Political map of Jammu and Kashmir and Ladhak

ಕಾಶ್ಮೀರ ಸಮಸ್ಯೆಯಲ್ಲಿ ಮುಫ್ತಿ ಅವರ ನಾಡಿಮಿಡಿತವನ್ನು ಅರಿಯಲು ಕೇಂದ್ರ ಸರ್ಕಾರದಲ್ಲಿ “ಅವರು” ಪಿಡಿಪಿಯ ಸ್ವಯಂ ಆಳ್ವಿಕೆ ದಾಖಲೆ 2008ರನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗಿದೆ. ಮೆಹಬೂಬರವರು ಪಿಡಿಪಿಯ ಸ್ವಯಂ ಆಳ್ವಿಕೆ ಚೌಕಟ್ಟು 2008, ಭಾರತದ ಸಂವಿಧಾನದೊಂದಿಗೆ ಹೊಂದಿಕೊಳ್ಳುವಂತಹ ವಿಚಾರ ಎಂದು ಈಗಲೂ ಸಮರ್ಥಿಸುತ್ತಾರೆ.
ಜಮ್ಮು-ಕಾಶ್ಮೀರದ ಜನರಲ್ಲಿ ಈಗ ಹುಟ್ಟಿ ಹಾಕಿರುವ ಕಟ್ಟು ಕಥೆಯ ಬಗ್ಗೆ ಗೃಹ ಮಂತ್ರಿಗಳು ಅಭಿಮತ ವ್ಯಕ್ತಪಡಿಸಬೇಕಿದೆ. ಭಾರತ ಸರ್ಕಾರವು ಜಮ್ಮು ಕಾಶ್ಮಿರದಲ್ಲಿ ತಡ ಮಾಡದೆ, ಮುಖ್ಯ ವಾಹಿನಿ ಹಾಗೂ ಪ್ರತ್ಯೇಕತಾವಾದಿ ಪಕ್ಷಗಳನ್ನು ಬೇರ್ಪಡಿಸಿ ನೋಡಬೇಕಿದೆ.

ಜಮ್ಮು-ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ಅಧ್ಯಕ್ಷರಾದಂತಹ ಮೆಹಬೂಬಾರವರು 2016ರಲ್ಲಿ ಸಂಸತ್ ಅಧಿವೇಷನದಲ್ಲಿ, ಫೆಬ್ರವರಿ 2017ರಲ್ಲಿ ಜಮ್ಮು-ಕಾಶ್ಮೀರದ ಶಾಸಕಾಂಗ ಸಭೆಯಲ್ಲಿ ಮತ್ತೆ 2021ರಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವಾಗ ಕಾಶ್ಮೀರದಲ್ಲಿ ಸಮಸ್ಯೆಯಿರುವುದು ನಿಜ ಹಾಗೂ ಈ ಸಮಸ್ಯೆಯನ್ನು ಮುಫ್ತಿ ಮೊಹಮದ್ ಸಯೀದ್ ರವರ ಸ್ವಯಂ ಆಳ್ವಿಕೆಯ ತೀರ್ಮಾನ 2008ರ ಮೂಲಕವೇ ಬಗೆಹರಿಸಬಹುದು ಎಂದು ಪಟ್ಟು ಹಿಡಿದಿರುತ್ತಾರೆ. ಇದರ ತೀರ್ಮಾನವನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ ಇದು ಜಮ್ಮು ಕಾಶ್ಮೀರವನ್ನು ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಸಾರ್ವಭೌಮತ್ವವದೊಂದಿಗೆ ಹಂಚಿಕೊಳ್ಳುವಂತಹದ್ದಾಗಿದೆ.

25 ಅಕ್ಟೋಬರ್ 2008 (ಜಮ್ಮು-ಕಾಶ್ಮೀರ ಶಾಸಕಾಂಗ ಸಭೆಗೆ ಚುನಾವಣೆ ಇದ್ದಂತ ವರ್ಷದಲ್ಲಿ) ಮುಫ್ತಿ ಮಹಮ್ಮದ್ ಸಯೀದ್ ಹಾಗೂ ಮೆಹಬೂಬಾ ಮುಫ್ತಿ ಅವರು ಶ್ರೀನಗರದಲ್ಲಿ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಸ್ವಯಂ ಆಳ್ವಿಕೆಯ ಪರಿಕಲ್ಪನೆಯ ದಾಖಲಾಪತ್ರವನ್ನು ಬಿಡುಗಡೆ ಮಾಡಿರುತ್ತಾರೆ. ಈ ದಾಖಲೆಯನ್ನು ಮರು ದಿನ 26 ಅಕ್ಟೋಬರ್ ರಂದು (ಅಂದರೆ ಜಮ್ಮು ಕಾಶ್ಮೀರದ ಮಹಾರಾಜ ಹರಿಸಿಂಗ್ ರವರು 1947 ರಲ್ಲಿ ಭಾರತಕ್ಕೆ ವಿಲೀನವಾಗುವುದರ ಪ್ರವೇಶ ಸಾಧನಾ ಪತ್ರವನ್ನು ಸಹಿ ಮಾದಿದ ದಿನ) ಮುದ್ರಣ ಮಾಧ್ಯಮದಲ್ಲಿ ಬಹಿರಂಗ ಮಾಡಿರುತ್ತಾರೆ.

