ಧಾರವಾಡ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯು ಇಂದು ಧಾರವಾಡದಲ್ಲಿ (ಕರ್ನಾಟಕ) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಮೂರ್ತಿಗೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಆರಂಭವಾಯಿತು.


ಪ್ರಾಂತ ಸಂಘಚಾಲಕರು, ಕಾರ್ಯವಾಹ, ಪ್ರಚಾರಕರು, ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರು ಮತ್ತು ಕೆಲವು ಸಂಘಟನೆಗಳ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ದೇಶಾದ್ಯಂತ ಸುಮಾರು 350 ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ಸಭೆಯಲ್ಲಿ ಸಂಘದ ಕಾರ್ಯದ ಇಂದಿನ ಸ್ಥಿತಿಗತಿ, ಕಾರ್ಯಗಳ ವಿಸ್ತರಣೆ ಹಾಗೂ ಕಾರ್ಯಕರ್ತರ ಅಭಿವೃದ್ಧಿ ಯೋಜನೆ ಕುರಿತು ಚರ್ಚೆ ನಡೆಯಲಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಸಭೆಯ ಆರಂಭದಲ್ಲಿ ಸಂಸ್ಕಾರ ಭಾರತಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಅಮೀರ್ ಚಂದ್, ಕನ್ನಡ ಸಾಹಿತಿ ಜಿ.ವೆಂಕಟ್ ಸುಬ್ಬಯ್ಯ, ಎಚ್.ಎಸ್ ದೊರೆಸ್ವಾಮಿ, ಖ್ಯಾತ ಕವಿ ಡಾ. ಎಚ್.ಸಿದ್ದಲಿಂಗಯ್ಯ, ರಾಜಕಾರಣಿ ಆಸ್ಕರ್ ಫೆರ್ನಾಂಡೀಸ್, ಸ್ವಾಮಿ ಅಧ್ಯಾತ್ಮಾನಂದ ಜಿ, ಸ್ವಾಮಿ ಓಂಕಾರಾನಂದ್ ಜಿ, ಸ್ವಾಮಿ ಅರುಣಗಿರಿ ಜಿ, ಹಿರಿಯ ಪತ್ರಕರ್ತ ಶ್ಯಾಮ್ ಖೋಸ್ಲಾ, ದೈನಿಕ್ ಜಾಗರಣ್ ಮಾಲೀಕ ಯೋಗೇಂದ್ರ ಮೋಹನ್ ಗುಪ್ತಾ, ಗೀತಾ ಪ್ರೆಸ್ ಗೋರಖ್‌ಪುರ ಅಧ್ಯಕ್ಷ ರಾಧೇಶ್ಯಾಮ್ ಕೆ. ಲೇಖಕರಾದ ನರೇಂದ್ರ ಕೊಹ್ಲಿ, ರಾಜ್ಯಸಭಾ ಸಂಸದ (ಕಾಂಗ್ರೆಸ್) ರಾಜೇಶ್ ಸಾತವ್, , ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ, ಮಾಜಿ ಗವರ್ನರ್ ಜಗಮೋಹನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಪತ್ರಕರ್ತ ರೋಹಿತ್ ಸರ್ದಾನಾ, ಸುಂದರ್ ಲಾಲ್ ಬಹುಗುಣ (ಚಿಪ್ಕೋ ಚಳವಳಿ) ), ಅಖಾರ ಪರಿಷತ್ತಿನ ಅಧ್ಯಕ್ಷರಾದ ಮಹಂತ್ ನರೇಂದ್ರ ಗಿರಿ ಮಹಾರಾಜ್, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಸೇರಿದಂತೆ ಇತ್ತೀಚಿಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
30ರಂದು ಸಂಜೆ ಸಭೆ ಮುಕ್ತಾಯವಾಗಲಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.