೆಯಲು ಈ ಸಮಯದಲ್ಲಿ ವ್ಯಾಪಕವಾದ ಸಮಾಲೋಚನೆ ಮತ್ತು ಬೆಂಬಲ ಸೇವೆಗಳ ಅವಶ್ಯಕತೆಯಿದೆ.
ಮಾರ್ಚಿ ತಿಂಗಳಿಂದ ಸಂಘದ ಸ್ವಯಂಸೇವಕರು, ಈ ಕಷ್ಟದ ಸಂದರ್ಭದಲ್ಲಿ ಅಗತ್ಯವಿರುವ ಕಡೆಗಳಲ್ಲಿ ತಮ್ಮ ಯೋಗದಾನ ನೀಡುತ್ತಿದ್ದಾರೆ. ಮೇಲೆ ವಿವರಿಸಿದ ಹೊಸ ಸೇವಾ ಉಪಕ್ರಮಗಳಲ್ಲಿ ಅವರು ಪೂರ್ಣ ಹೃದಯದಿಂದ ತಮ್ಮ ಕೊಡುಗೆಗಳನ್ನು ಸಹ ನೀಡುತ್ತಾರೆ. ಸಮಾಜದ ಇತರ ಸದಸ್ಯರು ಈ ನಿರಂತರ ದೀರ್ಘಕಾಲೀನ ಪ್ರಯತ್ನಗಳ ಅಗತ್ಯವನ್ನು ಅರ್ಥಮಾಡಿಕೊಂಡು ತಮ್ಮ ಕೊಡುಗೆಗಳನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ.
ಜಗತ್ತಿಗೆ ವೈರಸ್ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದಾಗಿದೆ. ಇದು ಟ್ರಾನ್ಸ್ಮ್ಯೂಟಬಲ್ ರೋಗಕಾರಕವಾಗಿದ್ದು, ವೇಗವಾಗಿ ಸಂವಹನಗೊಳ್ಳುತ್ತದೆ; ಆದರೆ ಅದರ ಉಗ್ರತೆ ಕಡಿಮೆಯಾಗುತ್ತಿದೆ – ಇಷ್ಟನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ಈ ರೋಗಕಾರಕದಿಂದ ಹೆಚ್ಚು ಸಮಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದೇ ಸಮಯದಲ್ಲಿ, ಸಹಜೀವಿಗಳ ಮೇಲೆ ಅದು ನಡೆಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ದಾಳಿಗೆ ಪರಿಹಾರವನ್ನು ಕಂಡುಹಿಡಿಯುವ ಬಗ್ಗೆ ದೀರ್ಘಕಾಲೀನ ಗಮನವನ್ನು ಹರಿಸಬೇಕಿದೆ. ಭಯವು ನಮ್ಮನ್ನು ದುರ್ಬಲಗೊಳಿಸಲು ಬಿಡಬಾರದು, ನಾವು ಎಚ್ಚರಿಕೆಯಿಂದ ಮತ್ತು ಕಾರ್ಯತಂತ್ರ ರೂಪಿಸಿ ಮುಂದುವರೆಯಬೇಕಾಗಿದೆ. ಸಾಮಾಜಿಕ ಜೀವನವು ಸಾಮಾನ್ಯ ಸ್ಥಿತಿಗೆ ತಲುಪುವುದರೊಂದಿಗೆ, ಸಾಮಾಜಿಕ ನಿಯಮಗಳನ್ನು ಪಾಲಿಸುವುದು ಮತ್ತು ಇತರರನ್ನು ನಿಯಮಗಳಿಗೆ ಬದ್ಧರನ್ನಾಗಿಸಲು ಪ್ರೇರೇಪಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ.
ಈ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ನಮ್ಮ ಸಮಾಜದ ಇತರ ಹಲವು ಅಂಶಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು. ಪ್ರಪಂಚದಾದ್ಯಂತ ಆತ್ಮಾವಲೋಕನದ ಪರವಾದ ಬದಲಾವಣೆಯ ಪ್ರವೃತ್ತಿ ಆರಂಭಗೊಂಡಿದೆ. “ನ್ಯೂ-ನಾರ್ಮಲ್” ಎಂಬ ನುಡಿಗಟ್ಟು ಹೆಚ್ಚಾಗಿ ಸಂಭಾಷಣೆಗಳಲ್ಲಿ ಬರುತ್ತದೆ. ಕರೋನಾ ಸಾಂಕ್ರಾಮಿಕವು ಜೀವನವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ, ಮನುಷ್ಯನು ಯಾಂತ್ರಿಕವಾಗಿ ನಡೆಸುತ್ತಿದ್ದ ಚಟುವಟಿಕೆ, ಜೀವನಶೈಲಿಯನ್ನು ಮೊಟಕುಗೊಳಿಸುವಂತೆ ಒತ್ತಾಯಿಸಿದೆ. ಆ ಚಟುವಟಿಕೆಗಳ ಯೋಗ್ಯತೆಯ ಮೌಲ್ಯಮಾಪನವು ಮಾನವ ಜೀವನದ ಮೇಲೆ ಆಕ್ರಮಣ ಮಾಡಿದ ಮೇಲ್ನೋಟದ ಆಚರಣೆಗಳು ಅನಗತ್ಯವೆಂದು ಸ್ಪಷ್ಟವಾಯಿತು. ಅಗತ್ಯವಾದವುಗಳು ಮಾತ್ರ ಅವನ ಜೀವನಕ್ಕೆ ಹತ್ತಿರವಾಗತೊಡಗಿವೆ. ಇನ್ನು ಕೆಲವು ಚಟುವಟಿಕೆಗಳು ಸಂಪೂರ್ಣವಾಗಿ ಮಸುಕಾಗಲಿಲ್ಲವಾದರೂ ಕಡಿಮೆಯಾಗಿವೆ. ಲಾಕ್ಡೌನ್ ಮಾಡಿದ ಒಂದು ವಾರದೊಳಗೆ, ನಾವು ಉಸಿರಾಡುವ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ವ್ಯತ್ಯಾಸವನ್ನು ನಾವು ಗಮನಿಸಿದ್ದೇವೆ. ನದಿ, ಝರಿ ಮತ್ತು ಕೊಳಗಳಂತಹ ಜಲಮೂಲಗಳು ಶುದ್ಧ ನೀರನ್ನು ಒಯ್ಯಲಾರಂಭಿಸಿದವು. ನೆರೆಯ ಉದ್ಯಾನವನಗಳು ಮತ್ತು ನಗರ ಪ್ರದೇಶಗಳಲ್ಲಿ ಪಕ್ಷಿಗಳು ಮತ್ತು ಇತರ ಜೀವಿಗಳ ಇನಿ ದನಿ ಮಾನವರಿಗೆ ಸ್ಮರಣೆಯಾಗತೊಡಗಿದವು. ಸಂಪತ್ತನ್ನು ಒಟ್ಟುಗೂಡಿಸುವ ಮತ್ತು ಉಪಭೋಗದ ಭರಾಟೆಯಲ್ಲಿ, ನಾವು ಕೆಲವು ಮೂಲಭೂತ ಜೀವನ ಕಾರ್ಯಗಳಿಂದ ನಮ್ಮನ್ನು ನಾವು ದೂರ ಉಳಿಸಿಕೊಂಡಿದ್ದೆವು. ಅವು ನಮ್ಮ ಜೀವದಲ್ಲಿ ಮತ್ತೆ ಬಂದು ಅರ್ಥ , ಸಂತೋಷವನ್ನು ಸೇರಿಸಿವೆ. ಕೆಲವು ಸದ್ಗುಣಗಳ ಮೌಲ್ಯವನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಕರೋನಾ ಸಾಂಕ್ರಾಮಿಕವು ನಿಯಮಿತ-ಅನಿಯಮಿತ ಮತ್ತು ಶಾಶ್ವತ-ತಾತ್ಕಾಲಿಕಗಳ ಪ್ರತ್ಯೇಕಿಸುವ ಬುದ್ಧಿವಂತಿಕೆಯನ್ನು ಮನುಷ್ಯರಿಗೆ ನೀಡಿದೆ. ಅನೇಕ ಕುಟುಂಬಗಳಲ್ಲಿ ಪರಿವರ್ತನೆಯ ಮಾರ್ಗಗಳೊಂದಿಗೆ ಹೊಂದಿಕೆಯಾಗುವ ಸುಸ್ಥಿರ ಜೀವನಶೈಲಿಯನ್ನು ಸಕ್ರಿಯವಾಗಿ ಚರ್ಚಿಸುತ್ತಿರುವುದರಿಂದ, ಸಾಂಸ್ಕೃತಿಕ ನೀತಿಯ ಅರ್ಹತೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದಾರೆ. ಕುಟುಂಬ ವ್ಯವಸ್ಥೆಗಳ ಮಹತ್ವ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆಯ ಅಗತ್ಯವನ್ನು ಮಾನವರು ಮತ್ತೊಮ್ಮೆ ಅರಿತುಕೊಂಡಿದ್ದಾರೆ.
ಈ ಸಾಕ್ಷಾತ್ಕಾರಗಳು ಕೇವಲ ಸಾಂಕ್ರಾಮಿಕದ ಅಡ್ಡಪರಿಣಾಮವೊ ಅಥವಾ ಮಾನವೀಯತೆ ಈ ವಿಷಯಗಳಲ್ಲಿ ತನ್ನ ನಿಲುವನ್ನು ಬದಲಿಸಿದೆಯೋ ಎಂಬುದನ್ನು ಸಮಯ ಉತ್ತರಿಸುತ್ತದೆ. ಇರಲಿ, ಸಾಂಕ್ರಾಮಿಕದ ಈ ವಿಪತ್ತು ಒಂದು ವಿಷಯವನ್ನು ಸ್ಪಷ್ಟಪಡಿಸಿ, ಆಯಸ್ಕಾಂತದ ಪಾತ್ರವಹಿಸಿ ಮಾನವ ಪ್ರಜ್ಞೆಯನ್ನು ಪ್ರಮುಖ ಜೀವನ ಮೌಲ್ಯಗಳಿಗೆ ಆಕರ್ಷಿಸಿದೆ ಎಂಬುದು ನಿರ್ವಿವಾದಾತೀತ.