ಈ ಸ್ವಯಂ ಆಳ್ವಿಕೆಯ ಪತ್ರದಲ್ಲಿ ಸ್ಪಷ್ಟವಾಗಿ ಆದರೆ ಪರೋಕ್ಷವಾಗಿ ಜಮ್ಮು- ಕಾಶ್ಮೀರದ 1947ನೆ ವಿಲೀನವನ್ನು ಪ್ರಶ್ನಿಸುವಂತಹದ್ದು ಎಂದು ಈ ಕೆಳಗಿನ ಅಂಶಗಳ ಮೂಲಕ ತಿಳಿಯುತ್ತದೆ.

1) ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನ ಆಡಳಿತ ಕಾಶ್ಮೀರ ಎಂದು ಕರೆದಿರುತ್ತಾರೆ.
2) ಜಮ್ಮು-ಕಾಶ್ಮೀರದ ಸಮಸ್ಯೆಗೆ ಕೇವಲ ರಾಜ್ಯದಲ್ಲಿನ ಕಾರ್ಯತತ್ಪರತೆ ಮಾತ್ರವಲ್ಲ, ಇದರೊಂದಿಗೆ ಅಂತರ ರಾಷ್ಟ್ರ & ಸುಪ್ರಾ ರಾಷ್ಟ್ರ (ಒಂದಕ್ಕಿಂತಲೂ ಹೆಚ್ಹು ರಾಷ್ಟ್ರಗಳ ಸಹ ಭಾಗಿತ್ವದಲ್ಲಿ) ಕ್ರಮಗಳ ಅವಶ್ಯಕತೆಯಿದೆ ಎಂಬ ಸಲಹೆ ಇರುತ್ತದೆ.
3) ಜಮ್ಮು ಕಾಶ್ಮೀರದ ಸಮಸ್ಯೆಯ ಪರಿಹಾರಕ್ಕೆ ರಾಜ್ಯದ ಎರಡು ಭಾಗಗಳು (ಭಾರತದ ಜಮ್ಮು ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರ) ಹಾಗೂ ಅವರ ಮುಖ್ಯ ರಾಷ್ಟ್ರಗಳ ನಡುವೆ ಉತ್ತಮವಾದ ಸುಧಾರಿತ ಸಂವಿಧಾನಾತ್ಮಕ, ರಾಜಕೀಯ ಹಾಗೂ ಆರ್ಥಿಕತೆಯ ಸಂಬಂಧಗಳನ್ನು ಬೆಳೆಸುವುದು.
4) ಬೃಹತ್ ಜಮ್ಮು-ಕಾಶ್ಮೀರವನ್ನು ಪ್ರಾದೇಶಿಕ ಮುಕ್ತ ವ್ಯಾಪಾರ ಪ್ರದೇಶವನ್ನಾಗಿ ಮಾಡುವುದು, ಯಾವುದೇ ರೀತಿಯ ಸುಂಕ, ಅಡ್ಡಿಯಿಲ್ಲದೆ ಜಮ್ಮು ಕಾಶ್ಮೀರದ ರಾಜ್ಯದಲ್ಲಿ ವ್ಯಾಪಾರ, ಆದರೆ ಅವರದ್ದೆ ಬಾಹ್ಯ ಸುಂಕವನ್ನು ಭಾರತ ಪಾಕಿಸ್ತಾನ ಸೇರಿದಂತೆ ಇನ್ನಿತರ ವಿಶ್ವದ ಎಲ್ಲಾ ರಾಷ್ತ್ರಗಳ ಮೇಲೆ ಹೇರುವುದು, ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಆಮದು ವಸ್ತುಗಳ ಮೇಲೆ ಸಮಾನ ಸುಂಕವನ್ನು ನಿಗದಿಪಡಿಸುವುದು.
5) ಬೃಹತ್ ಜಮ್ಮು ಕಾಶ್ಮೀರದಲ್ಲಿ ಇಬ್ಬಗೆಯ ಕಾನೂನು ಮಾನ್ಯ ಚಾಲ್ತಿ ಹಣವನ್ನ ಪ್ರಾರಂಭಿಸಿ ಅಲ್ಲಿ ಭಾರತ ಮತ್ತು ಪಾಕಿಸ್ತಾನದ ಎರಡೂ ರಾಷ್ಟ್ರಗಳ ಹಣವನ್ನು ಕಾನೂನು ಮಾನ್ಯವಾಗಿಸುವುದು.
6) ಬೃಹತ್ ಜಮ್ಮು ಕಾಶ್ಮೀರವನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಕೀಯ ಹಾಗೂ ಸಂಬಂಧಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾದೇಶಿಕ ಸಂಸ್ಥೆಯನ್ನಾಗಿಸಿ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಕೀಯ ಸಹಕಾರದೊಂದಿಗೆ ಇನ್ನಷ್ಟು ಸಹಕಾರವನ್ನು ಪದೋನ್ನತಿಸಿ, ಕಾಶ್ಮೀರವನ್ನು ಕೇಂದ್ರ ಏಶಿಯಾದಲ್ಲಿ ಹೃದಯಸ್ಥಾನವಾಗಿ ಮರಳಿ ಪಡೆಸುವುದು.
7) ಪ್ಯಾರ 54 ರಲ್ಲಿ ಅವರ ಅಭಿಮತದಲ್ಲಿ ಜಮ್ಮು ಕಾಶ್ಮೀರ ಸಮಸ್ಯೆಗೆ ಬಹು ಸೂಕ್ತವಾದ ಹಾಗೂ ಕನಿಷ್ಠ ಜಟಿಲದೊಂದಿಗೆ ಬಗೆಹರಿಸಲು ಜಮ್ಮು ಕಾಶ್ಮೀರದ ಪ್ರತಿಯೊಂದು ಭಾಗದಿಂದ ಹಾಗೂ ಪಾಕಿಸ್ತಾನದ ಚುನಾಯಿತ ಪ್ರತಿನಿಧಿಗಳು ಅವರವರ ದೇಶದೊಂದಿಗೆ ಸಂವಾದಿಸಿ ತೀರ್ಮಾನದ ಚೌಕಟ್ಟನ್ನು ಇವರು ನೀಡಿರುವ ವ್ಯಾಪ್ತಿ ನಿರ್ಣಯದೊಳಗೆ ನಿರ್ಧರಿಸುವುದು.
8) ಪ್ಯಾರ 58 ರಲ್ಲಿ ಸ್ವಯಂ ಆಳ್ವಿಕೆ ಎಂದರೆ ಭಾರತ ರಾಷ್ಟ್ರದಿಂದ ಸ್ವಾಯತ್ತತೆ ಸೂಚಿಸುತ್ತದೆ ಅಂದರೆ ಈ ಸ್ವಾಯತ್ತತೆ ಯು ಭಾರತ ಸರ್ಕಾರದಿಂದ ಸಾಪೇಕ್ಷ ಸ್ವಾಯತ್ತತೆಯನ್ನೂ ಸೂಚಿಸುವಂತಾಗಿರುತ್ತದೆ.
9) ಪ್ಯಾರಾ 59 ರಲ್ಲಿ ಸ್ವಾಯತ್ತತೆ ಎಂದರೆ ಭಾರತ ಸರ್ಕಾರಕ್ಕೆ ಹೋಲಿಸುತ್ತಾ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಬಲೀಕರಣವು, ಭಾರತೀಯ ಒಕ್ಕೂಟದ ಸ್ಥಾಪನೆಯಲ್ಲಿ ಕೇಂದ್ರ-ರಾಜ್ಯ ಚರ್ಚೆಯ ಭಾಗವಾಗಿರುವಂತೆಯ ವ್ಯವಸ್ಥೆ. ಮತ್ತೊಂದೆಡೆ ಸ್ವಯಂ ಆಳ್ವಿಕೆ ಎಂದರೆ ಭಾರತ ರಾಷ್ಟ್ರದೊಂದಿಗೆ ಜಮ್ಮು ಕಾಶ್ಮೀರದ ಜನರ ಸಶಕ್ತೀಕರಣವನ್ನು ಸೂಚಿಸುತ್ತದೆ.
10) ಪ್ಯಾರಾ 77 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಮಂಡಳಿಯು 50 ಸದಸ್ಯರನ್ನು ಹೊಂದಿರುತ್ತದೆ. ಜಮ್ಮು ಕಾಶ್ಮೀರದ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಶಾಸಕಾಂಗ ಸಭೆಗಳಿಂದ 40 ಸದಸ್ಯರನ್ನು ಚುನಾಯಿಸ್ತುತ್ತಾರೆ. ಉಳಿದ 10 ಸದಸ್ಯರನ್ನು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಲಾ ಐದು ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಾಗಿರುತ್ತದೆ.

