ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಮತ್ತೊಮ್ಮೆ ಆಯೋಜನೆಗೊಳ್ಳುತ್ತಿದೆ. ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ಈ ಪುಸ್ತಕದ ಹಬ್ಬ ನಡೆಯಲಿದೆ.
ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ನ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಪುಸ್ತಕ ಹಬ್ಬವು ಆಯೋಜನೆಗೊಂಡಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ.
ನಾಡಿನ ಅನೇಕ ಗಣ್ಯರು ಹಿರಿಯರು ಆಗಮಿಸಲಿದ್ದಾರೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಹಲವು ಭಾಷೆಯ ಪುಸ್ತಕಗಳು ದೊರೆಯಲಿದ್ದು ಪುಸ್ತಕ ಪ್ರೇಮಿಗಳಿಗೆ ಇದೊಂದು ವಿಶಿಷ್ಟ ಆಕರ್ಷಣೆಯಾಗಿದೆ. ಅಲ್ಲದೆ ಅನೇಕ ಲೇಖಕರು, ಅನುವಾದಕರೂ ಈ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದು ಓದುಗರೊಂದಿಗೆ ಸಂವಾದ ಇರುತ್ತದೆ.
ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿರಲಿದೆ. ಕನ್ನಡದ ಪುಸ್ತಕಗಳ ಮೇಲೆ 50%ವರೆಗೂ ರಿಯಾಯಿತಿ ಸಿಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ, ಅಕ್ಷರದಾಸೋಹವನ್ನು ಸಾರ್ಥಕವಾಗಿಸೋಣ.