ಇತ್ತೀಚಿನವರೆಗೂ ವ್ಯಾಪಾರಿ ಶಕ್ತಿಗಳ ಆಧಾರದ ಮೇಲೆ ಜಗತ್ತನ್ನು ಸಂಯೋಜಿಸುವ ತತ್ತ್ವಶಾಸ್ತ್ರವು ಮಾನವನ ಕಲ್ಪನೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಇತ್ತೀಚಿನ ಘಟನೆಗಳೊಂದಿಗೆ, ಪ್ರತಿ ದೇಶದ ವಿಶಿಷ್ಟ ಸಾಮರ್ಥ್ಯ ಮತ್ತು ಸ್ವತ್ತುಗಳನ್ನು ಉತ್ತೇಜಿಸುವ ಮೂಲಕ ಜೀವನವನ್ನು ಕಾಪಾಡುವ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಚಲಾಯಿಸುವ ಕಲ್ಪನೆಯು ಪ್ರಾರಂಭವಾಗಿದೆ. ‘ಸ್ವದೇಶಿ’ ಸಿದ್ಧಾಂತವು ಮತ್ತೊಮ್ಮೆ ಪ್ರಕಾಶಿಸುತ್ತಿದೆ. ಪ್ರಸ್ತುತ ಭಾರತೀಯ ಸನ್ನಿವೇಶದ ದೃಷ್ಟಿಯಿಂದ ಈ ಸಿದ್ಧಾಂತವು ಪುನರ್ ವ್ಯಾಖ್ಯಾನಿಸಲು ಮತ್ತು ನಮ್ಮ ಪೂರ್ವ ಮೌಲ್ಯ, ಸಂಪ್ರದಾಯಗಳಿಗೆ ನಮ್ಮನ್ನು ಕರೆದೊಯ್ಯುವ ಮಾರ್ಗಗಳನ್ನು ಪುನರ್ನಿರ್ಮಿಸುವ ಸಮಯ ಇದಾಗಿದೆ.
ಈ ಸಾಂಕ್ರಾಮಿಕ ರೋಗದ ಹರಡುವಿಕೆಯಲ್ಲಿ ಚೀನಾ ದೇಶದ ಪಾತ್ರದ ಬಗ್ಗೆ ಚರ್ಚೆಗಳು ಇವೆಯಾದರೂ ಭಾರತದ ಗಡಿಗಳಲ್ಲಿ ಭಯೋತ್ಪಾದನೆಯನ್ನು ಬಿಚ್ಚಿಡುವ ಮೂಲಕ ಮತ್ತು ನಮ್ಮ ಪ್ರದೇಶದ ಮೇಲೆ ಆಕ್ರಮಣ ಮಾಡುವ ಉತ್ಸಾಹಭರಿತ ಪ್ರಯತ್ನಗಳ ಮೂಲಕ ಅವರ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುವುದು ಇಡೀ ಜಗತ್ತಿಗೆ ಚಿರಪರಿಚಿತವಾಗಿದೆ. ಭಾರತೀಯ ರಕ್ಷಣಾ ಪಡೆಗಳು, ಸರ್ಕಾರ ಮತ್ತು ಜನರು ಈ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. ಬಲವಾದ ನಿರ್ಣಯದ ಈ ಉದಾಹರಣೆ, ಸ್ವಾಭಿಮಾನ ಮತ್ತು ಧೈರ್ಯವನ್ನು ಚಲಾಯಿಸುವುದು ಚೀನಾವನ್ನು ದಿಗ್ಭ್ರಮೆಗೊಳಿಸಿದೆ. ನಾವು ಜಾಗರೂಕರಾಗಿರಬೇಕು ಮತ್ತು ದೃಢವಾಗಿರಬೇಕು. ಹಿಂದಿನಿಂದಲೂ ಸಹ, ಚೀನಾ ವಿಸ್ತರಣಾವಾದಿ ಮನೋಭಾವವನ್ನು ಮೈಗೂಡಿಸಿಕೊಂಡಿತ್ತು. ನಮ್ಮ ನೆರೆಹೊರೆಯವರೊಂದಿಗೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸಹಕಾರಿ ಸಂಬಂಧಗಳನ್ನು ಭದ್ರಪಡಿಸುವಲ್ಲಿ, ಆರ್ಥಿಕವಾಗಿ, ಕಾರ್ಯತಂತ್ರ ರೂಪಿಸಿ ಚೀನಾಕ್ಕಿಂತ ಮೇಲೇರುವುದು ಹಾಗೂ ಅವರ ರಾಕ್ಷಸೀ ಆಕಾಂಕ್ಷೆಗಳನ್ನು ತಟಸ್ಥಗೊಳಿಸುವುದೇ ಏಕೈಕ ಮಾರ್ಗವಾಗಿದೆ. ನಮ್ಮ ನಾಯಕರು ಪ್ರಸ್ತಾಪಿಸಿದ ನೀತಿಗಳು ಆ ಪರಿಧಿಯನ್ನು ಗುರುತಿಸುತ್ತಿವೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ (ಬ್ರಹ್ಮದೇಶ) – ಹೆಚ್ಚಿನ ನೆರೆಯ ರಾಷ್ಟ್ರಗಳು ನಮ್ಮೊಂದಿಗೆ ಸ್ನೇಹ ಸಂಬಂಧವನ್ನು ಹಂಚಿಕೊಂಡಿವೆ ಮತ್ತು ನಮ್ಮೊಂದಿಗೆ ಮೌಲ್ಯಗಳು ಮತ್ತು ನೈತಿಕ ಸಂಹಿತೆಯ ವಿಷಯಗಳ ಬಗ್ಗೆ ಹೆಚ್ಚು ಕಡಿಮೆ ಹೊಂದಾಣಿಕೆ ಮಾಡಿಕೊಂಡಿವೆ. ಈ ದೇಶಗಳೊಂದಿಗೆ ನಮ್ಮ ಬಂಧುತ್ವವನ್ನು ವೃದ್ಧಿಗೊಳಿಸುವ ನಮ್ಮ ಪ್ರಯತ್ನಗಳನ್ನು ನಾವು ಈಗ ವೇಗಗೊಳಿಸಬೇಕು. ಅಭಿಪ್ರಾಯಗಳ ಭಿನ್ನಾಭಿಪ್ರಾಯಗಳು, ಸಂಘರ್ಷದ ಸಮಸ್ಯೆಗಳು ಮತ್ತು ಹಳೆಯ ವೈಮನಸ್ಸುಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಬೇಕು.
ನಾವು ಎಲ್ಲರೊಂದಿಗೂ ಸ್ನೇಹದಿಂದಿರಲು ಉದ್ದೇಶಿಸಿಸುತ್ತೇವೆ. ಇದು ನಮ್ಮ ಸ್ವಭಾವ. ಆದರೆ ಅದನ್ನು ದೌರ್ಬಲ್ಯವೆಂದು ಪರಿಗಣಿಸಿ ವಿವೇಚನಾರಹಿತ ಶಕ್ತಿಯಿಂದ ನಮ್ಮನ್ನು ವಿಘಟಿಸುವ ಅಥವಾ ದುರ್ಬಲಗೊಳಿಸುವ ಪ್ರಯತ್ನಗಳು ಸ್ವೀಕಾರಾರ್ಹವಲ್ಲ. ನಮ್ಮ ವಿರೋಧಿಗಳು ಇದನ್ನು ಈಗ ತಿಳಿದುಕೊಳ್ಳಬೇಕು. ಭಾರತ ಮಾತೆಯ ಅವಿನಾಶಿ ದೇಶಭಕ್ತರು ಮತ್ತು ಅವರ ಅಸಾಧಾರಣ ಶೌರ್ಯ, ಸ್ವಾಭಿಮಾನದ ಪ್ರಜ್ಞೆ ಮತ್ತು ನಮ್ಮ ನಾಗರಿಕರ ಅದಮ್ಯ ನೈತಿಕತೆ, ತಾಳ್ಮೆ ಹೊಂದಿದ ನಾಯಕರ ಗುಣ ಚೀನಾಕ್ಕೆ ಬಲವಾದ ಹಾಗೂ ಸ್ಪಷ್ಟವಾದ ಸಂದೇಶವನ್ನು ಕಳುಹಿಸಿರುತ್ತದೆ. ಇದು ತನ್ನ ಮನೋಭಾವವನ್ನು ಸುಧಾರಿಸಿಕೊಳ್ಳಲು ಎಚ್ಚರಿಕೆಯ ಘಂಟೆ. ನಾವು ಜಾಗರೂಕರಾಗಿ, ದೃಢತೆ ಮತ್ತು ಸನ್ನದ್ಧತೆಯಿಂದ ಮುನ್ನುಗ್ಗುತ್ತೇವೆ ಎಂಬ ಸಂಕಲ್ಪವು ನಮ್ಮ ದೇಶವಾಸಿಗಳಲ್ಲಿ ಸ್ಪಷ್ಟವಾಗಿದೆ.