ಹಾಗಾಗಿ, ಮುಫ್ತಿಯವರ ಸ್ವಯಂ ಆಳ್ವಿಕೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಾಗಿ ಪರಿಗಣಿಸದೆ, ಜಮ್ಮು ಕಾಶ್ಮೀರದ ಎರಡು ಭಾಗಗಳ ಕೆಲವು ಸಮಸ್ಯೆಗಳನ್ನು ಭಾರತೊಂದಿಗೆ ಪಾಕಿಸ್ತಾನವು ನಿಯಂತ್ರಿಸಬೇಕೆಂದು ಬಯಸುತ್ತದೆ, ನ್ಯಷನಲ್ ಕಾನ್ಫೆರೆನ್ಚೆ ಸ್ವಾಯತ್ತತೆಯಿಂದ ದೂರಗೊಂಡು, ಸ್ವಯಂ ಆಳ್ವಿಕೆ ಎಂದರೆ ಭಾರತ ರಾಷ್ಟ್ರದಿಂದ ಸ್ವಾಯತ್ತತೆ ಎನ್ನುತ್ತಾ ಈ ಸ್ವಾಯತ್ತತೆಯು ಭಾರತ ಸರ್ಕಾರದಿಂದ ಸಾಪೇಕ್ಷ ಸ್ವಾಯತ್ತತೆಯನ್ನು ಸೂಚಿಸುವಂತಾಗಿರುತ್ತದೆ. ಪಿಡಿಪಿ ಸ್ವಯಂ ಆಳ್ವಿಕೆಯ ಪರಿಕಲ್ಪನೆ, 1947 ರ ವಿಲೀನದ ನೈಜತೆಯಿಂದ ದೂರವಾಗಿದ್ದು ಹಾಗೂ ‘ಕಾಶ್ಮೀರಿ’ಗಳನ್ನು ಭಾರತ ರಾಷ್ಟ್ರದವರಾಗಿ ಸ್ವೀಕರಿಸುತ್ತಿಲ್ಲ.

