ಕರ್ಣಾವತಿ ಗುಜರಾತ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನ್ ಭಾಗವತ್ ಅವರು ಪುನರುತ್ಥಾನ್ ವಿದ್ಯಾಪೀಠದ ವತಿಯಿಂದ 1051 ಪುಸ್ತಕಗಳನ್ನು ಏಕಕಾಲದಲ್ಲಿ ಲೋಕಾರ್ಪಣೆಗೊಳಿಸಿದರು. ಅವರು ಮಾತನಾಡುತ್ತಾ “ಭಾರತೀಯರಿಗೆ ಭಾರತೀಯ ಜ್ಞಾನ ಪರಂಪರೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಯಾವೆಲ್ಲಾ ಅನಿವಾರ್ಯ ಅವಶ್ಯಕ ಹೆಜ್ಜೆಗಳನ್ನಿಡಬೇಕೋ ಅದರಲ್ಲಿ ಈ ಪುಸ್ತಕಗಳ ಹೆಜ್ಜೆಯೂ ಒಂದು. ಆದರೆ ಭಾರತೀಯ ಜ್ಞಾನ ಪರಂಪರೆಯ ದೊಡ್ಡ ಸಾಗರದಲ್ಲಿ ಇದು ಕೇವಲ ಒಂದು ಬಿಂದು ಮಾತ್ರವಷ್ಟೆ.ಆದರೆ ನಮ್ಮ ಕ್ಷಮತೆಯ ಆಧಾರದಲ್ಲಿ ನೋಡುವುದಾದರೆ ಇದು ಬಹು ದೊಡ್ಡ ಸಾಹಸವಾಗಿದೆ” ಎಂದರು.
ಅವರು ಮುಂದುವರೆದು ಮಾತನಾಡುತ್ತಾ ಕಳೆದ 200ವರ್ಷಗಳಲ್ಲಿ ಅನೇಕ ಅನಾಹುತಗಳು ಈಗಾಗಲೇ ನಡೆದಿವೆ. ಜ್ಞಾನವನ್ನು ಅರ್ಜಿಸುವ ತಮ್ಮದೇ ಆದ ರೀತಿಯಿರುತ್ತದೆ. ಎಲ್ಲರಿಗೂ ಹಿತವನ್ನುಂಟುಮಾಡುವುದು ಯಾವುದು ಎನ್ನುವ ವಿಚಾರ ಜಗತ್ತಿನಲ್ಲಿ ಯಾವಾಗ ಆರಂಭವಾಯಿತೋ ಅಂದಿನಿಂದಲೂ ಈ ಚಿಂತನೆ ಜಾರಿಯಲ್ಲಿದೆ. ಯಾವ ಜ್ಞಾನ ಬಂಢಾರವಿದೆಯೋ ಅದನ್ನು ಎರಡು ಅರ್ಥ ಮಾಡಿಕೊಳ್ಳಬಹುದಾಗಿದೆ. ಒಂದು ಹೊರಗಿನಿಂದ ಬಂದ ಎಲ್ಲವನ್ನೂ ತಿಳಿದುಕೊಂಡು ಅದನ್ನೇ ಜ್ಞಾನ ಎಂದುಕೊಳ್ಳುವುದು.ನಮ್ಮಲ್ಲಿ ಅದನ್ನು ವಿಜ್ಞಾನ ಎನ್ನಬಹುದು. ಜ್ಞಾನದ ಅಸ್ತಿತ್ವ ಚಿರಂತನವಾದುದು. ಜ್ಞಾನ ಎಲ್ಲ ಅಜ್ಞಾನಗಳಿಂದ ನಮ್ಮನ್ನು ಮುಕ್ತಗೊಳಿಸುತ್ತದೆ.ಇಂತಹ ಜ್ಞಾನ ಹೊರಗಿನಿಂದ ಬರುವುದಿಲ್ಲ,ಅದನ್ನು ಪಡೆಯಲು ನಮ್ಮೊಳಗೇ ಹುಡುಕಬೇಕಾಗಿದೆ ಎಂದರು.
ಯಾವುದು ನಮ್ಮ ಕಣ್ಣೆದುರು ಕಾಣುತ್ತಿದೆಯೋ ಅದು ನಿತ್ಯವೂ ಪರುವರ್ತನಶೀಲವಾದುದು. ಅದು ಕೇವಲ ಬಾಹ್ಯ ಜ್ಞಾನ. ಆದರೆ ವಿಜ್ಞಾನವನ್ನು ನಂಬುವವರ ಬಾಹ್ಯದಲ್ಲದೆ ಇರುವ ಯಾವುದೂ ಸತ್ಯವಲ್ಲ ಎನ್ನುವುದು ಅಹಂಕಾರವಾಗುತ್ತದೆ. ಮತ್ತು ಒಳಗಿನ ಜ್ಞಾನ ಜಾಗೃತವಾಗುವುದು ಈ ಅಹಂಕಾರ ತೊಡೆದಾಗ ಮಾತ್ರ. ಮತ್ತು ಸತ್ಯದ ಪೂರ್ಣ ಜ್ಞಾನ ನಮ್ಮ ಅಹಂಕಾರವನ್ನು ಬದಿಗೆ ಸರಿಸಿದಾಗ ಪ್ರಕಟವಾಗುತ್ತದೆ. ಹಾಗಾಗಿ ಅಹಂ ಸಾಪೇಕ್ಷವಾಗಿ ಮತ್ತು ನಿರಪೇಕ್ಷವಾಗಿ ಎರಡು ರೀತಿಗಳಲ್ಲಿ ಪ್ರಕಟವಾಗುತ್ತದೆ. ವಾಸ್ತವವಾಗಿ ಈ ಎರಡು ರೀತಿಗಳಲ್ಲಿ ಸಂಘರ್ಷವಿಲ್ಲ. ಆದರೆ, ಅಹಂ ನಿರಪೇಕ್ಷ ಜ್ಞಾನದ ಉಪಾಸಕರ ರೀತಿಯನ್ನು ಅರ್ಥ ಮಾಡಿಕೊಳ್ಳುತ್ತದಾದರೂ ಅಹಂ ಸಾಪೇಕ್ಷ ಜ್ಞಾನದ ಉಪಾಸಕರ ರೀತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ,ಹಾಗಾಗಿ ಈ ಎಲ್ಲ ಗೊಂದಲಗಳು ಎದ್ದು ನಿಲ್ಲುತ್ತದೆ. ಜಗತ್ತಿನ ಈ ಹಿಂದಿನ ಎರಡು ಸಾವಿರ ವರ್ಷದಲ್ಲಿ ಇದೇ ಗೊಂದಲ ಮೇಲುಗೈ ಸಾಧಿಸಿದೆ”ಎಂದರು.
ವಿಜ್ಞಾನದ ಹುಟ್ಟು, ವಿಜ್ಞಾನ ಎಲ್ಲಾ ಅಂಧ ಶ್ರದ್ಧೆಗಳಿಂದ ಮನುಷ್ಯರನ್ನು ಮುಕ್ತಗೊಳಿಸಿದೆ ಮತ್ತು ಮನುಷ್ಯರಿಗೆ ಪ್ರಯೋಗ ಮಾಡಿ ಸಿದ್ಧವಾದ ಮೇಲೆ ನಂಬುವುದನ್ನು ಕಲಿಸಿದೆ. ಇದರ ಹಿಂದೆ ಹೋದ ಮನುಷ್ಯನ ಜೀವನ ಹೆಚ್ಚು ಸುಖಮಯವೂ ಆಗಿದೆ.ಆದರೆ ಮನುಷ್ಯ ಉಪಕರಣಗಳನ್ನು ಶಕ್ತಿಯ ಪ್ರತೀಕವಾಗಿ ಬಳಸಿಕೊಂಡ, ಅದರ ಪರಿಣಾಮ ನಾವಿಂದು ಕಣ್ಣೆದುರು ನೋಡುತ್ತಿದ್ದೇವೆ. ಯಾರ ಬಳಿ ಅಂತಹ ಸಾಧನಗಳಿವೆಯೋ ಅವನೇ ರಾಜ, ಇಲ್ಲದವನು ದುರ್ಬಲ, ಅವನ ಅಂತ್ಯವೆಂಬಂತಾಗಿದೆ.
ಕೊರೋನಾ ಕಾಲದಲ್ಲಿ ಸೃಷ್ಟಿಯನ್ನು ಸುಖಮಯವಾಗಿಡಲು ಏನು ಮಾಡಬೇಕೆಂಬ ಅನುಭೂತಿ ಎಲ್ಲರಿಗೂ ಉಂಟಾಗಿದೆ. ವಾಸ್ತವವಾಗಿ ಜಗತ್ತು ಹೊಸದನ್ನು ಅಪೇಕ್ಷಿಸುತ್ತಿದೆ, ಅದನ್ನು ನೀಡುವುದು ನಮ್ಮ ಕೆಲಸವಾಗಿದೆ. ನಮ್ಮ ರಾಷ್ಟ್ರದ ಅಸ್ತಿತ್ವವಿರುವುದೇ ಇದಕ್ಕಾಗಿ ಎಂದರೂ ತಪ್ಪಿಲ್ಲ. ನಮ್ಮ ದೃಷ್ಟಿ ಧರ್ಮದ ದೃಷ್ಟಿ, ಅದು ಎಲ್ಲರನ್ನೂ ಜೋಡಿಸುತ್ತದೆ, ಅದು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತದೆ, ಅದು ಎಲ್ಲರಿಗೂ ಹಿತವನ್ನು ಬಯಸುತ್ತದೆ. ಅಸ್ತಿತ್ವದ ಏಕತೆಯ ಸತ್ಯವನ್ನು ನಮ್ಮ ಪೂರ್ವಜರು ಅರಿತುಕೊಂಡರು, ಅವರಿಂದ ಪರಿಪೂರ್ಣ ಏಕಾತ್ಮ ಜ್ಞಾನದ ದೃಷ್ಟಿ ದೊರೆತಿದೆ ಹಾಗಾಗಿ ಅವರು ಇಡಿಯ ವಿಶ್ವವೇ ನಮ್ಮ ಪರಿವಾರ ನಮ್ಮ ಏಳ್ಗೆಯೆಂದರೆ ಅದು ವಿಶ್ವದ ಕಲ್ಯಾಣ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನ ಸಾಗರ ಮಹಾಪ್ರಕಲ್ಪದ ಅಧ್ಯಕ್ಇಣಿ ಶ್ರೀಮತಿ ಇಂದುಮತಿಯವರು ಪ್ರಕಲ್ಪದ ಕುರಿತು ಮಾಹಿತಿ ನೀಡಿದರುಮ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಶಾಂತಕ್ಕ ಅವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಪೂಜನೀಯ ಪರಮಾತ್ಮಾನಂದ ಮಹಾರಾಜರು ಆಶೀರ್ವಚನ ನೀಡಿದರು.