ದೇಶದ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ಬಾಹ್ಯ ಬೆದರಿಕೆಗಳ ಬಗ್ಗೆ ನಮ್ಮ ಜಾಗರೂಕತೆಯಷ್ಟೇ ಸಾಲದು. ಕಳೆದ ವರ್ಷದ ಅನೇಕ ಆಂತರಿಕ ಘಟನೆಗಳ ವಿಶ್ಲೇಷಣೆ ಮತ್ತು ರಾಷ್ಟ್ರೀಯ ನಾಯಕತ್ವದ ಸಿದ್ಧತೆಯ ಬಗ್ಗೆಯೂ ಗಮನವಿರಿಸಬೇಕು. ಸರಕಾರದಿಂದ ಹೊರಗುಳಿದವರ ಅಧಿಕಾರದ ಹಪಾಹಪಿ, ರಾಜಕೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿರುತ್ತದೆ. ಆರೋಗ್ಯಕರ ಸ್ಪರ್ಧೆಯು ಎಂದಿಗೂ ಸ್ವಾಗತಾರ್ಹ. ಆದರೆ ದ್ವೇಷ, ಕಹಿಯಿಂದ ಸಾಮಾಜಿಕ ಸ್ವಾಸ್ಥ್ಯವನ್ನು ದುರ್ಬಲಗೊಳಿಸುವ ಸ್ಪರ್ಧೆಯು ಅನಗತ್ಯವಾಗಿರುತ್ತದೆ. ಪ್ರತಿಸ್ಪರ್ಧಿಗಳ ನಡುವಿನ ಬಿರುಕುಗಳಲ್ಲಿ ಅವಕಾಶವನ್ನು ನೋಡುವ ಪಕ್ಷಗಳು, ಭಾರತವನ್ನು ದುರ್ಬಲಗೊಳಿಸಲು ಮತ್ತು ಛಿದ್ರಗೊಳಿಸಲು ಬಯಸುತ್ತಿರುತ್ತವೆ. ದೀರ್ಘಕಾಲದಿಂದಲೂ, ನಮ್ಮಲ್ಲಿನ ವೈವಿಧ್ಯತೆಯನ್ನು ಭಿನ್ನಾಭಿಪ್ರಾಯಗಳೆಂದು ಬಿಂಬಿಸುತ್ತಾ ಜನರನ್ನು ಪ್ರಚೋದನೆಗೆ ಎಡೆಮಾಡಿವೆ. ಇದರ ಪರಿಣಾಮವಾಗಿ ಭೀಕರ ಹೋರಾಟಗಳು ಭಾರತದಲ್ಲಿ ಸಕ್ರಿಯವಾಗಿವೆ. ನಮ್ಮಿಂದ ಈ ಅವಕಾಶ ಅವರಿಗೆ ಸಲ್ಲದು. ಅಪರಾಧ ಮತ್ತು ಹಿಂಸಾಚಾರದ ಘಟನೆಗಳನ್ನು ಕಡಿತಗೊಳಿಸುವ ಕ್ರಮಗಳು ಮತ್ತು ಅಪರಾಧ ಮತ್ತು ಹಿಂಸಾತ್ಮಕ ಪ್ರವೃತ್ತಿಗಳ ಮೇಲೆ ಸಂಪೂರ್ಣ ನಿಗ್ರಹದ ಪ್ರಯತ್ನಗಳ ಹೊರತಾಗಿಯೂ ಸಮಾಜದಲ್ಲಿ ಅಪರಾಧ ಮತ್ತು ಹಿಂಸಾಚಾರದ ಘಟನೆಗಳು ಮುಂದುವರಿದರೆ ಅಪರಾಧಿಗಳನ್ನು ತಕ್ಷಣ ಬಂಧಿಸಲು ಮತ್ತು ಕಠಿಣ ಶಿಕ್ಷೆ ವಿಧಿಸಲು ಸರ್ಕಾರಿ ಸಂಸ್ಥೆಗಳು ನಾಗರಿಕರ ಸಹಕಾರವನ್ನು ಪಡೆಯಬೇಕು. ನಮ್ಮ ಕಾರ್ಯ ಚಟುವಟಿಕೆ, ವರ್ತನೆಗಳು ಇಂತಹ ಗುಂಪುಗಳಿಗೆ ಯಾವುದೇ ಅವಕಾಶಗಳನ್ನು ಸೃಷ್ಟಿಸುವುದಿಲ್ಲ ಎಂದು ನಾವು ನೋಡಿಕೊಳ್ಳಬೇಕಿದೆ. ಇದನ್ನು ಖಚಿತಪಡಿಸಿಕೊಳ್ಳಲು, ಸರ್ಕಾರದ ನಿರ್ಧಾರಗಳಿಗೆ ಅಥವಾ ಅಸಮಾಧಾನದ ಅಭಿವ್ಯಕ್ತಿಗಳಿಗೆ ನಮ್ಮ ಪ್ರತಿಕ್ರಿಯೆಗಳು ರಾಷ್ಟ್ರೀಯ ಏಕತೆಯನ್ನು ಗಮನದಲ್ಲಿಟ್ಟುಕೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಾವು ಎಲ್ಲಾ ಧರ್ಮಗಳು, ಪ್ರದೇಶಗಳು, ಜಾತಿಗಳು ಮತ್ತು ಭಾಷಾ ಹಿನ್ನೆಲೆಯ ಜನರ ಬಗ್ಗೆಯೂ ಗೌರವ ಆದರ, ಸೂಕ್ಷ್ಮತೆಯ ಜೊತೆಗೆ, ಅವರೆಲ್ಲರೊಂದಿಗೆ ಸಾಂವಿಧಾನಿಕ ಮಿತಿಯಲ್ಲಿ ನಡೆದುಕೊಳ್ಳಬೇಕು. ದುರದೃಷ್ಟವಶಾತ್, ನಮ್ಮ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಅರಿಯದ ಅಥವಾ ತಪ್ಪಾಗಿ ಅರ್ಥೈಸಿಕೊಂಡವರು ತಮ್ಮನ್ನು ತಾವು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯತೀತತೆಯ ಠೇಕೆದಾರರು ಎಂದು ಹೇಳಿಕೊಳ್ಳುತ್ತಲೇ ನಮ್ಮ ದೇಶದ ಜನರನ್ನು ಮರುಳು ಮಾಡಿ ಗೊಂದಲಕ್ಕೀಡು ಮಾಡುತ್ತಿದ್ದಾರೆ. ಆಗಸ್ಟ್ 29, 1949 ರಲ್ಲಿ ಸಂವಿಧಾನ ಸಭೆಯ ಭಾಷಣದಲ್ಲಿ, ಪೂಜ್ಯ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅಂತಹ ಅಂಶಗಳ ಕ್ರಿಯೆಗಳನ್ನು ವಿವರಿಸಲು “ಅರಾಜಕತೆಯ ವ್ಯಾಕರಣ” (grammar of anarchy) ಎಂಬ ಪದವನ್ನು ಬಳಸಿದ್ದಾರೆ. ಅಂತಹ ಛದ್ಮವೇಷದ ವ್ಯಕ್ತಿ, ವ್ಯಕ್ತಿತ್ವಗಳನ್ನು ಗುರುತಿಸಿ ಮತ್ತು ಅವುಗಳ ಪ್ರಭಾವವನ್ನು ತಗ್ಗಿಸಿ ನಮ್ಮ ಸಹೋದರ ಸಹೋದರಿಯರನ್ನು ರಕ್ಷಿಸುವ ಅಗತ್ಯ ಇಂದು ನಮ್ಮ ಮುಂದಿದೆ.
ಸಂಘದ ಬಗ್ಗೆ ಈ ರೀತಿಯ ಗೊಂದಲವನ್ನು ತಪ್ಪಿಸಲು, ಒಂದು ನಿರ್ದಿಷ್ಟ ಶಬ್ದಕೋಶಕ್ಕೆ ಸಂಘದ ಆದ್ಯತೆಯನ್ನು ಅರಿತುಕೊಳ್ಳುವುದು ಮತ್ತು ಕೆಲವು ಜನಪ್ರಿಯ ಪದಗಳನ್ನು ಅದು ಹೇಗೆ ಅರ್ಥೈಸುತ್ತದೆ ಎಂಬುದು ತಿಳಿದುಕೊಳ್ಳುವುದು ನಿರ್ಣಾಯಕವಾಗುತ್ತದೆ. 'ಹಿಂದುತ್ವ' ಎಂಬುದು ಅಂತಹ ಒಂದು ಪದವಾಗಿದೆ. ಇದಕ್ಕೆ ಒಂದು ಧಾರ್ಮಿಕ ಅರ್ಥವನ್ನು ಸೇರಿಸುವ ಮೂಲಕ ಅದರ ಅರ್ಥವನ್ನು ವಿರೂಪಗೊಳಿಸಲಾಗಿದೆ. ಈ ತಪ್ಪು ಕಲ್ಪನೆಯನ್ನು ಉಲ್ಲೇಖಿಸಲು ಸಂಘ ಹಿಂದುತ್ವವನ್ನು ಬಳಸುವುದಿಲ್ಲ. ಇದು ನಮ್ಮ ಅಸ್ಮಿತೆಯನ್ನು ವ್ಯಕ್ತಪಡಿಸುವ ಪದವಾಗಿದ್ದು, ಅದರ ಆಧ್ಯಾತ್ಮಿಕತೆ ಆಧಾರಿತ ಸಂಪ್ರದಾಯಗಳ ನಿರಂತರತೆ ಮತ್ತು ಭಾರತ ಭೂಮಿಯಲ್ಲಿನ ಮೌಲ್ಯ ವ್ಯವಸ್ಥೆಯ ಸಂಪೂರ್ಣ ಸಂಪತ್ತು ಎಂದು ನಾವು ನಂಬಿದ್ದೇವೆ. ಆದ್ದರಿಂದ ತಾವು ಭರತವರ್ಷದ ಪುತ್ರ ಪುತ್ರಿಯರು ಎಂದು ಕರೆದುಕೊಳ್ಳುವ ಎಲ್ಲಾ ೧೩೦ ಕೋಟಿ ಜನರಿಗೆ ಇದು ಅನ್ವಯಿಸುತ್ತದೆ ಎಂದು ಸಂಘ ನಂಬುತ್ತದೆ. ಅಲ್ಲದೆ, ಅವರ ದೈನಂದಿನ ಜೀವನದಲ್ಲಿ ಸನಾತನ ನೈತಿಕತೆಯನ್ನು ಒಗ್ಗೂಡಿಸಿಕೊಂಡು, ಅವರ ಪೂರ್ವಜರ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೋ ಅವರಿಗೂ ಹಿಂದುತ್ವ ಅನ್ವಯವಾಗುತ್ತದೆ. ಈ ಪದದ ಸರಿಯಾದ ಅರ್ಥವನ್ನು ಮರೆತುಬಿಡುವುದು ಈ ದೇಶ ಮತ್ತು ಸಮಾಜದೊಂದಿಗೆ ನಮ್ಮನ್ನು ಸಂಯೋಜಿಸುವ ಎಳೆಯನ್ನೇ ದುರ್ಬಲಗೊಳಿಸುತ್ತದೆ. ಈ ಕಾರಣಕ್ಕಾಗಿಯೇ ಈ ಪದವನ್ನು ಅಂತರ-ಗುಂಪು ಸಂಘರ್ಷಗಳನ್ನು ಪ್ರಚೋದಿಸುವವರು, ನಮ್ಮ ದೇಶ ಮತ್ತು ಸಮಾಜವನ್ನು ವಿಭಜಿಸಲು ಮುಂದಾಗಿರುವವರ ಮೊದಲ ಗುರಿಯಾಗಿದೆ. ಅವರು ತಮ್ಮನ್ನು ಪ್ರತ್ಯೇಕವಾಗಿ ಪ್ರಸ್ತುತಪಡಿಸಿಕೊಳ್ಳುವ ಮೂಲಕ, ಸಾಂಪ್ರದಾಯಿಕವಾಗಿ ಅಂಗೀಕರಿಸಲ್ಪಟ್ಟ, ಗೌರವಿಸಲ್ಪಟ್ಟ ಮತ್ತು ವಾಸ್ತವದಲ್ಲಿ ಹಿಂದೂ ತತ್ತ್ವಶಾಸ್ತ್ರದ ಬಹು ದೊಡ್ಡ ವ್ಯಾಪ್ತಿಯ ಭಾಗವಾಗಿರುವ ನಮ್ಮ ವೈವಿಧ್ಯತೆಗಳನ್ನು ಪರಕೀಯತೆ ಅಥವಾ ಪ್ರತ್ಯೇಕತಾವಾದದ ಮೂಲವಾಗಿ ಪರಿವರ್ತಿಸಲು ಪ್ರಯತ್ನಿಸುತ್ತವೆ. ‘ಹಿಂದೂ’ ಎನ್ನುವುದು ಕೆಲವು ಪಂಥ ಅಥವಾ ಪಂಗಡದ ಹೆಸರಲ್ಲ, ಇದು ಪ್ರಾಂತೀಯ ಪರಿಕಲ್ಪನೆಯಲ್ಲ, ಇದು ಒಂದೇ ಜಾತಿಯ ವಂಶಾವಳಿಯಲ್ಲ ಅಥವಾ ನಿರ್ದಿಷ್ಟ ಭಾಷೆಯನ್ನು ಮಾತನಾಡುವವರ ಸವಲತ್ತು ಅಲ್ಲ. ಹಿಂದುತ್ವವು ತನ್ನ ವಿಶಾಲವಾದ ಪ್ರಾಂಗಣದಲ್ಲಿ ಮಾನವ ನಾಗರಿಕತೆಗೆ ತನ್ನ ತೊಟ್ಟಿಲಲ್ಲಿ ಜನ್ಮ ನೀಡಿ ಬೆಳೆಸಿದ ಆ ಸಾಮಾನ್ಯ ಉಪಾಧಿ. ಹಿಂದುತ್ವವು ಅಸಂಖ್ಯಾತ ವಿಭಿನ್ನ ಅಸ್ಮಿತೆಗಳನ್ನು ಗೌರವಿಸುವಂಥದ್ದು. ಈ ಪದವನ್ನು ಸ್ವೀಕರಿಸುವಲ್ಲಿ ಆಕ್ಷೇಪಣೆ ಹೊಂದಿರುವ ಕೆಲವರು ಇರಬಹುದು. ಅವರ ಮನಸ್ಸಿನಲ್ಲಿರುವ ವಿಷಯ ಒಂದೇ ಆಗಿದ್ದರೆ ಅವರು ಬೇರೆ ಪದಗಳನ್ನು ಬಳಸುವುದನ್ನು ನಾವು ಆಕ್ಷೇಪಿಸುವುದಿಲ್ಲ. ಆದಾಗ್ಯೂ, ದೇಶದ ಸಮಗ್ರತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸಂಘವು ಹಿಂದೂ ಪದದ ಆಡುಮಾತಿನ ಮತ್ತು ಜಾಗತಿಕ ವ್ಯಾಖ್ಯಾನಗಳನ್ನು ವಿನಮ್ರವಾಗಿ ಒಟ್ಟುಗೂಡಿಸಿದೆ. ಸಂಘವು ‘ಹಿಂದೂಸ್ಥಾನವು ಹಿಂದೂ ರಾಷ್ಟ್ರ’ ಎಂದು ಹೇಳಿದಾಗ ಅದರ ಮನಸ್ಸಿನಲ್ಲಿ ಯಾವುದೇ ರಾಜಕೀಯ ಅಥವಾ ಅಧಿಕಾರ ಕೇಂದ್ರಿತ ಪರಿಕಲ್ಪನೆ ಇಟ್ಟುಕೊಂಡಿರುವುದಿಲ್ಲ. ಈ ರಾಷ್ಟ್ರದ ‘ಸ್ವ’ (ಸ್ವತ್ವ)ದ ಸಾರಾಂಶವೇ ಹಿಂದುತ್ವ. ನಾವು ದೇಶದ ಸ್ವಾಭಿಮಾನವನ್ನು ಹಿಂದೂ ಎಂದು ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಿದ್ದೇವೆ ಏಕೆಂದರೆ ನಮ್ಮ ಎಲ್ಲ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು ಅದರ ತತ್ವಗಳಿಂದ ನಿರ್ದೇಶಿಸಲ್ಪಟ್ಟಿವೆ, ಅವುಗಳಲ್ಲಿ ಪ್ರತಿಯೊಬ್ಬರ ವೈಯಕ್ತಿಕ, ಕೌಟುಂಬಿಕ, ವೃತ್ತಿಪರ ಮತ್ತು ಸಾಮಾಜಿಕ ಜೀವನದಲ್ಲಿ ಅವರ ಚೈತನ್ಯವು ಹುದುಗಿದೆ. ಜೀವನದ ಈ ದೃಷ್ಟಿಕೋನದ ಭಾವನಾತ್ಮಕ ಮಹತ್ವಾಕಾಂಕ್ಷೆಯನ್ನು ಸುತ್ತುವರಿಯಲು ಒಬ್ಬರ ನಂಬಿಕೆ, ಭಾಷೆ, ಭೂಮಿ ಅಥವಾ ಇನ್ನಾವುದೇ ಅಸ್ಮಿತೆಯನ್ನು ಗುರುತಿಸುವ ಅಗತ್ಯವಿಲ್ಲ. ಇದು ಪ್ರಾಬಲ್ಯದ ಅನ್ವೇಷಣೆಯನ್ನು ತ್ಯಜಿಸುವುದನ್ನು ಮಾತ್ರ ಆದೇಶಿಸುತ್ತದೆ. ಒಬ್ಬರು ಜಾಗರೂಕರಾಗಿರಬೇಕು ಮತ್ತು ಪ್ರಾಬಲ್ಯದ ಸುಳ್ಳು ಕನಸುಗಳನ್ನು ತೋರಿಸುವುದರ ಮೂಲಕ ಜನರನ್ನು ಗೊಂದಲಕ್ಕೀಡುಮಾಡುವ ಮತ್ತು ಪ್ರಚೋದಿಸುವ ಸ್ವಾರ್ಥಿ ಮತ್ತು ದ್ವೇಷಪೂರಿತ ಶಕ್ತಿಗಳಿಂದ ದೂರವಿರಬೇಕು, ಆಮೂಲಾಗ್ರತೆಯನ್ನು ಪ್ರೋತ್ಸಾಹಿಸಬೇಕು ಮತ್ತು ಪ್ರತ್ಯೇಕತಾವಾದವನ್ನು ಬೆಳೆಸಕೂಡದು.
ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತ್ತು ಪರಿಶಿಷ್ಟ-ಜಾತಿ, ಪರಿಶಿಷ್ಟ-ಬುಡಕಟ್ಟು ಮತ್ತು ನಮ್ಮ ದೇಶದ ಅಲ್ಪಸಂಖ್ಯಾತರಲ್ಲಿ ದ್ವೇಷವನ್ನು ಉಂಟುಮಾಡುವ ಮೂಲಕ ಭಾರತದ ವೈವಿಧ್ಯತೆಯಲ್ಲಿನ ಏಕತೆಯನ್ನು ವಿಭಜಿಸುವ ಶೋಚನೀಯ ಪ್ರಯತ್ನಗಳು ನಡೆಯುತ್ತಿವೆ. ಈ ಪಿತೂರಿ ತಂಡದ ಸದಸ್ಯರು “ಭಾರತ್ ತೇರೆ ತುಕ್ಡೆ ಹೊಂಗೆ” (ಭಾರತವನ್ನು ತುಂಡರಿಸುತ್ತೇವೆ ) ಎಂಬ ಘೋಷಣೆಗಳನ್ನು ಪ್ರಚೋದಿಸಿ ಉತ್ತೇಜಿಸುತ್ತಿದ್ದಾರೆ. ರಾಜಕೀಯ ಆಸಕ್ತಿ, ಪ್ರತ್ಯೇಕತಾವಾದಿ ಮತ್ತು ಮೂಲಭೂತವಾದಿ ಪ್ರವೃತ್ತಿಗಳು, ಭಾರತ ಮೇಲಿನ ದ್ವೇಷ ಮತ್ತು ಜಾಗತಿಕ ಪ್ರಾಬಲ್ಯದ ಅನ್ವೇಷಣೆಯ ಅಸಾಮಾನ್ಯ ಸಮ್ಮಿಶ್ರಣ ಭಾರತೀಯ ಏಕತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿವೆ. ಈ ವಿಷಯದ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ನಾವು ತಾಳ್ಮೆಯಿಂದ ಮುಂದುವರಿಯಬೇಕಾಗುತ್ತದೆ. ಈ ಶಕ್ತಿಗಳ ಪ್ರಭಾವದಿಂದ ದೂರ ಉಳಿಯುವ ಜೊತೆಗೆ, ನಮ್ಮ ಸಂವಿಧಾನದ ಬಗ್ಗೆ ಭಕ್ತಿ ಬೆಳೆಸಿಕೊಂಡು ಸಮಾಜವನ್ನು ಶಾಂತಿಯುತ ವಿಧಾನಗಳ ಮೂಲಕ ಸಂಘಟಿಸುವತ್ತ ಗಮನ ಹರಿಸಬೇಕು. ನಾವು ಸ್ವಯಂ ನಿಯಂತ್ರಣವನ್ನು ನಿರ್ವಹಿಸಿದರೆ, ಪರಸ್ಪರರ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡರೆ ಪರಸ್ಪರ ನಂಬಿಕೆಯ ವಾತಾವರಣವು ಮೇಲುಗೈ ಸಾಧಿಸಬಹುದು. ಇದು ಹಳೆಯ ಸಂಘರ್ಷಗಳ ಪರಿಹಾರಕ್ಕೆ ಸಹಾಯ ಮಾಡುತ್ತದೆ; ವಿರೋಧಾಭಾಸದ ವರ್ತನೆಗಳಿಂದ ಉಂಟಾಗುವ ಅಪನಂಬಿಕೆ ಪರಿಹಾರಗಳನ್ನು ಸಾಧಿಸಲಾಗದ ಮತ್ತು ಸಮಸ್ಯೆಗಳನ್ನು ಅಗ್ರಾಹ್ಯವೆಂದು ತೋರಿಸುತ್ತದೆ. ಪ್ರತಿಗಾಮಿ ಮತ್ತು ಭಯಭೀತ ನಿಲುವು ಮತ್ತು ಅವಿವೇಕದ ವಿರೋಧವು ಅನಿಯಂತ್ರಿತ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಮತ್ತು ಜನರನ್ನು ಬೇರ್ಪಡಿಸುವ ಕಂದಕ ವಿಸ್ತರಿಸುತ್ತದೆ.