ಇದರಲ್ಲಿ ಉಲ್ಲೇಖಿಸಿದ 10 ಅಂಶಗಲನ್ನು, 1947 ರಲ್ಲಿ ಭಾರತಕ್ಕೆ ಜಮ್ಮು ಕಾಶ್ಮೀರವು ವಿಲೀನವಾಗಿರುವುದು ಅಂತಿಮವಲ್ಲಾ ಹಾಗೂ ನ್ಯಾಯಸಮ್ಮತವಲ್ಲ ಎಂದು ಒಪ್ಪಿಕೊಂಡ ನಂತರವೇ ಕಾರ್ಯಗೊಳಿಸಬೇಕಾಗಿರುತ್ತದೆ. ಇದೇ ಮೆಹಬೂಬಾ ಮುಫ್ತಿ ಅವರಿಗೆ ಕಾಶ್ಮೀರದ ಮುಖ್ಯ ಸಮಸ್ಯೆಯಾಗಿದೆ.

ಕಾಂಗ್ರೆಸ್ 6 ವರ್ಷಗಳ ಕಾಲ ಪಿಡಿಪಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು, ಯುಪಿಎ -2 ಸಹ ಪಿಡಿಪಿಯನ್ನು ಮುಖ್ಯ ವಾಹಿನಿ ಪಕ್ಷ ಎಂದು ಪರಿಗಣಿಸಿತ್ತು. ಭಾರತೀಯ ಜನತಾ ಪಕ್ಷವೂ ಸಹ ಪಿಡಿಪಿಯೊಂದಿಗೆ ಮಾರ್ಚ್ 2015 ರಿಂದ ಜೂನ್ 2018 ರ ಮಧ್ಯದ ವರೆಗೆ ಅಧಿಕಾರವನ್ನು ಹಂಚಿಕೊಂಡಿತ್ತು. ರಾಷ್ಟ್ರ ನಾಯಕರುಗಳ ಜಮ್ಮು ಕಾಶ್ಮೀರದ ಈ ರೀತಿಯ ನಿರ್ವಹಣೆಯಿಂದ 2008ರ ನಂತರವೂ ಇಲ್ಲಿನ ಜನರು ‘ಪ್ರತ್ಯೇಕತಾವಾದಿಗಳ’ ಅಪಪ್ರಚಾರದಿಂದ ಹಾದಿ ತಪ್ಪಲು ಹಲವಾರು ಕಾರಣಗಳಿರುತ್ತದೆ.

ಪಿಡಿಪಿ ಇನ್ನೂ ಮುಖ್ಯವಾಹಿನಿಯ ಪಕ್ಷವಾಗಿದೆಯೇ? ಇದು ಒಂದು ದೊಡ್ಡ ಪ್ರಶ್ನೆಯಾಗಿದೆ. ಪಿಡಿಪಿಯು ಗೀಲಾನೀ / ಓಮರ್ ಫಾರೂಕ್/ಶಬೀರ್ ಶಾ ಇವರಂತಹ ಪ್ರತ್ಯೇಕತಾವಾದಿಗಳ ಪಕ್ಷವಲ್ಲವೇ? 2021ರಲ್ಲಾದರೂ ಭಾರತ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜಮ್ಮು ಮತ್ತು ಕಾಶ್ಮೀರ ಸಂಪೂರ್ಣ ಭಾರತದ ಅವಿಭಾಜ್ಯ ಅಂಗ ಎಂಬುದರ ಬಗೆಗೆ ಯಾವುದೇ ಸಂದೇಹಗಳಿಲ್ಲದ ಎಲ್ಲಾ ಮಾರ್ಗಗಳನ್ನು ಒಗ್ಗೂಡಿಸುವುದು ಮಾಡಬಾರದೇ? ಮೆಹಬೂಬಾ ಮುಫ್ತಿ ಅವರು ಬರಹಗಾರರು, ಮುಫ್ತಿ ಮೊಹಮದ್ ಸಯೀದ್ ಅವರ ಸ್ವಯಂ ಆಳ್ವಿಕೆಯ ಪರಿಕಲ್ಪನೆಯನ್ನು ಹಾಗೂ ಮುಫ್ತಿ ರವರ ‘ಕಾಶ್ಮೀರ ಸಮಸ್ಯೆ’ ಗಳನ್ನು ಅರ್ಥೈಸಿಕೊಂಡಿರುವುದರಲ್ಲಿ ತಪ್ಪು ಇದ್ದಲ್ಲಿ ತಿದ್ದಬೇಕಾಗಿದೆ.

ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಮೆಹಬೂಬಾ ಮುಫ್ತಿ ಅವರು ಫೆಬ್ರವರಿ 2017ರಲ್ಲಿ ಶಾಸಕಾಂಗ ಸಭೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) “ಸ್ವಯಂ ಆಳ್ವಿಕೆಯ” ಪ್ರಸ್ತಾಪಗಳು ಭಾರತದ ಸಂವಿಧಾನದೊಂದಿಗೆ ಹೊಂದಿಕೊಲ್ಲುವಂತಹ ವಿಚಾರ ಮತ್ತು ಬಿಜೆಪಿಯಲ್ಲಿರುವವರು “ಸ್ವಯಂ ಆಳ್ವಿಕೆಯ ಪ್ರಸ್ತಾಪಗಳನ್ನು” ಒಪ್ಪದಿದ್ದಲ್ಲಿ ಇದನ್ನು ಸೂಕ್ಷ್ಮವಾಗಿ ನೋಡಬೇಕು ಎಂದಿದ್ದರು. ಭಾರತ ಸರ್ಕಾರದಿಂದ ಹಾಗೂ ಬಿಜೆಪಿಯಿಂದ ಆಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಈಗ, 14 ಮೇ 1954ರ ಎಸ್ಒ 48-ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ) 1954ರ ಆದೇಶವನ್ನೂ ಸಹ 05-08-2019 ರ ಸಂ. 272 ರ ಅಡಿಯಲ್ಲಿ ಹೊರಡಿಸಿದ ರಾಷ್ಟ್ರಪತಿ ಅಧಿಸೂಚನೆಯಿಂದ ರದ್ದುಗೊಳಿಸಿದ ಮೇಲೂ, ಭಾರತವು ಈ ಪ್ರಶ್ನೆಗೆ ಉತ್ತರವನ್ನು ನೀಡದೆ ಇರುವುದನ್ನು ಭರಿಸುಲು ಸೂಕ್ತವಲ್ಲ.
ಭಾರತದ ಗೃಹ ಮಂತ್ರಿಗಳು ಶೀಘ್ರದಲ್ಲಿ ಪಿಡಿಪಿಯ “ಸ್ವಯಂ ಆಳ್ವಿಕೆಯ ಚೌಕಟ್ಟಿನ ತೀರ್ಮಾನ 2008”ಕ್ಕೆ ಗಮನಹರಿಸಿದರೆ, ಮೆಹಬೂಬಾ ಮುಫ್ತಿರವರಿಗೆ ‘ಕಾಶ್ಮೀರ ಸಮಸ್ಯೆ’ ಎಂದರೆ ಏನು ಎಂದು ಶೀಘ್ರದಲ್ಲೇ ತಿಳಿಯುತ್ತದೆ.

ಈ ವರ್ಷದ ಜೂನ್ 25ರಂದು ಇಂಡಿಯಾ ಟಿವಿಯ ಹಿರಿಯ ಪತ್ರಕರ್ತ ರಾಜ್ದೀಪ್ ಅವರೊಂದಿಗೆ ಮಾತನಾಡುತ್ತಾ, 24ನೇ ಜೂನ್ ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ನಡೆದ ಸರ್ವಪಕ್ಷದ ಸಭೆಯ ನಂತರ, ಪಿಡಿಪಿ ಅಧ್ಯಕ್ಷರು ಭಾರತ ಸರ್ಕಾರವನ್ನು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಯಾವ ಸನ್ನಿವೇಶದಲ್ಲಿ ಕೇಳುತ್ತಿರುವರು ಸದ್ಯದಲ್ಲಿ ಜಮ್ಮು ಕಾಶ್ಮೀರದ ಕೇಂದ್ರಾಡಲಿತದ ಶಾಸಕಾಂಗ ಸಭೆಯ ಸ್ಥಾನಗಳ ಸೀಮಾ ಪರಿಮಿತಿ ಹಾಗೂ ಅಲ್ಲಿ ಚುನಾವಣೆಗಳನ್ನು ನಡೆಸುವುದು ಮುಖ್ಯ ಪರಿಗಣನೆಯಲ್ಲಿ ಇದ್ದಾಗ ಎಂದು ಕೇಳಿದಾಗ, ಅವರು ಸ್ಪಷ್ಟವಾದ ಉತ್ತರವನ್ನು ನೀಡಲು ಸಾಧ್ಯವಾಗದೆ, ಪಾಕಿಸ್ತಾನ್ ಆಕ್ರಮಿತ ಜಮ್ಮು ಕಾಶ್ಮೀರದ ಪ್ರದೇಶಗಳೊಂದಿಗೆ ವ್ಯಾಪಾರ ಮಾರ್ಗಗಳನ್ನು ತೆರೆಯುವಂತಹ ಸಲಹೆಗಳನ್ನು ನೀಡುತ್ತಾ ಈ ಪ್ರಶ್ನೆಯಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಅವರು ಬೇರೆ ಬೇರೆ ಪ್ರಶ್ನೆಗಳಿಗೆ ಹೇಳಿದ ಉತ್ತರಗಳ ರೀತಿಯು ಪಿಡಿಪಿಯ ಮೃತ ಮುಫ್ತಿ ಮೊಹಮದ್ ಸಯೀದ್ ರವರು ಘೋಷಿಸಿದ “ಸ್ವಯಂ ಆಳ್ವಿಕೆಯ ಚೌಕಟ್ಟಿನ ತೀರ್ಮಾನ 2008”ರ ಒಳಗೆ ಹೊಂದಲ್ಪಡುವಂತಹ ಸಿದ್ಧಾಂತವು ಅವರಲ್ಲಿ ಸ್ಥಿರವಾಗಿರುವುದು ಕಂಡು ಬರುತ್ತದೆ

ಈಗ, ಕೇಳಬೇಕಾದ ಮುಖ್ಯ ಪ್ರಶ್ನೆ, ಜಮ್ಮು ಕಾಶ್ಮೀರದ ಪ್ರಮುಖ ಪ್ರಾದೇಶಿಕ ವಿರೋಧ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್ ಕೆಲವು ಸಲ (ವಿಶಿಷ್ಟವಾಗಿ 2002ರ ನಂತರ) “ಪ್ರತ್ಯೇಕತಾವಾದ” ರೇಖೆಯನ್ನು ಅನುಸರಿಸುತ್ತಿರುವುದು. ಕಾಶ್ಮೀರ ಘಾಟಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಏಕಸ್ವಾಮ್ಯತೆಯನ್ನು ಪಿಡಿಪಿ ಬಹುತೇಕ ಕೊನೆಗೊಳಿಸಿದ್ದರಿಂದ ಎನ್‌ಸಿ ಹಾಗೆ ಮಾಡುತ್ತಿದೆ ಎಂದು ಹೇಳಬಹುದುದಾಗಿದೆ, ನಿಸ್ಸಂದೇಹವಾಗಿ ಈ ರೀತಿಯ ವಿವರಣೆಗಳು ಸರಿಯೇ ಆದರೂ, ಮಫ್ತಿ ಮೊಹಮ್ಮದ್ ಸಯೀದ್ ರವರ ಯಾವ “ಮ್ಯಾಜಿಕ್ ಮಂತ್ರ” 1999 ರಿಂದ 2002 ರವರೆಗೆ ಕೇವಲ 3 ವರ್ಷಗಳಲ್ಲಿ ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಂತಹ ಪಕ್ಷದ ಮೇಲೆ ಭಾರೀ ಸ್ಪರ್ಧೆಯನ್ನ ಎಸೆಗಿತೊ, ಅದು, ಕಾಂಗ್ರೆಸ್ ಪಕ್ಷದಿಂದಲೂ ಸಹ ಒತ್ತಡ ಹೇರಲು ಸಾಧ್ಯವಾಗಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಎನ್‌ಸಿ ಇದುವರೆಗೆ ಜಮ್ಮು ಕಾಶ್ಮೀರ ವಿಲೀನದ ಸತ್ಯಾಸತ್ಯತೆ ನ್ಯಾಯಸಮ್ಮತವನ್ನು ಪ್ರಶ್ನಿಸಲಿಲ್ಲವಾದರೂ, ಕೇಂದ್ರ ಮತ್ತು ರಾಜ್ಯಗಳ ನಡುವೆಯ ಹಂಚಿಕೆ ವಿಚಾರದಲ್ಲಿ ಅರೆಮರೆ ಗೊಂದಲಗಳಿತ್ತು ಮತ್ತು ಪಿಡಿಪಿ ಯು ಇದನ್ನು ಸ್ವಯಂ ಆಳ್ವಿಕೆಯ ಪ್ರಸ್ತಾಪಗಳ ಮೂಲಕ ಹಲವು ವಿಚಾರಗಳನ್ನ ಬಹಿರಂಗವೇ ಮಾಡಿತು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪ್ರತ್ಯೇಕತಾವಾದತ್ವ ಮುತ್ತಿಕೊಂಡು ಬೆಳೆಯುತ್ತಿರುವ ಪರಿಸರದಲ್ಲಿ ಕಾಶ್ಮೀರ ಘಾಟಿಯು 1947ರ ಪಂಜಾಬ್ ಅಥವಾ ಹೈದರಾಬಾದ್ ಸೇರ್ಪಡೆ ನಂತರ ಆಗಿರುವಷ್ಟು ಉತ್ತಮ ಭಾರತವಾಗದಿರುವ ಬಗ್ಗೆ ಪ್ರಶ್ನಿಸಿದ್ದು (ಭಾರತ ಸರ್ಕಾರದ ದೃಷ್ಟಿಯಿಂದ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಉದಾರವಾದಿಯಾಗಿರುವುದು) ಪಿಡಿಪಿಯು 1947ರ ಜಮ್ಮು ಕಾಶ್ಮೀರದ ಪ್ರವೇಶದ ಸಂಪೂರ್ಣತೆಯನ್ನೇ ಪರೋಕ್ಷವಾಗಿ ಪ್ರಶ್ನಿಸುವಂತ ಸಿದ್ಧಾಂತದೊಂದಿಗೂ ಉಳಿದುಕೊಂಡಿದೆ. ಪಿಡಿಪಿಯ ‘ಮಂತ್ರವು’ ಸ್ವಯಂ ಆಳ್ವಿಕೆ ಚೌಕತಟ್ಟು ಆಗಿದ್ದು, ಸರಳವಾಗಿ ಹೇಳುವುದಾದರೆ
(i) ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಕುರಿತು ಭಾರತ ಮತ್ತು ಪಾಕಿಸ್ತಾನದ ಜಂಟಿ ನಿಯಂತ್ರಣ.
(ii) ಬೃಹತ್ ಜಮ್ಮು ಮತ್ತು ಕಾಶ್ಮೀರ ಮಂಡಳಿಯ ಸ್ಥಾಪನೆ, ಇದರಲ್ಲಿ ಭಾರತ ಮತ್ತು ಪಾಕಿಸ್ತಾನದ ನಾಮನಿರ್ದೇಶನದಂತೆ ಒಂದೊಂದು ರಾಷ್ಟ್ರದಿಂದ 5 ಸದಸ್ಯರು.
(iii) ಬೃಹತ್ ಜಮ್ಮು ಮತ್ತು ಕಾಶ್ಮೀರದ ಎರಡು ಭಾಗಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಎರಡು ದೇಶಗಳ ಹಣಕ್ಕೆ ಮಾನ್ಯತೆ.
(iv) ಬೃಹತ್ ಜಮ್ಮು ಮತ್ತು ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ಎರಡು ಮುಖ್ಯ ರಾಷ್ಟ್ರಗಳ ನಡುವಿನ ರಫ್ತು ಸುಂಕವನ್ನು ನಿರ್ಧರಿಸುವುದು.
(v) ಪ್ಯಾರಾ 59 ರಲ್ಲಿ ಸ್ವಾಯತ್ತತೆ ಎಂದರೆ ಭಾರತ ಸರ್ಕಾರಕ್ಕೆ ಹೋಲಿಸುತ್ತಾ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಬಲೀಕರಣವು, ಭಾರತೀಯ ಒಕ್ಕೂಟ ಸ್ಥಾಪನೆಯಲ್ಲಿ ಕೇಂದ್ರ-ರಾಜ್ಯ ಚರ್ಚೆಯ ಭಾಗವಾಗಿರುವಂತೆಯ ವ್ಯವಸ್ಥೆ. ಮತ್ತೊಂದೆಡೆ ಸ್ವಯಂ ಆಳ್ವಿಕೆ ಎಂದರೆ ಭಾರತ ರಾಷ್ಟ್ರದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಜನರ ಸಶಕ್ತೀಕರಣವನ್ನು ಸೂಚಿಸುತ್ತದೆ.
ಈ ‘ಮಂತ್ರ’ (ಸ್ವಯಂ ಆಳ್ವಿಕೆ) ಖಂಡಿತವಾಗಿಯೂ 1947 ರಲ್ಲಿ ಭಾರತದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಒಟ್ಟು ಪ್ರವೇಶವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದ್ದು ಅದರ ಫಲವಾಗಿ, ಆ ಸಂದರ್ಭದಲ್ಲಿ (1998) ನ್ಯಾಷನಲ್ ಕಾನ್ಫರೆನ್ಸ್ನ ಬೃಹತ್ ಸ್ವಾಯತ್ತತೆಯಡಿ, ಕೇಂದ್ರ ಸರ್ಕಾರ್ದಿಂದ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸ್ವಾಯತ್ತತೆಗೆ ಹೋಲಿಸಿದರೆ ಇದು ಉತ್ತಮ ಸ್ವೀಕಾರಾರ್ಹತೆಯನ್ನು ಕಂಡುಕೊಂಡಿತ್ತು. ಕಾಶ್ಮೀರ ಘಾಟಿಯಲ್ಲಿ ಎನ್‌ಸಿಯ ಮತ್ತು ಪಿಡಿಪಿಯ ಬೆಂಬಲ ಸರಿ ಸುಮಾರು ಸಮವಾಗಿದ್ದು, ಎರಡೂ ಪಕ್ಷಗಳು ಜಮ್ಮು ಮತ್ತು ಲಡಾಖ್ ಪ್ರದೇಶಗಳಲ್ಲಿ ಕಡಿಮೆ ಬೆಂಬಲವನ್ನು ಹೊಂದಿದೆ. ಕಾಶ್ಮೀರ ಘಾಟಿಯಲ್ಲಿ ಮಾತ್ರ 1947 ರಲ್ಲಿ ಭಾರತ ಸರ್ಕಾರವು ನೀಡಿದ್ದ “ಕೆಲವು ಭರವಸೆಗಳನ್ನು” ಈಡೇರಿಸಿದ ಕಾರಣ ಅಸಮಾಧಾನವು ವ್ಯಕ್ತಪಡುತಿದ್ದು ಹಾಗೂ ಜಮ್ಮು ಕಾಶ್ಮೀರವು ಮುಸ್ಲಿಂ ಬಹುಸಂಖ್ಯಾತ ರಾಜ್ಯ ಎಂಬ ಮಾತುಗಳಿದ್ದವು ಅಲ್ಲಿ.