ಒಬ್ಬರನ್ನೊಬ್ಬರು ನಂಬುವ ವಾತಾವರಣವನ್ನು ಹೆಚ್ಚಿಸಲು ಸ್ನೇಹಪರತೆ, ಸಂಯಮ ಮತ್ತು ತಾಳ್ಮೆ ನಮ್ಮ ಅತಿ ದೊಡ್ಡ ಅಸ್ಮಿತೆ. ಈ ಸತ್ಯವನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಮತ್ತು ಸ್ವೀಕರಿಸಬೇಕು. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಗೂ ಅದು ಸೃಷ್ಟಿಸುವ ಹೊಂದಾಣಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಭಾರತೀಯರನ್ನು ಭಾರತದಿಂದಲೇ ಹೊರಹಾಕಲಾಗುವುದಿಲ್ಲ. ಇದನ್ನು ಮಾಡುವ ಎಲ್ಲಾ ಪ್ರಯತ್ನಗಳು ಹಿಂದೆಯೂ ವಿಫಲವಾಗಿವೆ, ಅದನ್ನು ಸಾಬೀತುಪಡಿಸಲು ನಮ್ಮ ಮುಂದೆ ಅನೇಕ ಸಾಕ್ಷ್ಯಗಳಿವೆ. ಬಹು ನಂಬಿಕೆ ವ್ಯವಸ್ಥೆಗಳು ಮತ್ತು ಬಹು ನಂಬಿಕೆಗಳ ಸ್ವೀಕಾರ ಹಿಂದೂ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಹಲವು ಸಂಪ್ರದಾಯಗಳ ಬಗ್ಗೆ ಸಹಿಷ್ಣುತೆ ಮಾತ್ರವಲ್ಲದೆ, ಅವನ್ನು ಸ್ವೀಕರಿಸಿ, ಎಲ್ಲಕ್ಕೂ ಗೌರವ ಸೂಚಿಸುವುದನ್ನು ಭಾರತದ ಭಾವನಾತ್ಮಕ ಮನೋಭಾವ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ಸಂಘದ ಪ್ರತಿಯೊಂದು ಮಾತಿನಲ್ಲೂ ‘ಹಿಂದೂ’ ಎಂಬ ಪದವಿದೆ, ಅಲ್ಲದೆ ಹಲವಾರು ತತ್ಸಂಬಂಧಿತ ಪದಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನುಗಳಿಸಿವೆ. ‘ಸ್ವದೇಶಿ’ ಎಂಬುದು ಅಂತಹ ಒಂದು ಪದವಾಗಿದ್ದು, ಈ ದಿನಗಳಲ್ಲಿ ಇದನ್ನು ಹೆಚ್ಚಾಗಿ ಚರ್ಚಿಸಲಾಗಿದೆ. ಇಲ್ಲಿರುವ ‘ಸ್ವ’ ಅಥವಾ ‘ಸ್ವಯಂ’ ಅದೇ ಹಿಂದುತ್ವವನ್ನು ಸೂಚಿಸುತ್ತದೆ. ಅಮೆರಿಕದ ಭೂಮಿಯಲ್ಲಿ ಸ್ವಾಮಿ ವಿವೇಕಾನಂದರು ಪ್ರಶಂಸಿಸಿದ ನಮ್ಮ ಸಹಿಷ್ಣು ಮತ್ತು ಸ್ವೀಕಾರಾರ್ಹ ಸ್ವಭಾವಕ್ಕೆ ಆಧಾರವಾಗಿರುವ ಆ ಶಾಶ್ವತ ತತ್ವಶಾಸ್ತ್ರವು ಎಲ್ಲ ಜನರನ್ನು ಸಹೋದರರು ಮತ್ತು ಸಹೋದರಿಯರು ಎಂದು ಉಲ್ಲೇಖಿಸುತ್ತದೆ, ಅಂದರೆ ಒಂದೇ ಘಟಕ ಅಥವಾ ಕುಟುಂಬದ ಭಾಗಗಳು. ಕವಿ, ಶ್ರೀ ರವೀಂದ್ರ ನಾಥ್ ಠಾಕೂರ್ ಅವರು ಭಾರತದ ಪುನರುಜ್ಜೀವನಕ್ಕೆ ಒಂದು ತಾತ್ವಿಕ ಅಡಿಪಾಯವನ್ನು ತಮ್ಮ ‘ಸ್ವದೇಶಿ ಸಮಾಜ’ ಎಂಬ ಪ್ರಬಂಧದಲ್ಲಿ ಸ್ಪಷ್ಟವಾಗಿ ಒತ್ತಿ ಹೇಳಿದರು. ಶ್ರೀ ಯೋಗಿ ಅರವಿಂದರು ಇದನ್ನು ತಮ್ಮ ಉತ್ತರಪಾರಾದ ಭಾಷಣದಲ್ಲಿ ಘೋಷಿಸಿದರು. 1857 ರ ನಂತರ ನಮ್ಮ ಸಮಾಜವು ನಡೆಸಿದ ಆತ್ಮಾವಲೋಕನ ಮತ್ತು ಆಲೋಚನೆಗಳು ಮತ್ತು ಹಲವಾರು ರಾಷ್ಟ್ರೀಯ ಸಂಸ್ಥೆಗಳು ನಡೆಸಿದ ಕಸರತ್ತುಗಳ ಅನುಭವಗಳು ನಮ್ಮ ಸಂವಿಧಾನದ ಮುನ್ನುಡಿಯಲ್ಲಿ ಲಗತ್ತಿಸಲಾಗಿದೆ, ಅದು ಭಾರತದ ಅದೇ ಮನೋಭಾವವನ್ನು ಒಳಗೊಂಡಿದೆ. ಈ ‘ಸ್ವ’ ಎಂಬ ಚೇತನ ನಮ್ಮ ಬೌದ್ಧಿಕ ಕ್ರಿಯೆಯ ಯೋಜನೆಗಳನ್ನು ನಿರ್ದೇಶಿಸುವ ದಿಕ್ಸೂಚಿಯಾಗಿರಬೇಕು. ಇದು ನಮ್ಮ ದೇಶದ ಸಾಮೂಹಿಕ ಪ್ರಜ್ಞೆಯ ನಿರ್ದೇಶನಗಳು, ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಬೆಳಗಿಸುವ ಬೆಳಕಾಗಿರಬೇಕು. ಭೌತಿಕ ಸಮತಲದಲ್ಲಿ ನಮ್ಮ ಪ್ರಯತ್ನಗಳ ಫಲಿತಾಂಶಗಳು ಮತ್ತು ಅವುಗಳ ಪರಿಣಾಮಗಳು ಈ ತತ್ವಕ್ಕೆ ಅನುಗುಣವಾಗಿರಬೇಕು. ಆಗ ಮಾತ್ರ ಭಾರತ ಸ್ವಾವಲಂಬಿಯಾಗಿ ಅರ್ಹತೆ ಪಡೆಯುತ್ತದೆ. ಉತ್ಪಾದನೆಗೆ ಸ್ಥಳಗಳು, ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿರುವ ಕಾರ್ಯಪಡೆ, ಉತ್ಪಾದನೆಯ ಮಾರಾಟದಿಂದ ಹೊರಹೊಮ್ಮುವ ಆರ್ಥಿಕ ಲಾಭಗಳು ಮತ್ತು ಉತ್ಪಾದನೆಯ ಹಕ್ಕುಗಳು ನಮ್ಮ ರಾಷ್ಟ್ರೀಯ ನಿಯಂತ್ರಣದಲ್ಲಿರಬೇಕು. ಆದರೆ ಇದು ಕೇವಲ ಸ್ವದೇಶಿ ವಿಧಾನವಾಗಿ ಅರ್ಹತೆ ಪಡೆಯುವುದಿಲ್ಲ. ಶ್ರೀ ವಿನೋಬಾ ಭಾವೆ ಜಿ ಅವರು ಸ್ವಾವಲಂಬನೆ ಮತ್ತು ಅಹಿಂಸೆಯ ಸಂಯೋಜನೆಯನ್ನು ಸ್ವದೇಶಿ ಎಂದು ಗುರುತಿಸಿದ್ದಾರೆ. ದಿವಂಗತ ಶ್ರೀ ದತ್ತೋಪಂತ್ ಠೇಂಗಡಿ ಜಿ ಅವರು ಸರಕು ಮತ್ತು ಸೇವೆಗಳನ್ನು ಮೀರಿ ರಾಷ್ಟ್ರೀಯ ಸ್ವಾವಲಂಬನೆ, ಸಾರ್ವಭೌಮತ್ವ ಮತ್ತು ಸಮಾನತೆಯನ್ನು ಸಾಧಿಸುವ ಮೂಲಕ ಅಂತರರಾಷ್ಟ್ರೀಯ ಸಹಕಾರದ ಸ್ಥಾನವನ್ನು ‘ಸ್ವದೇಶೀ’ ಗಳಿಸಬಹುದು ಎಂದು ಹೇಳಿದ್ದಾರೆ. ಆದ್ದರಿಂದ ಭವಿಷ್ಯದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಮತ್ತು ಅಂತಾರಾಷ್ಟ್ರೀಯ ಸಹಕಾರದ ಸ್ಥಾನವನ್ನು ಪಡೆಯಲು ನಾವು ವಿದೇಶಿ ಹೂಡಿಕೆದಾರರಿಗೆ ಮುಕ್ತರಾಗಿದ್ದೇವೆ ಮತ್ತು ಹೊಸ ತಂತ್ರಜ್ಞಾನಗಳನ್ನು ನೀಡುವ ಕಂಪನಿಗಳಿಗೆ ಅವಕಾಶ ನೀಡುತ್ತೇವೆ, ಆದರೆ ಅವರು ನಮ್ಮ ನಿಯಮಗಳು ಮತ್ತು ಪರಸ್ಪರ ಒಪ್ಪುವ ಪರಿಸ್ಥಿತಿಗಳಲ್ಲಿ ತೊಡಗಿಸಿಕೊಳ್ಳಬೇಕು. ಜೊತೆಗೆ ಅಂತಹ ನಿರ್ಧಾರವು ಪರಸ್ಪರ ಒಮ್ಮತವನ್ನು ಆಧರಿಸಿರಬೇಕು.