ಈ ಹಿಂದೆ, ಕಾಂಗ್ರೆಸ್ (ಪಿಡಿಪಿ 2002-2008 ಜೊತೆಗೂಡಿ ಸರ್ಕಾರ) ಮತ್ತು ಬಿಜೆಪಿ ಎರಡೂ ಪಕ್ಷಗಳು ಪಿಡಿಪಿಯೊಂದಿಗೆ ಸರ್ಕಾರವನ್ನು ರಚಿಸುತ್ತಾ ಅವರಿಗೆ ಸ್ವಯಂ ಆಳ್ವಿಕೆಯ ಪರಿಕಲ್ಪನೆಯು ಯಾವುದೇ ರೀತಿಯಲ್ಲಿ ಪ್ರತ್ಯೇಕತಾವಾದತ್ವದ ಹಾದಿಯಲ್ಲಿ ಸಾಗುವುದಿಲ್ಲ ಎಂಬ ಸಂದೇಶವನ್ನು ನೀಡಿರುವುದು ಇಲ್ಲಿ ಉಲ್ಲೇಖಾರ್ಹವಾಗಿರುತ್ತದೆ. ಇದರ ಮೂಲಕ ಕಾಶ್ಮೀರ ಘಾಟಿಯಲ್ಲಿ ಪ್ರತ್ಯೇಕತವಾದ ಸಂಸ್ಕೃತಿ ಮೇಲೆ ಹೊಡೆತವನ್ನು ಉಂಟುಮಾಡಿತ್ತು. ಆ ದಿನದ ನ್ಯಾಷನಲ್ ಕಾನ್ಫೆರೆನ್ಸ್ನ ನಾಯಕತ್ವವು ಅವರ ಸ್ವಾಯತ್ತತೆಯ ಬೇಡಿಕೆಗಳು ಪಿಡಿಪಿಯ ಸ್ವಯಂ ಆಳ್ವಿಕೆಯ ಸಿದ್ಧಾಂತಕ್ಕೆ ಪರ್ಯಾಯವಾಗದಿದ್ದು ರಾಜಕೀಯಾತ್ಮಕವಾಗಿ, ಆಡಳಿತದಲ್ಲಿ, ಚುನಾವಣೆಗಳಲ್ಲಿ ಸ್ಪರ್ಧಿಸಲು ಯೋಗ್ಯವಿಲ್ಲವಾಗಿದೆ ಎಂಬ ಅಭಿಪ್ರಾಯವನ್ನು ಹೊಂದಿದ್ದು ತನ್ನ ಸಿದ್ಧಾಂತ ವೈರಿಗಳು ಭಾರತದ ದೃಷ್ಟಿಕೋಣದಿಂದ ಯಾವ ಮಟ್ಟಕ್ಕೆ ಬೆಳೆಯಲು ಅವಕಾಶ ನೀಡಲಾಗಿದ್ದು, (ಆದ್ದರಿಂದ ವಿಶೇಷವಾಗಿ 1996 ರ ನಂತರ) ನ್ಯಾಷನಲ್ ಕಾನ್ಫರೆನ್ಸ್ ನಾಯಕತ್ವವು ಹೆಚ್ಚು ತೀವ್ರಗಾಮಿಯಾಗಿ ಬದಲಾಗಲು ಇದೇ ಕಾರಣವಾಗಿದ್ದು, ಕಾಶ್ಮೀರ ಸಮಸ್ಯೆಗೆ ಉತ್ತರ, ಪಾಕಿಸ್ತಾನದೊಂದಿಗೆ, ಪ್ರತ್ಯೇಕತಾವಾದಿಗಳು/ಹುರಿಯತ್ ಜೊತೆಯ ಸಂವಾದದಲ್ಲಿರುವುದು ಎಂದು ಅಭಿಪ್ರಾಯ ಪಡಲು ಪ್ರಾರಂಭಿಸಿರುವ ಕಾರಣಗಳಾಗಿದೆ.