ಸ್ವಾವಲಂಬನೆಯಲ್ಲಿ, “ಸ್ವಯಂ” ಎಂಬುದು ಮುಖ್ಯ ಹಾಗೂ ಅದನ್ನೇ ಉದ್ದೇಶಿಸಲಾಗಿದೆ. ನಮ್ಮ ದೃಷ್ಟಿ ನಮ್ಮ ಗಮ್ಯಸ್ಥಾನ ಮತ್ತು ನಮ್ಮ ಮಾರ್ಗವನ್ನು ನಿರ್ಧರಿಸುತ್ತದೆ. ಪ್ರಪಂಚದ ಉಳಿದ ಭಾಗಗಳ ನಂತರದ ಅದೇ ವ್ಯರ್ಥ ಶ್ರಮವನ್ನು ಅನುಸರಿಸುವ ಮೂಲಕ ನಾವು ಪ್ರಧಾನ ಸ್ಥಾನವನ್ನು ಪಡೆಯುತ್ತೇವೆ, ಅದು ಖಂಡಿತವಾಗಿಯೂ ಧೈರ್ಯಶಾಲಿ ವಿಜಯವಾಗಿರುತ್ತದೆ. ಆದರೆ ಅದು ‘ಸ್ವ’ (ಸ್ವಯಂ) ನ ಚೈತನ್ಯ ಮತ್ತು ಭಾಗವಹಿಸುವಿಕೆಯಲ್ಲಿರುತ್ತದೆ. ಉದಾಹರಣೆಗೆ, ನಮ್ಮ ಕೃಷಿ ನೀತಿಯನ್ನು ವಿನ್ಯಾಸಗೊಳಿಸುವಾಗ ನಾವು ನಮ್ಮ ರೈತನಿಗೆ ಬಿತ್ತಲು, ಬೀಜ ದೊರಕಿಸುವುದು, ಗೊಬ್ಬರ, ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸ್ವಂತವಾಗಿ ರಚಿಸಲು ಅಥವಾ ಅವನ ಹಳ್ಳಿಯ ನೆರೆಹೊರೆಯ ಪ್ರದೇಶಗಳಿಂದ ಸಂಗ್ರಹಿಸಲು ಸದೃಢಗೊಳಿಸಬೇಕು. ತನ್ನ ಉತ್ಪನ್ನಗಳನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಕಲೆಯ ಬಗ್ಗೆ ಅವನಿಗೆ ಶಿಕ್ಷಣ ನೀಡಬೇಕು ಮತ್ತು ಅಂತಹ ಸೌಲಭ್ಯಗಳಿಗೆ ಪ್ರವೇಶ ಹೊಂದುವಂತೆ ಮಾಡಬೇಕು. ನಮ್ಮಲ್ಲಿ ಕೃಷಿಯ ಬಗ್ಗೆ ಆಳವಾದ, ವಿಸ್ತಾರವಾದ ಮತ್ತು ಪ್ರಾಚೀನ ಇತಿಹಾಸವಿದೆ. ಆದ್ದರಿಂದ ಹೊಸ ನೀತಿಗಳು ನಮ್ಮ ರೈತನಿಗೆ ಆಧುನಿಕ ಕೃಷಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿರಬೇಕು ಮತ್ತು ಆ ಜ್ಞಾನವನ್ನು ಸಮಯ-ಪರೀಕ್ಷಿತ, ಸಂದರ್ಭೋಚಿತವಾಗಿ ಸಂಬಂಧಿಸಿದ ಸಾಂಪ್ರದಾಯಿಕ ಜ್ಞಾನದೊಂದಿಗೆ ಬೆರೆಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. ನೀತಿಗಳು ಹೇಗಿರಬೇಕೆಂದರೆ, ಒಬ್ಬ ರೈತನು ಈ ಸಂಶೋಧನಾ ಆವಿಷ್ಕಾರಗಳನ್ನು ಬಳಸಿಕೊಂಡು ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿಕೋಳ್ಳಲು ಸಹಾಯವಾಗುವಷ್ಟು. ಆ ಸಂಶೋಧನೆಗಳ ಲಾಭದ ವ್ಯಾಖ್ಯಾನಗಳಲ್ಲಿ ಅಥವಾ ಕಾರ್ಪೊರೇಟ್ ವಲಯದ ಪ್ರಾಯೋಜಿತ ಸಂಶೋಧನೆಯಲ್ಲಿ ಅಥವಾ ಮಾರುಕಟ್ಟೆ ಶಕ್ತಿಗಳು ಮತ್ತು ಮಧ್ಯವರ್ತಿಗಳ ಒತ್ತಡದಲ್ಲಿ ರೈತ ಸಿಕ್ಕಿಹಾಕಿಕೊಳ್ಳಬಾರದು. ಆಗ ಮಾತ್ರ ಅಂತಹ ನೀತಿಯು ಭಾರತೀಯ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಮತ್ತು ನಿಜವಾದ ಸ್ವದೇಶಿ ಕೃಷಿ ನೀತಿಯಾಗಿರುತ್ತದೆ. ಪ್ರಸ್ತುತ ಕೃಷಿ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಈ ಬದಲಾವಣೆಗಳನ್ನು ತಕ್ಷಣ ಸೇರಿಸಿಕೊಳ್ಳುವುದು ಸಾಧ್ಯವಾಗದಿರಬಹುದು. ಅಂತಹ ಸಂದರ್ಭದಲ್ಲಿ, ನೀತಿಗಳು ಸೂಚಿಸಿದ ಬದಲಾವಣೆಗಳನ್ನು ವಾಸ್ತವಕ್ಕೆ ಸರಿಹೊಂದುವ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು.
ನಮ್ಮ ಆರ್ಥಿಕ, ಕೃಷಿ, ಕಾರ್ಮಿಕ, ಉತ್ಪಾದನೆ ಮತ್ತು ಶಿಕ್ಷಣ ನೀತಿಯಲ್ಲಿ ಈ ‘ಸ್ವ’ ಅನ್ನು ಒಟ್ಟುಗೂಡಿಸುವ ದಿಕ್ಕಿನಲ್ಲಿ ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವ್ಯಾಪಕವಾದ ಚರ್ಚೆಗಳು ಮತ್ತು ಸಂವಾದದ ಆಧಾರದ ಮೇಲೆ ರೂಪುಗೊಂಡ ಹೊಸ ಶಿಕ್ಷಣ ನೀತಿಯನ್ನು ಘೋಷಿಸಲಾಗಿದೆ. ಇಡೀ ಶೈಕ್ಷಣಿಕ ಕ್ಷೇತ್ರದ ಜೊತೆಗೆ ಸಂಘ ಕೂಡ ಇದನ್ನು ಸ್ವಾಗತಿಸಿದೆ. ಸ್ವದೇಶಿಯ ಸಾಧ್ಯತೆಗಳ ಪರಿಶೋಧನೆಯಲ್ಲಿ “ವೋಕಲ್ ಫಾರ್ ಲೋಕಲ್” ಒಂದು ಉತ್ತಮ ಬೆಳವಣಿಗೆ. ಆದರೆ, ಈ ಉಪಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಪ್ರಕ್ರಿಯೆಯನ್ನು ವೀಕ್ಷಿಸಬೇಕು ಮತ್ತು ಮುಕ್ತಾಯದವರೆಗೆ ತೀವ್ರವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಆದ್ದರಿಂದ ಈ ವಿಶಾಲ ದೃಷ್ಟಿಕೋನಗಳನ್ನು ಗಮನಿಸಿದರೆ ನಾವು ಈ ‘ಸ್ವ’ ಅಥವಾ ಸ್ವಯಂ ಮನೋಭಾವವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಆಗ ಮಾತ್ರ ನಾವು ಸರಿಯಾದ ದಿಕ್ಕಿನಲ್ಲಿ ಮುಂದುವರಿಯಬಹುದಾಗಿದೆ.
ನಮ್ಮ ಭಾರತೀಯ ಚಿಂತನೆಯು ಹೋರಾಟವನ್ನು ಪ್ರಗತಿಯ ಅಂಶವಾಗಿ ಅನುಮೋದಿಸುವುದಿಲ್ಲ. ಅನ್ಯಾಯವನ್ನು ತೊಡೆದುಹಾಕಲು ಹೋರಾಟವನ್ನು ಕೊನೆಯ ಉಪಾಯವೆಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಪ್ರಗತಿಯ ಪರಿಕಲ್ಪನೆ ಸಹಕಾರ ಮತ್ತು ಸಮನ್ವಯವನ್ನು ಆಧರಿಸಿದೆ. ಆದ್ದರಿಂದ, ಜೀವನದ ವಿವಿಧ ಆಯಾಮಗಳಲ್ಲಿ ಸ್ವಾವಲಂಬನೆಯನ್ನು ಸಾಕಾರಗೊಳಿಸಲು ಏಕತೆಯ ಮನೋಭಾವವು ನಿರ್ಣಾಯಕವಾಗಿದೆ. ಒಂದು ದೇಹದ ಪರಸ್ಪರ ಅಂಗಗಳು ಸಮತೋನದಲ್ಲಿ ಇರುವಂತೆ, ಸ್ವಾವಲಂಬನೆ ಮೂಲಭೂತವಾಗಿ ಸಂಘಟಿತ ಪ್ರಯತ್ನಗಳು ಮತ್ತು ಪರಸ್ಪರ ಸಹಕಾರದ ಮೂಲಕ ಇಡೀ ರಾಷ್ಟ್ರದ ಒಟ್ಟಾರೆ ಯೋಗಕ್ಷೇಮ ಮತ್ತು ಉನ್ನತಿಯನ್ನು ಸೂಚಿಸುತ್ತದೆ. ಎಲ್ಲಾ ಸಂಬಂಧಿತ ಜನರು ಮತ್ತು ಪಕ್ಷಗಳು ವ್ಯಾಪಕವಾಗಿ ಚರ್ಚಿಸುವ ಮತ್ತು ಉದ್ದೇಶಪೂರ್ವಕವಾಗಿ ಮತ್ತು ಸಮ್ಮತವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ನೀತಿ-ರೂಪಿಸುವ ಪ್ರಕ್ರಿಯೆ ಎಲ್ಲರ ನಡುವೆ ಏಕತೆ ಮತ್ತು ನಂಬಿಕೆಯ ಮನೋಭಾವವನ್ನು ಬೆಳೆಸುತ್ತದೆ. ಎಲ್ಲರೊಂದಿಗೆ ಮುಕ್ತ ಸಂವಾದ, ಚರ್ಚೆಯ ಮೂಲಕ ಒಮ್ಮತವನ್ನು ಸೆಳೆಯುವುದು, ಸಹಕಾರ ಮತ್ತು ಫಲಿತಾಂಶದ ವಿಶ್ವಾಸವನ್ನು ಖಾತರಿಪಡಿಸುವುದು – ಒಬ್ಬರ ಕುಟುಂಬ ಮತ್ತು ಸಮುದಾಯದಲ್ಲಿ ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯನ್ನು ಭದ್ರಪಡಿಸುವ ನಿಗದಿತ ವಿಧಾನ ಇದು.
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹಚಿತ್ತಮೇಷಾಮ್ ।
ಸಮಾನಂ ಮಂತ್ರಮಭಿಮಂತ್ರಯೇ ವಃ ಸಮಾನೇನ ವೊ ಹವಿಷಾ ಜುಹೋಮಿ ।।
ನಮ್ಮೆಲ್ಲರ ಭಾಷೆ ಒಂದೇ ರೀತಿಯದಾಗಿರಲಿ. ನಮ್ಮ ದನಿ ಒಂದೇ ಸಮನಾಗಿರಲಿ. ನಮ್ಮ ಮನಸ್ಸುಗಳ ಯೋಚನೆಗಳು ಸಮವಾಗಿರಲಿ. ಅದು ಸಾಗುವ ದಾರಿಯೂ, ಉದ್ದೇಶವೂ ಸಮಾನವಾಗಿರಲಿ.
ಅದೃಷ್ಟವಶಾತ್, ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಏಕತೆ ಮತ್ತು ನಂಬಿಕೆಯ ಭಾವನೆಯನ್ನು ಹೆಚ್ಚಿಸಲು ಪ್ರಸ್ತುತ ರಾಜಕೀಯ ನಾಯಕತ್ವದಿಂದ ಅವಲಂಬಿಸಬಹುದು ಮತ್ತು ನಿರೀಕ್ಷಿಸಬಹುದು. ಸಮಾಜವನ್ನು ಸರ್ಕಾರದೊಂದಿಗೆ ಸಂಪರ್ಕಿಸುವ ಆಡಳಿತ ವ್ಯವಸ್ಥೆಯು ಈ ಕಾರ್ಯವನ್ನು ಉತ್ತಮ ಶೈಲಿಯಲ್ಲಿ ಸುಗಮಗೊಳಿಸಲು ಮತ್ತು ಸಾಧಿಸಲು ಹೆಚ್ಚು ಸೂಕ್ಷ್ಮ ಮತ್ತು ಪಾರದರ್ಶಕವಾಗಿರಬೇಕು. ಪರಸ್ಪರ ಒಪ್ಪಿದ ನೀತಿಗಳ ತ್ವರಿತ ಅನುಷ್ಠಾನಕ್ಕೆ ಭಾರಿ ಬದಲಾವಣೆಗಳ ಅಗತ್ಯವಿಲ್ಲ ಮತ್ತು ಸಹಕಾರ-ಸಮನ್ವಯದ ವಾತಾವರಣವನ್ನು ಹೆಚ್ಚಿಸುತ್ತದೆ. ಉಳಿದ ಎಚ್ಚರಿಕೆ ಮತ್ತು ಅಂತಿಮ ಹಂತದವರೆಗೆ ಪ್ರಸ್ತಾವಿತ ನೀತಿಗಳ ಅನುಷ್ಠಾನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವುದು ಗಮನಾರ್ಹವಾಗಿದೆ.
ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಬೆಂಬಲಿಸುವ ಮೂಲಕ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಸ್ವಾವಲಂಬಿ ಉದ್ಯೋಗಿಗಳಿಗೆ ಸಹಾಯ ಮಾಡುವ ಮೂಲಕ, ಪರಿಸರ ಸ್ನೇಹಿ ವ್ಯವಹಾರಗಳನ್ನು ಪ್ರಾರಂಭಿಸುವ ಮೂಲಕ ಮತ್ತು ಆರ್ಥಿಕ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸ್ವಾವಲಂಬಿ ಉತ್ಪಾದನಾ ಘಟಕಗಳ ಮೂಲಕ ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳನ್ನು ವಿಕೇಂದ್ರೀಕರಿಸುವ ಅಗತ್ಯವಿದೆ. ನೂತನ, ಅನುಭವಿ ಉದ್ಯಮಿಗಳಿಂದ ಹಿಡಿದು ರೈತರವರೆಗೆ ಈ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವವರೆಲ್ಲರೂ ನಮ್ಮ ರಾಷ್ಟ್ರದ ಉದ್ಯಮಶೀಲತೆಯ ಯಶಸ್ಸನ್ನು ಸವಿಯಲು ಉತ್ಸುಕರಾಗಿದ್ದಾರೆ. ಸರ್ಕಾರವು ಅವರಿಗೆ ಹೆಚ್ಚುವರಿ ಯೋಜನೆಗಳನ್ನು ಒದಗಿಸುವ ಅಗತ್ಯವಿರುತ್ತದೆ. ಅದರಿಂದ ಅವರು ವಿಶ್ವದರ್ಜೆಯ ಮಾನದಂಡಗಳನ್ನು ಸಾಧಿಸಬಹುದು, ಅದು ವಿಶ್ವದ ಇತರ ಆರ್ಥಿಕ ದೈತ್ಯರೊಂದಿಗೆ ಸ್ಪರ್ಧಾತ್ಮಕ ಅವಕಾಶವನ್ನು ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಸರ್ಕಾರದ ಧನ ಸಹಾಯದ ಜೊತೆ ಕರೋನಾ ಬಿಕ್ಕಟ್ಟಿನ ಆರು ತಿಂಗಳ ನಂತರ ಮತ್ತೆ ತಮ್ಮ ಉದ್ಯಮ ಪುನಾರಂಭಿಸಲು ಸೂಕ್ತ ಕ್ರಮಗಳನ್ನು ಅವರಿಗಾಗಿ ಕೈಗೊಳ್ಳಬೇಕಿದೆ.
ಪ್ರಗತಿ-ಆಧಾರಿತ ಮನಸ್ಥಿತಿಯೊಂದಿಗೆ, ನಮ್ಮ ಜನರ ಸಂಸ್ಕೃತಿ ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ದೇಶದ ಅಭಿವೃದ್ಧಿ ಮಾರ್ಗವನ್ನು ವಿವರಿಸಬೇಕಾಗಿದೆ. ಎಲ್ಲಾ ದೃಷ್ಟಿಕೋನಗಳಿಂದ ಸಕಾರಾತ್ಮಕ ಕೊಡುಗೆಯೊಂದಿಗೆ ಒಮ್ಮತವನ್ನು ಸ್ಥಾಪಿಸಿದ ನಂತರ ನಾವು ಯೋಜನೆಗಳನ್ನು ಕೈಗೊಳ್ಳಬೇಕು. ಅಭಿವೃದ್ಧಿಯ ಸಾಧನೆಗಳ ಪ್ರತಿಫಲವು ಅತ್ಯಂತ ಹಿಂದುಳಿದವರಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು. ಮಧ್ಯವರ್ತಿಗಳ ಶೋಷಣೆ ಮತ್ತು ಸುಲಿಗೆಗಳನ್ನು ತೆಗೆದುಹಾಕಬೇಕು. ಉತ್ಪಾದನಾ ತಯಾರಕರು ಮಾರುಕಟ್ಟೆಗಳು ಮತ್ತು ಅಭಿವೃದ್ಧಿ ಯೋಜನೆಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದರೆ ಮಾತ್ರ ನಮ್ಮ ಕನಸುಗಳು ನನಸಾಗಬಹುದು, ಇಲ್ಲದಿದ್ದರೆ ವೈಫಲ್ಯಕ್ಕೆ ಕಾರಣವಾಗುವ ಅಪಾಯಗಳು ಹೆಚ್ಚಿವೆ.
ಮೇಲೆ ಮಾಡಿದ ಎಲ್ಲಾ ಸಲಹೆಗಳು ಬಹಳ ಮಹತ್ವದ್ದಾಗಿದ್ದರೂ, ಸಮಾಜದ ಸಾಮೂಹಿಕ ಸಂಕಲ್ಪವು ರಾಷ್ಟ್ರದ ಅಭಿವೃದ್ಧಿಯ ಅಡಿಪಾಯವಾಗಿದೆ. ಕರೋನದ ನಂತರ ಚಾಲ್ತಿಯಲ್ಲಿರುವ ಪ್ರಜ್ಞೆ, ಅಂದರೆ, ‘ಸ್ವಯಂ,’ ಏಕತೆಯ ಮನೋಭಾವ, ಜನರನ್ನು ಒಗ್ಗೂಡಿಸುವ ಮನೋಭಾವ, ಸಾಂಸ್ಕೃತಿಕ ಮೌಲ್ಯಗಳ ಮಹತ್ವ ಮತ್ತು ಪರಿಸರ ಜಾಗೃತಿ ಮತ್ತು ಅದರ ಸಮತೋಲನವನ್ನು ಪುನಃಸ್ಥಾಪಿಸಲು ಪರಿಹಾರ ಕ್ರಮಗಳ ಅಗತ್ಯತೆ ಇವುಗಳು ನಂತರದ ದಿನಗಳಲ್ಲಿ ಸಮಾಜದಿಂದ ಕಡೆಗಣಿಸಲ್ಪಡಬಾರದು. ನಾವು ಮೌಲ್ಯಗಳ ದೃಷ್ಟಿ ಕಳೆದುಕೊಳ್ಳಬಾರದು.
ಸಮಾಜದ ಜವಾಬ್ದಾರಿಯುತ ಅಭ್ಯಾಸಗಳು ಮತ್ತು ಸರಿಯಾದ ನಡವಳಿಕೆಯ ಆಚರಣೆಯಿಂದಷ್ಟೇ ಸೂಕ್ತ ಪ್ರತಿಫಲ ಸಾಧ್ಯ. ಸಣ್ಣ ಬದಲಾವಣೆಗಳಿಂದ ಪ್ರಾರಂಭಿಸಿ, ನಿಯಮಿತವಾಗಿ ಜಾಗೃತಿ ಮೂಡಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ನಡವಳಿಕೆಯ ಬದಲಾವಣೆಗೆ ಕಾರಣವಾಗಬಹುದು. ಪ್ರತಿಯೊಂದು ಕುಟುಂಬವು ಈ ಪ್ರಯೋಗದ ಒಂದು ಭಾಗವಾಗಬಹುದು. ವಾರಕ್ಕೊಮ್ಮೆ ಎಲ್ಲಾ ಕುಟುಂಬದ ಸದಸ್ಯರು ಜಂಟಿಯಾಗಿ ಕೆಲವು ಪ್ರಾರ್ಥನೆ ಮಾಡಲು ಮತ್ತು ಮನೆಯಲ್ಲಿ ಒಟ್ಟಾಗಿ ಕುಳಿತು ಆಹಾರವನ್ನು ಸೇವಿಸಬಹುದು ಮತ್ತು ನಂತರ ಎರಡು ಮೂರು ಗಂಟೆಗಳ ಅನೌಪಚಾರಿಕ ಚರ್ಚೆಯನ್ನು ಮಾಡಬಹುದು. ಆ ಚರ್ಚೆಗಳಲ್ಲಿ ಮೇಲೆ ತಿಳಿಸಲಾದ ವಿಷಯಗಳನ್ನು ಚರ್ಚಿಸಬಹುದು, ಏಕೆಂದರೆ ಕ್ರಿಯಾತ್ಮಕ ವಸ್ತುಗಳು ಮತ್ತು ಸಣ್ಣ ಕುಟುಂಬ ಮಟ್ಟದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು, ಇದನ್ನು ಮುಂದಿನ ವಾರದ ಚರ್ಚೆಯಲ್ಲಿ ಪರಿಶೀಲಿಸಬಹುದು. ಕುಟುಂಬಗಳಲ್ಲಿ ಚರ್ಚೆ, ಮಾತುಕತೆಯ ಪಾತ್ರ ಹೆಚ್ಚಿದೆ. ನಮ್ಮ ಶಾಸ್ತ್ರಗಳಲ್ಲಿ ಈ ವಿಧಾನವನ್ನು ಹೀಗೆ ವಿವರಿಸಲಾಗಿದೆ.
ಸಂತಃ ಪರೀಕ್ಶ್ಯಾನ್ಯಾತರದ್ ಭಜಂತೇ ಮೂಢಃ ಪರಪ್ರತ್ಯಯನೆಯ ಬುದ್ಧಿಃ
ಕುಟುಂಬ ವ್ಯವಸ್ಥೆಯಲ್ಲಿ ನಾವು ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿದರೆ, ಸಮಸ್ಯೆಯ ಪ್ರಸ್ತುತತೆಗೆ ಸಂಬಂಧಿಸಿದಂತೆ ವಿವೇಚನೆಯನ್ನು ಬಳಸಿ ನಡೆದುಕೊಂಡರೆ, ಸರಿಯಾದ ಆಯ್ಕೆ ಮಾಡಿ ಒಂದು ದೃಷ್ಟಿಕೋನವನ್ನು ಸ್ವೀಕರಿಸಿ ಅಥವಾ ತಿರಸ್ಕರಿಸಿದರೆ, ಅದರ ಪರಿಣಾಮವಾಗಿ ಉಂಟಾಗುವ ವರ್ತನೆಯ ಬದಲಾವಣೆಗಳು ಶಾಶ್ವತವಾಗಿರುತ್ತದೆ.
ಆರಂಭಿಕ ಚರ್ಚೆಗಳಲ್ಲಿ, ದೇಶೀಯ ವ್ಯವಸ್ಥೆಗಳು, ವಾಸಸ್ಥಳದ ವಿನ್ಯಾಸ, ನಮ್ಮ ಕುಟುಂಬದ ಸಂಸ್ಕೃತಿ, ದೀರ್ಘಕಾಲದ ಪದ್ಧತಿಗಳು ಮತ್ತು ಸಂಪ್ರದಾಯಗಳಂತಹ ಸಾಮಾನ್ಯ ಕಾಳಜಿಯ ವಿಷಯಗಳನ್ನು ಚರ್ಚಿಸಬಹುದು. ಪರಿಸರ ಕಾಳಜಿಗಳ ಬಗ್ಗೆ ಪ್ರತಿಯೊಬ್ಬರ ಪರಿಚಿತತೆಯ ಕಾರಣದಿಂದಾಗಿ, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಮಾರ್ಗಗಳು, ನೀರಿನ ಸಂರಕ್ಷಣೆ, ಹೂವಿನ ಗಿಡಗಳ ಸಸಿಗಳನ್ನು ನೆಡುವುದರ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸುವ ಬಗೆ, ಹಣ್ಣಿನ ಮರಗಳು ಮತ್ತು ತರಕಾರಿಗಳನ್ನು ನಮ್ಮ ಅಂಗಳ ಮತ್ತು ಟೆರೇಸ್ಗಳಲ್ಲಿ ಬೆಳೆಸುವ ಬಗ್ಗೆ ಚರ್ಚಿಸಬಹುದು ಮತ್ತು ಕ್ರಿಯಾಶೀಲ ಯೋಜನೆಗಳನ್ನು ಜಂಟಿಯಾಗಿ ರಚಿಸಬಹುದು. ಲಭ್ಯವಿರುವ ಸಮಯ ಮತ್ತು ಅಗತ್ಯಗಳಿಗೆ ಅನುಗುಣವಾಗಿ, ನಾವೆಲ್ಲರೂ ಪ್ರತಿದಿನ ವೈಯಕ್ತಿಕ ಮತ್ತು ಕೌಟುಂಬಿಕ ಅಗತ್ಯತೆಗಳಿಗಾಗಿ ಹಣವನ್ನು ಖರ್ಚು ಮಾಡುತ್ತೇವೆ. ನಾವು ದಿನನಿತ್ಯದ ಆಧಾರದ ಮೇಲೆ ನಮ್ಮ ಸಮಾಜಕ್ಕಾಗಿ ಎಷ್ಟು ಹಣವನ್ನು ಮತ್ತು ಸಮಯವನ್ನು ಅರ್ಪಿಸುತ್ತಿದ್ದೇವೆ ಮತ್ತು ಅದನ್ನು ಹೇಗೆ ಮಾಡಬೇಕೆಂಬುದನ್ನು ನಾವು ನಮ್ಮ ಚರ್ಚೆಯಲ್ಲಿ ಆಲೋಚಿಸಬಹುದು. ನಾವು ವಿವಿಧ ಜಾತಿ ಮತ್ತು ಪ್ರದೇಶಗಳಿಗೆ ಸೇರಿದ ಮತ್ತು ವೈವಿಧ್ಯಮಯ ಭಾಷೆಗಳನ್ನು ಮಾತನಾಡುವ ಜನರು ಮತ್ತು ಕುಟುಂಬಗಳೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದೇವಾ? ನಾವು ಆಳವಾಗಿ ಬೆರೆತಿದ್ದೇವೆ ಎನ್ನಲಾದ ಮನೆಗಳಿಗೆ ಆ ಪರಿಚಯಸ್ಥರ ಮನೆಗಳಿಗೆ ಭೇಟಿ ನೀಡಿದ್ದೇವೆಯೇ? ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಇವು ಪ್ರಮುಖ ಚರ್ಚಾ ವಿಷಯಗಳಾಗಿವೆ. ನಿಜವಾದ ಕಾರ್ಯಕ್ರಮಗಳು ಮತ್ತು ಉಪಕ್ರಮಗಳಲ್ಲಿ ನಮ್ಮ ಕುಟುಂಬದ ಭಾಗವಹಿಸುವಿಕೆಗೆ ಒತ್ತು ನೀಡಬಹುದು, ಉದಾ. ನಮ್ಮ ಕುಟುಂಬವು ರಕ್ತದಾನ, ನೇತ್ರದಾನದಲ್ಲಿ ಕೊಡುಗೆ ನೀಡಬಹುದು ಅಥವಾ ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಬಹುದು.
ಈ ಸಣ್ಣ ಕಾರ್ಯಗಳ ಮೂಲಕ, ಸಾಮರಸ್ಯ, ನೇರ ನಡತೆ, ತಾಳ್ಮೆ, ಶಿಸ್ತು ಮತ್ತು ಮೌಲ್ಯಗಳಿಂದ ಪ್ರೇರಿತವಾದ ವೈಯಕ್ತಿಕ ನಡವಳಿಕೆಯನ್ನು ಬೆಳೆಸಿಕೊಳ್ಳಬಹುದು. ಇದರ ಪರಿಣಾಮವಾಗಿ, ನಾಗರಿಕ ಶಿಸ್ತಿಗೆ ಅನುಗುಣವಾಗಿ ನಮ್ಮ ಸಾಮೂಹಿಕ ನಡವಳಿಕೆಯು ಪರಸ್ಪರ ಸಹಕಾರ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ. ಸಾಮಾನ್ಯ ಮನುಷ್ಯನ ಸಾಮಾನ್ಯ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಮಾರ್ಗದರ್ಶಿ ಶಕ್ತಿಯಾಗಿ ಹಿಂದುತ್ವದೊಂದಿಗಿನ ಅವನ ಏಕತೆಯ ಮನೋಭಾವವನ್ನು ಪೋಷಿಸಲು ನಾವು ಕೆಲಸ ಮಾಡಿದರೆ, ನಮ್ಮ ದೇಶದ ರಚನೆಯ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ಅಭಿವೃದ್ಧಿ ಪ್ರಗತಿಗೆ ನಾವು ವೈಯಕ್ತಿಕ ಪ್ರಯತ್ನಗಳನ್ನು ಮಾಡಿದರೆ ಮತ್ತು ನಮ್ಮ ಪರಸ್ಪರ ಅವಲಂಬನೆಯನ್ನು ಅಂಗೀಕರಿಸಿದರೆ ಸಮಾಜದ ಇತರ ಸದಸ್ಯರೊಂದಿಗೆ ಸಹಕರಿಸಲು, ಯಾವುದೇ ಕನಸನ್ನು ಸಾಧಿಸಲು ಮತ್ತು ನಮ್ಮ ಮೌಲ್ಯಗಳಲ್ಲಿ ಬೇರೂರಿರುವ ಅಭಿವೃದ್ಧಿ ಗುರಿಗಳನ್ನು ಹೊಂದಿಸಲು ನಮ್ಮ ಸಾಮೂಹಿಕ ಶಕ್ತಿಯ ಬಗ್ಗೆ ನಮಗೆ ವಿಶ್ವಾಸವಿದ್ದರೆ, ಮುಂದಿನ ದಿನಗಳಲ್ಲಿ ಭಾರತವರ್ಸ್ಗ ಪ್ರಪಂಚದ ಉಳಿದ ಭಾಗಗಳಿಗೆ ದಿಕ್ಸೂಚಿಯಾಗಿ ಹೊರಹೊಮ್ಮುತ್ತದೆ. ಇಂತಹ ವರ್ತನೆಯನ್ನು ಅನುಸರಿಸುವ ವಕ್ತಿಗಳು ಹಾಗೂ ಕುಟುಂಬಗಳು ಇಡೀ ದೇಶದಲ್ಲಿ ಭ್ರಾತೃತ್ವ, ಅರ್ಥಪೂರ್ಣ ಕ್ರಮ ಮತ್ತು ಕಾನೂನುಬದ್ಧ ಕ್ರಮಗಳ ಒಟ್ಟಾರೆ ವಾತಾವರಣವನ್ನು ಸೃಷ್ಟಿಸುತ್ತಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು 1925 ರಿಂದ ಈ ಬದಲಾವಣೆಗಳನ್ನು ನೇರವಾಗಿ ಸಮಾಜದಲ್ಲಿ ಪರಿಣಾಮ ಬೀರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂಘಟಿತ ರಾಷ್ಟ್ರವು ಆರೋಗ್ಯಕರ ಸಮಾಜದ ಸ್ವಾಭಾವಿಕ ಸ್ಥಿತಿ. ಶತಮಾನಗಳ ಆಕ್ರಮಣಗಳ ಕತ್ತಲೆಯ ನಂತರ ಸ್ವತಂತ್ರವಾಗಿರುವ ಈ ದೇಶದ ಪುನರುತ್ಥಾನಕ್ಕೆ ಅಂತಹ ಸಂಘಟಿತ ಸಮಾಜವು ಅಗತ್ಯವಾಗಿದೆ. ಅಂತಹ ಸಮಾಜವನ್ನು ನಿರ್ಮಿಸಲು ಅನೇಕ ಮಹಾನ್ ವ್ಯಕ್ತಿಗಳು ಕೆಲಸ ಮಾಡಿದ್ದಾರೆ. ಸ್ವಾತಂತ್ರ್ಯದ ನಂತರ, ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸಂವಿಧಾನವನ್ನು ವಯಸ್ಸು-ಸಂಬಂಧಿತ ಅಪೇಕ್ಷಿತ ನಡವಳಿಕೆಯ ಸಂಕೇತಗಳಲ್ಲಿ ರಚಿಸಲಾಗಿದೆ ಮತ್ತು ನಮಗೆ ಹಸ್ತಾಂತರಿಸಲಾಯಿತು. ಸಂಘ ಕಾರ್ಯವು ನಮ್ಮ ಸಂವಿಧಾನದ ಉದ್ದೇಶಗಳನ್ನು ಸಾಕಾರಗೊಳಿಸಲು ಸ್ಪಷ್ಟ ದೃಷ್ಟಿಯನ್ನು ಹುಟ್ಟುಹಾಕುವುದನ್ನು ಖಚಿತಪಡಿಸುತ್ತದೆ ಮತ್ತು ಪರಸ್ಪರ ಸಾಮರಸ್ಯದ ನಡವಳಿಕೆ, ಏಕತೆಯ ಮನೋಭಾವ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮನೋಭಾವವು ಅತ್ಯುನ್ನತವಾಗಿದೆ. ಈ ಗುರಿಯನ್ನು ಸಾಧಿಸುವಲ್ಲಿ ಸ್ವಯಂಸೇವಕರು ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಮತ್ತು ಸಮರ್ಪಕವಾಗಿ ತೊಡಗಿಸಿಕೊಂಡಿದ್ದಾರೆ. ಈ ಪುನರ್ನಿರ್ಮಾಣದ ಅಭಿಯಾನದಲ್ಲಿ ನೀವೆಲ್ಲರೂ ಕೈಜೋಡಿಸಿ ಎಂದು ಆಹ್ವಾನಿಸುತ್ತೇನೆ. ಇಲ್ಲಿಗೆ ನನ್ನ ಮಾತಿಗೆ ವಿರಾಮ ನೀಡುತ್ತೇನೆ.