ಆದ್ದರಿಂದ, ಈಗ ನೇರವಾಗಿ ಮಾತನಾಡುವ ಸಮಯ ಬಂದಿದೆ. NDA-III ಸರ್ಕಾರವು, ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸರ್ಕಾರಗಳು ಮಾಡಿದ ಹಾನಿಯನ್ನು ಸರಿಪಡಿಸಲು ಯಾವುದೇ ಮ್ಯಾಜಿಕ್ ಬ್ಯಾಂಡ್ ಇಲ್ಲವೆಂದು ಸಮರ್ಥನೆ ಮಾಡುವ ಮೂಲಕ ಕಾಶ್ಮೀರ ಪ್ರಕ್ಷುಬ್ಧತೆಯ ಮುಂದುವರಿಸುವುದನ್ನು ಮಾಡಬಾರದಾಗಿದೆ. ಸಮಸ್ಯೆಗಳನ್ನು ಒಪ್ಪಿಕೊಂಡು ಹಾಗೂ ಸರಿಪಡಿಸಬೇಕಾಗಿರುತ್ತದೆ. ಹಾಗೆಯೇ, ಮೆಹಬೂಬಾ ಮುಫ್ತಿ ರವರು ಕೂಡ ಸ್ವಯಂ ಆಳ್ವಿಕೆಯ ಸಿದ್ಧಾಂತದ ಮನವರಿಕೆಯನ್ನು ಈಗಲೂ ಹೊಂದಿದ್ದಾರೆಯೇ ಎಂದು ಸರಳ ಪದಗಳಲ್ಲಿ ಸರಳವಾಗಿ ಹೇಳಲು ಸಮಯವಾಗಿದೆ. ಅದೇ ಹೊಂದಿದ್ದಾಗಿದ್ದಲ್ಲಿ, ಈ ಸಿದ್ಧಾಂತವು ಖಂಡಿತವಾಗಿ ಪ್ರತ್ಯೇಕತಾವಾದದ ಕುಲಗಳಲ್ಲಿ ಬರುತ್ತದೆ ಮತ್ತು ಭಾರತ ಸರ್ಕಾರವು ದಿಟ್ಟವಾಗಿ ಮಾತನಾಡಬೇಕಾಗಿದೆ.

(ದಯಾ ಸಾಗರ್ ರವರು ಹಿರಿಯ ಪತ್ರಕರ್ತರು ಹಾಗೂ ಜಮ್ಮು ಕಾಶ್ಮೀರದ ವ್ಯವಹಾರಗಳಲ್ಲಿ ಪ್ರಸಿದ್ಧ ವಿಶ್ಲೇಷಕರು, dayasagr45@yahoo.com 9419796096)

Leave a Reply

Your email address will not be published.

This site uses Akismet to reduce spam. Learn how your comment data is processed.